ಕನ್ನಡದ ಕಬ್ಜ ಸಿನಿಮಾ ಯಾಕೆ ನೋಡಬೇಕು? ಈ (Kabzaa Movie Review) ಚಿತ್ರದಲ್ಲಿ ಅಂತಹದ್ದೇನ್ ಇದೆ? ಚಿತ್ರ ಪ್ರೇಮಿಗಳಿಗೆ ಬೇಕಾಗೋ ವಿಷಯ ಇದರಲ್ಲಿ ಇದಿಯೇ? ಕನ್ನಡ ಪ್ರೇಕ್ಷಕರಲ್ಲದೇ ಬೇರೆ ಭಾಷೆಯ ಜನರು (Pan India Kabzaa Movie Release) ಯಾಕೆ ಈ ಚಿತ್ರ ನೋಡಬೇಕು.? ಕಬ್ಜ ಅಂದ್ರೇನು? ಯಾರು ಯಾರನ್ನ ಕಬ್ಜ ಮಾಡ್ತಾರೆ? ಇದು ಭೂಗತಲೋಕದ ಕಥೆನಾ? ಸ್ವತಂತ್ರ ಹೋರಾಟದ ಕಥೆನಾ? ನಿಜವಾಗ್ಲೂ ಕಬ್ಜ ಯಾವ (Kannada Kabzaa Movie Updates) ರೀತಿಯ ಸಿನಿಮಾ? ಸ್ವಾತಂತ್ರ ಪೂರ್ವದ ವಿಷಯ ಇಲ್ಲಿ ಯಾಕೆ ಬರುತ್ತದೆ? ಈ ಎಲ್ಲ ಪ್ರಶ್ನೆಗೆ (Uppi Movie Release) ಉತ್ತರ ಸಿಕ್ಕಿದೆ. ಅದನ್ನ ತಿಳಿಯಲು ಈ ರಿವ್ಯೂ ಓದಿ.
ಕನ್ನಡದ ಕಬ್ಜ ಚಿತ್ರ ಯಾಕೆ ನೋಡಬೇಕು?
ಕಬ್ಜ ಚಿತ್ರವನ್ನ ನೋಡದೇ ಇರೋರು ಈ ಚಿತ್ರವನ್ನ ಯಾಕೆ ನೋಡಬೇಕು? ಈ ಪ್ರಶ್ನೆಗೆ ಉತ್ತರ ಸಿಂಪಲ್ ಆಗಿದೆ. ಈ ಚಿತ್ರದಲ್ಲಿ ನಿಮಗೆ ಆ ದಿನಗಳ ಅದ್ಭುತ ಚಿತ್ರಣ ಸಿಗುತ್ತದೆ. ಕನ್ನಡದ ಕಂಚಿನ ಕಂಠದ ನಾಯಕ ಸುದೀಪ್ ಅದ್ಬುತ ನಿರೂಪಣೆಯ ರಸದೌತಣ ದೊರೆಯುತ್ತದೆ.
ಸ್ವತಂತ್ರ ಪೂರ್ವದ ಇತಿಹಾಸವನ್ನ ಸುದೀಪ್ ಧ್ವನಿಯಲ್ಲಿ ಕೇಳೋದೇ ಚೆಂದ. ಅದನ್ನ ಕೇಳ್ತಾ ಹೋದ್ರೆ, ಇತಿಹಾಸದಲ್ಲಿ ಹೀಗೂ ಆಗಿದಿಯೇ ಅಂತಲೇ ನಿಮಗೆ ಅನಿಸುತ್ತದೆ. ಅದನ್ನ ನಿರ್ದೇಶಕ ಆರ್. ಚಂದ್ರು ಇಲ್ಲಿ ಕಮರ್ಷಿಯಲ್ ಟಚ್ ಕೊಟ್ಟು ಹೇಳಿದ್ದಾರೆ. ಪ್ರತಿ ಫೇಮ್ ಅಲ್ಲೂ ವೈಭವ ಇದೆ. ಆ ಕಾಲದ ಶ್ರೀಮಂತಿಕೆನೆ ಕಾಣುತ್ತದೆ.
ಕಬ್ಜ ಸಿನಿಮಾದಲ್ಲಿ ಸ್ವತಂತ್ರ ಪೂರ್ವದ ಕಥೆ ಯಾಕೆ?
ಕಬ್ಜ ಒಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಈ ಚಿತ್ರದ ಕಥೆ ಸ್ವಂತಂತ್ರ ಪೂರ್ವದಲ್ಲಿಯೇ ಆರಂಭವಾಗುತ್ತದೆ. ಸ್ವತಂತ್ರಕ್ಕಾಗಿ ಹೋರಾಡುವ ವೀರನ ಮಕ್ಕಳೇ ಅರಕೇಶ್ವರ ಮತ್ತು ಸಂಕೇಶ್ವರ. ಇವರ ಕಥೆ ಸ್ವತಂತ್ರ ಸಿಕ್ಕ ನಂತರವೂ ಸಾಗುತ್ತದೆ. ಸುನಿಲ್ ಪುರಾಣಿಕ ಇಲ್ಲಿ ರಿಯಲ್ ಸ್ಟಾರ್ ಉಪೇಂದ್ರನ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಪೇಂದ್ರ ಇಲ್ಲಿ ಏರ್‌ಫೊರ್ಸ್ ಉದ್ಯೋಗಿ ಆಗಿ ಅಭಿನಯಿಸಿದ್ದಾರೆ.
ಕಬ್ಜ ಚಿತ್ರದಲ್ಲಿ ಭೂಗತ ಲೋಕದ ಕಥೆ ಇದಿಯಾ?
ಕಬ್ಜ ಅನ್ನೋದೇ ಒಂದು ಆಳ್ವಿಕೆಯ ಸಂಕೇತವಾಗಿದೆ. ಹಾಗಿರೋವಾಗ ಇಲ್ಲಿ ಎಲ್ಲವನ್ನೂ ಕಳೆದುಕೊಂಡ ರಾಜಮನತದ ಕಥೆ ನಿಮಗೆ ಅಂದಿನ ಅವರ ಸ್ಥಿತಿಗತಿಯನ್ನ ಹೇಳುತ್ತದೆ. ರಾಜರಾಗಿದ್ದರೂ ಅಧಿಕಾರವೇ ಇಲ್ಲದ ಸ್ಥಿತಿಯ ಚಿತ್ರಣ ದೊರೆಯುತ್ತದೆ.
ಆದರೆ ಆ ಒಬ್ಬ ರಾಜಮನೆತನದ ರಾಜನ ತಂತ್ರ ಮತ್ತು ಕುತಂತ್ರಕ್ಕೆ ಇಡೀ ಕಬ್ಜ ಕಥೆ ಸೃಷ್ಟಿ ಆಗುತ್ತದೆ. ಎಲ್ಲವೂ ಇಲ್ಲಿ ಆ ರಾಜನಿಂದಲೇ ಅನ್ನೋದು ತಿಳಿಯುತ್ತಿದೆ. ಆದರೆ ಉಪ್ಪಿ ಇಲ್ಲಿ ಏನು ಅನ್ನೋದು ಕೂಡ ವಿಶೇಷ ಅಲ್ವೇ? ಹೌದು ಅದನ್ನೂ ಹೇಳಿದ್ದೇವೆ ಓದಿ.
ಕಬ್ಜ ಸಿನಿಮಾದಲ್ಲಿ ಉಪೇಂದ್ರ ಏನೂ ಡಾನಾ ಇಲ್ಲ ರಾಜನಾ?
ರಿಯಲ್ ಸ್ಟಾರ್ ಉಪೇಂದ್ರ ಈ ಚಿತ್ರದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ. ಮುಂದೇ ಡಾನ್ ಆಗೋದೇ ಕಥೆ. ಭೂಗತ ಲೋಕವನ್ನ ಆಳೋ ದೊರೆ ಆಗೋದು ಇಡೀ ಸಿನಿಮಾ. ಆದರೆ ಉಪ್ಪಿ ಇಲ್ಲಿ ರಾಜನಲ್ಲ. ರಾಜಮನೆತನದ ಹುಡುಗಿಯನ್ನ ಮದುವೆ ಆಗಿ ರಾಜನಂತೆ ಮೆರೆಯೊದೆ ಕಥೆ.
ಕಬ್ಜ ಚಿತ್ರದಲ್ಲಿ ಶಿವಣ್ಣ ಏನು? ಸುದೀಪ್ ವಿಲನ್ನಾ?
ಕಬ್ಜ ಸಿನಿಮಾದಲ್ಲಿ ಉಪೇಂದ್ರ ಡಾನ್ ಆಗಿದ್ದರೇ, ಸುದೀಪ್ ಈ ಡಾನ್ ಕಥೆ ಹೇಳೋ ಒಬ್ಬ ನಿರೂಪಕ ಹೌದು. ಗನ್ ಹಿಡಿದು ಉಪ್ಪಿ ಮುಂದೆ ನಿಲ್ಲೋ ಒಬ್ಬ ಪೊಲೀಸ್ ಆಫೀಸರ್ ಕೂಡ ಹೌದು. ಎರಡೂ ಆಗಿರೋ ಸುದೀಪ್, ರೌಡಿಗಳ ನಿದ್ದೆಗೆಡಿಸೋ ಖಡಕ್ ಪೊಲೀಸ್ ಕೂಡ ಆಗಿದ್ದಾರೆ.
ಆದರೆ ಸಿನಿಮಾ ನೋಡ್ತಾ ನೋಡ್ತಾ ಹೋದಂತೆ, ಶಿವಣ್ಣನ ಪಾತ್ರದ ಸುಳಿವೇ ನಿಮಗೆ ಸಿಗೋದಿಲ್ಲ. ಕಟ್ಟ ಕಡೆಯ ದೃಶ್ಯ ಮುಗಿಯೋ ಸಮಯ ಬಂದ್ರೂ ಶಿವಣ್ಣ ಇಲ್ಲಿ ಕಾಣೋದೇ ಇಲ್ಲ. ಆದರೆ ಕಡೆಯ ಕ್ಷಣದಲ್ಲಿ ಶಿವಣ್ಣ ದೊಡ್ಡ ಸೈನ್ಯದೊಂದಿಗೆ ಇಲ್ಲಿಗೆ ಬರ್ತಾರೆ. ಬಂದು ಏನ್ ಹೇಳ್ತಾರೆ ಗೊತ್ತೇ?
ಕನ್ನಡದ ಕಬ್ಜ-2 ಸಿನಿಮಾ ಬರೋದು ಗ್ಯಾರಂಟಿನಾ?
ಹೌದು, ಕಬ್ಜ-2 ಸಿನಿಮಾ ಬರೋದು ಪಕ್ಕಾನೇ. ಈ ಒಂದು ಹಿಂಟ್ ಅನ್ನ ಕಡೆ ಕ್ಷಣದಲ್ಲಿ ಸ್ವತಃ ಶಿವಣ್ಣ ಕೊಡ್ತಾರೆ. ಅದುವೇ ಇಲ್ಲಿ ಕುತೂಹಲ ಮೂಡಿಸುತ್ತದೆ. ಕಬ್ಜ ಭಾಗ ಎರಡು ಹೇಗಿರುತ್ತದೆ ಅನ್ನೋದೆ ಈಗ ಹುಟ್ಟಿರೋ ಮತ್ತೊಂದು ಕುತೂಹಲ.
ಬೇರೆ ಭಾಷೆಯ ಜನ ಕಬ್ಜ ಚಿತ್ರ ಯಾಕೆ ನೋಡಬೇಕು?
ಕಬ್ಜ ಸಿನಿಮಾದಲ್ಲಿ ಎಲ್ಲವೂ ಇದೆ. ಲವ್ ಕೇಳೋರಿಗೆ ಸಿಂಪಲ್ ಲವ್ ಸ್ಟೋರಿ ಇದೆ. ಗುಂಡಿನ ಸೌಂಡು, ಆ್ಯಕ್ಷನ್ ಇಷ್ಟಪಡೋರಿಗೆ ಅದೂ ಇದೆ. ಚಿತ್ರ-ವಿಚಿತ್ರ ಕ್ಯಾರೆಕ್ಟರ್‌ಗಳನ್ನ ನೋಡಲು ಇಷ್ಟಪಡುವ ಜನಕ್ಕೆ ಆ ಸತ್ಯದ ದರ್ಶನ ಕೂಡ ಇಲ್ಲಿ ಆಗುತ್ತದೆ. ಅದ್ಭುತ ಮೇಕಿಂಗ್, ಅದ್ಭುತ ದೃಶ್ಯಗಳನ್ನ ನೋಡಬೇಕು ಅನ್ನೋರಿಗೆ ಕಬ್ಜದಲ್ಲಿ ಅದು ಹೇರಳವಾಗಿಯೇ ಸಿಗುತ್ತದೆ. ಒಟ್ಟಾರೆ ಕಬ್ಜ ಹಲವು ವಿಷಯಗಳಿಗೆ ಇಷ್ಟ ಆಗುತ್ತದೆ.
ಚಿತ್ರದ ಹೈಲೈಟೆಡ್ ಪಾತ್ರಗಳೂ ಇವೇ ನೋಡಿ
ಕಬ್ಜ ಚಿತ್ರದಲ್ಲಿ ಸಾಕಷ್ಟು ಪಾತ್ರಗಳು ಇವೆ. ಅವುಗಳಲ್ಲಿ ಹೆಚ್ಚು ಗಮನಕ್ಕೆ ಬರುವ ಪಾತ್ರಗಳು ಇಂತಿವೆ. ನೀನಾಸಂ ಅಶ್ವಥ್ ಅವರ ವಿಚಿತ್ರ ಪಾತ್ರ ಸಿಕ್ಕಾಪಟ್ಟೆ ಗಮನ ಸೆಳೆಯುತ್ತದೆ. ಮುರಳಿ ಶರ್ಮಾ ಅದ್ಭುತವಾಗಿಯೇ ಅಭಿನಯಿಸಿದ್ದಾರೆ. ಕಿಚ್ಚ ಸುದೀಪ್ ಪೊಲೀಸ್ ಆಫೀಸರ್ ಆಗಿ ಇಡೀ ಚಿತ್ರದಲ್ಲಿ ಹೊಳೆದಿದ್ದಾರೆ.
ಇದನ್ನೂ ಓದಿ: Puneeth Rajkumar Birthday: ಅಪ್ಪು ವಿಚಾರದಲ್ಲಿ ಆ ಒಂದು ನೋವು ಇಂದಿಗೂ ಕಾಡುತ್ತೆ ಎಂದ ಉಪ್ಪಿ!
ರಿಯಲ್ ಸ್ಟಾರ್ ಉಪ್ಪಿ ಅಬ್ಬರಿಸಿದ್ದಾರೆ. ಶಿವಣ್ಣ ಕೊನೆ ಬಾಲ್‌ಲ್ಲಿ ಸಿಕ್ಸರ್ ಹೊಡೆದಿದ್ದಾರೆ. ಕಾಮರಾಜ್ ಇಡೀ ಚಿತ್ರದಲ್ಲಿ ಆವರಿಸಿದ್ದಾರೆ. ಅನೂಪ್ ರೇವಣ್ಣ ಇಲ್ಲಿ ಉಪ್ಪಿ ಜೊತೆ ಜೊತೆಗೆ ಸಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ