Ravichandran: ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಅಡಿಪಾಯ ಹಾಕಿದ್ದೆ ನಾನು: ಕೆಜಿಎಫ್ ಯಶಸ್ಸಿನ ಬಗ್ಗೆ ರವಿಚಂದ್ರನ್ ಹೇಳಿಕೆ

ಎಲ್ಲಾ ಪ್ಯಾನ್ ಇಂಡಿಯಾ ಸಿನೆಮಾಗಳು ಬರೀ ತಮ್ಮ ರಾಜ್ಯದಲ್ಲಿ ಅಲ್ಲದೆ ಬಹುತೇಕವಾಗಿ ಎಲ್ಲಾ ರಾಜ್ಯದಲ್ಲೂ ಜೋರಾಗಿಯೇ ಹಣ ಗಳಿಸಿದೆ ಎಂದು ಹೇಳಬಹುದು. ಪ್ಯಾನ್ ಇಂಡಿಯಾ ಸಿನೆಮಾಗಳಿಗೆ ಅಡಿಪಾಯ ಹಾಕಿದ್ದೆ ರವಿಚಂದ್ರನ್ ಅವರಂತೆ.

ಪ್ಯಾನ್ ಇಂಡಿಯಾ ಸಿನಿಮಾ

ಪ್ಯಾನ್ ಇಂಡಿಯಾ ಸಿನಿಮಾ

  • Share this:
ಮೊದಲೆಲ್ಲಾ ಬಹುತೇಕ ಚಲನಚಿತ್ರಗಳು (Movies) ತಮ್ಮ ಭಾಷೆಗೆ (Language) ಅಷ್ಟೇ ಸೀಮಿತವಾಗಿರುತ್ತಿದ್ದವು, ಆದರೆ ಇತ್ತೀಚಿನ ವರ್ಷಗಳಲ್ಲಿ ಆ ಟ್ರೆಂಡ್ (Trend) ಪೂರ್ತಿಯಾಗಿ ಬದಲಾಗಿದ್ದು, ದೊಡ್ಡ ನಟರ ಬಿಗ್ ಬಜೆಟ್ (Big Budget) ಚಿತ್ರಗಳನ್ನು ಕೇವಲ ಒಂದೇ ಭಾಷೆಗೆ ಸೀಮಿತವಾಗಿರಿಸದೆ ಅನೇಕ ಭಾಷೆಗಳಲ್ಲಿ ಅದನ್ನು ಡಬ್ (Dub) ಮಾಡುತ್ತಿದ್ದಾರೆ. ಹೀಗಾಗಿ ಒಳ್ಳೆಯ ಮತ್ತು ಬಿಗ್ ಬಜೆಟ್ ಚಿತ್ರಗಳು ಬಹುತೇಕವಾಗಿ ಎಲ್ಲಾ ರಾಜ್ಯದ ಜನರಿಗೆ ನೋಡಲು ಸಿಗುತ್ತಿದೆ. ಈ ಪ್ಯಾನ್ ಇಂಡಿಯಾ (Pan India) ಸಿನೆಮಾ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ತುಂಬಾನೇ ಕಂಡು ಬರುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಪ್ಯಾನ್ ಇಂಡಿಯಾ ಸಿನೆಮಾಗಳಿಗೆ ಅಡಿಪಾಯ ಹಾಕಿದ್ದೆ ನಾನು
ಇತ್ತೀಚೆಗೆ ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ಚಿತ್ರ ಪುಷ್ಪಾ: ದಿ ರೈಸ್ ಆಗಿರಬಹುದು ಅಥವಾ ತೆಲುಗಿನ ಜನಪ್ರಿಯ ನಿರ್ದೇಶಕರಾದ ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರ ಆಗಿರಬಹುದು ಮತ್ತು ಪ್ರಶಾಂತ್ ನೀಲ್ ಅವರ ಕೆಜಿಎಫ್ ಚಾಪ್ಟರ್ 2 ಚಿತ್ರ ಆಗಿರಬಹುದು. ಈ ಎಲ್ಲಾ ಪ್ಯಾನ್ ಇಂಡಿಯಾ ಸಿನೆಮಾಗಳು ಬರೀ ತಮ್ಮ ರಾಜ್ಯದಲ್ಲಿ ಅಲ್ಲದೆ ಬಹುತೇಕವಾಗಿ ಎಲ್ಲಾ ರಾಜ್ಯದಲ್ಲೂ ಜೋರಾಗಿಯೇ ಹಣ ಗಳಿಸಿದೆ ಎಂದು ಹೇಳಬಹುದು.

ಇಲ್ಲೊಬ್ಬ ಕನ್ನಡ ಚಿತ್ರರಂಗದ ಹಿರಿಯ ನಟ ಈ ಪ್ಯಾನ್ ಇಂಡಿಯಾ ಸಿನೆಮಾಗಳ ಬಗ್ಗೆ ಏನೆಂದು ಹೇಳಿದ್ದಾರೆ ನೋಡಿ ಮತ್ತು ಇದಕ್ಕೆ ಅಡಿಪಾಯವನ್ನು ಹಾಕಿದ್ದೇ ಅವರಂತೆ ಎಂದು ಹೇಳಿಕೊಂಡಿದ್ದಾರೆ.

ಹೌದು.. ಆ ನಟನ ಹೆಸರು ನೀವು ಕೇಳಿದರೆ ಸತ್ಯವಾದ ಮಾತು ಅಂತ ನೀವು ಹೇಳಬಹುದು. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಇತ್ತೀಚೆಗೆ ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರದ ಯಶಸ್ಸನ್ನು ಬಾಯಿ ತುಂಬಾ ಹೊಗಳಿ, ಕೊನೆಗೆ ಈ ಪ್ಯಾನ್ ಇಂಡಿಯಾ ಪರಿಕಲ್ಪನೆಗೆ ಆರಂಭದಲ್ಲಿ ಅವರೇ ಅಡಿಪಾಯವನ್ನು ಹಾಕಿದ್ದು ಎಂದು ಹೇಳಿದ್ದಾರೆ.

ಇದನ್ನೂ ಓದಿ:  Children name: ಆಗ್ಲೇ ತಮ್ಮ ಮಕ್ಕಳಿಗೆ ಏನು ಹೆಸರಿಡೋದು ಅಂತ ದೊಡ್ಡ ಲಿಸ್ಟ್ ರೆಡಿ ಇಟ್ಕೊಂಡಿದಾರೆ ರಣ್ವೀರ್ ಸಿಂಗ್! ಯಾವಾಗ ಸಿಹಿಸುದ್ದಿ?

ಇತ್ತೀಚೆಗೆ, ಕೆಜಿಎಫ್ ಚಾಪ್ಟರ್ 2 ದೇಶದ ಎಲ್ಲಾ ಜನರನ್ನು ಆಕರ್ಷಿಸಿದೆ, ಗಲ್ಲಾಪೆಟ್ಟಿಗೆಯಲ್ಲಿ ತನ್ನ ವ್ಯವಹಾರದಲ್ಲಿ ಅಸಾಧಾರಣ ಬೆಳವಣಿಗೆಯನ್ನು ದಾಖಲಿಸಿದೆ. ತನ್ನ ಪ್ರಥಮ ಪ್ರದರ್ಶನದ ಮೂರನೇ ವಾರದಲ್ಲಿ, ಆಕ್ಷನ್-ಥ್ರಿಲ್ಲರ್ ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 1000 ಕೋಟಿ ರೂಪಾಯಿಗಳ ಕ್ಲಬ್ ಅನ್ನು ಪ್ರವೇಶಿಸುವ ಮೂಲಕ ಹಲವಾರು ದಾಖಲೆಗಳನ್ನು ಮುರಿದಿದೆ.

ಕೆಜಿಎಫ್ ಚಾಪ್ಟರ್ 2 ಚಿತ್ರದ ಸಾಧನೆ ಕನ್ನಡ ಚಲನಚಿತ್ರೋದ್ಯಮದ ಗೆಲುವು
“ಪ್ಯಾನ್ ಇಂಡಿಯಾ ಪರಿಕಲ್ಪನೆಯನ್ನು ಆರಂಭದಲ್ಲಿ ತಾವು ಸಾಧಿಸಿದ್ದಾಗಿ ಹೇಳಿ ಕೊಂಡಿರುವ ನಟ ರವಿಚಂದ್ರನ್ ಕೆಜಿಎಫ್ ಚಾಪ್ಟರ್ 2 ಚಿತ್ರದ ಸಾಧನೆಯನ್ನು ಕನ್ನಡ ಚಲನಚಿತ್ರೋದ್ಯಮದ ಗೆಲುವು ಎಂದು ಹೇಳಿದರು.

"ನಮ್ಮ ಕನ್ನಡ ಚಿತ್ರರಂಗವು ಯಾವ ಚಿತ್ರರಂಗಕ್ಕಿಂತಲೂ ಕಡಿಮೆಯಿಲ್ಲ ಎಂದು ನಾನು ಯಾವಾಗಲೂ ಹೇಳುತ್ತೇನೆ. ಇಂದು ಕೆಜಿಎಫ್ ಚಿತ್ರವು ಎಲ್ಲಾ ಗಲ್ಲಾಪೆಟ್ಟಿಗೆ ದಾಖಲೆಗಳನ್ನು ಮುರಿಯುವ ಮೂಲಕ ಆ ಮಾತನ್ನು ಸತ್ಯ ಎಂದು ಸಾಬೀತು ಪಡಿಸಿದೆ. ಸಿನಿಮಾದ ಬಗ್ಗೆ ನಮಗೆ ಹೆಮ್ಮೆ ಇದೆ" ಎಂದು ರವಿ ಹೇಳಿದರು.

ಕನ್ನಡ ಚಿತ್ರರಂಗದ ಪ್ಯಾನ್ ಇಂಡಿಯಾ ಯಶಸ್ಸಿನ ಬಗ್ಗೆ ಮಾತನಾಡಿದ 90ರ ದಶಕದ ನಾಯಕ ನಟ ಅವರು “ಪ್ಯಾನ್ ಇಂಡಿಯಾ ಕನಸನ್ನು ಯಾರು ಪ್ರಾರಂಭಿಸಿದರು ಎಂಬುದನ್ನು ನೀವು ನೆನಪಿಸಿಕೊಳ್ಳಬೇಕು. 90ರ ದಶಕದಲ್ಲಿ ನಾನು ಅಡಿಪಾಯ ಹಾಕಿದ್ದೇನೆ. ಆದರೆ ಈ ಗೆಲುವು ಇಂದು ಸಾಕ್ಷಿಯಾಗಿದೆ" ಎಂದು ಹೇಳಿದರು.

ಇದನ್ನೂ ಓದಿ:  Priayanka Chopra: 100 ದಿನ ಆಸ್ಪತ್ರೆಯಲ್ಲಿದ್ದು ಮನೆಗೆ ಬಂದ ಪ್ರಿಯಾಂಕಾ ಮಗು! ಫೋಟೋ ಶೇರ್​ ಮಾಡಿ ಹಿಂಗದ್ರು ನಿಕ್​ ಜೋಡಿ

“ಕೆಜಿಎಫ್ ಚಿತ್ರವು ಕನ್ನಡ ಚಿತ್ರರಂಗದ ಹೊಸ ಮಾನದಂಡವಾಗಬೇಕು ಮತ್ತು ಮುಂಬರುವ ಚಲನಚಿತ್ರಗಳು ಇದರ ದಾಖಲೆಯನ್ನು ಮುರಿಯಲು ನೋಡಬೇಕು” ಎಂದು ರವಿಚಂದ್ರನ್ ಹೇಳಿದರು. “ಕೆಜಿಎಫ್ ದಾಖಲೆಯನ್ನು ಮುರಿಯುವುದು ಹೇಗೆ ಎಂಬುದನ್ನು ಮುಂದಿನ ಪ್ರತಿಯೊಂದು ಚಿತ್ರವು ಕಂಡು ಹಿಡಿಯಬೇಕು. ಅದು ಪ್ರತಿಯೊಬ್ಬ ಚಲನಚಿತ್ರ ತಯಾರಕರ ಮೊದಲ ಆದ್ಯತೆಯಾಗಿರಬೇಕು” ಎಂದು ನಟ ಹೇಳಿದರು.

ಮೊದಲ ಪ್ಯಾನ್ ಇಂಡಿಯಾ ಚಿತ್ರ
1991 ರಲ್ಲಿ ಕನ್ನಡದಲ್ಲಿ ಮೊಟ್ಟ ಮೊದಲ ಪ್ಯಾನ್ ಇಂಡಿಯಾ ಚಲನಚಿತ್ರವನ್ನು ನಿರ್ಮಿಸಲಾಯಿತು. ರವಿಚಂದ್ರನ್ ನಟನೆಯ ‘ಶಾಂತಿ ಕ್ರಾಂತಿ’ ಆಕ್ಷನ್ ಚಿತ್ರವಾಗಿದ್ದು, ರವಿಚಂದ್ರನ್ ಅವರೇ ಖುದ್ದು ನಿರ್ದೇಶಿಸಿದ್ದರು. 'ಶಾಂತಿ ಕ್ರಾಂತಿ’ ಭಾರತದ ಮೊದಲ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಅಂತಹ ಸಿನಿಮಾವನ್ನು ಮಾಡಲು ಯಾರಿಂದಲೂ ಸಾಧ್ಯವಿಲ್ಲ.

ಇದನ್ನೂ ಓದಿ: Kaustubha Mani: ಟಾಲಿವುಡ್ ಅಂಗಳದಲ್ಲಿ ಮಿಂಚಲು ತಯಾರಾದ ನನ್ನರಸಿ ರಾಧೆಯ ಇಂಚರಾ

ನಾನು ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ಚಲನಚಿತ್ರಗಳನ್ನು ಒಂದು ಭಾಷೆಯಲ್ಲಿ ಚಿತ್ರೀಕರಿಸಲಾಗುತ್ತದೆ ಮತ್ತು ನಂತರ ಇತರ ಭಾಷೆಗಳಿಗೆ ಡಬ್ ಮಾಡಲಾಗುತ್ತದೆ. ಆದರೆ ಆ ದಿನಗಳಲ್ಲಿ ರವಿಚಂದ್ರನ್ ಈ ಚಿತ್ರವನ್ನು ಏಕಕಾಲದಲ್ಲಿ ನಾಲ್ಕು ಭಾಷೆಗಳಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದರು" ಎಂದು ಅವರು ಹೇಳಿಕೊಂಡರು.
Published by:Ashwini Prabhu
First published: