ರಂಗಿತರಂಗ, ರಾಜರಥ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ಹಾಗೂ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ. ಕೊರೋನಾ ಲಾಕ್ಡೌನ್ ಕಾಟ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಸಿನಿಮಾ ರಿಲೀಸ್ ಆಗಿ ಪ್ರೇಕ್ಷಕರ ಮುಂದಿರುತ್ತಿತ್ತು. ಆದರೆ ಕೊರೋನಾ ಲಾಕ್ಡೌನ್ ಸಡಿಲಗೊಂಡ ನಡುವೆಯೇ ಸಿನಿಮಾದ ಚಿತ್ರೀಕರಣವನ್ನು ಮುಗಿಸಿರುವ ಚಿತ್ರತಂಡ, ಈಗಾಗಲೇ ಸಿನಿಮಾದ ರಿಲೀಸ್ ದಿನಾಂಕ ಪ್ರಕಟಿಸಿದೆ. ಇನ್ನುಕೊರೋನಾ ಮೊದಲ ಅಲೆಯ ವೇಳೆ ಹೈದರಾಬಾದಿಗೆ ತೆರಳಿ , ಅಲ್ಲಿ ಸಿನಿಮಾದ ಸೆಟ್ ನಿರ್ಮಿಸಿ ಚಿತ್ರೀಕರಣ ಮಾಡಿತ್ತು. ಅಲ್ಲದೆ ಕನ್ನಡದ ತಂತ್ರಜ್ಞರು ಹಾಗೂ ಸಿನಿ ಕಾರ್ಮಿಕರನ್ನೇ ಹೈದರಾಬಾದಿಗೆ ಕರೆದುಕೊಂಡು ಹೋಗಿತ್ತು ಈ ಚಿತ್ರತಂಡ. ಆಗಾಗ ಈ ಸಿನಿಮಾ ಕುರಿತಾ ಅಪ್ಡೇಟ್ ಕೊಡುತ್ತಿದ್ದ ಕಿಚ್ಚ ಸುದೀಪ್ , ಸಾಕಷ್ಟು ವಿಡಿಯೋ ತುಣುಕುಗಳನ್ನೂ ಹಂಚಿಕೊಂಡಿದ್ದಾರೆ.
ನಟ ಹಾಗೂ ಗಾಯಕ ರವಿಶಂಕರ್ ಗೌಡ ಇನ್ನೂ ರಿಲೀಸ್ ಆಗದ ವಿಕ್ರಾಂತ್ ರೋಣ ಸಿನಿಮಾವನ್ನು ನೋಡಿದ್ದು, ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅದು ಹೇಗೆ ಸಾಧ್ಯ ಅಂತೀರಾ..? ರವಿಶಂಕರ್ ಗೌಡ ಸಿನಿಮಾಗೆ ಡಬ್ಬಿಂಗ್ ಮಾಡಲು ಹೋದಾಗ ಸಿನಿಮಾ ವೀಕ್ಷಿಸಿದ್ದಾರೆ. ಡಬ್ಬಿಂಗ್ ಮುಗಿಸಿರುವ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ವಿಕ್ರಾಂತ್ ರೋಣ ಡಬ್ಬಿಂಗ್ ಮಾಡಿದೆ. ಅಬ್ಬಾ!! ಸಿನಿಮಾ ಪ್ರಾರಂಭವಾದಗಿನಿಂದ ಕೊನೆಯವರೆಗೂ ಸೀಟಿನಲ್ಲಿ ಒರಗಿಕೊಳ್ಳಲು ಸಾಧ್ಯವಿಲ್ಲ. ಕುತೂಹಲದ ಮಹಾಪೂರ ..!
ಇಡಿ ಸಿನಿಮಾ ನೋಡ್ತಾಯಿದ್ದರೆ ಜೀವ ನಡುಗುತ್ತೆ. ಗೆಳೆಯ ದೀಪುವಿನ ಅಭಿನಯಕ್ಕೆ ಮನಸೋಲದವರಿಲ್ಲಾ..! ಹೊಸ ಕಲಾವಿದರದು ಅಚ್ಚುಕಟ್ಟಾದ ಅಭಿನಯ ಮಾಡಿದ್ದಾರೆ.
ನಿರ್ದೇಶಕ ಅನೂಪ್ ಬಂಡಾರಿ ಹಾಗೂ ಜಾಕ್ ಮಂಜು ಅವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ ರವಿಶಂಕರ್ ಗೌಡ.
ಇದನ್ನೂ ಓದಿ: Yami Gautam: ಅಮ್ಮನ 33 ವರ್ಷದ ಹಳೇ ಸೀರೆಯುಟ್ಟು ಸಪ್ತಪದಿ ತುಳಿದ ನಟಿ ಯಾಮಿ ಗೌತಮ್..!
ಸಿನಿಮಾದ ಹೆಸರು ಬದಲಿಸಿದ ಚಿತ್ರತಂಡ
ಈ ಸಿನಿಮಾಗೆ ಈ ಹಿಂದೆ ಫ್ಯಾಂಟಮ್ ಎಂದು ಟೈಟಲ್ ಕೊಡಲಾಗಿತ್ತು. ಆದರೆ ನಂತರದಲ್ಲಿ ಸಿನಿಮಾದಲ್ಲಿ ಸುದೀಪ್ ಅವರ ಪಾತ್ರಕ್ಕೆ ಇಡಲಾಗಿದ್ದ ವಿಕ್ರಾಂತ್ ರೋಣ ಹೆಸರನ್ನೇ ಸಿನಿಮಾಗೆ ಶೀರ್ಷಿಕೆಯಾಗಿ ಇಡಲಾಯಿತ್ತು. ದುಬೈನಲ್ಲಿರುವ ಭುರ್ಜ್ ಖಲೀಫ ಕಟ್ಟಡದ ಮೇಲೆ ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡಲಾಗಿತ್ತು. ಇದರಿಂದಾಗಿ ಸಿನಿಮಾದ ಮೇಲಿದ್ದ ಕುತೂಹಲ ಪ್ರೇಕ್ಷಕರಲ್ಲಿ ಮತ್ತಷ್ಟು ಹೆಚ್ಚಾಗಿತ್ತು.
ಆಗಸ್ಟ್ 19ರಂದು ಭಾರತದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾ ತೆರೆ ಕಾಣಲಿದೆ ಎಂದು ನಟ ಕಿಚ್ಚ ಸುದೀಪ್ ಟ್ವಿಟ್ಟರ್ ಮೂಲಕ ಈ ಹಿಂದೆ ಹಂಚಿಕೊಂಡಿದ್ದರು. ಈ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿ, ತಮಿಳು, ಮಲೆಯಾಳಂ ಸೇರಿದಂತೆ ಒಟ್ಟು 6 ಭಾಷೆಗಳಲ್ಲಿ ತೆರೆಗೆ ಬರಲಿದೆ.
ಇದನ್ನೂ ಓದಿ: Sonu Sood: ಸೋನು ಸೂದ್ರನ್ನು ಭೇಟಿಯಾಗಲು ಹೈದರಾಬಾದಿನಿಂದ ಮುಂಬೈಗೆ ಬರಿಗಾಲಿನಲ್ಲಿ ನಡೆದು ಬಂದ ಅಭಿಮಾನಿ
ವಿಕ್ರಾಂತ್ ರೋಣ ಸಿನಿಮಾದ ಜೊತೆಗೆ ಕೋಟಿಗೊಬ್ಬ 3 ಸಿನಿಮಾ ಕೂಡ ತೆರೆಗೆ ಬರಲು ಸಿದ್ಧವಾಗಿದೆ. ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟ ಸುದೀಪ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದರು. ಜಾಕ್ ಮಂಜು ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ ಸೇರಿದಂತೆ ಹಲವು ನಟರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ
ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ