• Home
  • »
  • News
  • »
  • entertainment
  • »
  • Upendra A Cinema: 25 ವರ್ಷ ಹಿಂದೆಯೇ ಕೋಟಿ ಬಜೆಟ್​ನಲ್ಲಿ ಸಿನಿಮಾ ಮಾಡಿದ್ರು ಉಪ್ಪಿ! A ಚಿತ್ರಕ್ಕೆ ಸಿಲ್ವರ್ ಜುಬಿಲಿ ಸಂಭ್ರಮ

Upendra A Cinema: 25 ವರ್ಷ ಹಿಂದೆಯೇ ಕೋಟಿ ಬಜೆಟ್​ನಲ್ಲಿ ಸಿನಿಮಾ ಮಾಡಿದ್ರು ಉಪ್ಪಿ! A ಚಿತ್ರಕ್ಕೆ ಸಿಲ್ವರ್ ಜುಬಿಲಿ ಸಂಭ್ರಮ

ರಿಯಲ್ ಸ್ಟಾರ್ ಉಪ್ಪಿ ನಾಯಕರಾಗಿ ಈಗ 25 ವರ್ಷ ಪೂರ್ಣ

ರಿಯಲ್ ಸ್ಟಾರ್ ಉಪ್ಪಿ ನಾಯಕರಾಗಿ ಈಗ 25 ವರ್ಷ ಪೂರ್ಣ

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ A ಸಿನಿಮಾ ಯಾರಿಗೆ ನೆನಪಿಲ್ಲ ಹೇಳಿ? ಈ ಚಿತ್ರ ಎಲ್ಲ ಪ್ರೇಕ್ಷಕರಲ್ಲೂ ಒಂದು ಹೊಸ ಅಲೆ ಎಬ್ಬಿಸಿತ್ತು. ಥಿಯೇಟರ್​​ಗೆ ಹೋಗಿ ಚಿತ್ರವನ್ನ ಮತ್ತೆ ಮತ್ತೆ ನೋಡುವಂತೇನೂ ಮಾಡಿತ್ತು. ಅಂತಹ ಈ ಚಿತ್ರ ಜನವರಿ 16, 2023 ಕ್ಕೆ ಅಂದ್ರೆ ಇವತ್ತು 25 ವರ್ಷ ಪೂರ್ಣಗೊಳಿಸಿದೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ರಿಯಲ್ ಸ್ಟಾರ್ (Real Star Upendra) ಉಪೇಂದ್ರ ತಮ್ಮ ಸಿನಿ ಜೀವನದಲ್ಲಿ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ A ಸಿನಿಮಾ ಎಲ್ಲ ಚಿತ್ರಕ್ಕಿಂತಲೂ ವಿಭಿನ್ನವಾಗಿಯೇ ಇತ್ತು. ಜನವರಿ 16, 1998 ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರ ಈಗ 25 ವರ್ಷ (Kannada A Film Completed 25 Year) ಪೂರ್ಣಗೊಳಿಸಿದೆ. ಸಿನಿಮಾ ಪ್ರೇಮಿಗಳಿಗೆ ಪ್ರೀತಿಯ ಹೊಸ ಅಧ್ಯಾಯವನ್ನೆ ತೆರೆದಿಟ್ಟಿದ್ದ ಈ ಚಿತ್ರ ಮತ್ತೆ ಮತ್ತೆ ನೋಡುವಂತೇನೆ ಮಾಡಿತ್ತು. ಬುದ್ದಿವಂತರಿಗೆ ಮಾತ್ರ (Director Upendra A Cinema) ಅಂತೀವಲ್ಲ. ಅದೇ ರೀತಿನೇ ಈ ಸಿನಿಮಾ ಇತ್ತು. ಒಂದೇ ಸಾರಿ ನೋಡಿದ್ರೆ ಚಿತ್ರ ಯಾರಿಗೂ ಅರ್ಥವೇ ಆಗುತ್ತಿರಲಿಲ್ಲ. ಆದ್ದರಿಂದಲೇ (Kannada Movie)ಪ್ರೇಕ್ಷಕರು ಎರಡೆರಡು ಸಲ ಈ ಚಿತ್ರ ವೀಕ್ಷಿಸಿದ್ದರು. ಇದರ ಸುತ್ತ ಇನ್ನಷ್ಟು ವಿಶೇಷ ಮ್ಯಾಟರ್ ನಿಮಗಾಗಿ ಇಲ್ಲಿದೆ ಓದಿ.


ರಿಯಲ್ ಉಪ್ಪಿಯ A ಚಿತ್ರ ಬಂದು 25 ವರ್ಷ ಪೂರ್ಣ


ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ A ಸಿನಿಮಾ ಯಾರಿಗೆ ನೆನಪಿಲ್ಲ ಹೇಳಿ? ಈ ಚಿತ್ರ ಎಲ್ಲ ಪ್ರೇಕ್ಷಕರಲ್ಲೂ ಒಂದು ಹೊಸ ಅಲೆ ಎಬ್ಬಿಸಿತ್ತು. ಥಿಯೇಟರ್​​ಗೆ ಹೋಗಿ ಚಿತ್ರವನ್ನ ಮತ್ತೆ ಮತ್ತೆ ನೋಡುವಂತೇನೂ ಮಾಡಿತ್ತು. ಅಂತಹ ಈ ಚಿತ್ರ ಜನವರಿ 16, 2023 ಕ್ಕೆ ಅಂದ್ರೆ ಇವತ್ತು 25 ವರ್ಷ ಪೂರ್ಣಗೊಳಿಸಿದೆ.


Real Star Upendra Acted A Film completed 25 Years in the Kannada Film Industry
A ತೆಲುಗುವಿನಲ್ಲಿ ಡಬ್ ಮತ್ತು ತಮಿಳಿನಲ್ಲಿ ರೀಮೇಕ್!


A ಸಿನಿಮಾದ ಮೂಲಕ ನಾಯಕರಾದ ರಿಯಲ್ ಸ್ಟಾರ್
ರಿಯಲ್ ಸ್ಟಾರ್ ಉಪೇಂದ್ರ ನಟ-ನಿರ್ದೇಶಕರು ಅಂತಲೂ ಗೊತ್ತೇ ಇದೆ. ಅದೇ ಈ ನಾಯಕ A ಚಿತ್ರದ ಮೂಲಕವೇ ನಾಯಕ ನಟರು ಆದರು. ತಮ್ಮದೇ ಕಥೆ, ತಮ್ಮದೇ ನಿರ್ದೇಶನ, ಮತ್ತು ತಾವೇ ಈ ಚಿತ್ರದ ಮೂಲಕ ಹೀರೋ ಆಗಿಯೇ ಬಿಟ್ಟರು.




ಉಪ್ಪಿ ನಾಯಕರಾಗಿ ಈಗ 25 ವರ್ಷ ಪೂರ್ಣ
ಉಪೇಂದ್ರ ತಮ್ಮ ಈ ವಿಶೇಷ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಲ್ಲಿ ಹೊಸ ಅಲೆ ಎಬ್ಬಿಸಿದ್ದರು. ಪ್ರೀತಿಯ ಹೊಸ ಕಥೆಯನ್ನೆ ಹೇಳಿದ್ದರು. ಹಾಗೇನೆ ಈ ಚಿತ್ರದ ಮುಖಾಂತರ ನಾಯಕರಾದ ಉಪೇಂದ್ರ ಒಬ್ಬ ನಾಯಕರಾಗಿಯೂ ಈಗ 25 ವರ್ಷ ಪೂರ್ಣಗೊಳಿಸಿದ್ದಾರೆ.


A ಚಿತ್ರಕ್ಕಾಗಿ Reverse Screenplay ಬರೆದ ರಿಯಲ್ ಸ್ಟಾರ್!
ನಟ-ನಿರ್ದೇಶಕ ಉಪೇಂದ್ರ ಈ ಒಂದು ಸಿನಿಮಾದಲ್ಲಿ ಉಲ್ಟಾ ಸ್ಕ್ರೀನ್​ ಪ್ಲೇ (Reverse Screenplay) ಮಾಡಿದ್ದರು. ಕನ್ನಡದ ಮಟ್ಟಿಗೆ 25 ವರ್ಷದ ಹಿಂದೆ ಇದು ನಿಜಕ್ಕೂ ಹೊಸ ಪ್ರಯೋಗವೇ ಆಗಿತ್ತು. ಇದನ್ನ ಕಂಡ ಜನ ಏನಿದು? ಅಂತಲೂ ತಲೆಕೆರೆದುಕೊಂಡಿದ್ದರು.


ಕಾಸ್ಟಿಂಗ್ ಕೌಚ್ ಕರಾಳ ಸತ್ಯ ಬಿಚ್ಚಿಟ್ಟಿದ A ಸಿನಿಮಾ
ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಸಮಸ್ಯೆ ಇದ್ದೇ ಇದೆ. ಇದರ ಮೇಲೇನೆ 25 ವರ್ಷದ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಮಾಡಿದ್ದರು. ಅದುವೇ ಈ A ಸಿನಿಮಾನೇ ಆಗಿದೆ. ಇದರಲ್ಲಿ ಸಿನಿಮಾರಂಗದ casting couch ಕರಾಳ ಸತ್ಯವನ್ನ ಉಪ್ಪಿ ಬಿಚ್ಚಿಟ್ಟಿದ್ದರು.


ಫ್ಲ್ಯಾಷ್ ಬ್ಯಾಕ್ ಅಲ್ಲಿ ಫ್ಲ್ಯಾಷ್ ಬ್ಯಾಕ್ ಕಥೆ-ಇದು A ಚಿತ್ರದ ಸ್ಪೆಷಲ್!
ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಈ ಚಿತ್ರದಲ್ಲಿ ಫ್ಲ್ಯಾಷ್ ಬ್ಯಾಕ್ ಅಲ್ಲಿಯೇ ಕಥೆ ಹೇಳಿದ್ದರು. ಫ್ಲ್ಯಾಷ್ ಬ್ಯಾಕ್ ಅಲ್ಲಿ ಫ್ಲ್ಯಾಷ್ ಬ್ಯಾಕ್ ಕಥೇನೆ ಇಲ್ಲಿತ್ತು. ಇದು ಜನ ತಲೆಕೆರೆದುಕೊಳ್ಳುವಂತೇನೂ ಮಾಡಿತ್ತು.


A ತೆಲುಗುವಿನಲ್ಲಿ ಡಬ್ ಮತ್ತು ತಮಿಳಿನಲ್ಲಿ ರೀಮೇಕ್!
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ಸಿನಿಮಾ ಕಥೇನೂ ಇತ್ತು. ಸಿನಿಮಾರಂಗದ ಕರಾಳ ಮುಖವೂ ಇತ್ತು. ಅದೇ ರೀತಿ ಈ ಚಿತ್ರದ ಮೂಲಕ ನಟಿ ಚಾಂದಿನಿ ಕೂಡ ಹೆಚ್ಚು ಗಮನ ಸೆಳೆದರು. ಗುರು ಕಿರಣ್ ಸಂಗೀತವೂ ಹುಚ್ಚೆಬ್ಬಿಸಿತ್ತು.


ಅದೇ ರೀತಿನೇ ಈ ಚಿತ್ರ ತೆಲುಗು ಭಾಷೆಗೂ ಡಬ್ ಆಗಿತ್ತು. ಅದಾದ್ಮೇಲೆ Adavadi ಹೆಸರಿನಲ್ಲಿಯೇ ತಮಿಳಿನಲ್ಲೂ ರಿಮೇಕ್ ಆಯಿತು. ಈ ಮೂಲಕ ಕನ್ನಡದ A ಸಿನಿಮಾ ಅಲ್ಲೂ ಬೇಜಾನ್ ಸೌಂಡ್ ಮಾಡಿತ್ತು.


Real Star Upendra Acted A Film completed 25 Years in the Kannada Film Industry
ಕಾಸ್ಟಿಂಗ್ ಕೌಚ್ ಕರಾಳ ಸತ್ಯ ಬಿಚ್ಚಿಟ್ಟಿದ A ಸಿನಿಮಾ


ಕನ್ನಡದ A ಸಿನಿಮಾ ಬಜೆಟ್ ಎಷ್ಟು ಕೋಟಿ ಇತ್ತು ಗೊತ್ತೇ?
ಕನ್ನಡದ A ಸಿನಿಮಾ ಅಂದು ಎಷ್ಟು ಬಜೆಟ್​ನಲ್ಲಿ ತಯಾರಾಗಿತ್ತು. ದುಡ್ಡು ಹಾಕಿರೋದು ವಾಪಸ್ ಬಂತೇ? ಈ ಸಿನಿಮಾ ಎಷ್ಟು ಗಳಿಸಿತ್ತು? ಈ ಎಲ್ಲ ವಿಷಯದ ಬಗ್ಗೆ ಸಹಜವಾಗಿಯೇ ಕುತೂಹಲ ಇದೆ.


ಅದನ್ನ ವಿವರಿಸುತ್ತಾ ಹೋದ್ರೆ, ಕನ್ನಡದ A ಚಿತ್ರಕ್ಕೆ 1.25 ಕೋಟಿ ಬಜೆಟ್ ಆಗಿತ್ತು. ಸಿನಿಮಾ ಬಂದ್ಮೇಲೆ ಈ ಚಿತ್ರಕ್ಕೆ ಬಾಕ್ಸ್ ಆಫೀಸ್ 20 ಕೋಟಿ ಆಗಿತ್ತು ಅನ್ನೋ ಮಾಹಿತಿನೇ ಇದೆ.
ಕನ್ನಡದ A ಸಿನಿಮಾಕ್ಕೆ ಅಂದು ಬಿ.ಜಗನ್ನಾಥ್ ಮತ್ತು ಬಿ.ಜಿ.ಮಂಜುನಾಥ್ ದುಡ್ಡು ಹಾಕಿದ್ದರು. ದುಡ್ಡು ಹಾಕಿರೋ ಈ ನಿರ್ಮಾಪಕರಿಗೆ A ಸಿನಿಮಾದಿಂದ ಮೋಸ ಏನೂ ಆಗಲಿಲ್ಲ. ಇವರು ಅಂದು ಸೇಫ್ ಆಗಿದ್ದರು ಅಂತಲೇ ಹೇಳಬಹುದು.


ಇದನ್ನೂ ಓದಿ:  Raghu Dixit: ನಾನು ನಿಮಗಾಗಿ ಸಂಗೀತ ಕೊಡೋದನ್ನೇ ಬಿಟ್ಟು ಬಿಡ್ತೀನಿ, ರಘು ದೀಕ್ಷಿತ್​ ಕಣ್ಣೀರು ಹಾಕಿದ್ಯಾಕೆ?


ಅಂತಹ ಈ ಚಿತ್ರ ಈಗ 25 ವರ್ಷ ಪೂರ್ಣಗೊಳಿಸಿದೆ. ರಿಯಲ್ ಸ್ಟಾರ್ ಉಪೇಂದ್ರ ಕೂಡ ಈ ಚಿತ್ರದ ಮೂಲಕ ಹೀರೋ ಆಗಿ ಈಗ 25 ವರ್ಷ ಪೂರ್ಣಗೊಂಡಿದೆ ಅಂತಲೇ ಹೇಳಬಹುದು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು