ಸಿನಿ ಪ್ರಿಯರಿಗೆ ಹಬ್ಬವೋ ಹಬ್ಬ. ಯಾಕಂದ್ರೆ ಚಲನಚಿತ್ರ (Movie) ನಿರ್ಮಾಪಕ ಶಂಕರ್ ಷಣ್ಮುಖಂ ಅವರ ನಿರ್ದೇಶನದ RC15 ಮತ್ತು ಇಂಡಿಯನ್ 2 (Indian 2) ಚಿತ್ರಗಳನ್ನು ಒಟ್ಟಿಗೆ ಶೂಟ್ (Shoot) ಮಾಡುವುದಾಗಿ ಘೋಷಿಸಲಾಗಿದೆ. RC15 ಚಿತ್ರದಲ್ಲಿ ನಟ (Actor) ರಾಮ್ ಚರಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತು ಸೂಪರ್‌ಸ್ಟಾರ್ ಕಮಲ್ ಹಾಸನ್ ನೇತೃತ್ವದಲ್ಲಿ ಇಂಡಿಯನ್ 2 ಚಿತ್ರ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. RC15 ಮತ್ತು ಇಂಡಿಯನ್ 2 ಎರಡೂ ನಿರೀಕ್ಷಿತ ಚಲನಚಿತ್ರಗಳಾಗಿವೆ. RC15 ಚಿತ್ರ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಮೇಲಿನ ಒಂದು ಸಾಹಸಮಯ ನಾಟಕ ಪ್ರಧಾನ ಚಿತ್ರವಾಗಿದೆ. ಇಂಡಿಯನ್ 2 ಚಿತ್ರವು 1996 ರ ಚಲನಚಿತ್ರದ ಮುಂದುವರಿದ ಭಾಗವೆಂದು ಹೇಳಲಾಗುತ್ತಿದೆ.
RC15 ಮತ್ತು ಇಂಡಿಯನ್ 2 ಚಿತ್ರದ ಒಟ್ಟಿಗೆ ಶೂಟ್
ಬಾಲಿವುಡ್ ಮತ್ತು ಸೌತ್ ಸಿನಿ ಇಂಡಸ್ಟ್ರಿಯನ್ನು ಒಟ್ಟಿಗೆ ಆಳಿದ ಕಮಲ್ ಹಾಸನ್ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ತಮ್ಮ ನಟನೆಯ ರಸದೌತಣ ನೀಡಲಿದ್ದಾರೆ. ಅವರ 'ಇಂಡಿಯನ್ 2' ಚಿತ್ರದ ಲುಕ್ ಹೊರ ಬಂದಾಗಿನಿಂದ ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರ ಲುಕ್ ಸಾಕಷ್ಟು ಹೊಗಳಿಕೆ ಪಡೆಯುತ್ತಿದೆ. ಈಗಾಗಲೇ ಚಿತ್ರದ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ.
Hi Everyone, Indian 2 and #RC15 will be shot simultaneously. Ready to shoot the next schedule of #RC15 from first week of September in Hyderabad and Vizag! @DilRajuOfficial @AlwaysRamCharan @SVC_official. pic.twitter.com/20yYQGxIgE
— Shankar Shanmugham (@shankarshanmugh) August 24, 2022
ಇದನ್ನೂ ಓದಿ: ಪಾಪ್ಸ್ ಬಳಿ ಚೈನ್ ಕೇಳಿದ ಉರ್ಫಿ ಜಾವೇದ್! ಗ್ಯಾಲಕ್ಸಿ ಡ್ರೆಸ್ನಲ್ಲಿ ಶೈನ್, ತಲೆಯ ಮೇಲೆ ತಾರೆಗಳು!
ಇಂಡಿಯನ್ 2 ಮತ್ತು RC15 ಚಿತ್ರದ ಏಕಕಾಲಕ್ಕೆ ಚಿತ್ರೀಕರಣ- ಟ್ವೀಟ್
ಬಾಲಿವುಡ್ ತಾರೆ ಕಿಯಾರಾ ಅಡ್ವಾಣಿ ಕೂಡ RC 15 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಂತರ ಚಿತ್ರದ ಚಿತ್ರೀಕರಣ ವೈಜಾಗ್‌ನಲ್ಲಿ ನಡೆಯಲಿದೆ. ಈ ಬಗ್ಗೆ ನಿರ್ಮಾಪಕ ಎಸ್.ಶಂಕರ್ ಟ್ವೀಟ್ ಮಾಡಿದ್ದಾರೆ. ಎಲ್ಲರಿಗೂ ಹಾಯ್, ಇಂಡಿಯನ್ 2 ಮತ್ತು RC15 ಚಿತ್ರಗಳನ್ನು ಏಕಕಾಲದಲ್ಲಿ ಚಿತ್ರೀಕರಿಸಲಾಗುತ್ತಿದೆ. RC15 ರ ಮುಂದಿನ ವೇಳಾಪಟ್ಟಿಯನ್ನು ಸೆಪ್ಟೆಂಬರ್ ಮೊದಲ ವಾರದಿಂದ ಹೈದರಾಬಾದ್ ಮತ್ತು ವೈಜಾಗ್‌ನಲ್ಲಿ ಚಿತ್ರೀಕರಣ ಮಾಡಲು ಎಲ್ಲ ಸಿದ್ಧತೆ ನಡೆದಿದೆ ಎಂದು ತಿಳಿಸಿದ್ದಾರೆ.
ನಿರ್ಮಾಪಕ ಎಸ್.ಶಂಕರ್ ಟ್ವೀಟ್ ಗೆ ಶುಭಾಶಯ ಕೋರಿ ನಟ ರಾಮ್ ಚರಣ್ ಪ್ರತಿಕ್ರಿಯೆ
ಇನ್ನು ನಿರ್ಮಾಪಕ ಎಸ್.ಶಂಕರ್ ಟ್ವೀಟ್ ಗೆ ಉತ್ತರಿಸಿರುವ ನಟ ರಾಮ್ ಚರಣ್, ಇಂಡಿಯನ್ 2 ತಂಡಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ನಮ್ಮ ಸೆಟ್ ನಲ್ಲಿ ಶೀಘ್ರದಲ್ಲೇ ನಿಮ್ಮನ್ನು ನೋಡಲು ಕಾಯುತ್ತಿದ್ದೇನೆ ಸರ್. ಇಂಡಿಯನ್ 2 ಶೀಘ್ರದಲ್ಲೇ ಶೂಟ್ ಆರಂಭದ ಬಗ್ಗೆ ಉತ್ಸುಕನಾಗಿದ್ದೇನೆ. ಆಲ್ ದಿ ಬೆಸ್ಟ್ ಎಂದು ಟ್ವೀಟ್ ಮಾಡಿದ್ದಾರೆ.
RC 15 ಚಿತ್ರದಲ್ಲಿ ನಟ ರಾಮ್ ಚರಣ್, ರಾಜಕೀಯ ನಾಟಕದಲ್ಲಿ ಭ್ರಷ್ಟಾಚಾರ ವಿರೋಧಿ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಸಂಗೀತವನ್ನು ಎಸ್ ಎಸ್ ಥಮನ್ ಸಂಯೋಜಿಸಿದ್ದಾರೆ. ನಟಿ ಕಿಯಾರಾ ಅಡ್ವಾಣಿ ಅವರ ಟಾಲಿವುಡ್ ಚೊಚ್ಚಲ ಚಿತ್ರ ಇದಾಗಿದೆ. ಚಿತ್ರವನ್ನು ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಚಿತ್ರೀಕರಿಸಲಾಗುತ್ತದೆ. ತಯಾರಕರು ಡಿಸೆಂಬರ್ 2022 ರೊಳಗೆ ಯೋಜನೆಯನ್ನು ಪೂರ್ಣಗೊಳಿಸಲು ಯೋಜಿಸಿದ್ದಾರೆ.
ಇದನ್ನೂ ಓದಿ: ಸಿನಿಮಾಗೋಸ್ಕರ ಹೆಣ್ಣಾಗಿ ಬದಲಾದ ಟಾಪ್ ಸ್ಟಾರ್ ನಟರಿವರು! ಲುಕ್ ಸ್ವಲ್ಪ ನೋಡಿ
ಕಮಲ್ ಹಾಸನ್ ಇಂಡಿಯನ್ 2 ಲುಕ್
ಕಮಲ್ ಹಾಸನ್ ಅವರ 'ಇಂಡಿಯನ್ 2' ಲುಕ್ ಭಯ ಹುಟ್ಟಿಸುವಂತಿದೆ. ಈ ಲುಕ್‌ನಲ್ಲಿ ಅವರು ಬಿಳಿ ಶರ್ಟ್‌ನಲ್ಲಿ ಸ್ಕಾರ್ಫ್ ಬೀಸುತ್ತಿರುವಂತೆ ಕಾಣಿಸಿದ್ದಾರೆ. ಕಮಲ್ ಹಾಸನ್ ಕೂಡ ತಮ್ಮ ಹೊಸ ಲುಕ್‌ನೊಂದಿಗೆ ಚಿತ್ರದ ಶೂಟಿಂಗ್ ಘೋಷಿಸಿದ್ದಾರೆ. ಪೋಸ್ಟರ್ ಶೇರ್ ಮಾಡಿರುವ ಅವರು, ಇಂಡಿಯನ್ 2 ಚಿತ್ರೀಕರಣ ಸೆಪ್ಟೆಂಬರ್‌ನಿಂದ ಪ್ರಾರಂಭವಾಗುತ್ತದೆ. ತಂಡಕ್ಕೆ ಶುಭಾಶಯಗಳು ಮತ್ತು ಈ ಪ್ರಯಾಣದಲ್ಲಿ ತೊಡಗಿರುವ ಎಲ್ಲರಿಗೂ ಶುಭಾಶಯಗಳು ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ