Sonu Sood: ಸಲಾಂ... ಸೋನು ಸೂದ್​: ಹೆಣ್ಣುಮಕ್ಕಳಿಗೆ ಸಾವಿರ ಸೈಕಲ್​ ನೀಡಿದ ರಿಯಲ್​ ಹೀರೋ!

ಸೋನು ಸೂದ್ ತಮ್ಮ ಹುಟ್ಟೂರಾದ ಮೊಗಾದಲ್ಲಿರುವ ​ 1,000 ವಿದ್ಯಾರ್ಥಿನಿಯರು ಹಾಗೂ ಸಾಮಾಜಿಕ ಕಾರ್ಯಕರ್ತೆಯರಿಗೆ ಸೈಕಲ್​ಗಳನ್ನು ನೀಡಿದ್ದಾರೆ. ಇದರಿಂದ ಸುಮಾರು 40-45 ಗ್ರಾಮದ ವಿದ್ಯಾರ್ಥಿನಿಯರಿಗೆ ಸಹಾಯ ಆಗಿದೆ. ಸೂದ್ ಚಾರಿಟಿ ಫೌಂಡೇಶನ್‌ನೊಂದಿಗೆ ಮಾಳವಿಕಾ ಸೂದ್  ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.

ಸೈಕಲ್​ ವಿತರಿಸಿದ ಸೋನು

ಸೈಕಲ್​ ವಿತರಿಸಿದ ಸೋನು

  • Share this:
ಸೋನು ಸೂದ್ (Sonu Sood)​.. ಸಿನಿಮಾಗಳಲ್ಲಿ ಮಾತ್ರ ಇವರು ವಿಲನ್ (Villain) ಪಾತ್ರಧಾರಿ.. ನಿಜ ಜೀವನದಲ್ಲಿ ಇವರೇ ರಿಯಲ್ ಹೀರೋ (Real Hero)...ಅವರು ಮಾಡುವ ವಿಲನ್​ ಪಾತ್ರ ಎಷ್ಟು ಖಡಕ್​ ಆಗಿರುತ್ತದೆಂದರೆ ಸಿನಿಮಾ ನೋಡುತ್ತಿರುವ ಪ್ರೇಕ್ಷಕರು ಸೋನು ಸೂದ್​ ಅವರನ್ನೇ ದ್ವೇಷಿಸಲು ಆರಂಭಿಸಿ ಬಿಡುತ್ತಾರೆ. ಆದರೆ, ಸೋನು ಸೂದ್​ ನಿಜ ಜೀವನದಲ್ಲಿ ನಿಜಕ್ಕೂ ಹೀರೋ. ಕೊರೋನಾ (Corona) ಸಮಯದಲ್ಲಿ ಅವರು ಮಾಡಿದ ಸಮಾಜಮುಖಿ ಕೆಲಸಗಳನ್ನು ಯಾರು ಮರೆಯುವುದಿಲ್ಲ. ಅವರ ಕೆಲಸಗಳನ್ನು ಕಂಡು ಅದೆಷ್ಟೋ ಮಂದಿ ತಮ್ಮ ಮಕ್ಕಳಿಗೆ ಸೋನು ಸೂದ್​ ಎಂಬ ಹೆಸರನ್ನು ಇಟ್ಟಿದ್ದಾರೆ. ದೇಶಕ್ಕಾಗಿ ಅವರು ಮಾಡಿದ ಕೆಲಸಗಳು ಎಂದಿಗೂ ಎಲ್ಲರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವಂತದ್ದು. ನಟ ಸೋನು ಸೂದ್​ ಮಾಡುತ್ತಿರುವ ಸಾಮಾಜಿಕ ಕೆಲಸಗಳು ಒಂದೆರಡಲ್ಲ. ಕೋವಿಡ್​ ಮೊದಲನೆ ಅಲೆ (Covid 1st Wave) ಕಾಣಿಸಿಕೊಂಡಾಗ ಸೋನು ಸಾಮಾಜಿಕ ಕೆಲಸ ಆರಂಭಿಸಿದ್ದರು. ಆ ಬಳಿಕ, ಅವರು ಅದನ್ನು ನಿಲ್ಲಿಸಲೇ ಇಲ್ಲ. ಒಂದಾದ ಮೇಲೆ ಒಂದರಂತೆ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಲೇ ಹೋದರು. ಇದೀಗ ತಮ್ಮ ಹುಟ್ಟೂರಿನ ಮೇಲಿರುವ ಪ್ರೀತಿಯಿಂದ ಎಲ್ಲರೂ ಖುಷಿ ಪಡುವ ಕೆಲಸವೊಂದನ್ನು ಮಾಡಿದ್ದಾರೆ. ಇದನ್ನು ಕಂಡ ಜನರು ಸರ್​.. ನಿಮಗೆ ಕೋಟಿ ಸಲಾಂ.. ನಿಮ್ಮ ಹಾಗೆ ಯಾರು ಇಲ್ಲ.. ಮತ್ತೊಬ್ಬ ಹುಟ್ಟಿ ಬರಲ್ಲ ಎಂದು ಭಾವುಕರಾಗುತ್ತಿದ್ದಾರೆ.

ಸಾವಿರ ಸೈಕಲ್​ ನೀಡಿದ ರಿಯಲ್​ ಹೀರೋ!

ಹೋದರಿ ಮಾಳವಿಕಾ ಸೂದ್​ ಜತೆ ಸೇರಿ ಸೋನು ಸೂದ್ ತಮ್ಮ ಹುಟ್ಟೂರಾದ ಮೊಗಾದಲ್ಲಿರುವ ​ 1,000 ವಿದ್ಯಾರ್ಥಿನಿಯರು ಹಾಗೂ ಸಾಮಾಜಿಕ ಕಾರ್ಯಕರ್ತೆಯರಿಗೆ ಸೈಕಲ್​ಗಳನ್ನು ನೀಡಿದ್ದಾರೆ. ಇದರಿಂದ ಸುಮಾರು 40-45 ಗ್ರಾಮದ ವಿದ್ಯಾರ್ಥಿನಿಯರಿಗೆ ಸಹಾಯ ಆಗಿದೆ. ಸೂದ್ ಚಾರಿಟಿ ಫೌಂಡೇಶನ್‌ನೊಂದಿಗೆ ಮಾಳವಿಕಾ ಸೂದ್  ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಮೊಗಾ ಕಿ ಧಿ (ಮೊಗಾದ ಮಗಳು) ಹೆಸರಿನ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಹೀಗೆ ಹೆಣ್ಣುಮಕ್ಕಳಿಗೆ ಸೋನು ಸೈಕಲ್ ನೀಡಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಸೋನು ಅವರ ಕಾರ್ಯಕ್ಕೆ ನೆಟ್ಟಿಗರು ಮನಸೋತ್ತಿದ್ದಾರೆ.. ಸೋನು ಭಾಯ್​ ನಿಮ್ಮ ಲೆವೆಲ್​ ಬೇರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.


ಇದನ್ನು ಓದಿ: ಮದುವೆಗೂ 4 ವರ್ಷ ಮುನ್ನವೇ ಗುಟ್ಟಾಗಿ ರಿಂಗ್​ ಬದಲಿಸಿಕೊಂಡಿದ್ರಂತೆ ಡಿಪ್ಪಿ- ರಣವೀರ್!

ಶಾಲೆಗೆ ತೆರಳಲು ಪರದಾಡುತ್ತಿದ್ದ ಹೆಣ್ಣುಮಕ್ಕಳು!

‘ಇಲ್ಲಿನವರಿಗೆ ಮನೆಯಿಂದ ಶಾಲೆಗೆ ಹೋಗುವುದು ತುಂಬಾ ದೂರ. ಇದರಿಂದಾಗಿ ವಿದ್ಯಾರ್ಥಿನಿಯರು ತೀವ್ರ ತೊಂದರೆಪಟ್ಟು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಅವರ ಸಮಸ್ಯೆಯನ್ನು ಪರಿಹರಿಸಲು, ಸಹಾಯ ಮಾಡಲು 8ನೇ ತರಗತಿಯಿಂದ 12ನೇ ತರಗತಿವರೆಗಿನ ಅರ್ಹ ವಿದ್ಯಾರ್ಥಿನಿಯರಿಗೆ ಸೈಕಲ್‌ಗಳನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ಅಭಿಯಾನದಲ್ಲಿ ಈ ಸೈಕಲ್‌ಗಳನ್ನು ಸಾಮಾಜಿಕ ಕಾರ್ಯಕರ್ತರಿಗೂ ನೀಡುತ್ತೇವೆ’ ಎಂದು ಸೋನು ಸೂದ್​ ಹೇಳಿದ್ದಾರೆ. ಸರ್ಕಾರಿ ಶಾಲೆಯ ಶಿಕ್ಷಕರು ಅರ್ಹ ವಿದ್ಯಾರ್ಥಿಗಳನ್ನು ಗುರುತಿಸುವ ಕೆಲಸ ಮಾಡಿದ್ದಾರೆ.

ಇದನ್ನು ಓದಿ :ಬಣ್ಣದ ಲೋಕಕ್ಕೆ ಜನಾರ್ದನ ರೆಡ್ಡಿ ಮಗನ ಎಂಟ್ರಿ: ಶೀಘ್ರವೇ ಹೀರೋ ಆಗಿ ಬರ್ತಾರೆ ಕಿರೀಟಿ ರೆಡ್ಡಿ!

ಸೋನು ಸೂದ್​​ಗೆ ಜಾರಿಯಾಗಿತ್ತು ನೋಟಿಸ್!

ಸೋನು ಸೂದ್​ ತಮ್ಮ ಹೆಸರಿನಲ್ಲಿ ಇರುವ ಆರು ಅಂತಸ್ತಿನ ಕಟ್ಟಡವನ್ನು ಹೋಟೆಲ್​ ಆಗಿ ಮಾರ್ಪಾಡು ಮಾಡಿದ್ದರು. ಇದಕ್ಕೆ ಅವರು ಯಾವುದೇ ಒಪ್ಪಿಗೆ ಪಡೆದುಕೊಂಡಿರಲಿಲ್ಲ. ಹೆಚ್ಚಿನ ಟ್ಯಾಕ್ಸ್​ ಕೂಡ ತುಂಬಿಲ್ಲ. ನಿಯಮಗಳ ಪ್ರಕಾರ ಈ ರೀತಿ ಮಾಡುವುದು ತಪ್ಪು. ಈ ಕಾರಣಕ್ಕೆ ಪಾಲಿಕೆ ಅಧಿಕಾರಿಗಳು ಸೋನು ಸೂದ್​ಗೆ ಈ ಮೊದಲು ನೋಟಿಸ್​ ನೀಡಿದ್ದರು. ಕಳೆದ ತಿಂಗಳು ಡಿಸೆಂಬರ್​ಗೆ ಮತ್ತೊಂದು ನೋಟಿಸ್​ ಜಾರಿ ಆಗಿತ್ತು.
Published by:Vasudeva M
First published: