ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯ (Uppi Election Song Viral) ಮೂಲಕ ರಿಯಲ್ ರಾಜಕೀಯ ಮಾಡುತ್ತಿದ್ದಾರೆ. ಈ ಗ್ಯಾಪ್‌ನಲ್ಲಿಯೇ ಈಗ ಇದೇ ಉಪ್ಪಿ ರಾಜಕೀಯ ಮತ್ತು ರಾಜಕಾರಣಿಗಳ ಜನ್ಮ (Darbar Movie Updates) ಜಾಲಾಡಿದ್ದಾರೆ. ಇವರ ಈ ಒಂದು ನಡೆಗೆ ವಿ. ಮನೋಹರ್ ಸಾಥ್ ಕೊಟ್ಟಿದ್ದಾರೆ. ಹಾಗೆ ಉಪ್ಪಿ ಹಾಡಿದ ಈ ಗೀತೆ ಈಗ ಭಾರೀ ಗಮನ ಸೆಳೆಯುತ್ತಿದೆ. ಮುಂಬರುವ ಎಲೆಕ್ಷನ್‌ಗೆ ಜನರಲ್ಲಿ ಜಾಗೃತಿ (Uppi Song Updates) ಮೂಡಿಸಿರೋ ಹಾಗೆ ಈ ಗೀತೆ ಇದೆ. ಇದನ್ನ ಎಲೆಕ್ಷನ್‌ಗೋಸ್ಕರವೇ ಉಪೇಂದ್ರ ಹಾಡಿದ್ದಾರೆ ಅನ್ಕೋಬೇಡಿ. ಇದು ವಿ. ಮನೋಹರ್ ಅವರ ಸಿನಿಮಾದ ಒಂದು ಸ್ಪೆಷಲ್ ಗೀತೆ ಆಗಿದೆ. ಇದರ ಒಂದಷ್ಟು (V. Manohar Direction Cinema) ಮಾಹಿತಿ ಇಲ್ಲಿದೆ ಓದಿ.
ಉಪ್ಪಿ ಗಾನ-ದರ್ಬಾರ್ ಸಿನಿಮಾ-ಎಲೆಕ್ಷನ್ ಸಾಂಗ್
ನಟ-ನಿರ್ದೇಶಕ-ಸಂಗೀತ ನಿರ್ದೇಶಕ ವಿ. ಮನೋಹರ್ ಈಗೊಂದು ಸಿನಿಮಾ ಮಾಡಿದ್ದಾರೆ. ಹೆಚ್ಚು ಕಡಿಮೆ 25 ವರ್ಷದ ಬಳಿಕ ವಿ. ಮನೋಹರ್ ಅವರು ದರ್ಬಾರ್ ಹೆಸರಿನ ಚಿತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ಸ್ವತಃ ವಿ. ಮನೋಹರ್ ಸಂಗೀತವನ್ನು ಕೊಟ್ಟಿದ್ದಾರೆ.
ಇದೇ ಚಿತ್ರದಲ್ಲಿ ಒಂದು ಸ್ಪೆಷಲ್ ಹಾಡಿದೆ. ಇದನ್ನ ರಿಯಲ್ ಸ್ಟಾರ್ ಉಪೇಂದ್ರ ಹಾಡಿದ್ದಾರೆ. ಸತೀಶ್ ಅನ್ನೋರು ಈ ಗೀತೆಯನ್ನ ಬರೆದಿದ್ದಾರೆ. ಈ ಹಾಡು ನಿಜಕ್ಕೂ ಸ್ಪೆಷಲ್ ಆಗಿದೆ.
ಎಲೆಕ್ಷನ್ ಟೈಮ್‌ಲ್ಲಿ ಜನರಲ್ಲಿ ಜಾಗೃತಿ ಮೂಡಿಸೋ ಹಾಗೇನೆ ಇದೆ. ಈ ಹಾಡಿನ ಒಂದೆರಡು ಸಾಲು ಇಲ್ಲಿವೆ ಓದಿ.
ಬಂದೆ ಬಿಡ್ತು ಊರಹಬ್ದಂಗೆ
ನಡೆಯೋ ಎಲೆಕ್ಷನ್ನು..
ಗೊತ್ತಿದ್ರೂನು ಮನೆಹಾಳ್ರನ್ನ
ಮಾಡಕ್ ಸೆಲೆಕ್ಷನ್ನು..
ಕಳ್ರು ಸುಳ್ರೀಗಂತೂ
ಈಗ ಒಳ್ಳೇ ಕಲೆಕ್ಷನ್ನು..
ಇದೇ ಚಾನ್ಸು
ಎಲ್ಲಾ ಸೇರ್ಕಂಡ್
ಮಾಡಕ್ ಕರಪ್ಸನ್ನು....
ದರ್ಬಾರ್ ಹಾಡಿನಲ್ಲಿ ಎಲೆಕ್ಷನ್ ಅಸಲಿ ಸತ್ಯದ ಚಿತ್ರಣ
ದರ್ಬಾರ್ ಚಿತ್ರದ ಈ ಹಾಡು ಒಟ್ಟು 4.59 ನಿಮಿಷ ಇದೆ. ಇಡೀ ಹಾಡಲ್ಲಿ ರಾಜಕೀಯ ಮತ್ತು ರಾಜಕಾರಣಿಗಳ ಜನ್ಮ ಜಾಲಾಡಲಾಗಿದೆ. ಸಿನಿಮಾದಲ್ಲಿ ಬರುವ ಎಲೆಕ್ಷನ್ ದೃಶ್ಯದ ಹಿನ್ನೆಲೆಯಲ್ಲಿ ಈ ಒಂದು ಗೀತೆಯನ್ನ ಪ್ಲಾನ್ ಮಾಡಲಾಗಿದೆ.
ದರ್ಬಾರ್ ಚಿತ್ರದ ನಾಯಕ ನಟ ಸತೀಶ್ ಮೇಲೆನೆ ಈ ಇಡೀ ಹಾಡು ಚಿತ್ರೀಕರಿಸಲಾಗಿದೆ. ಹಾಗೇನೆ ಈಗ ರಿಲೀಸ್ ಮಾಡಿರೊ ಈ ಗೀತೆಯಲ್ಲಿ ಉಪ್ಪಿ ಹಾಡಿರೊ ವಿಡಿಯೋನೇ ಇದೆ. ಸಿನಿಮಾದ ಈ ಒಂದು ಲಿರಿಕಲ್ ವಿಡಿಯೋದಲ್ಲಿ ಇಡೀ ಹಾಡಿನ ಸಾಲುಗಳನ್ನ ಕೂಡ ನೋಡಬಹುದು.
ಎಲೆಕ್ಷನ್ ಕಲೆಕ್ಷನ್ ಕಥೆ ಹೇಳಿದ ದರ್ಬಾರ್ ಸಾಂಗ್
ತುಂಬಾ ಸ್ಪೆಷಲ್ ಅನಿಸೋ ಈ ಗೀತೆಯಲ್ಲಿ ಎಲೆಕ್ಷನ್ ಬಂದಾಗ ಜನ ಏನ್ ಮಾಡ್ತಾರೆ ಅನ್ನುವ ಸತ್ಯವೂ ಇದೆ. ದುಡ್ಡಿಗಾಗಿಯೇ ಯಾರ್ ಯಾರನ್ನೋ ಆಯ್ಕೆ ಮಾಡ್ತಾರೆ ಜನ ಅನ್ನುವ ಮ್ಯಾಟರ್ ಕೂಡ ಈ ಒಂದು ಹಾಡನಲ್ಲಿ ಬರುತ್ತದೆ.
ದರ್ಬಾರ್ ಚಿತ್ರದ ಈ ಒಂದು ಸ್ಪೆಷಲ್ ಹಾಡು ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಯುಟ್ಯೂಬ್ ಅಲ್ಲಿ ಈಗಾಗಲೇ ರಿಲೀಸ್ ಆಗಿರೋ ಈ ಹಾಡನ್ನ ಸಾಕಷ್ಟು ಜನ ನೋಡಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲೂ ಒಳ್ಳೆ ಕಾಮೆಂಟ್ಸ್ ಕೂಡ ಬಂದಿವೆ.
ಉಪ್ಪಿ ಹಾಡು ಕೇಳಿ ಜೈ ಉಪ್ಪಿ ಬಾಸ್ ಎಂದ ಫ್ಯಾನ್ಸ್
ಉಪ್ಪಿ ಅಭಿಮಾನಿಗಳಂತೂ ದರ್ಬಾರ್ ಚಿತ್ರದ ಈ ಒಂದು ಗೀತೆಯನ್ನ ತುಂಬಾನೇ ಮೆಚ್ಚಿಕೊಂಡಿದ್ದಾರೆ. ಪ್ರಜಾಕೀಯದ ಉಪ್ಪಿ ಅವರ ಈ ಗೀತೆಯನ್ನ ಬಹುವಾಗಿಯೇ ಕೊಂಡಾಡಿದ್ದಾರೆ. ಇನ್ನೂ ಕೆಲವ್ರು "ತುಂಬಾ ಅದ್ಭುತವಾಗಿ ಹಾಡಿದ್ದಾರೆ ನಮ್ ಉಪ್ಪಿ ಬಾಸ್‌ಗೆ ಜೈ ಪ್ರಜಾಕೀಯ" ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Ram Charan: ನಟ ರಾಮ್ ಚರಣ್ ಹಾಗೂ ಉಪಾಸನಾ ಬಗ್ಗೆ ನಟ ಮನೋಜ್ ಕಮೆಂಟ್!
ಹೀಗೆ ರಿಯಲ್ ಸ್ಟಾರ್ ಉಪೇಂದ್ರ ಹಾಡಿರೋ ಗೀತೆಯನ್ನ ಜನ ಮೆಚ್ಚಿಕೊಂಡಿದ್ದು, ವಿ. ಮನೋಹರ್ ಸಂಗೀತ ಮತ್ತು ಸತೀಶ್ ಸಾಹಿತ್ಯವನ್ನೂ ನೋಡುಗರು ಮೆಚ್ಚಿಕೊಂಡಿದ್ದಾರೆ. ಒಟ್ಟಾರೆ ದರ್ಬಾರ್ ಚಿತ್ರದ ಎಲೆಕ್ಷನ್ ಹಾಡು ಬಲು ಜೋರಾಗಿಯೇ ಸೌಂಡ್ ಮಾಡುತ್ತಿದೆ ಎಂದು ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ