Real Star Uppi: ಬುದ್ದಿವಂತನ ಸಿನಿಮಾ ಎಲ್ಲಿವರೆಗೆ ಬಂತು? ಡೈರೆಕ್ಟರ್​ ಹೇಳಿದ್ದೇನು

ಬುದ್ದಿವಂತ-2 ಸಿನಿಮಾದ ಚಿತ್ರ ಹೆಚ್ಚು ಕಡಿಮೆ ರಿಲೀಸ್ ಗೆ ರೆಡಿಯಾಗಿಯೇ ಇದೆ. ಒಂದಷ್ಟು ಕೆಲಸಗಳು ಇರೋದು ಬಿಟ್ಟರೇ, ಬುದ್ದಿವಂತ-2 ಬಹುತೇಕ ಕೆಲಸಗಳನ್ನ ಮುಗಿಸಿಕೊಂಡಿದ್ದು, ರಿಲೀಸ್ ಸಿದ್ದತೆಯಲ್ಲಿಯೇ ಪ್ಲಾನಿಂಗ್ ಮಾಡ್ತಾಯಿದೆ.

ಬುದ್ದಿವಂತ-2 ರಿಲೀಸ್ ಯಾವಾಗ ?

ಬುದ್ದಿವಂತ-2 ರಿಲೀಸ್ ಯಾವಾಗ ?

  • Share this:
    ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅಭಿನಯದ ಬುದ್ದಿವಂತ ಸಿನಿಮಾ (Buddivantha cinema) ಯಾರಿಗೆ ಗೊತ್ತಿಲ್ಲ ಹೇಳಿ. ಈ ಚಿತ್ರದಲ್ಲಿ ಉಪ್ಪಿ ಎಲ್ಲರ ದಿಲ್ ಕದ್ದು ಬಿಟ್ಟಿದ್ದರು. ಆದರೆ ಇದೇ ಹೆಸರಿನ ಬುದ್ದಿವಂತ-2 ಸಿನಿಮಾ (Cinema) ಒಂದು ಸೆಟ್ ಏರಿತ್ತು. ಈ ಚಿತ್ರದ ಕೆಲಸ (Film Work) ಅದು ಈಗ ಎಲ್ಲಿಗೆ ಬಂತು. (Cinema Work) . ಯಾವ ಹಂತದಲ್ಲಿ ಇದೆ . ಏನೆಲ್ಲ ಇಲ್ಲಿವರೆಗೂ ಆಗಿದೆ. ಹೀಗೆ ಪ್ರಶ್ನೆ ಏನಾದರೂ ನಿಮ್ಮಲ್ಲಿ ಹುಟ್ಟಿದರೇ, ಅದಕ್ಕೆ ಉತ್ತರ ರೂಪದಲ್ಲಿಯೇ ಇಲ್ಲೊಂದಿಷ್ಟು ಡಿಟೈಲ್ಸ್  ಇದೆ. ಅಧಿಕೃತವಾಗಿಯೇ ಈ ಕುರಿತು ಡೈರೆಕ್ಟರ್ ಜಯರಾಮ್ ಹೇಳಿಕೊಂಡಿದ್ದಾರೆ.

    ಬುದ್ದಿವಂತ-2 ಸಿನಿಮಾದ ಚಿತ್ರ ಹೆಚ್ಚು ಕಡಿಮೆ ರಿಲೀಸ್ ಗೆ ರೆಡಿಯಾಗಿಯೇ ಇದೆ. ಒಂದಷ್ಟು ಕೆಲಸಗಳು ಇರೋದು ಬಿಟ್ಟರೇ, ಬುದ್ದಿವಂತ-2 ಬಹುತೇಕ ಕೆಲಸಗಳನ್ನ ಮುಗಿಸಿಕೊಂಡಿದ್ದು, ರಿಲೀಸ್ ಸಿದ್ದತೆಯಲ್ಲಿಯೇ ಪ್ಲಾನಿಂಗ್ ಮಾಡ್ತಾಯಿದೆ. ಅದು ಯಾವಾಗ ಅನ್ನೋ ಕುತೂಹಲ ಹಾಗೆ ಇರಲಿ ಬಿಡಿ ಅನ್ನೋ ಡೈರೆಕ್ಟರ್ ಜಯರಾಮ್, ಇತರ ಕೆಲಸದ ಒನ್ ಬಾಯ್ ಒನ್ ಹೇಳ್ತಾ ಹೋಗಿದ್ದಾರೆ.

    ಬುದ್ದಿವಂತ-2 ಡಬ್ಬಿಂಗ್ ಕಂಪ್ಲೀಟ್ ರಿರೆಕಾರ್ಡಿಂಗ್ ಬಾಕಿ
    ಹೌದು. ಬುದ್ದಿವಂತ-2 ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಆದರೆ ಮೂರು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ. ಇನ್ನೂ ಉಳಿದಿರೋ ಕೆಲಸವನ್ನ ಪಟ್ಟಿ ಮಾಡಿದರೆ, ಅದರಲ್ಲಿ ಆರ್.ಆರ್.ಬಾಕಿ ಇರೋದು ಗಮನಕ್ಕೆ ಬರುತ್ತದೆ. ಇದು ಮುಗಿದರೆ
    ಬುದ್ದಿವಂತ-2 ರೆಡಿ ಫಾರ್ ರಿಲೀಸ್ ಅಂತಲೇ ಹೇಳಬಹುದು.

    Biddivant-2 Film Updated
    ಬುದ್ದಿವಂತ-2 ಸಿನಿಮಾ ಏನೆಲ್ಲ ಆಗಿದೆ


    ಇದನ್ನೂ ಓದಿ: ಸಮಂತಾ - ವಿಜಯ್ ದೇವರಕೊಂಡ ಸಿನಿಮಾ ಶೂಟಿಂಗ್ ರೀಸ್ಟಾರ್ಟ್

    ಚಿಕ್ಕಬಳ್ಳಾಪುರದಲ್ಲಿ ಬುದ್ದಿವಂತನ ಫೈಟ್ ಸೀನ್ ಶೂಟ್
    ರಿಯಲ್ ಸ್ಟಾರ್ ಉಪ್ಪಿ ಬುದ್ದಿವಂತ-2 ಸಿನಿಮಾದಲ್ಲಿ ಭರ್ಜರಿ Action ಮಾಡಿದ್ದಾರೆ. ಹಾಗೆ ಈ ಚಿತ್ರದ ಆ ಪ್ರಮುಖ ಸಾಹಸ ದೃಶ್ಯವನ್ನ ಚಿಕ್ಕಬಳ್ಳಾಪುರದ ವೆಂಕಟೇಶ್ವರ ದೇವ ಸ್ಥಾನದಲ್ಲಿಯೇ ಚಿತ್ರೀಕರಿಸಲಾಗಿದ್ದು ಚಿತ್ರದ ಇತರ ಭಾಗದ ಚಿತ್ರೀಕರಣವನ್ನ ಬೆಂಗಳೂರು,ಮಂಗಳೂರು ನಲ್ಲಿ ಶೂಟ್ ಮಾಡಲಾಗಿದೆ.

    ಬುದ್ದಿವಂತ-1 ವರ್ಸಸ್ ಬುದ್ದಿವಂತ-2
    ಬುದ್ದಿವಂತ-2 ಚಿತ್ರ ಅಂದ್ಮೇಲೆ ಇದು ಬುದ್ದಿವಂತ-1 ಚಿತ್ರದ ಮುಂದುವರೆದ ಭಾಗ ಇರಬಹುದು ಅಂತ ಜನ ಗೆಸ್ ಮಾಡುತ್ತಾರೆ. ಆದರೆ, ನಿರ್ದೇಶಕ ಜಯರಾಮ್ ಆ ಬುದ್ದಿವಂತ ಚಿತ್ರಕ್ಕೂ ಈ ಬುದ್ದಿವಂತ ಚಿತ್ರಕ್ಕೂ ಎಲ್ಲಿಂದ ಎಲ್ಲೂ ಕನೆಕ್ಷನ್ ಇಲ್ಲ. ಅದೇ ಬೇರೆ ಸಿನಿಮಾ ಇದೇ ಬೇರೆ ಸಿನಿಮಾ ಅಂತಲೇ  ಈಗ ಮಾಹಿತಿ ಕೊಡ್ತಾರೆ.

    ಬುದ್ದಿವಂತ-2 ಒಂದು Mind Game ಸಿನಿಮಾ
    ಬುದ್ದಿವಂತ-2 ಸಿನಿಮಾ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೇ ಆಗಿದೆ. ಇದನ್ನ ಮೈಂಡ್ ಗೇಮ್ ಚಿತ್ರ  ಅಂತಲೇ ಡೈರೆಕ್ಟರ್ ಜಯರಾಮ್ ಬಣ್ಣಿಸುತ್ತಾರೆ. ಇಂತಹ ಒಂದು ಚಿತ್ರಕ್ಕೆ ಗುರುಕಿರಣ್ ಸಂಗೀತಕೊಟ್ಟಿದ್ದಾರೆ. ನಟಿ ಸೋನಲ್ ಇಲ್ಲಿ ಉಪ್ಪಿಗೆ ಜೋಡಿಯಾಗಿದ್ದಾರೆ. ಶ್ರೀನಗರ ಕಿಟ್ಟಿ ವಿಲನ್ ಆಗಿ ಉಪ್ಪಿ ಎದುರು ಅಬ್ಬರಿಸಿದ್ದಾರೆ.

    ಇದನ್ನೂ ಓದಿ: ಪೊಲೀಸ್ ಆಫೀಸರ್ ಆಗಿ ಬರ್ತಿದ್ದಾರೆ ಮಹಾನಟಿ! ಹೇಗಿರುತ್ತೆ ಕೀರ್ತಿ ಸುರೇಶ್ ಖಡಕ್ ಲುಕ್?

    ಬುದ್ದಿವಂತ-2 ಚಿತ್ರ 75 ದಿನದ ಕೆಲಸ ಪೂರ್ಣ ಇನ್ನು 10 ದಿನ ಬಾಕಿ
    ಬುದ್ದಿವಂತ-2 ಚಿತ್ರದ ಚಿತ್ರೀಕರಣವನ್ನ 75 ದಿನಗಳಲ್ಲಿ ಡೈರೆಕ್ಟರ್ ಜಯರಾಮ್ ಪೂರ್ಣಗೊಳಿಸಿದ್ದಾರೆ. ಆದರೆ ಇತರ ಚಿತ್ರೀಕರಣ ಇರೋದ್ರಿಂದ ಅದನ್ನ 10 ದಿನಗಳಲ್ಲಿ ಪೂರ್ಣಗೊಳಿಸೋ ಪ್ಲಾನ್ ಮಾಡಿದ್ದಾರೆ.ಅಲ್ಲಿಗೆ ಬುದ್ದಿವಂತ-2 ಒಟ್ಟು 85 ದಿನಗಳಲ್ಲಿ ಸಂಪೂರ್ಣ ಆಗುತ್ತಿದೆ.

    ಹಿಟ್​​ ಅಯೋಗ್ಯ ಸಿನಿಮಾ ನಿರ್ಮಿಸಿರೋ ಚಂದ್ರಶೇಖರ್ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಉಳಿದಂತೆ ಉಪ್ಪಿಗೆ ಡೈರೆಕ್ಷನ್ ಮಾಡಿರೋ ಖುಷಿಯಲ್ಲಿಯೇ ಡೈರೆಕ್ಟರ್ ಜಯರಾಮ್ ಇದ್ದಾರೆ. ರಿಲೀಸ್ ಪ್ಲಾನಿಂಗ್ ಮಾಡ್ತಾಯಿದ್ದು ಶೀಘ್ರದಲ್ಲಿ ಮಾಹಿತಿ ಕೂಡ ಕೊಡಲಿದ್ದಾರೆ.
    First published: