Real Star Upendra: ರಿಯಲ್ ಸ್ಟಾರ್ ಉಪೇಂದ್ರ ಜನ್ಮ ದಿನಕ್ಕೆ ಕಬ್ಜ ಸಿನಿಮಾ ತಂಡದಿಂದ ವಿಶೇಷ ಉಡುಗೊರೆ, ಏನು ನೋಡಿ

ರಿಯಲ್ ಸ್ಟಾರ್ ಉಪ್ಪಿಯ ಕಬ್ಜ ಸಿನಿಮಾ ಬಹುತೇಕ ಕಂಪ್ಲೀಟ್ ಆಗಿದೆ. ಚಿತ್ರದ ಒಂದಷ್ಟು ಪ್ಯಾಚ್​ ವರ್ಕ್ ಕೆಲಸ ಮಾತ್ರ ಬಾಕಿ ಉಳಿದಿದೆ. ಒಂದು ಹಾಡಿನ ಶೂಟಿಂಗ್ ಮಾಡಬೇಕಿದೆ. ಇದೆಲ್ಲ ಆದರೆ ಸಿನಿಮಾ ಆಲ್​ ಮೋಸ್ಟ್ ರೆಡಿ ಟು ರಿಲೀಸ್.

ಉಪೇಂದ್ರ ಜನ್ಮ ದಿನಕ್ಕೆ ಕಬ್ಜ ಸಿನಿಮಾ ವಿಶೇಷ ಉಡುಗೊರೆ

ಉಪೇಂದ್ರ ಜನ್ಮ ದಿನಕ್ಕೆ ಕಬ್ಜ ಸಿನಿಮಾ ವಿಶೇಷ ಉಡುಗೊರೆ

  • Share this:
ರಿಯಲ್ ಸ್ಟಾರ್ ಉಪೇಂದ್ರ (Upendra) ಅಭಿನಯದ ಕಬ್ಜ (Kabzaa) ಚಿತ್ರದ ವಿಶೇಷ ಸುದ್ದಿಯೊಂದು ಈಗ ಹೊರ ಬಿದ್ದಿದೆ. ಚಿತ್ರದ ಡೈರೆಕ್ಟರ್ ಆರ್.ಚಂದ್ರು (Director R Chandru) ತಮ್ಮ ಈ ಚಿತ್ರದ ಒಂದು ಟೀಸರ್ ಅನ್ನ ಸರಿಯಾದ ಟೈಮ್​ ಗೆ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಆ ದಿನ ನಿಜಕ್ಕೂ ವಿಶೇಷ ದಿನವೇ. ರಿಯಲ್ ಸ್ಟಾರ್ ಫ್ಯಾನ್ಸ್ ಎಲ್ಲ ಹಬ್ಬ ಮಾಡೋ ದಿನವೇ ಅದಾಗಿದೆ. ಆ ದಿನವೇ ಕಬ್ಜ ಸಿನಿಮಾ ಟೀಸರ್ ರಿಲೀಸ್ ಆಗುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಬಹು ಕೋಟಿ ಸಿನಿಮಾ. ಈ ಚಿತ್ರಕ್ಕಾಗಿ ಡೈರೆಕ್ಟರ್ ಆರ್​ ಚಂದ್ರು ಸಖತ್ ಪ್ಲಾನ್​ಗಳನ್ನೆ ಮಾಡಿದ್ದಾರೆ. ಚಿತ್ರ ಚೆನ್ನಾಗಿ ಬರಬೇಕು ಅಂತಲೇ ಬಹು ವೆಚ್ಚದಲ್ಲಿ ಸೆಟ್​ಗಳನ್ನೆಲ್ಲ (Huge Sets) ಹಾಕಿಸಿದ್ದಾರೆ. ಬಹು ಕೋಟಿಯ ಈ ಚಿತ್ರದಲ್ಲಿ ರೆಟ್ರೋ (retro) ಫೀಲ್ ಇರುತ್ತದೆ. ಅದಕ್ಕೇನೆ ಅದನ್ನ ರೀಕ್ರಿಯೇಟ್ ಮಾಡೋಕೆ ಸಿನಿಮಾ ತಂಡ ಸಾಕಷ್ಟು ಕಸರತ್ತು ಮಾಡಿದೆ. ಅದು ಚಿತ್ರದ ಪೋಸ್ಟರ್​ಗಳು, ಟ್ರೈಲರ್​ನಲ್ಲೂ ಕಾಣಿಸುತ್ತದೆ.

ಬಹು ಕೋಟಿ ವೆಚ್ಚದ ಕಬ್ಜ ವಿಶೇಷ ಟೀಸರ್ ರಿಲೀಸ್ ಯಾವಾಗ
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಚಿತ್ರದ ಟೀಸರ್ ರಿಲೀಸ್ ಪ್ಲಾನ್ ಈಗಾಗಲೇ ಆಗಿದೆ. ಚಿತ್ರದ ಒಂದು ವಿಶೇಷ ಟೀಸರ್ ಅನ್ನ ಇದೇ ತಿಂಗಳ ಸೆಪ್ಟೆಂಬರ್-18 ರಂದು ರಿಲೀಸ್ ಮಾಡುತ್ತಿದ್ದಾರೆ. ಈ ದಿನ ರಿಯಲ್ ಸ್ಟಾರ್ ಉಪ್ಪಿಯ ಬರ್ತ್ ಡೇ ಇದೆ. ಈ ಕಾರಣಕ್ಕೇನೆ ಇದೇ ದಿನ ಕಬ್ಜ ಚಿತ್ರದ ಟೀಸರ್ ರಿಲೀಸ್ ಮಾಡಲಾಗುತ್ತಿದೆ.

ಕಬ್ಜ ಚಿತ್ರದಲ್ಲಿ ಬಹು ಕೋಟಿ ಬಂಡವಾಳವೂ ಇದೆ. ಬಹು ತಾರೆಯರ ರಂಗು ಕೂಡ ಇದೆ. ಅದರಂತೆ ಬಹು ಭಾಷೆ ನಟಿ ಶ್ರೀಯಾ ಸರನ್ ಅಭಿನಯಿಸಿದ್ದಾರೆ. ರೆಟ್ರೋ ಲುಕ್​ ನಲ್ಲಿಯೇ ಕಿಚ್ಚ ಸುದೀಪ್ ಅಭಿನಯಸಿದ್ದಾರೆ. ಚಿತ್ರದ ಕಿಚ್ಚನ ರೂಪದ ಪೋಸ್ಟರ್​ಗಳು ಈಗಾಗಲೇ ಭಾರೀ ಗಮನ ಸೆಳೆದಿವೆ. ಇಷ್ಟೆಲ್ಲ ಇರೋ ಈ ಚಿತ್ರದ ಚಿತ್ರೀಕರಣ ಎಷ್ಟು ದಿನ ಆಗಿದೆ ಗೊತ್ತೇ. ಮುಂದೆ ಓದಿ.

Acted Kabzaa film Teaser Release on Upendra Birthday
ರಿಯಲ್ ಸ್ಟಾರ್ ಉಪೇಂದ್ರ ಜನ್ಮ ದಿನಕ್ಕೆ ಕಬ್ಜ ವಿಶೇಷ ಉಡುಗೊರೆ


ಕಬ್ಜ ಸಿನಿಮಾದ ಚಿತ್ರೀಕರಣದ ಕೆಲಸ ಪೂರ್ಣ ಆಯಿತೇ ?
ರಿಯಲ್ ಸ್ಟಾರ್ ಉಪ್ಪಿಯ ಕಬ್ಜ ಸಿನಿಮಾ ಬಹುತೇಕ ಕಂಪ್ಲೀಟ್ ಆಗಿದೆ. 160 ದಿನ ಚಿತ್ರ ಚಿತ್ರೀಕರಣ ಆಗಿದೆ. ಈಗ ಚಿತ್ರದ ಒಂದಷ್ಟು ಪ್ಯಾಚ್​ ವರ್ಕ್ ಕೆಲಸ ಮಾತ್ರ ಬಾಕಿ ಉಳಿದಿದೆ. ಒಂದು ಹಾಡಿನ ಶೂಟಿಂಗ್ ಮಾಡಬೇಕಿದೆ. ಇದೆಲ್ಲ ಆದರೆ ಸಿನಿಮಾ ಆಲ್​ ಮೋಸ್ಟ್ ರೆಡಿ ಟು ರಿಲೀಸ್. ಕಬ್ಜ ಚಿತ್ರದ ಚಿತ್ರೀಕರಣ ದೊಡ್ಡಮಟ್ಟದಲ್ಲಿಯೇ ಆಗಿದೆ. ಒಳ್ಳೆ ಒಳ್ಳೆ ಲೊಕೇಷನ್ ಮತ್ತು ಊರುಗಳಲ್ಲಿಯೇ ಚಿತ್ರೀಕರಣ ಆಗಿದೆ.

ಅದರಂತೆ ಬೆಂಗಳೂರು,ಮೈಸೂರು,ಮಂಗಳೂರು,ಹೈದ್ರಾಬಾದ್ ನಲ್ಲಿ ಇಡೀ ಚಿತ್ರದ ಚಿತ್ರೀಕರಣ ಆಗಿದ್ದು, ಅರ್ಜುನ್ ಶೆಟ್ಟಿ ಈ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಕೆಜಿಎಫ್  ಚಿತ್ರಕ್ಕೆ ಸಂಗೀತ ಕೊಟ್ಟಿರೋ ಸಂಗೀತ ನಿರ್ದೆಶಕ ರವಿ  ಬಸ್ರೂರು ಈ ಚಿತ್ರಕ್ಕೆ ಸಂಗೀತ  ಕೊಟ್ಟಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್ ಮತ್ತು ಟ್ರೈಲರ್ ಭಾರೀ ಹವಾ ಕ್ರಿಯೇಟ್ ಮಾಡಿದೆ.

ಕಬ್ಜ ಬಗ್ಗೆ ಸಾಕಷ್ಟು ಕುತೂಹಲವಿದೆ

ಇಂಡಸ್ಟ್ರೀಯಲ್ಲೂ ಈ ಸಿನಿಮಾದ ಬಗ್ಗೆ ಒಂದು ಟಾಕ್ ಇದ್ದೇ ಇದೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಈ ಚಿತ್ರದ ನಿರೀಕ್ಷೆ ಡಬಲ್ ಟ್ರಿಪಲ್ ಇದೆ. ಕಿಚ್ಚ ಸುದೀಪ್ ಕೂಡ ಚಿತ್ರದಲ್ಲಿ ಅಭಿನಯಿಸಿರೋದ್ರಿಂದ ಚಿತ್ರ ಪ್ರೇಮಿಗಳಲ್ಲಿ ಈ ಸಿನಿಮಾ ಬಗ್ಗೆ ಕುತೂಹಲ ಮತ್ತಷ್ಟು ಇನ್ನಷ್ಟು ಜಾಸ್ತಿ ಆಗ್ತಾನೇ ಇದೆ. ಕನ್ನಡ ಹೊರತಾಗಿ ಇತರ ಭಾಷೆಯಲ್ಲೂ ದೊಡ್ಡ ಮಟ್ಟದಲ್ಲಿಯೇ ಈ ಚಿತ್ರ  ಈಗಾಗಲೇ ರಿಲೀಸ್ ಪ್ಲಾನ್ ಆಗಿದೆ.
First published: