ಸಿನಿಮಾ(Movie) ಬಿಡುಗಡೆಗೂ ಮುನ್ನ, ಬಿಡುಗಡೆಯಾದ ಬಳಿಕ ಎಲ್ಲರ ಬಾಯಲ್ಲೂ ‘ಪುಷ್ಪ’(Pushpa) ಸಿನಿಮಾದ ಮಾತೇ. ಎಲ್ಲಿ ನೋಡಿದರು ‘ಪುಷ್ಪ’ ‘ತಗ್ಗದೆ ಲೇ’ ಈ ಡೈಲಾಗ್ಗಳೆ. ಇದರಿಂದ ಇತರೆ ಸೆಲೆಬ್ರೆಟಿಗಳು(Celebrities) ಕೂಡ ದೂರ ಉಳಿದಿಲ್ಲ. ಅವರು ಕೂಡ ಅಲ್ಲು ಅರ್ಜುನ್(Allu Arjun) ಅವರ ಶೈಲಿಯಲ್ಲೇ ಡೈಲಾಗ್ ಹೊಡೆದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡುತ್ತಿದ್ದಾರೆ. ಭಾರತ ಚಿತ್ರರಂಗದ, ಅದರಲ್ಲಿಯೂ ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗದ ಚಿತ್ರಗಳ ಹಾಡುಗಳಿಗೆ ಮತ್ತು ಸಂಭಾಷಣೆಗಳಿಗೆ ಖ್ಯಾತ ಕ್ರಿಕೆಟಿಗರು (Cricketers) ವಿಡಿಯೋ ಮಾಡಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಳ್ಳುವುದು ಇತ್ತೀಚೆಗಿನ ಟ್ರೆಂಡ್(Trend) ಆಗಿಬಿಟ್ಟಿದೆ. ಅಲ್ಲು ಅರ್ಜುನ್ (Allu Arjun) ಸದ್ಯ ‘ಪುಷ್ಪ: ದಿ ರೈಸ್’ (Pushpa: The Rise) ಯಶಸ್ಸಿನಲ್ಲಿದ್ದಾರೆ. ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿರುವ ಚಿತ್ರ ಹಿಂದಿಯಲ್ಲೇ ಸುಮಾರು ₹ 80 ಕೋಟಿಗೂ ಅಧಿಕ ಮೊತ್ತ ಬಾಚಿಕೊಂಡಿದೆ. ಇದೀಗ ಅಖಾಡಕ್ಕೆ ಹೊಸ ‘ಪುಷ್ಪ’ ಗ್ರಾಂಡ್ ಎಂಟ್ರಿ ನೀಡಿದ್ದಾನೆ. ಹೌದು, ಭಾರತ ಕ್ರಿಕೆಟ್ ತಂಡದ ತಾರಾ ಆಟಗಾರ ರವೀಂದ್ರ ಜಡೇಜಾ (Ravindra Jadeja) ‘ಪುಷ್ಪ’ ಲುಕ್ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಸೇಮ್ ಟು ಸೇಮ್ ಅಲ್ಲು ಅವರ ತಮ್ಮನಂತೆ ‘ಪುಷ್ಪ’ ಲುಕ್ನಲ್ಲಿ ರವೀಂದ್ರಾ ಜಡೇಜಾ ಕಾಣಿಸಿಕೊಂಡಿದ್ದರು. ಈ ಫೋಟೋ ಕಂಡು ಸ್ವತ ಅಲ್ಲು ಅರ್ಜುನ್ ಶಾಕ್ ಆಗಿದ್ದಾರೆ.
‘ಪುಷ್ಪ’ ಅವತಾರದಲ್ಲಿ ಮಿಂಚಿದ ರವೀಂದ್ರ ಜಡೇಜಾ!
ರವೀಂದ್ರ ಜಡೇಜಾ ಪುಷ್ಪ ಚಿತ್ರದ ಮತ್ತೊಂದು ಲುಕ್ ಪ್ರಯತ್ನವನ್ನು ಮಾಡಿದ್ದು, ಚಿತ್ರದಲ್ಲಿ ಅಲ್ಲು ಅರ್ಜುನ್ ಧೂಮಪಾನ ಮಾಡುವ ರೀತಿಯೇ ತಾವೂ ಕೂಡ ಕಾಣಿಸಿಕೊಂಡಿರುವ ಚಿತ್ರವೊಂದನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲು ಅರ್ಜುನ್ ಹಾಗೂ ತನ್ನ ಚಿತ್ರವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ರವೀಂದ್ರ ಜಡೇಜಾ ತಮ್ಮ ಚಿತ್ರವನ್ನು ಕೇವಲ ಮನರಂಜನೆಗಾಗಿ ಮಾಡಲಾಗಿದ್ದು ನಿಜವಾದದ್ದಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹಾಗೂ ಸಿಗರೇಟ್, ಬೀಡಿ ಮತ್ತು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು ಕ್ಯಾನ್ಸರ್ ಸಂಭವಿಸುತ್ತದೆ, ದಯವಿಟ್ಟು ಅದನ್ನು ಸೇವಿಸಬೇಡಿ ಎಂದು ಬರೆದು ಕೊಳ್ಳುವುದರ ಮೂಲಕ ಸಂದೇಶವನ್ನು ಕೂಡ ನೀಡಿದ್ದಾರೆ. ಅಲ್ಲು ಅರ್ಜುನ್ ಜಡೇಜಾ ಪೋಸ್ಟ್ಗೆ ‘ತಗ್ಗೆದೆಲೆ’ ಎಂದು ಬರೆದು ‘ಫೈರ್’ ಇಮೋಜಿಗಳನ್ನು ಹಂಚಿಕೊಂಡಿದ್ದಾರೆ.
Pushpa ante Flower anukunnava
Fireuuuu🔥
P.S- Smoking and consumption of tobacco is injurious to health. I do not endorse any form of smoking and the beedi used in the image is for graphic purposes only. pic.twitter.com/yykAlGLLwb
— Ravindrasinh jadeja (@imjadeja) January 12, 2022
ಇದನ್ನು ಓದಿ : ಓ ಮೈ ಗಾಡ್.. ಪುಷ್ಪ ಚಿತ್ರದ ಹಾಡಿಗೆ ಸ್ಪೈಡರ್ ಮ್ಯಾನ್ ಮಸ್ತ್ ಡ್ಯಾನ್ಸ್: ವಿಡಿಯೋ ಸಿಕ್ಕಾಪಟ್ಟೆ ವೈರಲ್!
‘ತಗ್ಗೆದೆ ಲೇ’ ಡೈಲಾಗ್ ಹೊಡೆದಿದ್ದ ರವೀಂದ್ರಾ ಜಡೇಜಾ!
ಪುಷ್ಪ ಚಿತ್ರದ 'ತಗ್ಗೆದೆ ಲೇ' ಡೈಲಾಗಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಡೇವಿಡ್ ವಾರ್ನರ್ ವಿಡಿಯೋ ಮಾಡುವ ಮೂಲಕ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ಹಾಗೂ ಇದಕ್ಕೂ ಮುನ್ನ ಇದೇ ಸಂಭಾಷಣೆಗೆ ಭಾರತದ ಪ್ರಮುಖ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅಲ್ಲು ಅರ್ಜುನ್ ರೀತಿಯೇ ರವೀಂದ್ರ ಜಡೇಜಾ ಕೂಡ ಸದ್ಯ ಗಡ್ಡಧಾರಿಯಾಗಿದ್ದು ಆ ಸಂಭಾಷಣೆ ರವೀಂದ್ರ ಜಡೇಜಾಗೆ ಅಚ್ಚುಕಟ್ಟಾಗಿ ಹೊಂದಿಕೊಂಡಿತ್ತು. ಹಾಗೂ ರವೀಂದ್ರ ಜಡೇಜಾರ ಆ ವಿಡಿಯೋ ಸಾಮಾಜಿಕ ಜಾಲ ತಾಣದ ತುಂಬಾ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
View this post on Instagram
ಇದನ್ನು ಓದಿ: ಅಲೆಲೆಲೇ...ದೇವಸ್ಥಾನದಲ್ಲೂ `ಪುಷ್ಪ’ ಸಿನಿಮಾದ ಸಾಮಿ ಸಾಮಿ ಹಾಡು.. ವಿಡಿಯೋ ಸಿಕ್ಕಾಪಟ್ಟೆ ವೈರಲ್!
ಈ ಟ್ರೆಂಡ್ ಸೃಷ್ಟಿಸಿದ್ದೆ ಡೇವಿಡ್ ವಾರ್ನರ್!
ಈ ಟ್ರೆಂಡ್ ಮೊದಲಿಗೆ ಹುಟ್ಟುಹಾಕಿದ್ದು ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್. ಮೊದಲಿಗೆ ತೆಲುಗು ಚಿತ್ರಗಳ ಸಂಭಾಷಣೆ ಹಾಗೂ ಹಾಡುಗಳಿಗೆ ವಿಡಿಯೋಗಳನ್ನು ಮಾಡುತ್ತಿದ್ದ ಡೇವಿಡ್ ವಾರ್ನರ್ ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ಅಲಾ ವೈಕುಂಠಪುರಮುಲೋ ಚಿತ್ರದ ಬುಟ್ಟ ಬೊಮ್ಮ ಹಾಡಿಗೆ ತನ್ನ ಪತ್ನಿ ಜತೆ ನೃತ್ಯವನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದರು. ಈ ವಿಡಿಯೋಗಳು ಸಾಕಷ್ಟು ವೈರಲ್ ಆಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ