news18-kannada Updated:September 18, 2020, 1:17 PM IST
ಉಪೇಂದ್ರ
ಹೀಗಿರುವಾಗಲೇ ಹೊಸ ಚಿತ್ರಗಳ ಅನೌನ್ಸ್ ಮೆಂಟ್ ಕೂಡ ಜಬರ್ದಸ್ತಾಗಿ ನಡೆಯುತ್ತಿದೆ. ಅದಕ್ಕೆ ಹೊಸ ಸೇರ್ಪಡೆ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಶತಕೋಟಿ ಸಿನಿಮಾ. ಸೂಪರ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಲಿರುವ ನೂತನ ಚಿತ್ರ 2021ರ ಜನವರಿಯಲ್ಲಿ ಆರಂಭವಾಗಲಿದೆ. 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾವಿದು. ಮಾಸ್ಟರ್ ಪೀಸ್ ಖ್ಯಾತಿಯ ಮಂಜು ಮಾಂಡವ್ಯ ಈ ಅದ್ದೂರಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಉಪೇಂದ್ರ - ಮಂಜು ಮಾಂಡವ್ಯ ಕಾಂಬಿನೇಶನಲ್ಲಿ ಮೂಡಿಬರಲಿರುವ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಿದೆ. ನಿಮಿಷಾಂಬ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಣ್ಣಯ್ಯ ಚಂದ್ರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಕರ್ಪೂರದ ಗೊಂಬೆ, ಏನೋ ಒಂಥರ, ಬಿಂದಾಸ್, ರನ್ನ ದಂತಹ ಸೂಪರ್ ಹಿಟ್ ಚಿತ್ರಗಳನ್ನು ಅಣ್ಣಯ್ಯ ಚಂದ್ರು ಈ ಹಿಂದೆ ನಿರ್ಮಿಸಿದ್ದಾರೆ. ಉಪೇಂದ್ರ ಅವರಿಗೆ ಈ ಚಿತ್ರದ ಕಥೆ ಬಹಳ ಇಷ್ಟವಾಗಿದ್ದು ಮುಂದಿನ ಜನವರಿಯಿಂದಲೇ ಚಿತ್ರ ಪ್ರಾರಂಭ ಮಾಡೋಣ ಎಂದಿದ್ದಾರಂತೆ. ಸಂಭಾಷಣೆ ಬರೆದಿರುವ ಮಂಜು ಮಾಂಡವ್ಯ, ನಂತರ ನಿರ್ದೇಶಕರಾಗೂ ಜನಪ್ರಿಯರಾದವರು. ಅವರೇ ಈ ನೂತನ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಸದ್ಯದಲ್ಲೇ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ತಿಳಿಸುವುದಾಗಿ ಮಂಜು ಮಾಂಡವ್ಯ ತಿಳಿಸಿದ್ದಾರೆ.
ಸದ್ಯ ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಗ್ರ್ಯಾಂಡ್ ಸಿನಿಮಾವನ್ನ ಅನೌನ್ಸ್ ಮಾಡಲಾಗಿದೆ. ಚಿತ್ರದ ಟೈಟಲ್ ಆಗಲಿ, ಇನ್ನುಳಿದ ತಾರಬಳಗದ ಬಗ್ಗೆಯಾಗಲಿ ಮಾಹಿತಿ ಹೊರಬಿದ್ದಿಲ್ಲ. ನಿಧಾನಕ್ಕೆ ಎಲ್ಲಾ ಕೆಲಸಗಳು ಸ್ಟಾರ್ಟ್ ಆಗಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿಯನ್ನ ನಿಮಗೆ ಕೊಡ್ತೀವಿ ಅಂತಾರೆ ನಿರ್ದೇಶಕರು.. ಒಟ್ಟಾರೆ ಪವರ್ ಫುಲ್ ಕಾಂಬಿನೇಷನ್ ನ ಈ ಬಿಗ್ ಸಿನಿಮಾ ಈಗಿನಿಂದಲೇ ಒಂದು ಮಟ್ಟಕ್ಕೆ ಹವಾ ಕ್ರಿಯೇಟ್ ಮಾಡ್ತಿರೋದಂತೂ ಸುಳ್ಳಲ್ಲ.
ಈಗಾಗಲೇ ಉಪೇಂದ್ರ ಕಬ್ಜ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಕೂಡ ದೊಡ್ಡ ಬಜೆಟ್ನಲ್ಲೇ ಸಿದ್ಧಗೊಳ್ಳುತ್ತಿದೆ. ಅಲ್ಲದೆ, ಬೇರೆ ಬೇರೆ ಭಾಷೆಗಳಲ್ಲೂ ಈ ಚಿತ್ರ ತೆರೆಗೆ ಬರುತ್ತಿದೆ. ಅದರ ಜೊತೆ ಜೊತೆಯಲ್ಲೇ ಉಪೇಂದ್ರ ಮತ್ತೊಂದು ದೊಡ್ಡ ಬಜೆಟ್ ಸಿನಿಮಾಗೆ ಕೈ ಹಾಕಿದ್ದಾರೆ.
Published by:
Rajesh Duggumane
First published:
September 18, 2020, 1:17 PM IST