Real Star Upendra: ಉಪ್ಪಿ ಹೊಸಾ ಸಿನಿಮಾ ಜೂನ್ 3 ಕ್ಕೆ ಶುರು, ರಿಯಲ್ ಸ್ಟಾರ್‌ ನಿರ್ದೇಶನಕ್ಕೆ ರೆಡಿಯಾಗಿ!

New Film Shooting: ಜೂನ್ 3 ರಂದು ಅದ್ಧೂರಿ ಮುಹೂರ್ತದೊಂದಿಗೆ ಪ್ರಾಜೆಕ್ಟ್ ಕಿಕ್‌ಸ್ಟಾರ್ಟ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದ್ದು, ಅಭಿಮಾನಿಗಳ ನಿರೀಕ್ಷೆ ಈ ಚಿತ್ರದ ಮೇಲೆ ಹೆಚ್ಚಿದೆ ಎನ್ನಬಹುದು.

ಚಿತ್ರದ ಪೋಸ್ಟರ್​

ಚಿತ್ರದ ಪೋಸ್ಟರ್​

  • Share this:
ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಸಿನಿಮಾ (Film) ನಿರ್ದೇಶನ ಮಾಡುವ ವಿಷಯ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿತ್ತು. ಅವರು ಬಹಳ ಸಮಯದ ನಂತರ ನಿರ್ದೇಶನ (Direction) ಮಾಡುತ್ತಿರುವ ಸಿನಿಮಾದ ಪೋಸ್ಟರ್ (Poster) ಕೂಡ ಇತ್ತೀಚೆಗೆ ವೈರಲ್ ಆಗಿತ್ತು. ಆದರೆ ನಂತರ ಅದರ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ. ಇದೀಗ ಉಪೇಂದ್ರ ನಿರ್ದೇಶನದ ಚಿತ್ರದ ತಯಾರಿ ಆರಂಭವಾಗಿದ್ದು, ಜೂನ್ 3ರಿಂದ ಶೂಟಿಂಗ್ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ರಿಯಲ್ ಸ್ಟಾರ್‌ ಮರಳಿ ನಿರ್ದೇಶನ ಮಾಡುತ್ತಿರುವುದು ಅಭಿಮಾನಿಗಳಲ್ಲಿ ಮಾತ್ರ ಕುತೂಹಲ ಸೃಷ್ಟಿ ಮಾಡಿರಲಿಲ್ಲ. ಸಿನಿ ಪ್ರಿಯರಲ್ಲಿ ಸಹ ಖುಷಿಗೆ ಕಾರಣವಾಗಿತ್ತು.

ಜೂನ್ 3 ರಂದು ಅದ್ಧೂರಿ ಮುಹೂರ್ತದೊಂದಿಗೆ ಪ್ರಾಜೆಕ್ಟ್ ಕಿಕ್‌ಸ್ಟಾರ್ಟ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದ್ದು, ಅಭಿಮಾನಿಗಳ ನಿರೀಕ್ಷೆ ಈ ಚಿತ್ರದ ಮೇಲೆ ಹೆಚ್ಚಿದೆ ಎನ್ನಬಹುದು.

ಯಾವಾಗಲೂ ತಮ್ಮ ಚಿತ್ರಗಳ ಮೂಲಕ ಜನರ ತಲೆಗೆ ಹುಳ ಬಿಡುವ ಉಪೇಂದ್ರ ಈ ಚಿತ್ರದ ಪೋಸ್ಟರ್ ಮೂಲಕ ಸಹ ಕಿಚ್ಚು ಹಚ್ಚಿಸಿದ್ದಾರೆ. ಕುದುರೆ ಏರಿ ಕಂಬಳಿ ಹೊದ್ದಿರುವ ಲಿಕ್ನಲ್ಲಿ ಪೋಸ್ಟರ್ನಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದು, ಕುದುರೆ ಲಾಳದ ಸಿಂಬಲ್ನಲ್ಲಿ ಚಿತ್ರದ ಟೈಟಲ್ನ್ನು ಅಡಗಿಸಿಟ್ಟಿದ್ದಾರೆ.

ಪ್ಯಾನ್​ ಇಂಡಿಯಾ ಚಿತ್ರ ಇದಾಗಿದೆ

ಬಹುಭಾಷೆಯಲ್ಲಿ ತಯಾರಾಗುತ್ತಿರುವ ಈ ಸಿನೆಮಾದ ಟೈಟಲ್ ಕುತೂಹಲಕಾರಿಯಾಗಿದ್ದು, ಕೆ ಪಿ ಶ್ರೀಕಾಂತ್ ಅವರ ವೀನಸ್ ಎಂಟರ್ಟೈನರ್ಸ್ ಸಹಯೋಗದೊಂದಿಗೆ ಜಿ ಮನೋಹರನ್ ಅವರ ಲಹರಿ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ.

ಸುಮಾರು 7 ವರ್ಷಗಳ ನಂತರ ಉಪೇಂದ್ರ ನಿರ್ದೇಶನಕ್ಕೆ ಇಳಿದಿದ್ದು, ಸಲಗ’ಗಳಂತ ಎರಡು ಸೂಪರ್ ಹಿಟ್ ಚಿತ್ರಗಳನ್ನು ಇಂಡಸ್ಟರಿಗೆ ಕೊಟ್ಟ ಕೆಪಿ ಶ್ರೀಕಾಂತ್ ಉಪ್ಪಿ ಯ ಹೊಸ ಕನಸಿಗೆ ನೀರೆರೆಯಲಿದ್ದಾರೆ. ನಿರ್ಮಾಪಕ ಕೆ.ಪಿ ಶ್ರೀಕಾಂತ್ ತಮ್ಮ ವೀನಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಮೂರನೇ ಚಿತ್ರವಾಗಿ ಉಪ್ಪಿಯ ಚಿತ್ರ ನಿರ್ಮಾಣ ಮಾಡ್ತಿದ್ದಾರೆ.

ಇದನ್ನೂ ಓದಿ: ರಾಧಿಕಾ-ಯಶ್ ಮಗಳ ಹೊಸಾ ಫೋಟೋ ನೋಡಿ, ಎಷ್ಟೊಂದು ಮುದ್ದು!

ಸಿನಿಮಾ ಅನೌನ್ಸ್ಗೂ ಮುನ್ನವೇ ಆಡಿಯೋ ರೈಟ್ಸ್ ಲಹರಿ ತೆಕ್ಕೆಗೆ!
ವಿಶೇಷ ಅಂದ್ರೆ ಈ ಜೋಡಿ ಒಂದಾಗ್ತಿದಂತೆ ಸಿನಿಮಾ ಶುರುವಾಗುವ ಮೊದಲೆ ಚಿತ್ರದ ಆಡಿಯೋ ರೈಟ್ಸ್ ಲಹರಿ ತೆಕ್ಕೆಗೆ ಜಾರಿದೆ. ಆದರೆ ಈ ಸೂಪರ್ ಕಾಂಬೋ ಚಿತ್ರಕ್ಕೆ ಸಂಗೀತ ನಿರ್ದೆಶನ ಯಾರು ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿ ಇದೆ

ಈ ಹಿಂದೆ ಹತ್ತು ಚಿತ್ರಗಳ ನಿರ್ದೇಶನ ಮಾಡಿದ್ದಾರೆ ರಿಯಲ್ ಸ್ಟಾರ್. ಇದು ಅವರ ಡೈರೆಕ್ಷನ್ನಲ್ಲಿ ಮೂಡಿಬರಲಿರುವ 11ನೇ ಚಿತ್ರವಾಗಿದೆ. ಉಪ್ಪಿ 2 ಸಿನಿಮಾ 2015ರಲ್ಲಿ ರಿಲೀಸ್ ಆಗಿದ್ದು, ಇದು ಅವರು ಅಭಿನಯಿಸಿ, ನಿರ್ದೇಶನದ ಕೊನೆಯ ಸಿನಿಮಾ. ಈ ಚಿತ್ರದಲ್ಲಿ ಕ್ರಿಸ್ಟಿನಾ ಅಕ್ವೀನಾ ಅವರು ನಾಯಕಿಯಾಗಿ ನಟಿಸಿದ್ದರು. ಈ ಚಿತ್ರಕ್ಕೆ ಪ್ರಿಯಾಂಕಾ ಉಪೇಂದ್ರ ಹಣ ಹೂಡಿದ್ದರು.

ಈ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಉಪೇಂದ್ರ ಅವರದ್ದೇ ಆಗಿದ್ದು, ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾ ಆಗಿದೆಯಂತೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ರಿಲೀಸ್ ಆಗಲಿದೆಯಂತೆ.

ಇದನ್ನೂ ಓದಿ: ರಾ, ರಾ ರುಕ್ಕಮ್ಮ ಎಂದ ಕಿಚ್ಚ - ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವೀಕ್ಷಣೆ

ಉಪೇಂದ್ರ ಅವರ ನಿರ್ದೇಶನದ ಸಿನಿಮಾ ನೋಡಲು ದೊಡ್ಡ ಸಿನಿಪ್ರಿಯರ ಬಳಗವೇ ಕಾಯುತ್ತಿದೆ. ಸಾಮಾನ್ಯ ಸಿನಿಮಾಗಳಿಗಿಂಥಲೂ ವಿಭಿನ್ನವಾಗಿ ಸಿನಿಮಾ ಮಾಡುವ ರಿಯಲ್ ಸ್ಟಾರ್ ಈ ಸಲ ಯಾವ ಸ್ಟೋರಿ ಹೊತ್ತು ತರುತ್ತಿದ್ದಾರೆ ಎಂಬ ಕಾತರ ಅಭಿಮಾನಿಗಳಲ್ಲಿದೆ. ಉಪೇಂದ್ರ ಅವರು ಆರ್. ಚಂದ್ರು ನಿರ್ದೇಶನದ ಕಬ್ಜ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರೀಕರಣ ಕೊನೆಯ ಹಂತದಲ್ಲಿದೆ.
Published by:Sandhya M
First published: