ಹ್ಯಾಟ್ರಿಕ್ ಹೊಡೆಯಲಿದ್ದಾರೆ ಕ್ರೇಜಿ-ಕಿಚ್ಚ ಜೋಡಿ

Ravichandran and Sudeep : ಈ ಹಿಂದೆ ಮೋಹನ್ ಲಾಲ್ ಅಭಿನಯದ ಮಲಯಾಳಂನ ದೃಶ್ಯಂ ರಿಮೇಕ್​ನಲ್ಲಿ ರವಿಚಂದ್ರನ್ ನಟಿಸಿದ್ದರು. ಈ ಚಿತ್ರವು ಸ್ಯಾಂಡಲ್​ವುಡ್​ ಬಾಕ್ಸಾಫೀಸ್​ನಲ್ಲೂ ಸದ್ದು ಮಾಡಿತ್ತು.

zahir | news18-kannada
Updated:August 10, 2019, 9:54 PM IST
ಹ್ಯಾಟ್ರಿಕ್ ಹೊಡೆಯಲಿದ್ದಾರೆ ಕ್ರೇಜಿ-ಕಿಚ್ಚ ಜೋಡಿ
ravichandran-sudeep
  • Share this:
ಸ್ಯಾಂಡಲ್​ವುಡ್​ ಕಮಾಲ್ ಜೋಡಿ ಯಾರೆಂದರೆ ಥಟ್ಟನೆ ಬರುವ ಉತ್ತರ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಕಿಚ್ಚ ಸುದೀಪ್. ಈ ಇಬ್ಬರು ಜೊತೆ ಸೇರಿದರೆ ಅದೆಂಥಾ ಚಿತ್ರವಾದರೂ ಸೂಪರ್ ಡೂಪರ್ ಹಿಟ್ ಆಗುತ್ತೆ ಎಂಬ ಮಾತೊಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಿಚ್ಚ-ಕ್ರೇಜಿ ಅಭಿನಯದ 'ಮಾಣಿಕ್ಯ' ಮತ್ತು 'ಹೆಬ್ಬುಲಿ' ಚಿತ್ರದ ಭರ್ಜರಿ ಸಕ್ಸಸ್ ಕಣ್ಮುಂದಿದೆ.

ಇದೀಗ ಮೂರನೇ ಬಾರಿ ಒಂದೇ ಚಿತ್ರದ ಮೂಲಕ ಸ್ಯಾಂಡಲ್​ವುಡ್ ಮಾಣಿಕ್ಯರು ಒಟ್ಟಿಗೆ ತೆರೆಮೇಲೆ ಬರಲು ರೆಡಿಯಾಗಿದ್ದಾರೆ. ಆ ಚಿತ್ರದ ಹೆಸರು 'ರವಿ ಬೋಪಣ್ಣ'. ಕೆಲ ತಿಂಗಳ ಹಿಂದೆ ಸೆಟ್ಟೇರಿದ್ದ ರವಿಚಂದ್ರನ್ ಅಭಿನಯದ ಈ ಹೊಸ ಸಿನಿಮಾದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ.

ಈ ಹಿಂದೆ ಚಿತ್ರವನ್ನು ಕೈಗೆತ್ತಿಕೊಂಡಿದ್ದ ಅಜಿತ್ ಇದೀಗ ಸಿನಿಮಾದ ಸಂಪೂರ್ಣ ಜವಾಬ್ದಾರಿಯನ್ನು ಕ್ರೇಜಿಸ್ಟಾರ್​ಗೆ ವಹಿಸಿದ್ದಾರೆ. ಅದರಂತೆ 'ರವಿ ಬೋಪಣ್ಣ' ಚಿತ್ರಕ್ಕೆ ರವಿಚಂದ್ರನ್ ಆ್ಯಕ್ಷನ್ ಕಟ್ ಹೇಳಲಿದ್ದು, ಕಿಚ್ಚ ಸುದೀಪ್​ಗೆ ವಿಶೇಷ ಪಾತ್ರವನ್ನು ನೀಡಲು 'ಕನಸುಗಾರ' ನಿರ್ಧರಿಸಿದ್ದಾರೆ.

ದೇಹಾಂಗಗಳ​ ಮಾಫಿಯಾ ಜಾಲದ ಸುತ್ತ ಹೆಣೆಯಲಾಗಿರುವ ಈ ಚಿತ್ರದಲ್ಲಿ ರವಿಚಂದ್ರನ್ ಪೊಲೀಸ್ ಕಾನ್​ಸ್ಟೇಬಲ್ ಪಾತ್ರದಲ್ಲಿ ನಟಿಸಲಿದ್ದಾರೆ. ಮಲಯಾಳಂನಲ್ಲಿ ಸೂಪರ್ ಡೂಪರ್ ಆಗಿದ್ದ 'ಜೋಸೆಫ್' ಚಿತ್ರದ ರಿಮೇಕ್ ಇದಾಗಿದ್ದು, ಚಿತ್ರವನ್ನು ಕೊಡಗಿನ ಸುತ್ತ ಮುತ್ತ ಚಿತ್ರೀಕರಿಸಲು 'ರವಿ ಬೋಪಣ್ಣ' ಟೀಂ ಪ್ಲ್ಯಾನ್ ಹಾಕಿಕೊಂಡಿದೆ.

ಈ ಹಿಂದೆ ಮೋಹನ್ ಲಾಲ್ ಅಭಿನಯದ ಮಲಯಾಳಂನ 'ದೃಶ್ಯಂ' ರಿಮೇಕ್​ನಲ್ಲಿ ರವಿಚಂದ್ರನ್ ನಟಿಸಿದ್ದರು. ಈ ಚಿತ್ರವು ಸ್ಯಾಂಡಲ್​ವುಡ್​ ಬಾಕ್ಸಾಫೀಸ್​ನಲ್ಲೂ ಸದ್ದು ಮಾಡಿತ್ತು. ಹೀಗಾಗಿ ಮತ್ತೊಂದು ಸಸ್ಪೆನ್ಸ್ ಕಥೆಯೊಂದಿಗೆ ಬಾಕ್ಸಾಫೀಸ್​ ಮೇಲೆ ಕ್ರೇಜಿಸ್ಟಾರ್ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:  6 ಅಡಿ ಎತ್ತರ ಮತ್ತು 140 ಕೆ.ಜಿ. ತೂಕ: ಟೀಂ ಇಂಡಿಯಾ ವಿರುದ್ಧ ಕಣಕ್ಕೆ ಇಳಿಯಳಿದ್ದಾರೆ ದೈತ್ಯ ಕ್ರಿಕೆಟಿಗ
First published:August 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ