• Home
 • »
 • News
 • »
 • entertainment
 • »
 • ನನಗಿಂತ ನನ್ನ ಮಗ ಚೆನ್ನಾಗಿ ಕಿಸ್ ಮಾಡ್ತಾನೆ..!

ನನಗಿಂತ ನನ್ನ ಮಗ ಚೆನ್ನಾಗಿ ಕಿಸ್ ಮಾಡ್ತಾನೆ..!

manoranjan

manoranjan

ಜೇನುಶ್ರೀ ತನುಶ್ರೀ ಪ್ರೊಡಕ್ಷನ್​ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ಮನು ಕಲ್ಯಾಡಿ ನಿರ್ದೇಶಿಸಿದ್ದಾರೆ. ಇನ್ನು ಮನುರಂಜನ್ ಜತೆ ಹಾಟ್ ಅ್ಯಂಡ್ ಬ್ಯೂಟಿಯಾಗಿ ಪಾದರ್ಪಣೆ ಮಾಡುತ್ತಿರುವುದು ಕೀರ್ತಿ ಕಲಕೇರಿ. ತಮ್ಮ ಚೊಚ್ಚಲ ಚಿತ್ರದಲ್ಲೇ ಮೋಡಿ ಮಾಡುವ ಎಲ್ಲಾ ಸೂಚನೆಗಳನ್ನು ನವನಾಯಕಿ ಟೀಸರ್ ಮೂಲಕ ತೋರಿಸಿದ್ದಾರೆ.

ಮುಂದೆ ಓದಿ ...
 • Share this:

  ಡ್ಯಾಮೇಜ್ ಅನ್ನೋದು 20 ರಲ್ಲೂ ಆಗುತ್ತೆ, 70 ರಲ್ಲೂ ಆಗುತ್ತೆ. ಆದರೆ ಇವನಿಗೆ ಆಗಿರೋ ಡ್ಯಾಮೇಜ್ ಕೈ-ಕಾಲಿಗೆ ಅಲ್ಲ. ಹೃದಯಕ್ಕೆ' ಇದು ಮನುರಂಜನ್ ಅಭಿನಯದ ಪ್ರಾರಂಭ ಚಿತ್ರದ ಡೈಲಾಗ್. ಈ ಹಿಂದೆ ಟೀಸರ್​ನಲ್ಲಿ ಒಂದಷ್ಟು ಝಲಕ್ ತೋರಿಸಿದ್ದ ಚಿತ್ರತಂಡ, ಈಗ ಮೊದಲ ಹಾಡನ್ನು ಬಿಡುಗಡೆ ಮಾಡಿದೆ.


  ಈ ಆಡಿಯೋ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದು ಕ್ರೇಜಿಸ್ಟಾರ್ ರವಿಚಂದ್ರನ್. ಈ ವೇಳೆ ತಮ್ಮ ಎಂದಿನ ದಾಟಿಯಲ್ಲೇ ಫಿಲ್ಟರ್​ ಇಲ್ಲದೆ ಮಾತು ಪ್ರಾರಂಭಿಸಿದ ಪ್ರೇಮಲೋಕದ ಸೃಷ್ಟಿಕರ್ತ, ನನಗಿಂತ ನನ್ನ ಮಗ ಚೆನ್ನಾಗಿ ಕಿಸ್ ಮಾಡ್ತಾನೆ. ಹಾಗೆಯೇ ಚೆನ್ನಾಗಿಯೇ ಸಿಗರೇಟ್ ಕೂಡ ಸೇದ್ತಾನೆ. ನಾನು ಕೂಡ ಇಷ್ಟು ಚೆನ್ನಾಗಿ ಮೂಡಿರಲಿಲ್ಲ ಎಂದರು.


  ಯಾವುದೇ ಮುಚ್ಚುಮೊರೆ ಇಲ್ಲದೆ ಮಾತನಾಡುವ ರವಿಮಾಮ ಮಾತು ಕೇಳಿ ಪುತ್ರ ಮನುರಂಜನ್ ನಾಚಿಕೆಯಿಂದ ನಗುತ್ತಾ ತಲೆತಗ್ಗಿಸಿದರೆ, ಇತರರಿಂದ ಜೋರಾದ ನಗೆ ಹರಿದುಬಂತು. ಆದರೆ ರವಿಚಂದ್ರನ್ ಇರುವುದೇ ಹಾಗೆ. ಕನ್ನಡ ಚಿತ್ರರಂಗದಲ್ಲಿ ಹಸಿಬಿಸಿ ದೃಶ್ಯಗಳನ್ನು ಶೃಂಗಾರ ಕಾವ್ಯದಂತೆ ಜನರ ಮುಂದಿಟ್ಟ ಮೊದಲ ನಾಯಕ ಎಂಬ ಖ್ಯಾತಿ ಕ್ರೇಜಿಸ್ಟಾರ್​ಗಿದೆ. ಹೀಗಾಗಿಯೇ ನನಗಿಂತಲೂ ಮಗ ಚೆನ್ನಾಗಿ ಮಾಡಿದ್ದಾನೆ ಎಂದು ಓಪನ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ.


  ಪ್ರಜ್ವಲ್ ಪೈ ಸಂಗೀತ ನೀಡಿರುವ ಬರಿ ನೀನೇ.. ಎಂದು ಶುರುವಾಗುವ ಪ್ರಾರಂಭ ಗೀತೆಗೆ ಮಧುರ ಕಂಠವನ್ನು ನೀಡಿದ್ದು ಬಾಲಿವುಡ್ ಸಿಂಗರ್ ಅರ್ಮಾನ್ ಮಲ್ಲಿಕ್. ಸಂತೋಷ್ ನಾಯ್ಕ್ ಸಾಹಿತ್ಯ ಬರೆದಿರುವ ಈ ಲಿರಿಕಲ್ ವಿಡಿಯೋ ಯೂಟ್ಯೂಬ್​ನಲ್ಲಿದ್ದು, ಯುವ ತಂಡದ ಪ್ರಯತ್ನವು ಉತ್ತಮವಾಗಿಯೇ ಮೂಡಿ ಬಂದಿದೆ ಎನ್ನಬಹುದು.  ಹಾಗೆಯೇ ಈ ಹಿಂದೆ ಬಿಡುಗಡೆಯಾಗಿದ್ದ  'ಪ್ರಾರಂಭ' ಚಿತ್ರದ ಟೀಸರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಿನ್ನೆಲೆ ಧ್ವನಿ ನೀಡಿದ್ದರು.  ಈ ವಿಡಿಯೋದಲ್ಲಿ ಮನುರಂಜನ್ ಕೂಡ  ಸಖತ್ ಹಾಟ್ ಆಗಿ ಕಿಸ್ಸಿಂಗ್ ಸೀನ್​ನಲ್ಲಿ ಕಾಣಿಸಿಕೊಂಡಿದ್ದರು. ಇದನ್ನೇ ಪ್ರಸ್ತಾಪಿಸಿ ಕ್ರೇಜಿಸ್ಟಾರ್ ಮಗನ ಚೆನ್ನಾಗಿಯೇ ಮಾಡಿದ್ದಾನೆ ಎಂದು ಕಾಲೆಳೆದಿದ್ದಾರೆ.


  ಜೇನುಶ್ರೀ ತನುಶ್ರೀ ಪ್ರೊಡಕ್ಷನ್​ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ಮನು ಕಲ್ಯಾಡಿ ನಿರ್ದೇಶಿಸಿದ್ದಾರೆ. ಇನ್ನು ಮನುರಂಜನ್ ಜತೆ ಹಾಟ್ ಅ್ಯಂಡ್ ಬ್ಯೂಟಿಯಾಗಿ ಪಾದರ್ಪಣೆ ಮಾಡುತ್ತಿರುವುದು ಕೀರ್ತಿ ಕಲಕೇರಿ. ತಮ್ಮ ಚೊಚ್ಚಲ ಚಿತ್ರದಲ್ಲೇ ಮೋಡಿ ಮಾಡುವ ಎಲ್ಲಾ ಸೂಚನೆಗಳನ್ನು ನವನಾಯಕಿ ಟೀಸರ್ ಮೂಲಕ ತೋರಿಸಿದ್ದಾರೆ.


  ಇನ್ನು ದರ್ಶನ್ ಪಂಚಿಂಗ್ ಡೈಲಾಗ್ ಚಿತ್ರದ ಟೀಸರ್​ಗೆ ಪ್ಲಸ್ ಪಾಯಿಂಟ್ ಆಗಿದ್ದು, ಡೈಲಾಗ್​ಗಳೇ 'ಪ್ರಾರಂಭ' ಚಿತ್ರದ ಮೇಲೆ ಭರವಸೆ ಹುಟ್ಟಿಸುತ್ತಿದೆ. 'ಸಾಹೇಬ' ಮತ್ತು 'ಬೃಹಸ್ಪತಿ' ನಂತರ ಮನುರಂಜನ್ ನಟಿಸುತ್ತಿರುವ 3ನೇ ಚಿತ್ರ ಇದಾಗಿದ್ದು, 'ಪ್ರಾರಂಭ'ದ ಮೂಲಕವೇ ಹಿಟ್ ಲೀಸ್ಟ್ ಪ್ರಾರಂಭಿಸುವ ಇರಾದೆಯಲ್ಲಿದ್ದಾರೆ ಕ್ರೇಜಿಸ್ಟಾರ್ ಪುತ್ರ.

  Published by:zahir
  First published: