ಈ ವರ್ಷದ ಮೊದಲ ಐಪಿಎಲ್ ಪಂದ್ಯಾಟ ಇಂದಿನಿಂದ ಪ್ರಾರಂಭವಾಗುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು -ಮುಂಬೈ ಇಂಡಿಯನ್ಸ್ ತಂಡದ ನಡುವೆ ಇಂದಿನ ಪಂದ್ಯ ನಡೆಯಲಿದೆ. ಕ್ರಿಕೆಟ್ ಪ್ರಿಯರು ಪಂದ್ಯ ವೀಕ್ಷಿಸಲು ತುದಿಗಾಳಿನಲ್ಲಿ ನಿಂತಿದ್ದಾರೆ. ಹೀಗಿರುವಾಗ ಸ್ಯಾಂಡಲ್ವುಡ್ ನಟ ದರ್ಶನ್ ಅವರು ಐಪಿಎಲ್ ಪ್ರಿಯರಿಗೆ ಕಿವಿ ಮಾತು ಹೇಳಿರುವ ಹಳೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ವೈರಲ್ ಆಗಿದೆ.
ಐಪಿಎಲ್ ಸೀಸನ್ 14ರ ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ಸಾಕಷ್ಟು ಜನರು ಇಂದಿನ ಆರ್ಸಿಬಿ ಪಂದ್ಯವನ್ನು ನೋಡಲು ಉತ್ಸುಹಕರಾಗಿದ್ದಾರೆ. ಕ್ರಿಕೆಟ್ ಪಂದ್ಯವೆಂದಾಗ ಕೆಲವರು ಬೆಟ್ಟಿಂಗ್ ಮೊರೆ ಹೋಗುತ್ತಾರೆ. ಯಾವುದೋ ಆಸೆಗಾಗಿ ಅಲ್ಪ ಸ್ವಲ್ಪ ದುಡಿದ ಹಣವನ್ನು ಬೆಟ್ಟಿಂಗ್ಗೆ ಸುರಿಯುತ್ತಾರೆ. ಹಾಗಾಗಿ ಅಂತದನ್ನು ದಯವಿಟ್ಟು ಮಾಡಬೇಕು ಎಂದು ಹೇಳಿರುವ ನಟ ದರ್ಶನ್ ಅವರ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರ್ಸಿಬಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವಾಗಿದೆ. ಎಷ್ಟೇ ಸಲ ಸೋತರು ಅದಕ್ಕೆ ಕ್ಯಾರೆ ಅನ್ನದೆ ತಂಡಕ್ಕೆ ಅಭಿಮಾನಿಗಳು ಪ್ರೊತ್ಸಾಹ ನೀಡುತ್ತಾ ಬಂದಿದ್ದಾರೆ. ಹೀಗೆ ಕ್ರೀಡಾ ಉತ್ಸಾಹದ ನಡುವಲ್ಲಿ ಅಭಿಮಾನಿಗಳು ಕ್ರಿಕೆಟ್ ಬೆಟ್ಟಿಂಗ್ಗೆ ಮುಂದಾಗಿ ಕೈ ಸುಟ್ಟುಕೊಂಡಿರುವ ಹಲವಾರು ಘಟನೆಗಳು ಈ ಮೊದಲು ಬೆಳಕಿಗೆ ಬಂದಿದೆ. ಹಾಗಾಗಿ ಬೆಟ್ಟಿಂಗ್ ಎಂಬ ಕೂಪಕ್ಕೆ ಬಿದ್ದು ತೊಂದರೆಗೆ ಸಿಲುಕದಿರಿ ಎಂದು ಅನೇಕ ಸೆಲೆಬ್ರಿಟಿಗಳು ಹೇಳುತ್ತಾ ಬಂದಿದ್ದಾರೆ. ಅದರಂತೆ ಡಿಬಾಸ್ ಕೂಡ ಈ ಬಗ್ಗೆ ಜಾಗೃತಿ ಮೂಡಿಸಿರುವ ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಹಂಚಿದ್ದಾರೆ.
ಐಪಿಎಲ್ ಪಂದ್ಯದ ದಿನಾಂಕ ನಿಗದಿಯಾದ ದಿನದಿಂದ ಆರ್ಸಿಬಿ ಕುರಿತ ಹಲವು ಫೋಟೋ, ವಿಡಿಯೋಗಳು ಟ್ರೋಲ್ ಪೇಜ್ನಲ್ಲಿ ಓಡಾಡುತ್ತಿದೆ. ಹಲವು ಹಾಡುಗಳು ಯ್ಯೂಟೂಬ್ನಲ್ಲಿ ಬಿಡುಗಡೆಯಾಗಿದೆ. ಇಂದು ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ರೋಹಕ ಹಣಾಹಣಿ ನಡೆಯಲಿದೆ. ಹಾಗಾಗಿ ಯಾರು ಮೊದಲ ಪಂದ್ಯ ಜಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ