• Home
  • »
  • News
  • »
  • entertainment
  • »
  • Razia-Ram Serial: ಹಿಂದೂ ಹುಡುಗಿಯ ಮುಸ್ಲಿಂ ಪಾತ್ರ! ರಜಿಯಾ ನಿಜಕ್ಕೂ ಯಾರು ಗೊತ್ತೇ?

Razia-Ram Serial: ಹಿಂದೂ ಹುಡುಗಿಯ ಮುಸ್ಲಿಂ ಪಾತ್ರ! ರಜಿಯಾ ನಿಜಕ್ಕೂ ಯಾರು ಗೊತ್ತೇ?

ಅಸಲಿಗೆ ರಜಿಯಾ ಯಾರು? ನಿಜವಾದ ಹೆಸರೇನು?

ಅಸಲಿಗೆ ರಜಿಯಾ ಯಾರು? ನಿಜವಾದ ಹೆಸರೇನು?

ನಾನು ಉತ್ತರ ಕರ್ನಾಟಕದ ಬೆಳಗಾವಿ ಹುಡುಗಿ. ಅಪ್ಪ ಆರ್ಮಿಯಲ್ಲಿದ್ದರು. ಆದ್ದರಿಂದ ಹಿಂದಿ ಕೂಡ ಅಷ್ಟೆ ಸರಾಗವಾಗಿಯೇ ಕಲಿತಿದ್ದೇನೆ. ನನಗೆ ಮುಸ್ಲಿಂ ಸ್ನೇಹಿತರೇ ಇದ್ದಾರೆ. ಅವರ ಮನೆಗಳಿಗೂ ನಾನು ಹೋಗುತ್ತಿದ್ದೆ. ಹಾಗಾಗಿಯೇ ರಜಿಯಾ ಪಾತ್ರ ನಿರ್ವಹಿಸಲು ಹೆಲ್ಪ್ ಆಯಿತು ಅಂತಲೇ ಶಿಲ್ಪಾ ಲದ್ದಿಮಠ ಹೇಳುತ್ತಾರೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಿರುತೆರೆಯಲ್ಲಿ (Small Screen) ಒಂದು ಪ್ರಯೋಗ ಆಗಿದೆ. ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನ ಮದುವೆ ಆಗೋದೆ ಕಥೆ. ಕಥೆಗೆ ಆರಂಭದಲ್ಲಿ ಒಂದು ಧರ್ಮದಿಂದ ವಿರೋಧವೂ ಬಂದಿದೆ. ಆದರೆ ಈಗ ಈ ಸೀರಿಯಲ್ ಯಾವುದೇ ತೊಂದರೆ ಇಲ್ಲದೇ 150 (Episode) ಸಂಚಿಕೆಯನ್ನು ಮುಗಿಸಿದೆ. ಸಿರಿ ಕನ್ನಡ ವಾಹಿನಿಯ ಟಿಆರ್​ಪಿಯಲ್ಲಿ ಟಾಪ್ ಅಲ್ಲಿಯೇ ಇದೆ. ಈ ಸೀರಿಯಲ್​​ನ ರಜಿಯಾ (Razia Role) ಪಾತ್ರಧಾರಿ ನಿಜಕ್ಕೂ ಯಾರು? ಪಕ್ಕಾ ಮುಸ್ಲಿಂ (Muslim Girl) ಯುವತಿ ಹಾಗೆ ಕಾಣುವ ಈ ನಟಿ ನಿಜಕ್ಕೂ ಮುಸ್ಲಿಂ ಹುಡುಗಿನಾ? ಅಸಲಿಗೆ ರಜಿಯಾ ಸ್ವತಃ ರಜಿಯಾ ಪಾತ್ರಧಾರಿ ನ್ಯೂಸ್-18 ಕನ್ನಡ ಡಿಜಿಟಲ್​​ ಜೊತೆಗೆ ವಿಶೇಷವಾಗಿ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ. ಇಲ್ಲಿದೆ ವಿಶೇಷ ಮಾತಿನ ವಿಶೇಷ ವಿವರಣೆ.


ರಜಿಯಾ ಪಾತ್ರಧಾರಿ ನಟಿ ಯಾರು ಗೊತ್ತೆ?


ರಜಿಯಾ ರಾಮ್ ಸೀರಿಯಲ್ ಚೆನ್ನಾಗಿ ಹೋಗುತ್ತಿದೆ. ಯಾವುದು ಅಡೆ-ತಡೆ ಇಲ್ಲದೇ ಓಡ್ತಿದೆ. ಟಿಆರ್​ಪಿ ವಿಷಯದಲ್ಲೂ ಟಾಪ್ ಅಲ್ಲಿಯೇ ಇದೆ. ಈ ಸೀರಿಯಲ್​ ನಲ್ಲಿ ಎರಡು ಪ್ರಮುಖ ಪಾತ್ರಗಳು ಹೆಚ್ಚು ಗಮನ ಸೆಳೆಯುತ್ತಿದೆ. ಆ ವಿಷಯದಲ್ಲಿ ರಜಿಯಾ ಪಾತ್ರ ಹೆಚ್ಚು ಗಮನ ಸೆಳೆಯುತ್ತದೆ.


ರಜಿಯಾ ಪಾತ್ರ ನಿಜಕ್ಕೂ ವಿಶೇಷವಾಗಿಯೇ ಇದೆ. ಮುಸ್ಲಿಂ ಧರ್ಮದ ಅಷ್ಟೂ ಆಚರಣೆಗಳನ್ನ ಅಷ್ಟೇ ಅದ್ಭುತವಾಗಿಯೇ ಪ್ರತಿನಿಧಿಸುತ್ತದೆ. ಸೀರಿಯಲ್​​ನಲ್ಲಿ ಹಿಂದೂ ಹುಡುಗನನ್ನ ಮದುವೆಯಾದ್ರು ಸಹ ಎಲ್ಲೂ ವಿವಾದ ಹುಟ್ಟಿಸುವ ಮಾತುಗಳನ್ನೂ ಈ ಪಾತ್ರ ಆಡೋದಿಲ್ಲ.


Razia-Ram Serial Actress Shilpa talk about her role
ರಜಿಯಾ ಪಾತ್ರಧಾರಿ ಹೆಸರು ಶಿಲ್ಪಾ ಲದ್ದಿಮಠ


ಅಸಲಿಗೆ ರಜಿಯಾ ಯಾರು? ನಿಜವಾದ ಹೆಸರೇನು?


ರಜಿಯಾ ಪಾತ್ರ ಹಿಂದೂ ಹುಡುಗನನ್ನ ಮದ್ವೆ ಆದ್ಮೇಲೆ ಜಾನಕಿ ಆಗಿರೋದು ಗೊತ್ತೇ ಇದೆ. ತುಂಬಾ ವಿಶೇಷ ಲವ್ ಸ್ಟೋರಿನೇ ಆಗಿರೋ ಈ ಸೀರಿಯಲ್​ನ ನಟಿ ಅಸಲಿಗೆ ಯಾರು ಗೊತ್ತೇ?


ರಜಿಯಾ ಪಾತ್ರಧಾರಿ ಹೆಸರು ಶಿಲ್ಪಾ ಲದ್ದಿಮಠ


ಈ ನಟಿ ಹೆಸರು ಶಿಲ್ಪಾ ಲದ್ದಿಮಠ ಉತ್ತರ ಕರ್ನಾಟಕದ ಪ್ರತಿಭಾನ್ವಿತ ಚೆಲುವೆ. ಮೂಲತಃ ಬೆಳಗಾವಿಯ ನಿವಾಸಿನೇ ಆಗಿದ್ದಾರೆ. ಅಪ್ಪ ಆರ್ಮಿಯಲ್ಲಿದ್ದರು. ಹಾಗಾಗಿಯೇ ಜಮ್ಮುವಿನಲ್ಲಿಯೇ ಶಿಲ್ಪಾ ಲದ್ದಿಮಠ ವಿದ್ಯಾಭ್ಯಾಸ ಆರಂಭಗೊಂಡಿದೆ. ಸದ್ಯಕ್ಕೆ ಬೆಳಗಾವಿಯಲ್ಲಿಯೇ ವಾಸವಾಗಿದ್ದಾರೆ.


ಇದನ್ನೂ ಓದಿ: Conversion to Islam: ಇಸ್ಲಾಂಗೆ ಮತಾಂತರಗೊಂಡ ಖ್ಯಾತ ಮಾಡೆಲ್! ವೈರಲ್ ಆಯ್ತು ಹಜ್ ಯಾತ್ರೆ ಫೋಟೋ


ರಜಿಯಾ ರಾಮ್ ಶಿಲ್ಪಾ ಅಭಿನಯದ ಮೊದಲ ಸೀರಿಯಲ್​
ರಜಿಯಾ ರಾಮ್ ಮೂಲಕವೇ ಶಿಲ್ಪಾ ಲದ್ದಿಮಠ ಕಿರುತೆರೆಗೆ ಕಾಲಿಟ್ಟಿದ್ದಾರೆ. ಇದಕ್ಕೂ ಮೊದಲು 2017 ರಲ್ಲಿ ಸ್ಟಾರ್ ಲೈಫ್ ಮಿಸ್ ಇಂಡಿಯಾವನ್ನ ಗೆದ್ದಿದ್ದಾರೆ ಶಿಲ್ಪಾ ಲದ್ದಿಮಠ. ಈಗ ಸೀರಿಯಲ್​ ನಲ್ಲಿ ರಜಿಯಾ ಆಗಿ, ಜಾನಕಿಯಾಗಿ ಮಿಂಚುತ್ತಿದ್ದಾರೆ.


ನನ್ನ ಮುಸ್ಲಿಂ ಫ್ರೆಂಡ್ಸ್ ನಿಂದಲೇ ಮುಸ್ಲಿಂ ಆ್ಯಕ್ಸೆಂಟ್ ಬಂತು


ನಾನು ಉತ್ತರ ಕರ್ನಾಟಕದ ಬೆಳಗಾವಿ ಹುಡುಗಿ. ಅಪ್ಪ ಆರ್ಮಿಯಲ್ಲಿದ್ದರು. ಆದ್ದರಿಂದ ಹಿಂದಿ ಕೂಡ ಅಷ್ಟೆ ಸರಾಗವಾಗಿಯೇ ಕಲಿತಿದ್ದೇನೆ. ನನಗೆ ಮುಸ್ಲಿಂ ಸ್ನೇಹಿತರೇ ಇದ್ದಾರೆ. ಅವರ ಮನೆಗಳಿಗೂ ನಾನು ಹೋಗುತ್ತಿದ್ದೆ. ಹಾಗಾಗಿಯೇ ರಜಿಯಾ ಪಾತ್ರ ನಿರ್ವಹಿಸಲು ಹೆಲ್ಪ್ ಆಯಿತು ಅಂತಲೇ ಶಿಲ್ಪಾ ಲದ್ದಿಮಠ ಹೇಳುತ್ತಾರೆ.


ರಜಿಯಾ ಪಾತ್ರವನ್ನ ನಿರ್ವಹಿಸೋದು ಶಿಲ್ಪಾ ಅವರಿಗೆ ಖುಷಿ ಕೊಟ್ಟಿದೆ. ಜನ ಕೂಡ ಈ ಸೀರಿಯಲ್​ ಅನ್ನ ಚೆನ್ನಾಗಿಯೇ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ತುಂಬಾ ಸಂತೋಷದಲ್ಲಿಯೇ ಶಿಲ್ಪಾ ಲದ್ದಿಮಠ ಇದ್ದಾರೆ.


Razia-Ram Serial Actress Shilpa talk about her role
ರಜಿಯಾ ರಾಮ್ ಶಿಲ್ಪಾ ಅಭಿನಯದ ಮೊದಲ ಸೀರಿಯಲ್​


ರಜಿಯಾ ರಾಮ್ 100 ಸಂಚಿಕೆ ದಾಟಿದೆ
ರಜಿಯಾ ರಾಮ್ ಸೀರಿಯಲ್ ಈಗಾಗಲೇ 100 ಸಂಚಿಕೆ ದಾಟಿ ಹೋಗಿದೆ. ಅಷ್ಟೇ ಯಶಸ್ವಿಯಾಗಿಯೇ ಮುನ್ನುಗ್ಗುತ್ತಿರೋ ಈ ಸೀರಿಯಲ್​ ನಲ್ಲಿ ರಜಿಯಾ ಪಾತ್ರವು ಹೆಚ್ಚು ಸೆಳೆಯುತ್ತಲೇ ಇದೆ. ಜನ ಕೂಡ ಈ ಪಾತ್ರದ ಬಗ್ಗೆ ಮಾತನಾಡುತ್ತಾರೆ. ರಜಿಯಾ ಪಾತ್ರದ ಮಾತಿನ ಶೈಲಿಯನ್ನು ಮೆಚ್ಚುತ್ತಿದ್ದಾರೆ.


ರಜಿಯಾ ಪಾತ್ರಧಾರಿ ಶಿಲ್ಪಾ ಸಿನಿಮಾ ಮತ್ತು ಸೀರಿಯಲ್ ಹೀಗೆ ಎರಡನ್ನS ನಿಭಾಯಿಸುತ್ತಿದ್ದಾರೆ. ಸೀರಿಯಲ್​ ಗೆ ಬರೋ ಮುಂಚೆ ಬಿಂದಾಸ್ ಗೂಗ್ಲಿ ಸಿನಿಮಾ ಮಾಡಿದ್ದಾರೆ. ಕನ್ನಡತಿ ಸೀರಿಯಲ್ ನಟ ಕಿರಣ್ ರಾಜ್ ಅಭಿನಯದ ಚತುಸ್ಪಥ ಚಿತ್ರವನ್ನೂ ಮಾಡುತ್ತಿದ್ದಾರೆ.


ಇದನ್ನೂ ಓದಿ:Spooky College: ದೆವ್ವದ ಚಿತ್ರದಲ್ಲಿ ಸುಂದರಿಯರ ಅಟ್ಟಹಾಸ! ಆ ಕಾಲೇಜಿನಲ್ಲಿ ಕೇಳಿ ಬರ್ತಿದೆ ಮೆಲ್ಲುಸಿರೆ ಸವಿಗಾನ!


ನವರಸ ನಾಯಕ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಶಿಲ್ಪಾ ಲದ್ದಿಮಠ ಪ್ರಮುಖಪಾತ್ರವನ್ನೇ ಮಾಡಿದ್ದಾರೆ. ಇದರ ಹೊರತಾಗಿ ಶಿಲ್ಪಾ ಲದ್ದಿಮಠ ಒಬ್ಬ ಲಾಯರ್ ಕೂಡ ಹೌದು. ಸಿನಿಮಾ-ಸೀರಿಯಲ್​​ಗೆ ಬರುವ ಮುಂಚೆ ಬೆಂಗಳೂರು ಹೈಕೋರ್ಟ್​ನಲ್ಲಿ ಲಾಯರ್ ಆಗಿ ಪ್ರ್ಯಾಕ್ಟೀಸ್ ಕೂಡ ಮಾಡಿದ್ದಾರೆ


ಇನ್ನುಳಿದಂತೆ ಸದ್ಯ ರಜಿಯಾ ರಾಮ್ ಸೀರಿಯಲ್ ಮೂಲಕ ಎಲ್ಲರ ಮನೆ-ಮನದಲ್ಲೂ ಶಿಲ್ಪಾ ಜಾಗ ಮಾಡಿಕೊಂಡಿದ್ದಾರೆ. ರಜಿಯಾ ಆಗಿ ಅಷ್ಟೇ ಅಲ್ಲದೇ ಜಾನಕಿಯಾಗಿಯೂ ಈಗ ಎಲ್ಲರ ಹೃದಯವನ್ನ ಗೆದ್ದುಬಿಟ್ಟಿದ್ದಾರೆ.

First published: