ರವಿಚಂದ್ರನ್​ ನಿರ್ದೇಶನದ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಕಿಚ್ಚ ಸುದೀಪ್​!

‘ರವಿ ಬೋಪಣ್ಣ’ ಸಿನಿಮಾದಲ್ಲಿ ಸುದೀಪ್​ ಕೂಡ ಬಣ್ಣ ಹಚ್ಚಲಿದ್ದಾರೆ. ‘ಹೆಬ್ಬುಲಿ’ ಚಿತ್ರದಲ್ಲಿ ಕಮಾಲ್​ ಮಾಡಿದ್ದ ರವಿಚಂದ್ರನ್​ ಹಾಗೂ ಸುದೀಪ್​ ಜೋಡಿ ಈ ಚಿತ್ರದಲ್ಲಿ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Rajesh Duggumane | news18
Updated:August 12, 2019, 3:22 PM IST
ರವಿಚಂದ್ರನ್​ ನಿರ್ದೇಶನದ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಕಿಚ್ಚ ಸುದೀಪ್​!
ರವಿಚಂದ್ರನ್​-ಸುದೀಪ್​
  • News18
  • Last Updated: August 12, 2019, 3:22 PM IST
  • Share this:
ನಟ, ನಿರ್ದೇಶಕ ರವಿಚಂದ್ರನ್​ ‘ರಾಜೇಂದ್ರ ಪೊನ್ನಪ್ಪ’ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಇದರ ಜೊತೆ ಜೊತೆಗೆ ಅವರು ಹೊಸ ಪ್ರಾಜೆಕ್ಟ್​ ಒಂದನ್ನು ಕೈಗೆತ್ತಿಕೊಂಡಿದ್ದು, ‘ರವಿ ಬೋಪಣ್ಣ’ ಎಂದು ನಾಮಕರಣ ಮಾಡಲಾಗಿದೆ. ವಿಶೇಷ ಎಂದರೆ, ಈ ಚಿತ್ರಕ್ಕೆ ರವಿಂದ್ರನ್​ ನಿರ್ದೇಶನ ಇರಲಿದ್ದು, ಇದರ ಜೊತೆಗೆ ಸಂಗೀತ ಸಂಯೋಜನೆ ಕೂಡ ಇರಲಿದೆ. ಈ ಸಿನಿಮಾದಲ್ಲಿ ರವಿಂದ್ರನ್​ ಅವರೇ ನಾಯಕನಾಗಿ ನಟಿಸಲಿದ್ದಾರೆ ಎಂಬುದು ಮತ್ತೊಂದು ವಿಶೇಷ.

‘ರವಿ ಬೋಪಣ್ಣ’ ಸಿನಿಮಾದಲ್ಲಿ ಸುದೀಪ್​ ಕೂಡ ಬಣ್ಣ ಹಚ್ಚಲಿದ್ದಾರೆ. ‘ಹೆಬ್ಬುಲಿ’ ಚಿತ್ರದಲ್ಲಿ ಕಮಾಲ್​ ಮಾಡಿದ್ದ ರವಿಚಂದ್ರನ್​ ಹಾಗೂ ಸುದೀಪ್​ ಜೋಡಿ ಈ ಸಿನಿಮಾದಲ್ಲಿ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ‘ರವಿ ಬೋಪಣ್ಣ’ ಸಿನಿಮಾದಲ್ಲಿ ಸುದೀಪ್​ ವಿಶೇಷ ಅತಿಥಿ ಪಾತ್ರದಲ್ಲಿ ಮಾತ್ರ ನಿರ್ವಹಿಸುತ್ತಾರೆ.

ಸೈಬರ್​ಕ್ರೈಮ್​ ಕಥೆ ಆಧರಿಸಿ ಚಿತ್ರ ಸಿದ್ಧಗೊಳ್ಳಲಿದೆಯಂತೆ. ರವಿಚಂದ್ರನ್​ ನಿವೃತ್ತ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಕೀಲನ ಪಾತ್ರದಲ್ಲಿ ಸುದೀಪ್​ ಬಣ್ಣ ಹಚ್ಚುತ್ತಿದ್ದಾರೆ. ಸುದೀಪ್​ಗೂ ಕಥೆ ಇಷ್ಟವಾಗಿದ್ದು, ಪಾತ್ರ ಮಾಡಲು ಒಪ್ಪಿದ್ದಾರಂತೆ. “ಈ ಪಾತ್ರ ಸುದೀಪ್​ಗೆ ಒಪ್ಪುತ್ತದೆ. ಸುದೀಪ್​ ನನ್ನ ಮಗನಿದ್ದಂತೆ. ನಾನು ಹೇಳಿದ ಕೂಡಲೇ ನಟಿಸಲು ಒಪ್ಪಿದರು. ಅವರದ್ದು ಅತಿಥಿ ಪಾತ್ರವಾದರೂ ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿದೆ,” ಎನ್ನುತ್ತಾರೆ ರವಿಚಂದ್ರನ್​. ಈ ಚಿತ್ರಕ್ಕೆ ಕಾವ್ಯಾ ಶೆಟ್ಟಿ ನಾಯಕಿ. ಅಜಿತ್​ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

First published:August 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ