News18 India World Cup 2019

'ರವಿಚಂದ್ರ' ಸಿನಿಮಾದಲ್ಲಿ ನಾಯಕ ರವಿ ಮಾಮಾನಾ ಅಥವಾ ಉಪ್ಪಿನಾ?

news18
Updated:August 21, 2018, 12:14 PM IST
'ರವಿಚಂದ್ರ' ಸಿನಿಮಾದಲ್ಲಿ ನಾಯಕ ರವಿ ಮಾಮಾನಾ ಅಥವಾ ಉಪ್ಪಿನಾ?
news18
Updated: August 21, 2018, 12:14 PM IST
ನ್ಯೂಸ್​ 18 ಕನ್ನಡ 

ಸ್ಯಾಂಡಲ್‍ವುಡ್‍ನಲ್ಲಿ ಈಗ ಮಲ್ಟಿಸ್ಟಾರರ್ ಚಿತ್ರಗಳ ಟ್ರೆಂಡ್ ಶುರುವಾಗಿದೆ. 'ದಿ ವಿಲನ್‍'ನಲ್ಲಿ ಶಿವಣ್ಣ-ಸುದೀಪ್ ಒಂದಾಗಿ ನಟಿಸಿದ ನಂತರ ಈಗ ರವಿಚಂದ್ರನ್-ಉಪೇಂದ್ರ ಇದೇ ಮೊದಲ ಬಾರಿಗೆ ಒಟ್ಟಾಗಿ ಅಭಿನಯಿಸುತ್ತಿದ್ದಾರೆ.

'ರವಿಚಂದ್ರ' ಎಂಬ ಟೈಟಲ್‍ನಲ್ಲಿ ಮೂಡಿಬರುತ್ತಿರೋ ಈ ಚಿತ್ರದ ಮಹೂರ್ತ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿದೆ. ರವಿಚಂದ್ರನ್-ಉಪೇಂದ್ರ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಅಂದಹಾಗೆ ರವಿಚಂದ್ರ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಹಾಗೂ ನಿಮಿಕಾ ರತ್ನಾಕರ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇಬ್ಬರು ನಾಯಕಿಯರಿದ್ದರೂ ಸಹ, ರವಿಚಂದ್ರನ್‍ಗೆ ಇಲ್ಲಿ ಯಾರ ಜೊತೆಗೂ ಡ್ಯುಯೆಟ್ ಹಾಡುವ ಅವಕಾಶ ಇರುವುದಿಲ್ಲವಂತೆ. ಹಾಗೆ ಚಿತ್ರದ ಹೆಸರಲ್ಲೇ ರವಿಚಂದ್ರ ಎಂಬ ಪದವಿದ್ದರೂ ಇಲ್ಲಿ ನಾಯಕ ಮಾತ್ರ ಉಪೇಂದ್ರ ಆಗಿರುತ್ತಾರಂತೆ.

ತೆಲುಗಿನ 'ಬಲುಪು' ಚಿತ್ರದ ಕನ್ನಡ ಅವತರಣಿಯಾದ ರವಿಚಂದ್ರ ಚಿತ್ರಕ್ಕೆ ಓಂ ಪ್ರಕಾಶ್ ರಾವ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ನಿನ್ನೆಯಿಂದಲೇ ಶುರುವಾಗಿದ್ದು ವಿವಿಧ ಹಂತಗಳಲ್ಲಿ ಸುಮಾರು 75 ದಿನಗಳ ಕಾಲ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿದೆಯಂತೆ.

ಒಟ್ಟಾರೆ ಉಪೇಂದ್ರ-ರವಿಚಂದ್ರನ್‍ರಂತಹ ಕ್ರಿಯಾತ್ಮಕ ನಿರ್ದೇಶಕರು, ಓಂ ಪ್ರಕಾಶ್ ರಾವ್ ಜೊತೆಗೂಡಿರೋದ್ರಿಂದ 'ರವಿಚಂದ್ರ' ಯಾವ ರೀತಿ ಮ್ಯಾಜಿಕ್ ಮಾಡಲಿದೆ ಎಂಬುದು ಚಿತ್ರಪ್ರೇಮಿಗಳ ನಿರೀಕ್ಷೆ.
Loading...

 

 
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...