Real Star Upendra Kabzaa: ರಿಯಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಕಬ್ಜ ಗಿಫ್ಟ್! ಖಡಕ್ ಟೀಸರ್‌ಗೆ ಉಪ್ಪಿ ಫ್ಯಾನ್ಸ್ ಫಿದಾ

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹು ಭಾಷೆಯ ಕಬ್ಜ ಚಿತ್ರದ ವಿಶೇಷ ಟೀಸರ್ ರಿಲೀಸ್ ಆಗಿದೆ. ರಿಯಲ್ ಸ್ಟಾರ್ ಉಪೇಂದ್ರ ಜನ್ಮ ದಿನಕ್ಕೇನೆ ಕಬ್ಜ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಕನ್ನಡದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಟೀಸರ್ ನೋಡಿ ಉಪ್ಪಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಕಬ್ಜ ಸಿನಿಮಾ ಟೀಸರ್ ರಿಲೀಸ್

ಕಬ್ಜ ಸಿನಿಮಾ ಟೀಸರ್ ರಿಲೀಸ್

  • Share this:
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ (Real Star Upendra) ಬಹು ಭಾಷೆಯ ಕಬ್ಜ (Kabzaa) ಚಿತ್ರದ ವಿಶೇಷ ಟೀಸರ್ (Teaser Released) ರಿಲೀಸ್ ಆಗಿದೆ. ರಿಯಲ್ ಸ್ಟಾರ್ ಉಪೇಂದ್ರ ಜನ್ಮ ದಿನಕ್ಕೇನೆ ಕಬ್ಜ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಕನ್ನಡದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾನೇ ಇದಾಗಿದ್ದು, ಬಹು ಕೋಟಿ ವೆಚ್ಚದ ಈ ಸಿನಿಮಾದ ಟೀಸರ್ ಬಹು ನಿರೀಕ್ಷೆಯನ್ನೆ ಹುಟ್ಟುಹಾಕಿದೆ. ಈ ಹಿಂದಿನ ಕೆಜಿಎಫ್ (KGF) ಚಿತ್ರದ ಆ ದಿನಗಳ ಟಿಂಟ್ ಏನಿತ್ತೋ ಅದೇ ರೀತಿಯಲ್ಲಿಯೇ ಕಬ್ಜ ಸಿನಿಮಾ ಕೂಡ ಪ್ರೇಕ್ಷಕರ ದಿಲ್ ಕದಿಯೋಕೆ ರೆಡಿ ಆಗಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಖದರ್​ನ ಝಲಕ್ ಈ ಒಂದೇ ಒಂದು ಟೀಸರ್​ ನಲ್ಲಿ ನಿಮಗೆ ಸಿಗುತ್ತದೆ. 2 ನಿಮಿಷ 3 ಸೆಕೆಂಡ್​ನ ಈ ಟೀಸರ್ ನಲ್ಲಿ ಕಬ್ಜ ಚಿತ್ರದ ಸಂಪೂರ್ಣ ಚಿತ್ರದ ಝಲಕ್ ಸಿಕ್ಕು ಬಿಡುತ್ತದೆ.

ಕಬ್ಜ ಸಿನಿಮಾ ಕನ್ನಡದ ಮತ್ತೊಂದು ಬಹು ಕೋಟಿ ವೆಚ್ಚದ ಸಿನಿಮಾನೇ ಆಗಿದೆ. ಕನ್ನಡದ ಕೀರ್ತಿ ಪತಾಕೆಯನ್ನ ಈಗಾಗಲೇ ಕೆಜಿಎಫ್ ಸಿನಿಮಾ ದೇಶಾದ್ಯಂತ ಎಲ್ಲೆಡೆ ಪಸರಿಸಿ ಬಂದಿದೆ. ಅದೇ ನಿಟ್ಟಿನಲ್ಲಿಯೇ ಕನ್ನಡದ ಕಬ್ಜ ಸಿನಿಮಾ ಕೂಡ ಈಗ ರೆಡಿ ಆಗಿದೆ.



ಕನ್ನಡದ ಕಬ್ಜ ಸಿನಿಮಾ ಬಹು ಭಾಷೆಯಲ್ಲಿಯೇ ರಿಲೀಸ್ ಆಗುತ್ತಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹೀಗೆ ಉತ್ತರ ಭಾರತದ ಸೇರಿದಂತೆ ದಕ್ಷಿಣದ ಎಲ್ಲ ಭಾಷೆಯಲ್ಲೂ ಕನ್ನಡದ ಬಹು ಕೋಟಿ ವೆಚ್ಚದ ಕಬ್ಜ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ: Upendra Tweet: ಹುಟ್ಟುಹಬ್ಬಕ್ಕೆ ಮನೆಗೆ ಬನ್ನಿ, ಈ ಗಿಫ್ಟ್​ ತನ್ನಿ, ಬಂಪರ್​ ಬಹುಮಾನ ಗೆಲ್ಲಿ ಅಂತಿದ್ದಾರೆ ಉಪೇಂದ್ರ!

ರಿಯಲ್ ಸ್ಟಾರ್ ಉಪ್ಪಿಯ ಕಬ್ಜ ಸಿನಿಮಾ ಟೀಸರ್ ಹೆಂಗಿದೆ ಗೊತ್ತೇ?

ಡೈರೆಕ್ಟರ್ ಆರ್. ಚಂದ್ರು ನಿರ್ದೇಶನದ ಈ ಸಿನಿಮಾ ನಿಜಕ್ಕೂ ದೊಡ್ಡಮಟ್ಟದಲ್ಲಿಯೇ ರೆಡಿ ಆಗಿದೆ. 2 ನಿಮಿಷ 3 ಸೆಕೆಂಡ್​ನ ಕಬ್ಜದಲ್ಲಿ ಎಲ್ಲವೂ ಬಂದು ಹೋಗುತ್ತದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಆ ಕಾಲದ ಘಟ್ಟದ ಡಾನ್ ಪಾತ್ರದ ಗತ್ತು ಇಲ್ಲಿ ಹೊಳೆಯುತ್ತದೆ.

ಕಪ್ಪು ಬಣ್ಣದ ಮಿರ ಮಿರ ಮಿಂಚೋ ಕಾರು, ಅದರಿಂದ ಹೊರಗೆ ಬರೋ ಉಪ್ಪಿಯ ಸ್ಟೈಲ್ ನಿಜಕ್ಕೂ ಸೂಪರ್ ಆಗಿಯೇ ಇದೆ. ಬಾಯಲ್ಲಿ ಸಿಗಾರ್ ಇಟ್ಟುಕೊಂಡೇ ಕಾರಿನಿಂದ ಹೊರ ಬರುವ ಉಪ್ಪಿಯ ಲುಕ್ ಆ್ಯಂಡ್ ಖದರ್ ಕಣ್ಣು ಕುಕ್ಕುವ ಹಾಗೇನೆ ಇದೆ.

ಕಬ್ಜ ಚಿತ್ರದ ಟೀಸರ್​ನಲ್ಲಿ ಉಪ್ಪಿ ಜೊತೆಗೆ ಇತರ ಪಾತ್ರಗಳ ಝಲಕ್

ರಿಯಲ್ ಸ್ಟಾರ್ ಉಪ್ಪಿ ನಿಭಾಯಿಸಿರೋ ಪಾತ್ರದ ಎಲ್ಲ ಚಿತ್ರಣ ಈ ಒಂದು ಪುಟ್ಟ ಟೀಸರ್​ ನಲ್ಲಿ ನಿಮಗೆ ಸಿಗೋದು ಗ್ಯಾರಂಟಿನೇ ಬಿಡಿ. ಉಪ್ಪಿ ಪಾತ್ರದ ಅಷ್ಟೂ ಝಲಕ್ ಅನ್ನ ಡೈರೆಕ್ಟರ್ ಆರ್. ಚಂದ್ರು ಇಲ್ಲಿ ಕೊಟ್ಟಿದ್ದಾರೆ. ಇದರೊಟ್ಟಿಗೆ ಇನ್ನೂ ಎರಡು ಪ್ರಮುಖ ಪಾತ್ರಗಳ ಪುಟ್ಟ ಚಿತ್ರಣ ಕೂಡ ಇಲ್ಲಿ ದೊರೆಯುತ್ತದೆ.

ಹೌದು, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಚಿತ್ರದಲ್ಲಿ ದಕ್ಷಿಣದ ನಟಿ ಶ್ರೀಯಾ ಸರಣ್ ಕೂಡ ಇದ್ದಾರೆ. ಮೊನ್ನೆ ಇವರ ಜನ್ಮ ದಿನಕ್ಕೆ ಆರ್. ಚಂದ್ರು ಅವ್ರು ಶ್ರೀಯಾ ಸರಣ್ ಲುಕ್ ಪೋಸ್ಟರ್ ಬಿಟ್ಟಿದ್ದರು. ಆದರೆ ಈ ಟೀಸರ್ ನಲ್ಲಿ ಶ್ರೀಯಾ ಸರಣ್ ಪಾತ್ರ ಹೇಗಿರುತ್ತದೆ ಅನ್ನೋದು ಕೂಡ ತಿಳಿದು ಬಿಡುತ್ತದೆ. ಕಣ್ಣು ಹಾಕೋ ಆ ಒಂದು ದೃಶ್ಯ ಈ ಒಂದು ಟೀಸರ್ ನಲ್ಲಿ ನಿಮಗೆ ದೊರೆಯುತ್ತದೆ.

ರಿಯಲ್ ಸ್ಟಾರ್ ಕಬ್ಜ ಚಿತ್ರದಲ್ಲಿ ಕಿಚ್ಚನ ಸುದೀಪ್ ಗನ್ ಖದರ್
ಕಬ್ಜ ಚಿತ್ರದ ಹತ್ತು ಹಲವು ಪಾತ್ರಗಳು ಇವೆ ಅನ್ನೋದನ್ನೇ ಟೀಸರ್ ಈಗ ಬಿಟ್ಟುಕೊಟ್ಟಿದೆ. ಆದರೆ ಈ ಎಲ್ಲ ಪಾತ್ರಗಳಲ್ಲಿ ಪ್ರಮುಖ ಅನಿಸೋ ಇನ್ನೂ ಒಂದು ಪಾತ್ರವೂ ಇದೆ. ಅದು ಕಿಚ್ಚನ ಪಾತ್ರವೇ ಆಗಿದೆ.

ಕಿಚ್ಚ ಸುದೀಪ್ ಅಭಿನಯದ ಆ ಒಂದು ವಿಶೇಷ ರೋಲ್​ ನ ಪುಟ್ಟ ಚಿತ್ರಣವೂ ಇಲ್ಲಿ ಬಂದು ಹೋಗುತ್ತದೆ. ಆ ಒಂದು ಚಿಕ್ಕ ದೃಶ್ಯದಲ್ಲಿ ಕಿಚ್ಚ ಸುದೀಪ್ ಗನ್ ಹಿಡಿದು ಶೂಟ್ ಮಾಡೋದು ಕೂಡ ಕಂಡು ಬರುತ್ತದೆ.

ಇದನ್ನೂ ಓದಿ: Real Star Upendra: ಅಭಿಮಾನಿಗಳ ತಲೆಗೆ ಮತ್ತೆ ಹುಳ ಬಿಟ್ಟ ಉಪ್ಪಿ, 'UI' ಚಿತ್ರದ ಪೋಸ್ಟರ್ ಬಿಡುಗಡೆ

ರಿಯಲ್ ಸ್ಟಾರ್ ಉಪೇಂದ್ರ ಅವರ ಈ ಒಂದು ಚಿತ್ರದ ಟೀಸರ್ ನಲ್ಲಿ ಒಂದು ರೀತಿ ಉಪ್ಪಿ ಫ್ಯಾನ್ಸ್ ಗೆ ದೊಡ್ಡ ಹಬ್ಬವೇ ಆಗಿದೆ. ಉಪ್ಪಿಯ ಬರ್ತ್​ ಡೇ ಸೆಪ್ಟೆಂಬರ್-18 ರ ಹಿಂದಿನ ದಿನ ಅಂದ್ರೆ 17ರ ಸಂಜೆ ಈ ಟೀಸರ್ ರಿಲೀಸ್ ಆಗಿದೆ. ಉಪ್ಪಿ ಅಭಿಮಾನಿಗಳಲ್ಲಿ ದೊಡ್ಡ ಖುಷಿನೂ ತುಂಬಿದೆ.
First published: