HOME » NEWS » Entertainment » RAVICHANDRAN MET KICHCHA SUDEEP SURPRISINGLY IN HYDERABAD AE

Kotigobba 3: ಕಿಚ್ಚ ಸುದೀಪ್​ಗೆ ಸರ್ಪ್ರೈಸ್​ ಕೊಟ್ಟ ರವಿಮಾಮ..!

Kotigobba 3: ಹೈದರಾಬಾದಿನಲ್ಲಿ ಕೋಟಿಗೊಬ್ಬ 3ರ ಚಿತ್ರೀಕರಣ ನಡೆಯುತ್ತಿದ್ದು, ಸುದೀಪ್​ ಸದ್ಯಕ್ಕೆ ಅಲ್ಲೇ ಉಳಿದುಕೊಂಡಿದ್ದಾರೆ. ಸ್ಯಾಂಡಲ್​ವುಡ್​ ಕ್ರೇಜಿಸ್ಟಾರ್​ ರವಿಮಾಮ ಸುದೀಪ್​ ಅವರನ್ನು ಅಲ್ಲೇ ಹೋಗಿ ಭೇಟಿ ಮಾಡುವ ಮೂಲಕ ಸರ್ಪ್ರೈಸ್​ ಕೊಟ್ಟಿದ್ದಾರೆ.

Anitha E | news18
Updated:July 24, 2019, 6:06 PM IST
Kotigobba 3: ಕಿಚ್ಚ ಸುದೀಪ್​ಗೆ ಸರ್ಪ್ರೈಸ್​ ಕೊಟ್ಟ ರವಿಮಾಮ..!
ಹೈದರಾಬಾದಿನಲ್ಲಿ ಕಿಚ್ಚನ ಜೊತೆ ರವಿಮಾಮ
  • News18
  • Last Updated: July 24, 2019, 6:06 PM IST
  • Share this:
ಕಿಚ್ಚ ಸುದೀಪ್​ ಇತ್ತೀಚೆಗಷ್ಟೆ 'ಪೈಲ್ವಾನ್​' ಹಾಗೂ 'ಸೈರಾ ನರಸಿಂಹ ರೆಡ್ಡಿ' ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಜತೆಗೆ 'ಪೈಲ್ವಾನ್​' ಚಿತ್ರದ ಪ್ರಚಾರದಲ್ಲೂ ಭಾಗಿಯಾಗುತ್ತಿದ್ದಾರೆ. ಹೀಗಿರುವಾಗಲೇ ಇವುಗಳೊಂದಿಗೆ ಅವರು ತಮ್ಮ ಬಹು ನಿರೀಕ್ಷಿತ ಸಿನಿಮಾ 'ಕೋಟಿಗೊಬ್ಬ 3' ಸಿನಿಮಾದ ಚಿತ್ರೀಕರಣಲ್ಲೂ ಬ್ಯುಸಿಯಾಗಿದ್ದಾರೆ.

ಹೈದರಾಬಾದಿನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಸುದೀಪ್​ ಸದ್ಯಕ್ಕೆ ಅಲ್ಲೇ ಉಳಿದುಕೊಂಡಿದ್ದಾರೆ. ಸ್ಯಾಂಡಲ್​ವುಡ್​ ಕ್ರೇಜಿಸ್ಟಾರ್​ ರವಿಮಾಮ ಸುದೀಪ್​ ಅವರನ್ನು ಅಲ್ಲೇ ಹೋಗಿ ಭೇಟಿ ಮಾಡುವ ಮೂಲಕ ಸರ್ಪ್ರೈಸ್​ ಕೊಟ್ಟಿದ್ದಾರೆ.

A surprise guest at my place at hyd indeed... Thanks Anna for dropping in.. Its always lovely to see u. 

ರವಿಚಂದ್ರನ್​ ಹಾಗೂ ಸುದೀಪ್​ ಈಗಾಗಲೇ 'ಹುಬ್ಬುಲಿ' ಹಾಗೂ 'ಮಾಣಿಕ್ಯ' ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ಇವರ ನಡುವೆ ಆತ್ಮೀಯ ಸಂಬಂಧವಿದೆ. ಹೀಗಾಗಿಯೇ ರವಿಮಾಮ ಹೈದರಾಬಾದಿಗೆ ಹೋಗಿದ್ದು, ಅಲ್ಲಿ 'ಕೋಟಿಗೊಬ್ಬ 3' ಸಿನಿಮಾದ ಸೆಟ್​ಗೆ ಭೇಟಿ ಕೊಡುವ ಮೂಲಕ ಸರ್ಪ್ರೈಸ್​ ಕೊಟ್ಟಿದ್ದಾರೆ.

ರವಿಚಂದ್ರನ್​ ಅವರನ್ನು ಕಂಡ ಖುಷಿಯಲ್ಲಿ ಸುದೀಪ್​ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಆದರೆ ಇವರಿಬ್ಬರನ್ನು ಒಟ್ಟಿಗೆ ನೋಡಿರುವ ಅಭಿಮಾನಿಗಳು ಮಾತ್ರ ತಲೆಗೆ ಹುಳು ಬಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಆ ನಟ ಕೇಳಿದ್ದು ಎರಡೇ ಬಾಳೆಹಣ್ಣು: ಸ್ಟಾರ್​ ಹೋಟೆಲ್​ ಬಿಲ್​ ಮಾಡಿದ್ದು 442 ರೂಪಾಯಿ..!

ಮತ್ತೆ ಏನಾದರೂ ಈ ಜೋಡಿ ತೆರೆ ಹಂಚಿಕೊಳ್ಳಲಿದೆಯಾ ಅನ್ನೋ ಟಾಕ್​ ಸಹ ಆರಂಭವಾಗಿದೆ. ರವಿಮಾಮ ಮತ್ತೆ ಕಿಚ್ಚನ ಜತೆ 'ಕೋಟಿಗೊಬ್ಬ 3'ರಲ್ಲಿ ಕಾಣಿಸಿಕೊಂಡರೂ ಅಚ್ಚರಿ ಪಡಬೇಕಿಲ್ಲ.

Rashmika Mandanna: ಹೊಸ ಫೋಟೋಶೂಟ್​ನಲ್ಲಿ ಮುದ್ದಾಗಿ ಮಿಂಚಿದ ರಶ್ಮಿಕಾ ಮಂದಣ್ಣ


 
First published: July 24, 2019, 6:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories