Ravichandran ಮಗನ ಮದುವೆ ಆಮಂತ್ರಣ ಪತ್ರಿಕೆ ವೈರಲ್​! 'ಆ' ನಟಿ ಜೊತೆ ಮನೋರಂಜನ್ ಹೊಸ 'ಪ್ರಾರಂಭ​'

ರವಿಚಂದ್ರನ್ ಮಗ ಮನೋರಂಜನ್ ರವೀಚಂದ್ರನ್ ಅವರ ಪ್ರಾರಂಭ ಸಿನಿಮಾ ಬಿಡುಗಡೆಯಾಗುತ್ತಿದ್ದು, ಮದುವೆ ಆಹ್ವಾನ ಪತ್ರಿಕೆಯ ರೂಪದಲ್ಲಿ ಸಿನಿ ಪ್ರೇಮಿಗಳಿಗೆ ಚಿತ್ರಮಂದಿರಕ್ಕೆ ಆಹ್ವಾನ ನೀಡಿದ್ದಾರೆ. ಈ ಸಿನಿಮಾ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ವೈರಲ್​ ಆದ ಆಮಂತ್ರಣ ಪತ್ರಿಕೆ

ವೈರಲ್​ ಆದ ಆಮಂತ್ರಣ ಪತ್ರಿಕೆ

  • Share this:
ಕಳೆದೆರೆಡು ದಿನಗಳಿಂದ ಸಾಮಾಜಿಕ ಜಾಲತಾಣ (Social Media) ದಲ್ಲಿ ಸ್ಯಾಂಡಲ್​ವುಡ್ (Sandalwood)​​ ಕ್ರೇಜಿಸ್ಟಾರ್​ ರವಿಚಂದ್ರನ್ (Crazy Star Ravichandran)​ ಅವರ ಮಗನ ಮದುವೆ ಆಮಂತ್ರಣ ಪತ್ರಿಕೆ (Wedding Invitation)  ವೈರಲ್ ಆಗುತ್ತಿದೆ. ಈ ಬಗ್ಗೆ ಅಭಿಮಾನಿಗಳು ಸಾಕಷ್ಟು ಚರ್ಚೆ ಮಾಡುತ್ತಿದ್ದಾರೆ. ಇದೇನು ಇದ್ದಕಿದ್ದ ಹಾಗೇ ನಟ ರವಿಚಂದ್ರನ್​ ಮಗನ ಮದುವೆ ಮಾಡಿಕೊಳ್ಳುತ್ತಿದ್ದಾರಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅದು ನಟಿಯೊಬ್ಬರ ಜೊತೆ ರವಿಚಂದ್ರನ್​ ಹಿರಿ ಮಗ ಮನೋರಂಜನ್ (Manoranjan) ಫೋಟೋ ಇರುವ ವಿವಾಹ ಪತ್ರಿಕೆ ವೈರಲ್ ಆಗುತ್ತಿದೆ. ಇದು ಏನಪ್ಪಾ ಅಂತ ಗೊಂದಲ ಮಾಡಿಕೊಳ್ಳಬೇಡಿ. ಇದು ರಿಯಲ್​ ಅಲ್ಲ ರೀಲ್​. ಕ್ರೇಜಿಸ್ಟಾರ್ ರವಿಚಂದ್ರನ್ ಮಗ ಮನೋರಂಜನ್ ರವೀಚಂದ್ರನ್ ಅವರ ಪ್ರಾರಂಭ (Prarambha) ಸಿನಿಮಾ ಬಿಡುಗಡೆಯಾಗುತ್ತಿದ್ದು, ಮದುವೆ ಆಹ್ವಾನ ಪತ್ರಿಕೆಯ ರೂಪದಲ್ಲಿ ಸಿನಿ ಪ್ರೇಮಿಗಳಿಗೆ ಚಿತ್ರಮಂದಿರಕ್ಕೆ ಆಹ್ವಾನ ನೀಡಿದ್ದಾರೆ. ಈ ಸಿನಿಮಾ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮನೋರಂಜನ್​ ವಿವಾಹ ಪತ್ರಿಕೆ ವೈರಲ್​!

ಜೇನುಶ್ರೀ ತನುಷ ಪ್ರೊಡಕ್ಷನ್ ನಿರ್ಮಿಸಿರುವ ಮನೋರಂಜನ್ ರವಿಚಂದ್ರನ್ ನಾಯಕನಾಗಿ ಅಭಿನಯಿಸಿರುವ ಪ್ರಾರಂಭ ಸಿನಿಮಾ ಮೇ 13ರಂದು ಬಿಡುಗಡೆಗೊಳ್ಳುತ್ತಿದೆ. ಬಹಳ ವಿಭಿನ್ನವಾಗಿ ಸಿನಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಇಡೀ ತಂಡ ಕರೆಯುತ್ತಿದ್ದು, ಮುಯ್ಯಿ ನಿಮ್ದು, ಮನಸ್ಸು ಮುಟ್ಟೋ ಕೆಲಸ ನಮ್ಮದು ಎಂದು ಹೇಳುತ್ತಿದೆ ತಂಡ. ಕೀರ್ತಿ ಕಲ್ಕೇರಿ ಈ ಚಿತ್ರದ ನಾಯಕಿ. ಮನೋರಂಜನ್‌ ಹಾಗೂ ನಟಿ ಕೀರ್ತಿ ಅಭಿನಯಿಸಿರುವ 'ಪ್ರಾರಂಭ' ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರತಂಡವು ಸಿನಿಮಾ ಬಿಡುಗಡೆಯ ಆಹ್ವಾನ ಪತ್ರಿಕೆಯನ್ನು ‘ಮದುವೆ ಆಮಂತ್ರಣ‘ ಪತ್ರಿಕೆ ಮಾದರಿಯಲ್ಲಿ ಬಿಡುಗಡೆಮಾಡಿದೆ.



ಚಿತ್ರಮಂದಿರಕ್ಕೆ ಆಹ್ವಾನ ಕೊಟ್ಟ ಪ್ರಾರಂಭ ಚಿತ್ರತಂಡ!

'ಚಿತ್ರಮಂದಿರಕ್ಕೆ ಆಹ್ವಾನ' ಪತ್ರಿಕೆಯನ್ನು ಸಿದ್ದಪಡಿಸಿದೆ. ಇದು ‘ಮದುವೆಯ ಕರೆಯೋಲೆ‘ ರೀತಿಯಲ್ಲಿ ಇರುವುದು ವಿಶೇಷ. ವಧು, ವರರ ಹೆಸರಿರುವ ಸ್ಥಳದಲ್ಲಿ ಮನೋರಂಜನ್‌ ಹಾಗೂ ನಟಿ ಕೀರ್ತಿಯ ಹೆಸರನ್ನು ಮುದ್ರಿಸಲಾಗಿದೆ ಮನು ಕಲ್ಯಾಡಿ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಜಗದೀಶ್ ಕಲ್ಯಾಡಿ ಬಂಡವಾಳ ಹೂಡಿದ್ದಾರೆ. ಇವರಿಬ್ಬರು ನಾವೆಲ್ಲಾ ಅಲ್ಪಪ್ರಿಯರು, ಕುಬೇರರನ್ನಾಗಿ ಮಾಡುವ ಜವಾಬ್ದಾರಿ ನಿಮ್ಮದು ಎಂದು ಚಿತ್ರಮಂದಿರಕ್ಕೆ ಆಹ್ವಾನ ಪತ್ರಿಕೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಗೋವಾ ಸಿಎಂ ಜೊತೆ ರಾಕಿ ಭಾಯ್, ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಯಶ್?

ಪ್ರಾರಂಭ ಟ್ರೈಲರ್​ಗೆ ಅಭಿಮಾನಿಗಳು ಫಿದಾ!


Published by:Vasudeva M
First published: