ನಿನ್ನ ಬಿಟ್ಟರೆ ಬೇರೊಬ್ಬ ದುರ್ಯೋಧನ ಇಲ್ಲ: ಡಿ ಬಾಸ್ ಅವತಾರಕ್ಕೆ ಬಹುಪರಾಕ್

kurukshetra: ಆದರೂ ಚಾಲೆಂಜಿಂಗ್ ಸ್ಟಾರ್ ತಮ್ಮ ಚಾಲೆಂಜ್​ನಿಂದಲೇ ಎರಡು ಐತಿಹಾಸಿಕ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸಂಗೊಳ್ಳಿ ರಾಯಣ್ಣನಾಗಿ ಬಂದ ದರ್ಶನ್ ಬಾಕ್ಸಾಫೀಸ್​ನ್ನು ಲೂಟಿ ಮಾಡಿರುವುದು ಈಗ ಇತಿಹಾಸ.

zahir | news18
Updated:August 2, 2019, 10:17 PM IST
ನಿನ್ನ ಬಿಟ್ಟರೆ ಬೇರೊಬ್ಬ ದುರ್ಯೋಧನ ಇಲ್ಲ: ಡಿ ಬಾಸ್ ಅವತಾರಕ್ಕೆ ಬಹುಪರಾಕ್
kurukshetra
zahir | news18
Updated: August 2, 2019, 10:17 PM IST
ಕನ್ನಡ ಚಿತ್ರಗಳಲ್ಲಿನ ಪೌರಾಣಿಕ ಪಾತ್ರಗಳನ್ನು ನೆನಪು ಮಾಡಿಕೊಂಡರೆ ಕಣ್ಮುಂದೆ ಬರುವ ಏಕೈಕ ಮುಖವೆಂದರೆ ವರನಟ ಡಾ.ರಾಜ್​ಕುಮಾರ್ ಅವರದ್ದು. ಅದು ರಾಘವೇಂದ್ರ ಸ್ವಾಮಿ ಅವತಾರವಿರಲಿ, ಭಬ್ರುವಾಹನ, ಮಯೂರ, ಶ್ರೀಕೃಷ್ಣದೇವರಾಯನ ಗೆಟಪ್​ ಇರಲಿ. ಇಲ್ಲಾ ಕನಕದಾಸ, ಕಾಳಿದಾಸ, ಹಿರಣ್ಯಕಶಿಪು ಪಾತ್ರವಿರಲಿ. ಹೀಗೆ ಎಲ್ಲಾ ಪೌರಾಣಿಕ, ಐತಿಹಾಸಿಕ ಪಾತ್ರಗಳನ್ನು ನಟಸಾರ್ವಭೌಮ ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಹೀಗಾಗಿಯೇ ಅಂತಹ ತೂಕದ ಪಾತ್ರದಲ್ಲಿ ಮತ್ತೊಬ್ಬ ನಟನನ್ನು ಕನ್ನಡದಲ್ಲಿ ಊಹಿಸಲು ಸಾಧ್ಯವಾಗುವುದಿಲ್ಲ.

ಆದರೂ ಚಾಲೆಂಜಿಂಗ್ ಸ್ಟಾರ್ ತಮ್ಮ ಚಾಲೆಂಜ್​ನಿಂದಲೇ ಎರಡು ಐತಿಹಾಸಿಕ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ಸಂಗೊಳ್ಳಿ ರಾಯಣ್ಣ'ರಾಗಿ ಬಂದ ದರ್ಶನ್ ಬಾಕ್ಸಾಫೀಸ್​ನ್ನು ಲೂಟಿ ಮಾಡಿರುವುದು ಈಗ ಇತಿಹಾಸ. ಇದೀಗ ಮಹಾಕಾವ್ಯ ಮಹಾಭಾರತದ ದೃಶ್ಯಕಾವ್ಯ 'ಕುರುಕ್ಷೇತ್ರ' ತೆರೆಗೆ ಬರಲು ಸಜ್ಜಾಗಿದೆ. ಇದೇ ವೇಳೆ ಚಿತ್ರದ ಮುಖ್ಯ ಹೈಲೆಟ್​ ದರ್ಶನ್​ ಅವರ ದುರ್ಯೋಧನ ಪಾತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಹಾಡಿ ಹೊಗಳಿದ್ದಾರೆ.

ಒಂದೆಡೆ ಐತಿಹಾಸಿಕ ಪಾತ್ರಗಳನ್ನು ನೆನಪಿಸಿಕೊಂಡರೆ ಡಾ.ರಾಜ್ ಅವರ ಮುಖ ನೆನಪಿಗೆ ಬಂದರೆ, ಇದೀಗ ದುರ್ಯೋಧನ ಎಂದರೆ ಚಾಲೆಂಜಿಂಗ್ ಸ್ಟಾರ್ ಕಣ್ಣ ಮುಂದೆ ಬರುತ್ತಿದ್ದಾರೆ. 'ಕುರುಕ್ಷೇತ್ರ' ಚಿತ್ರದಲ್ಲಿ ಕೃಷ್ಣನಾಗಿ ಬಣ್ಣ ಹಚ್ಚಿರುವ ರವಿಚಂದ್ರನ್, ಸೆಟ್‍ನಲ್ಲಿ ದರ್ಶನ್ ಅವರ ಅವತಾರ ನೋಡಿ ಲೋ..ಮಗನೇ, ನಿನ್ನ ಬಿಟ್ಟರೆ ಇನ್ನೊಬ್ಬ ದುರ್ಯೋಧನ ಕರ್ನಾಟಕಕ್ಕೆ ಇಲ್ಲ ಎಂದಿದ್ದರಂತೆ.ಐತಿಹಾಸಿಕ ಪಾತ್ರಗಳಿಗೆ ಅದರದ್ದೇಯಾದ ತೂಕವಿದೆ. ಅಂತಹದೊಂದು ನಿರೀಕ್ಷೆ ಕೂಡ ಜನರಲ್ಲಿರುತ್ತದೆ. ಅದನ್ನು ಮೀರಿಸುವಂತೆ ಡಿ ಬಾಸ್ ದುರ್ಯೋಧನನಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡಿಗರು ದುರ್ಯೋಧನನನ್ನು ಇಲ್ಲಿವರೆಗೆ ನೋಡಿಲ್ಲ. ಇದೀಗ ದರ್ಶನ್ ಮುಖಾಂತರ ನೋಡಲಿದ್ದಾರೆ. ಇವರನ್ನು ನೋಡಿದ ಮೇಲೆ ಇನ್ನೊಂದು ಆಯ್ಕೆ ಕೂಡ ಜನರಿಗೆ ಕಾಣಿಸುವುದಿಲ್ಲ ಎಂದು ಚಾಲೆಂಜಿಂಗ್ ಸ್ಟಾರ್​ ಅವತಾರಕ್ಕೆ ಕ್ರೇಜಿಸ್ಟಾರ್ ಬಹುಪರಾಕ್ ಅಂದಿದ್ದಾರೆ.

ಇನ್ನು ದುರ್ಯೋಧನನ ಆರ್ಭಟ ಇದೇ ವರಮಹಾಲಕ್ಷ್ಮಿ ಹಬ್ಬದಂದು (ಆ.9) ಆರಂಭವಾಗಲಿದ್ದು, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ 'ಕುರುಕ್ಷೇತ್ರ' ಚಿತ್ರವನ್ನು ಏಕಕಾಲಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.

First published:August 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...