Real Star Upendra: ಉಪ್ಪಿ ಕಣ್ಣು ಕೆಜಿಎಫ್ ಬೆಡಗಿಯರ ಮೇಲೆ! ಯಾರಾಗ್ತಾರೆ ರಿಯಲ್ ಸ್ಟಾರ್​ಗೆ ನಾಯಕಿ?

Sandalwood: ಅಲ್ಲದೇ ಉಪ್ಪಿ ಪ್ಯಾನ್​ ಇಂಡಿಯಾ ಸಿನಿಮಾ ಅನೌನ್ಸ್ ಮಾಡಿ ಆಗಿದೆ. ಈಗ ಇದೇ ತಿಂಗಳ ಅಂತ್ಯದಲ್ಲಿ ಶೂಟಿಂಗ್ ಅಂಗಳಕ್ಕೆ ಕಾಲಿಡೋಕೆ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಉಪ್ಪಿ ಸೈಲೆಂಟ್ ಆಗಿ ಶೂಟಿಂಗ್ ಶುರು ಮಾಡ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ.

ತಮನ್ನಾ ಹಾಗೂ ಶ್ರೀನಿಧಿ ಶೆಟ್ಟಿ

ತಮನ್ನಾ ಹಾಗೂ ಶ್ರೀನಿಧಿ ಶೆಟ್ಟಿ

 • Share this:
  ರಿಯಲ್​ ಸ್ಟಾರ್ ಉಪೇಂದ್ರ (Real Star Upendra) 7 ವರ್ಷಗಳ ನಂತರ ಡೈರೆಕ್ಟರ್ (Director)  ಕ್ಯಾಪ್ ತೊಟ್ಟಿದ್ದಾರೆ. ಪ್ಯಾನ್ ಇಂಡಿಯಾ (Pan India) ಫಿಲ್ಮ್ ಮೂಲಕ ಮತ್ತೆ ಸೌಂಡ್ ಮಾಡೋಕೆ ಉಪ್ಪಿ ಸಿದ್ದರಾಗಿದ್ದಾರೆ. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿರುವ ಉಪ್ಪಿ ಹೀರೋ ಆಗಿಯೂ ಸಹ ಕಾಣಿಸ್ತಿದ್ದಾರೆ. ಆದರೆ ಈ ಚಿತ್ರದಲ್ಲಿ ಉಪ್ಪಿ ಜೊತೆ ಕಾಣಿಸುವ ನಾಯಕಿ ಯಾರು ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿ ಉಳಿದಿದೆ.

  ಉಪ್ಪಿ ಸಿನಿಮಾಗೆ ನಾಯಕಿ ಯಾರು? 

  ಈ ಪ್ರಶ್ನೆ ಉಪ್ಪಿ ಅಭಿಮಾನಿಗಳನ್ನು ಕಾಡ್ತಿದ್ದು, ಈಗ ಪ್ರಶ್ನೆಗೆ ಈಗ ನ್ಯೂಸ್ 18 ಕನ್ನಡಕ್ಕೆ  ಉತ್ತರ ಸಿಕ್ಕಿದೆ. ಉಪ್ಪಿ ಡೈರೆಕ್ಷನ್ ಸಿನಿಮಾಗಳೇ ಹಾಗೇ ಸೆಟ್ಟೇರಿದಾಗಿನಿಂದ ರಿಲೀಸ್ ಆಗೋವರೆಗೂ ಸೌಂಡ್ ಮಾಡುತ್ತವೆ. ಅದೇ ರೀತಿ ಈಗ ಉಪ್ಪಿ ಡೈರೆಕ್ಷನ್ ಮಾಡ್ತಿರುವ ಹೊಸ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಟಾಕ್ ಆಫ್​ ದಿ ಟೌನ್ ಆಗಿದೆ.

  ಅಲ್ಲದೇ ಉಪ್ಪಿ ಪ್ಯಾನ್​ ಇಂಡಿಯಾ ಸಿನಿಮಾ ಅನೌನ್ಸ್ ಮಾಡಿ ಆಗಿದೆ. ಈಗ ಇದೇ ತಿಂಗಳ ಅಂತ್ಯದಲ್ಲಿ ಶೂಟಿಂಗ್ ಅಂಗಳಕ್ಕೆ ಕಾಲಿಡೋಕೆ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಉಪ್ಪಿ ಸೈಲೆಂಟ್ ಆಗಿ ಶೂಟಿಂಗ್ ಶುರು ಮಾಡ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಈ ಚಿತ್ರಕ್ಕೆ ಯಾರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ ಅನ್ನೋ ಕಲರ್ ಫುಲ್ ಪ್ರಶ್ನೆ  ಈಗ ಗಾಂಧಿನಗರದಲ್ಲಿ  ಓಡಾಡ್ತಿದೆ. ಉಪ್ಪಿ ಡೈರೆಕ್ಷನ್ ಸಿನಿಮಾಗಳಲ್ಲಿ ಕತೆಯ ಜೊತೆಗೆ ಸ್ಟಾರ್ ಕಾಸ್ಟ್ ಕೂಡ ಸಖತ್ ಇಂಟ್ರೆಸ್ಟಿಂಗ್ ಆಗಿರುತ್ತದೆ. ಎ ಚಿತ್ರದಿಂದ ಉಪ್ಪಿ ಟು ಚಿತ್ರದ ವರೆಗೂ ಉಪ್ಪಿ ಚಿತ್ರದಲ್ಲಿ ನಾಯಕಿಯರು ಗಮನ ಸೆಳೆದಿದ್ದಾರೆ. ಯಾಕಂದ್ರೆ ಉಪ್ಪಿ ಡೈರೆಕ್ಷನ್ ಚಿತ್ರಗಳಲ್ಲಿ ನಾಯಕಿಯ ಪಾತ್ರ ಹೈಲೈಟ್ಸ್ ಆಗಿರುತ್ತದೆ. ಆದ್ದರಿಂದ ಈ ಚಿತ್ರದಲ್ಲಿ ಉಪ್ಪಿ ಜೊತೆ ಕಾಣಿಸುವ ನಾಯಕಿ ಯಾರು? ಅವರ ಪಾತ್ರ ಹೇಗಿರುತ್ತದೆ? ಎನ್ನುವ ಕುತೂಹಲ ಈಗ ಬುದ್ದಿವಂತನ ಅಭಿಮಾನಿಗಳ ಮನದಲ್ಲಿ  ಮೂಡಿದೆ.

  ಇದನ್ನೂ ಓದಿ: ನಿಕ್ ಜೊತೆ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ ಪ್ರಿಯಾಂಕಾ! ಇಲ್ಲಿದೆ ನೋಡಿ ಕ್ಯೂಟ್‌ ಕಪಲ್‌ ರೊಮ್ಯಾಂಟಿಕ್ ಫೋಟೋಗಳು

  ಪ್ಯಾನ್​ ಇಂಡಿಯಾ ನಾಯಕಿಯರ ಹಿಂದೆ ಬಿದ್ದ ಉಪ್ಪಿ

  ಉಪ್ಪಿ ದೊಡ್ಡ ಮಟ್ಟದಲ್ಲಿ  ಸಿನಿಮಾ ಮುಹೂರ್ತ ಮಾಡಿದ್ದಾರೆ. ಇಂದಿನಿಂದ ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ಶೂಟಿಂಗ್ ಶುರು ಮಾಡಿದ್ದಾರೆ. ಆದ್ರೆ ಚಿತ್ರದ ನಾಯಕಿ ಯಾರು ಎನ್ನುವ ಬಗ್ಗೆ ಎಲ್ಲಿಯೂ ಅವರು ಗುಟ್ಟು ಬಿಟ್ಟು ಕೊಟ್ಟಿಲ್ಲ ಉಪ್ಪಿ. ಆದ್ರೆ ಈಗ ಉಪ್ಪಿಯ ಈ  ರಹಸ್ಯ ನ್ಯೂಸ್ 18 ಕನ್ನಡಕ್ಕೆ ತಿಳಿದಿದೆ.

  ಏಳು ವರ್ಷಗಳ ನಂತರ ಮತ್ತದೆ ಹಳೇ ಚಾರ್ಮ್​ನಲ್ಲಿಯೇ ಆ್ಯಕ್ಷನ್ ಕಟ್ ಹೇಳೋಕೆ ಸಿದ್ದವಾಗಿರುವ ಉಪ್ಪಿ ಈ ಚಿತ್ರಕ್ಕೆ ಪ್ಯಾನ್​ ಇಂಡಿಯಾ ನಾಯಕಿಯನ್ನೇ ಕರೆತರಲು ಪಕ್ಕಾ ಪ್ಲಾನ್ ಮಾಡಿದ್ದಾರೆ. ಅಲ್ಲದೇ ಈಗಾಗಲೇ ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಸೌಂಡ್ ಮಾಡಿರುವ ಇಬ್ಬರು ನಾಯಕಿಯರ ಮೇಲೆ ಉಪ್ಪಿ ಕಣ್ಣಿಟ್ಟಿದ್ದಾರೆ‌. ಯೆಸ್​, ಉಪ್ಪಿ  ತಮ್ಮ ಚಿತ್ರಕ್ಕೆ ನಾಯಕಿಯರ ಪಾತ್ರಕ್ಕೆ ಕೆಜಿಎಫ್  ಬೆಡಗಿಯರ ಹಿಂದೆ ಬಿದ್ದಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ರೀನಾ ಪಾತ್ರದಲ್ಲಿ ಕಾಣಿಸಿದ್ದ ಶ್ರೀನಿಧಿ ಶೆಟ್ಟಿ ಹಾಗೂ ಕೆಜಿಎಫ್  ಚಾಪ್ಟರ್ 1 ನಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಎಂದು ಸೊಂಟ ಬಳುಕಿಸಿ ಮಿಂಚಿದ್ದ ತಮನ್ನಾ ಇಬ್ಬರಲ್ಲಿ ಒಬ್ಬರನ್ನು ನಾಯಕಿಯಾಗಿ ಕರೆತರಲು ಪ್ಲಾನ್ ಮಾಡಿದ್ದಾರೆ ಎಂಬ ವಿಚಾರ ಉಪ್ಪಿ ಆಪ್ತ ಮೂಲಗಳಿಂದ ತಿಳಿದು ಬಂದಿದೆ.

  ಇದನ್ನೂ ಓದಿ: ರಿಚರ್ಡ್​ ಆ್ಯಂಟೋನಿ ಬಗ್ಗೆ ಅಪ್​ಡೇಟ್​ ಕೊಟ್ಟ ರಕ್ಷಿತ್, ಮತ್ತೆ ರಿಚ್ಚಿ ಬಂದೇ ಬರ್ತಾನೆ!

  ವಿಶೇಷ ಅಂದ್ರೆ ತಮನ್ನಾ ಮೇಲೆ ಉಪ್ಪಿ ಒಲವು ಜಾಸ್ತಿ ಇದೆಯಂತೆ. ಯಾಕಂದ್ರೆ ಶ್ರೀನಿಧಿ ಶೆಟ್ಟಿ ಕೆಜಿಫ್ ಬಿಟ್ರೆ ಬೇರೆ ದೊಡ್ಡ ಚಿತ್ರ ಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ತಮನ್ನಾ ಈಗಾಗಲೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಆದ್ದರಿಂದ ಉಪ್ಪಿ ತಮ್ಮ ಪ್ಯಾನ್ ಇಂಡಿಯಾ ಪಿಕ್ಚರ್ ಗೆ ಪ್ಯಾನ್ ಇಂಡಿಯಾ ಲೇಡಿ ಸೂಪರ್ ಸ್ಟಾರ್ ತಮನ್ನಾ ಅವರನ್ನು ಕರೆತರುವ ಸಾಧ್ಯತೆ ಹೆಚ್ಚಿದೆಯಂತೆ. ಈಗಾಗಲೇ ಇವರಿಬ್ಬರಲ್ಲಿ ಒಬ್ಬರನ್ನು ಕರೆತರಲು ಉಪ್ಪಿ ಟೀಮ್ ಜೊತೆ ಮಾತನಾಡಿದ್ದು, ಇಬ್ಬರಲ್ಲಿ ಯಾರು ಉಪ್ಪಿಯ ಪ್ಯಾನ್ ಇಂಡಿಯಾ ಚಿತ್ರಕ್ಕೆ ಯಾರು ಫೈನಲ್ ಆಗ್ತಾರೆ ಕಾದು ನೋಡಬೇಕು.

   ವರದಿ: ಸತೀಶ್ ಎಂ.ಬಿ
  Published by:Sandhya M
  First published: