• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Uppi Cinema Updates: ರಿಯಲ್ ಸ್ಟಾರ್ ಉಪ್ಪಿ UI ಹೊಸ ಅಪ್ಡೇಟ್ ಏನು? ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಏನಂತಾರೆ?

Uppi Cinema Updates: ರಿಯಲ್ ಸ್ಟಾರ್ ಉಪ್ಪಿ UI ಹೊಸ ಅಪ್ಡೇಟ್ ಏನು? ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಏನಂತಾರೆ?

ಉಪ್ಪಿಯ UI ಸಿನಿಮಾ ರಿಲೀಸ್ ಆಗೋದು ಯಾವಾಗ?

ಉಪ್ಪಿಯ UI ಸಿನಿಮಾ ರಿಲೀಸ್ ಆಗೋದು ಯಾವಾಗ?

UI ಸಿನಿಮಾದ ಚಿತ್ರೀಕರಣ ಇನ್ನು ಕಂಪ್ಲೀಟ್ ಆಗಿಲ್ಲ. ಇದೇ ತಿಂಗಳ 27 ರಿಂದಲೇ ಚಿತ್ರೀಕರಣ ಶುರು ಆಗುತ್ತದೆ. ಆದರೆ ಇದು ಕಟ್ಟಕಡೆಯ ಶೆಡ್ಯೂಲ್ ಅಂತಲೇ ಕೆ.ಪಿ.ಶ್ರೀಕಾಂತ್, ನ್ಯೂಸ್-18 ಕನ್ನಡಕ್ಕೆ ತಿಳಿಸಿದ್ದಾರೆ.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ (Upendra New Movie) ಕಬ್ಜ ಸಿನಿಮಾ ಹವಾ ಮಾಡ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಈ ಮೂಲಕ ರಿಯಲ್ ಸ್ಟಾರ್ ಉಪೇಂದ್ರ ಬೆಳಗಲಿದ್ದಾರೆ. ಆರ್‌ ಚಂದ್ರು ಅವರ ಈ ಚಿತ್ರ ಇದೇ ಮಾರ್ಚ್-17 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ಆದರೆ ಉಪೇಂದ್ರ ಅಭಿನಯದ ಮತ್ತು (Real Star Uppi Movie) ನಿರ್ದೇಶನದ UI ಸಿನಿಮಾ ಎಲ್ಲಿಗೆ ಬಂತು. ಏನೆಲ್ಲ ಆಗುತ್ತಿದೆ. ಇನ್ನೂ ಏನೆಲ್ಲ ಆಗಬೇಕು. ವಿಶಿಷ್ಠ ಪೋಸ್ಟರ್‌ ಮೂಲಕವೇ ಭಾರೀ ಗಮನ ಸೆಳೆದ UI ಸಿನಿಮಾದ ಚಿತ್ರೀಕರಣ ಪೂರ್ಣ (UI Movie Latest Updates) ಆಗಿದಿಯೇ? ಚಿತ್ರದ ಎಲ್ಲ ಶೆಡ್ಯೂಲ್ ಪೂರ್ಣ ಆಗಿದಿಯೇ ? ಚಿತ್ರದ ನಿರ್ಮಾಪಕ ಕೆ. ಪಿ. ಶ್ರೀಕಾಂತ್‌ ಏನ್ ಹೇಳ್ತಾರೆ.


ಈ ಎಲ್ಲ ಮಾಹಿತಿಯ (Uppi New Film Updates)ಒಂದು ಸ್ಟೋರಿ ಇಲ್ಲಿದೆ ಓದಿ.


UI ಡೈರೆಕ್ಟರ್ ಉಪ್ಪಿ ಈಗ ಕಬ್ಜ ಚಿತ್ರದ ಪ್ರಚಾರದಲ್ಲಿ ಬ್ಯುಸಿ


ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ UI ಸಿನಿಮಾದ ಕೆಲಸ ನಡೆಯುತ್ತಿದೆ. ಈ ಮಧ್ಯ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದ ಪ್ರಚಾರದಲ್ಲಿಯೇ ತೊಡಗಿಕೊಂಡಿದ್ದಾರೆ. ಇನ್ನೇನು ಎಲೆಕ್ಷನ್ ಕೂಡ ಬರುತ್ತದೆ. ಅದರಲ್ಲೂ ಬ್ಯುಸಿ ಆಗುತ್ತಾರೆ.


Real Star Upendra Acted Directed UI Movie Latest Updates
ದಿನೇ ದಿನೇ ಹೆಚ್ಚಿದ UI ಚಿತ್ರದ ನಿರೀಕ್ಷೆ


ಹೀಗಿರೋವಾಗ ಉಪ್ಪಿಯ UI ಚಿತ್ರ ತನ್ನದೇ ರೀತಿಯಲ್ಲಿ ಸದ್ದು ಮಾಡ್ತಾನೇ ಇದೆ. ಇಲ್ಲಿವರೆಗೂ ಚಿತ್ರೀಕರಣದಲ್ಲಿ ಆದ ಒಂದಷ್ಟು ಮೇಕಿಂಗ್ ವಿಡಿಯೋ ಕೂಡ ಈಗಾಗಲೇ ರಿಲೀಸ್ ಆಗಿದೆ. ಅದರಲ್ಲಿ ಉಪ್ಪಿ ಡೈರೆಕ್ಷನ್‌ನ ಒಂದಷ್ಟು ಝಲಕ್ ಕೂಡ ನೋಡಬಹುದು.
ರಿಯಲ್ ಸ್ಟಾರ್ ಉಪ್ಪಿಯ UI ಕ್ರೇಜ್ ಬೇರೆ ಲೆವಲ್‌ಗೇನೆ ಇದೆ!


ಇದರ ಬೆನ್ನಲ್ಲಿಯೇ ಉಪ್ಪಿಯ UI ಸಿನಿಮಾ ತನ್ನದೇ ವಿಶೇಷ ಶೈಲಿಯ ಪೋಸ್ಟರ್ ಮೂಲಕ ಪ್ರತಿ ಹಬ್ಬಕ್ಕೂ ಒಂದು ಶುಭಾಷಯ ತಿಳಿಸುತ್ತಲೇ ಬಂದಿದೆ. ಇದರ ಜೊತೆಗೆ ಸಿನಿಮಾ ಶೂಟಿಂಗ್ ಎಲ್ಲಿಗೆ ಬಂತು ಅನ್ನುವ ಪ್ರಶ್ನೆ ಕೂಡ ಇದೆ. ಇದಕ್ಕೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಕೆ. ಪಿ. ಶ್ರೀಕಾಂತ್ ಒಂದಷ್ಟು ಮಾಹಿತಿ ಕೊಟ್ಟಿದ್ದಾರೆ.
UI ಸಿನಿಮಾದ ಚಿತ್ರೀಕರಣ ಇನ್ನು ಕಂಪ್ಲೀಟ್ ಆಗಿಲ್ಲ. ಇದೇ ತಿಂಗಳ 27 ರಿಂದಲೇ ಚಿತ್ರೀಕರಣ ಶುರು ಆಗುತ್ತದೆ. ಆದರೆ ಇದು ಕಟ್ಟಕಡೆಯ ಶೆಡ್ಯೂಲ್ ಅಂತಲೇ ಕೆ.ಪಿ.ಶ್ರೀಕಾಂತ್, ನ್ಯೂಸ್-18 ಕನ್ನಡಕ್ಕೆ ತಿಳಿಸಿದ್ದಾರೆ.


ಉಪ್ಪಿಯ UI ಸಿನಿಮಾ ರಿಲೀಸ್ ಆಗೋದು ಯಾವಾಗ?


ಆದರೆ ಸದ್ಯ ಹರಿದಾಡ್ತಿರೋ ಇನ್ನಷ್ಟು ಮಾಹಿತಿ ಕೂಡ ಇಂಟ್ರಸ್ಟಿಂಗ್ ಆಗಿಯೇ ಇವೆ. ಸಿನಿಮಾದ ಚಿತ್ರೀಕರಣ ಕೆಲಸ ಇನ್ನು ಇದೆ. ಹೆಚ್ಚು ಕಡಿಮೆ 40 ರಿಂದ 50 ದಿನ ಇದೆ. ದೊಡ್ಡಮಟ್ಟದ ದೊಡ್ಡ ಬಜೆಟ್‌ನ ಚಿತ್ರ ಇದಾಗಿರೋದ್ರಿಂದಲೇ ಸಿನಿಮಾದ ಪೋಸ್ಟ್ ಪ್ರೋಡಕ್ಷನ್ ಕೆಲಸವೂ ಜೋರಾಗಿಯೇ ಇರುತ್ತದೆ.


ಆ ಲೆಕ್ಕದಲ್ಲಿ ಪೋಸ್ಟ್ ಪ್ರೋಡಕ್ಷನ್ ಕೆಲಸವೇ ಹೆಚ್ಚು ಕಡಿಮೆ 4 ರಿಂದ 5 ತಿಂಗಳು ತೆಗೆದುಕೊಳ್ಳುತ್ತದೆ. ಇದಾದ್ಮೇಲೆ ಮುಂದಿನ ವರ್ಷ 2024 ರಲ್ಲಿಯೇ UI ಸಿನಿಮಾ ರಿಲೀಸ್ ಆಗುತ್ತದೆ ಅನ್ನುವ ಮಾಹಿತಿ ಇದೆ. ಆದರೆ ಈ ಬಗ್ಗೆ ಸಿನಿಮಾ ತಂಡ ಎಲ್ಲೂ ಏನೂ ಹೇಳಿಕೊಂಡಿಲ್ಲ.


Real Star Upendra Acted Directed UI Movie Latest Updates
UI ಡೈರೆಕ್ಟರ್ ಉಪ್ಪಿ ಈಗ ಕಬ್ಜ ಚಿತ್ರದ ಪ್ರಚಾರದಲ್ಲಿ ಬ್ಯುಸಿ


ದಿನೇ ದಿನೇ ಹೆಚ್ಚಿದ UI ಚಿತ್ರದ ನಿರೀಕ್ಷೆ


ಇನ್ನುಳಿದಂತೆ ರಿಯಲ್ ಸ್ಟಾರ್ ಉಪೇಂದ್ರ ಅವರ ಈ ಚಿತ್ರ ಭಾರೀ ನಿರೀಕ್ಷೆ ಹುಟ್ಟಿಸಿದೆ. ಚಿತ್ರೀಕರಣದ ಹಂತದಲ್ಲಿಯೇ UI ಸಿನಿಮಾ ಕ್ರೇಜ್ ಹುಟ್ಟಿಸಿರೋದು ವಿಶೇಷವೇ ಸರಿ. ಉಪೇಂದ್ರ ಅಭಿನಯದ ಕ್ರೇಜ್ ಒಂದು ಲೆಕ್ಕ ಆದ್ರೆ, ಅವರ ನಿರ್ದೇಶನದ ಸಿನಿಮಾಗಳ ಕ್ರೇಜ್ ಬೇರೆನೆ ಇದೆ.


ಇದನ್ನೂ ಓದಿ: Sathish Ninasam New Movie: ದುನಿಯಾ ಸೂರಿ ಶಿಷ್ಯನ ಜೊತೆಗೆ ಲೂಸಿಯಾ ಸತೀಶ್ ಸಿನಿಮಾ; ಸೂರಿನೇ ಈ ಚಿತ್ರದ ಮಾಸ್ಟರ್ ಮೈಂಡ್


ಬಹು ದಿನಗಳ ಬಳಿಕ ಉಪೇಂದ್ರ UI ಸಿನಿಮಾ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಕಾರಣಕ್ಕೇನೆ UI ಚಿತ್ರದ ಬಗ್ಗೆ ಇನ್ನಿಲ್ಲದಂತಹ ನಿರೀಕ್ಷೆ ಹುಟ್ಟಿಕೊಂಡಿದೆ. ಉಪ್ಪಿಯ ಅಭಿಮಾನಿಗಳು ಕೂಡ ಈ ಚಿತ್ರದ ಕುರಿತು ಭಾರೀ ಕುತೂಹಲ ಮೂಡಿಸಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು