• Home
  • »
  • News
  • »
  • entertainment
  • »
  • Ravichandran: ಈ ವಾರ ತೆರೆ ಮೇಲೆ ಬರ್ತಿದ್ದಾರೆ ‘ರವಿಬೋಪಣ್ಣ’; ಕನಸುಗಾರನ ಕನಸಿನ ಟ್ರೈಲರ್​ಗೆ ಫ್ಯಾನ್ಸ್ ಫಿದಾ

Ravichandran: ಈ ವಾರ ತೆರೆ ಮೇಲೆ ಬರ್ತಿದ್ದಾರೆ ‘ರವಿಬೋಪಣ್ಣ’; ಕನಸುಗಾರನ ಕನಸಿನ ಟ್ರೈಲರ್​ಗೆ ಫ್ಯಾನ್ಸ್ ಫಿದಾ

ಈ ವಾರ ತೆರೆ ಮೇಲೆ ಬರ್ತಿದ್ದಾರೆ ರವಿಬೋಪಣ್ಣ

ಈ ವಾರ ತೆರೆ ಮೇಲೆ ಬರ್ತಿದ್ದಾರೆ ರವಿಬೋಪಣ್ಣ

'ರವಿಬೋಪಣ್ಣ' ಸಿನಿಮಾ ಇನ್ವೆಸ್ಟಿಗೇಷನ್ ಥ್ರಿಲ್ಲರ್  ಕಥೆ ಒಳಗೊಂಡಿದೆ. ನಾಯಕಿಯರಾಗಿ ರಾಧಿಕಾ ಕುಮಾರಸ್ವಾಮಿ ಹಾಗೂ ಕಾವ್ಯಾ ಶೆಟ್ಟಿ ಮಿಂಚಿದ್ದಾರೆ. ತೆರೆಮೇಲೆ ಇವರಿಬ್ಬರನ್ನು ಬಹಳ ಸೊಗಸಾಗಿ ತೋರಿಸಿರುವುದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ.

  • Share this:

ಕ್ರೇಜಿಸ್ಟಾರ್‌ ವಿ. ರವಿಚಂದ್ರನ್ (Crazy Star V Ravichanran) ಅಭಿನಯದ ಬಹು ನಿರೀಕ್ಷಿತ ಚಿತ್ರ ‘ರವಿಬೋಪಣ್ಣ’ (Ravi Bopanna) ಈ ವಾರ ರಾಜ್ಯಾದ್ಯಂತ ತೆರೆ ಕಾಣಲಿದೆ.  ರವಿಚಂದ್ರನ್​ ಅವರ ಕನಸಿನ ಚಿತ್ರ ಎಂದೇ ಹೇಳಲಾಗ್ತಿರೋ ಈ ರವಿಬೋಪಣ್ಣ ಚಿತ್ರದ ಟ್ರೈಲರ್​ (Trailer) ಇದೀಗ ಭಾರೀ ಸದ್ದು ಮಾಡ್ತಿದ್ದು, ಬರೋಬ್ಬರಿ 7 ನಿಮಿಷದ (7 Minutes) ಟ್ರೈಲರ್ ಇದಾಗಿದ್ದು, ಟ್ರೈಲರ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾ ನೋಡಲು ಕಾಯುತ್ತಿದ್ದಾರೆ. ರವಿಚಂದ್ರನ್  ಸಿನಿಮಾ ಅಂದ್ರೆ ಅದ್ದೂರಿ ತನ ಇರಲೇಬೇಕು. ಈಶ್ವರಿ ಕಂಬೈನ್ಸ್​ನ (Eshwari Combines) 50ನೇ ಸಿನಿಮಾ ರವಿಬೋಪಣ್ಣ, ಕನಸುಗಾರನ ಕನಸನ್ನು ಸೀಕ್ರೇಟ್​ ಆಗಿ ರಿವೀಲ್ ಮಾಡಿದಂತಿದೆ ಈ ಟ್ರೈಲರ್​ನ ತುಣುಕು ಇದೆ.


3 ವಿಭಿನ್ನ ಶೇಡ್‌ಗಳಲ್ಲಿ ರವಿಚಂದ್ರನ್ ಮಿಂಚಿಂಗ್​


ಟ್ರೈಲರ್ ನೋಡಿದವರಿಗೆ ಸಿನಿಮಾ ವಿಭಿನ್ನವಾಗಿ ಮೂಡಿ  ಬಂದಿದೆ ಅನ್ನೋ ಕಲ್ಪನೆ ಮೂಡೋದು ಗ್ಯಾರೆಂಟಿ. ರವಿಬೋಪಣ್ಣ ಚಿತ್ರದಲ್ಲಿ ರವಿಚಂದ್ರನ್ ಅವರು ಮೂರು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ರವಿಬೋಪಣ್ಣ ಆಗಿ ಈ ವಾರ ತೆರೆಗೆ ಬರ್ತಿರೋ ರವಿಚಂದ್ರನ್​ಗೆ ಗೆಲ್ಲೋ ವಿಶ್ವಾಸ ಮೂಡಿಸಿದೆ ಈ ಟ್ರೈಲರ್​, ಅಭಿಮಾನಿಗಳು ಸಹ ಈ ಟ್ರೈಲರ್​ನನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರವಿಬೋಪಣ್ಣ ಕರ್ಮ ಈಸ್ ಕ್ರೇಜಿ 


ರವಿಚಂದ್ರನ್​ ಅಂದ್ರೆ ಸ್ವಲ್ಪ ವಿಭಿನ್ನವಾಗಿ ಯೋಚನೆ ಮಾಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಹಾಗೇ ಈ ಚಿತ್ರದ ಸಿನಿಮಾ ಸಬ್​ ಟೈಟಲ್ ಕೂಡ ಅಷ್ಟೇ ಕ್ರೇಜಿಯಾಗಿದೆ. ​ ರವಿಬೋಪಣ್ಣ, ಕರ್ಮ ಈಸ್ ಕ್ರೇಜಿ ಅನ್ನುವ ವಿಭಿನ್ನ ಸಬ್​ ಟೈಟಲ್ ಹೊಂದಿದೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.


ಇದನ್ನೂ ಓದಿ: Ravichandran: ತೆಲುಗು ಸಿನಿಮಾದಲ್ಲಿ ಆ್ಯಕ್ಟ್ ಮಾಡ್ತಾರಾ ರವಿಚಂದ್ರನ್? ಮಹೇಶ್ ಬಾಬುಗೆ ತಂದೆ ಆಗ್ತಾರಂತೆ ಕ್ರೇಜಿಸ್ಟಾರ್!


ರವಿಬೋಪಣ್ಣ ಸಸ್ಪೆನ್ಸ್​  ಥ್ರಿಲ್ಲರ್​ ಮೂವಿ


'ರವಿಬೋಪಣ್ಣ' ಸಿನಿಮಾ ಇನ್‌ವೆಸ್ಟಿಗೇಷನ್ ಥ್ರಿಲ್ಲರ್  ಕಥೆ ಒಳಗೊಂಡಿದೆ. ನಾಯಕಿಯರಾಗಿ ರಾಧಿಕಾ ಕುಮಾರಸ್ವಾಮಿ ಹಾಗೂ ಕಾವ್ಯಾ ಶೆಟ್ಟಿ ಮಿಂಚಿದ್ದಾರೆ. ತೆರೆಮೇಲೆ ಇವರಿಬ್ಬರನ್ನು ಬಹಳ ಸೊಗಸಾಗಿ ತೋರಿಸಿರುವುದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ. ಜಿ.ಎಸ್.ವಿ.ಸೀತಾರಾಮ್ ಛಾಯಾಗ್ರಹಣ ಚಿತ್ರಕ್ಕಿದ್ದು, ರಾಮಕೃಷ್ಣ, ಜೈ ಜಗದೀಶ್, ರವಿಶಂಕರ್ ಗೌಡ, ಮೋಹನ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.


ವಕೀಲನ ಪಾತ್ರದಲ್ಲಿ ಕಿಚ್ಚ ಸುದೀಪ್​


ಮಲಯಾಳಂನ 'ಜೋಸೆಫ್' ಸಿನಿಮಾ ರೀಮೇಕ್‌ ಇದಾಗಿದ್ದು, ಕಥೆಯನ್ನಷ್ಟೇ ತೆಗೆದುಕೊಂಡು ಹೊಸ ರೀತಿಯಲ್ಲಿ ಅದನ್ನು ಕನ್ನಡಕ್ಕೆ ರವಿಚಂದ್ರನ್ ತರ್ತಿದ್ದಾರೆ. ಚಿತ್ರದಲ್ಲಿ  ಕಿಚ್ಚ ಸುದೀಪ್ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅವರ ಡೈಲಾಗ್​ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.


ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತಾ ಸಂಯೋಜನೆ V. ರವಿಚಂದ್ರನ್​


ರವಿಬೋಪಣ್ಣ ಚಿತ್ರ ರವಿಚಂದ್ರನ್​ ಅವರ ಕನಸಿನ ಚಿತ್ರವಾಗಿದೆ.  ಹೀಗಾಗಿ ಸಿನಿಮಾದ ಕಂಪ್ಲೀಟ್ ಉಸ್ತುವಾರಿಯನ್ನು ರವಿಚಂದ್ರನ್​ ತನ್ನ ಹೆಗಲ ಮೇಲೆ ಹೊತ್ತು ಕೆಲಸ ಮಾಡಿದ್ದಾರೆ. ಕಥೆ ಚಿತ್ರಕಥೆ, ಸಂಭಾಷಣೆ, ಸಂಗೀತಾ ಸಂಯೋಜನೆ ಹಾಗೂ ನಿರ್ದೇಶನ ಕೂಡ V. ರವಿಚಂದ್ರನ್ ಅವರೇ ಮಾಡಿದ್ದಾರೆ. ಅಷ್ಟೇ ಅಲ್ಲದೇ ಚಿತ್ರದ ಎಡಿಟಿಂಗ್​ ಮಾಡುವಾಗಲು ಅವರೇ ಕೂತು ಮಾಡಿಸಿದ್ದಾರೆ.


ಇದನ್ನೂ ಓದಿ: Shanti Kranti: ಶಾಂತಿ ಕ್ರಾಂತಿ ಮಾಡುವಾಗ ಪಟ್ಟ ಕಷ್ಟ ಅಷ್ಟಿಷ್ಟಲ್ಲ! ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಕ್ರೇಜಿಸ್ಟಾರ್ ಹೇಳಿದ್ದೇನು?


ಟ್ರೈಲರ್‌ನಲ್ಲಿ ರಾಧಿಕಾ ಕುಮಾರಸ್ವಾಮಿ ದರ್ಶನ


ಇಷ್ಟು ದಿನ ಸಿನಿಮಾ ಟೀಸರ್ ಹಾಗೂ ಸಾಂಗ್‌ಗಳಲ್ಲಿ ಕ್ರೇಜಿಸ್ಟಾರ್ ಜೊತೆ ಕಾವ್ಯಾ ಶೆಟ್ಟಿ ಮಾತ್ರ ಕಾಣಿಸಿಕೊಂಡಿದ್ದರು. ಆದರೆ ಟ್ರೈಲರ್‌ನಲ್ಲಿ ರಾಧಿಕಾ ಕುಮಾರಸ್ವಾಮಿ ಪ್ರತ್ಯಕ್ಷವಾಗಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ  ರಾಧಿಕಾ ಕುಮಾರಸ್ವಾಮಿ  ಕಾಣಿಸಿಕೊಂಡಿರೋದು ಟ್ರೈಲರ್​ನಲ್ಲಿ ಗೊತ್ತಾಗಿದೆ.  ಕಾವ್ಯಾ ಬಹುತೇಕ ಮಾಡರ್ನ್ ಲುಕ್‌ನಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಸೀರೆಯಲ್ಲಿ ಕಂಗೊಳಿಸಿದ್ದಾರೆ. ರವಿ ಬೋಪಣ್ಣ ಚಿತ್ರದಲ್ಲಿ ರಚಿತಾ ರಾಮ್ ಸಹ ನಟಿಸಿದ್ದಾರೆ. ಆದರೆ ಇಷ್ಟು ದೊಡ್ಡ ಟ್ರೈಲರ್‌ನಲ್ಲಿ ರಚ್ಚು ಕಾಣಿಸೋದೇ ಇಲ್ಲ.

Published by:Pavana HS
First published: