Real Star Upendra: ಉಪ್ಪಿ ಚಿತ್ರಕ್ಕೆ ಮುಹೂರ್ತ ಫಿಕ್ಸ್, ಹೇಗಿರ್ಬೋದು ರಿಯಲ್ ಸ್ಟಾರ್ ಹೊಸ ಫಿಲ್ಮ್?

Sandalwood: ನಿರ್ಮಾಪಕ ಕೆ.ಪಿ ಶ್ರೀಕಾಂತ್ ತಮ್ಮ ವೀನಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಮೂರನೇ ಚಿತ್ರವಾಗಿ ಉಪ್ಪಿಯ ಚಿತ್ರ ನಿರ್ಮಾಣ ಮಾಡ್ತಿದ್ದು, ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗಲಿದೆ ಎಂಬ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.

ನಟ ಉಪೇಂದ್ರ

ನಟ ಉಪೇಂದ್ರ

  • Share this:
ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಸಿನಿಮಾ (Film) ನಿರ್ದೇಶನ ಮಾಡುವ ವಿಷಯ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿತ್ತು. ಅವರು ಬಹಳ ಸಮಯದ ನಂತರ ನಿರ್ದೇಶನ (Direction) ಮಾಡುತ್ತಿರುವ ಸಿನಿಮಾದ ಪೋಸ್ಟರ್ (Poster) ಕೂಡ ಇತ್ತೀಚೆಗೆ ವೈರಲ್ ಆಗಿತ್ತು. ಆ ಪೋಸ್ಟರ್ ಮೂಲಕ ತಲೆಗೆ ಹುಳ ಬಿಟ್ಟಿದ್ದ ಉಪ್ಪಿ ನಂತರ ಅದರ ಬಗ್ಗೆ ಹೆಚ್ಚು ಮಾತನಾಡಿರಲಿಲ್ಲ. ಅಲ್ಲದೇ, ಇತ್ತೀಚೆಗೆ ನನಗೆ ನಿರ್ದೇಶನ ಮಾಡಲೇಬೇಕು ಎಂಬ ಯಾವುದೆ ಒತ್ತಾಯವಿಲ್ಲ, ನನಗೆ ನಿರ್ದೇಶನ ಮಾಡುವುದು ಇಷ್ಟ ಎಂದಿದ್ದರು. ಇದೀಗ ಉಪೇಂದ್ರ ನಿರ್ದೇಶನದ ಚಿತ್ರದ ತಯಾರಿ ಆರಂಭವಾಗಿದ್ದು, ಜೂನ್ 3ರಿಂದ ಶೂಟಿಂಗ್ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ರಿಯಲ್ ಸ್ಟಾರ್‌ ಮರಳಿ ನಿರ್ದೇಶನ ಮಾಡುತ್ತಿರುವುದು ಅಭಿಮಾನಿಗಳಲ್ಲಿ ಮಾತ್ರ ಕುತೂಹಲ ಸೃಷ್ಟಿ ಮಾಡಿರಲಿಲ್ಲ. ಸಿನಿ ಪ್ರಿಯರಲ್ಲಿ ಸಹ ಖುಷಿಗೆ ಕಾರಣವಾಗಿದ್ದು, ಈಗ ಜೂನ್ 3ರಂದು ಮುಹುರ್ತ ನಿಗದಿಯಾಗಿದೆ.  ಜೂನ್ 3 ರಂದು ಅದ್ಧೂರಿ ಮುಹೂರ್ತದೊಂದಿಗೆ ಪ್ರಾಜೆಕ್ಟ್ ಕಿಕ್‌ಸ್ಟಾರ್ಟ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದ್ದು, ಅಭಿಮಾನಿಗಳ ನಿರೀಕ್ಷೆ ಈ ಚಿತ್ರದ ಮೇಲೆ ಹೆಚ್ಚಿದ್ದು, ಉಪ್ಪಿ ಇನ್ಯಾವ ಮೋಡಿ ಮಾಡುತ್ತಾರೋ ನೋಡಬೇಕಿದೆ.

ಯಾವಾಗಲೂ ತಮ್ಮ ಚಿತ್ರಗಳ ಮೂಲಕ ಜನರ ತಲೆಗೆ ಹುಳ ಬಿಡುವ ಉಪೇಂದ್ರ ಈ ಚಿತ್ರದ ಪೋಸ್ಟರ್ ಮೂಲಕ ಸಹ ಕಿಚ್ಚು ಹಚ್ಚಿಸಿದ್ದಾರೆ. ಕುದುರೆ ಏರಿ ಕಂಬಳಿ ಹೊದ್ದಿರುವ ವ್ಯಕ್ತಿಯಾಗಿ ಪೋಸ್ಟರ್ನಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದು, ಕುದುರೆ ಲಾಳದ ಸಿಂಬಲ್ನಲ್ಲಿ ಚಿತ್ರದ ಟೈಟಲ್ನ್ನು ಅಡಗಿಸಿಟ್ಟಿದ್ದಾರೆ.

ಇದು ಪ್ಯಾನ್​ ಇಂಡಿಯಾ ಚಿತ್ರ

ಇನ್ನು ಕನ್ನಡದಲ್ಲಿ ಕೆಜಿಎಫ್ ನಂತರ ಪ್ಯಾನ್​ ಇಂಡಿಯಾ ಚಿತ್ರಗಳ ಪರ್ವ ಆರಂಭವಾಗುತ್ತಿದ್ದು, ಉಪ್ಪಿ ನಿರ್ದೇಶನದ ಈ ಚಿತ್ರ ಪ್ಯಾನ್​ ಇಂಡಿಯಾ ಎಂಬ ಮಾಹಿತಿಯನ್ನು ಚಿತ್ರತಂಡ ನೀಡಿದೆ. ಬಹುಭಾಷೆಯಲ್ಲಿ ತಯಾರಾಗುತ್ತಿರುವ ಈ ಸಿನೆಮಾದ ಟೈಟಲ್ ಕುತೂಹಲಕಾರಿಯಾಗಿದ್ದು, ಜನರು ಈಗಾಗಲೇ ತಲೆ ಕೆಡಿಸಿಕೊಂಡಿದ್ದಾರೆ. ಕೆ ಪಿ ಶ್ರೀಕಾಂತ್ ಅವರ ವೀನಸ್ ಎಂಟರ್ಟೈನರ್ಸ್ ಸಹಯೋಗದೊಂದಿಗೆ ಜಿ ಮನೋಹರನ್ ಅವರ ಲಹರಿ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ: ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪಿದ ಸಂಗೀತಗಾರರಿವರು, ಸಾವಿಗೂ-ಸಂಗೀತಕ್ಕೂ ಲಿಂಕ್ ಇದ್ಯಾ?

ಇನ್ನು ಉಪೇಂದ್ರ ಅವರು ಸಿನಿಮಾ ನಿರ್ದೇಶನ ಮಾಡದೇ ಬಹಳ ವರ್ಷಗಳೆ ಕಳೆದಿವೆ. ಸುಮಾರು 7 ವರ್ಷಗಳ ನಂತರ ಉಪೇಂದ್ರ ನಿರ್ದೇಶನಕ್ಕೆ ಇಳಿದಿದ್ದು, ಸಲಗ’ಗಳಂತ ಎರಡು ಸೂಪರ್ ಹಿಟ್ ಚಿತ್ರಗಳನ್ನು ಇಂಡಸ್ಟರಿಗೆ ಕೊಟ್ಟ ಕೆಪಿ ಶ್ರೀಕಾಂತ್ ಉಪ್ಪಿ ಯ ಹೊಸ ಕನಸಿಗೆ ಸಾಥ್ ನೀಡಿದ್ದು, ಜನರಿಗೆ ಮನರಂಜನೆ ನೀಡಲು ಈ ಜೋಡಿ ಸಿದ್ದವಾಗಿದೆ. .

ಜನರಿಗೆ ಮೋಡಿ ಮಾಡಲು ಉಪ್ಪಿ ರೆಡಿ

ನಿರ್ಮಾಪಕ ಕೆ.ಪಿ ಶ್ರೀಕಾಂತ್ ತಮ್ಮ ವೀನಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಮೂರನೇ ಚಿತ್ರವಾಗಿ ಉಪ್ಪಿಯ ಚಿತ್ರ ನಿರ್ಮಾಣ ಮಾಡ್ತಿದ್ದು, ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗಲಿದೆ ಎಂಬ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ವಿಶೇಷ ಅಂದ್ರೆ ಈ ಜೋಡಿ ಒಂದಾಗ್ತಿದಂತೆ ಸಿನಿಮಾ ಶುರುವಾಗುವ ಮೊದಲೇ ಚಿತ್ರದ ಆಡಿಯೋ ರೈಟ್ಸ್ ಲಹರಿ ತೆಕ್ಕೆಗೆ ಜಾರಿದೆ. ಆದರೆ ಈ ಸೂಪರ್ ಕಾಂಬೋ ಚಿತ್ರಕ್ಕೆ ಸಂಗೀತ ನಿರ್ದೆಶನ ಯಾರು ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿ ಇದೆ.

ಇದನ್ನೂ ಓದಿ: ತಮ್ಮ ಹೀರೋಗೆ ಹೀಗ್ ಅಂದ್ಬಿಟ್ರಂತೆ ಪ್ರಶಾಂತ್ ! ಹೇಳಿದ್ದನ್ನ ಫಾಲೋ ಮಾಡ್ತಾರಾ ಪ್ರಭಾಸ್?

ಈ ಹಿಂದೆ ಹತ್ತು ಚಿತ್ರಗಳ ನಿರ್ದೇಶನ ಮಾಡಿದ್ದಾರೆ ರಿಯಲ್ ಸ್ಟಾರ್. ಇದು ಅವರ ಡೈರೆಕ್ಷನ್ನಲ್ಲಿ ಮೂಡಿಬರಲಿರುವ 11ನೇ ಚಿತ್ರವಾಗಿದೆ. ಉಪ್ಪಿ 2 ಸಿನಿಮಾ 2015ರಲ್ಲಿ ರಿಲೀಸ್ ಆಗಿದ್ದು, ಇದು ಅವರು ಅಭಿನಯಿಸಿ, ನಿರ್ದೇಶನದ ಕೊನೆಯ ಸಿನಿಮಾ ಅದಾಗಿತ್ತು.
Published by:Sandhya M
First published: