• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Ravi Kishan: ರಾತ್ರಿ ಕಾಫಿ ಕುಡಿಯೋಕೆ ಬನ್ನಿ ಎಂದಿದ್ದರು ಆ ನಟಿ! ಕಾಸ್ಟಿಂಗ್ ಕೌಚ್ ನೋವು ಬಿಚ್ಚಿಟ್ಟ ನಟ ರವಿ ಕಿಶನ್‌

Ravi Kishan: ರಾತ್ರಿ ಕಾಫಿ ಕುಡಿಯೋಕೆ ಬನ್ನಿ ಎಂದಿದ್ದರು ಆ ನಟಿ! ಕಾಸ್ಟಿಂಗ್ ಕೌಚ್ ನೋವು ಬಿಚ್ಚಿಟ್ಟ ನಟ ರವಿ ಕಿಶನ್‌

ಬಹುಭಾಷಾ ನಟ ರವಿ ಕಿಶನ್ ಹೇಳಿಕೆ

ಬಹುಭಾಷಾ ನಟ ರವಿ ಕಿಶನ್ ಹೇಳಿಕೆ

ಆದರೆ ಕಾಫಿ ಕುಡಿಯುವುದೆಂದರೆ ಅದು ಹಗಲಿನಲ್ಲಿ ಮಾಡುವಂಥದ್ದು ಹೊರತು ರಾತ್ರಿಯಲ್ಲ. ಆದ್ದರಿಂದ ನನಗೆ ಹಾಗೆ ಕರೆದದ್ದರ ಉದ್ದೇಶ ಸ್ಪಷ್ಟವಾಯ್ತು ಎಂದಿದ್ದಾರೆ ನಟ.

 • Share this:

ಚಿತ್ರರಂಗದಲ್ಲಿ (Film Industry) ಕಾಸ್ಟಿಂಗ್‌ ಕೌಚ್‌ ಅನುಭವ ಬಹುತೇಕ ನಟ ನಟಿಯರಿಗೆ (Actors) ಆಗಿರುತ್ತದೆ. ನಟನೆಯಲ್ಲಿ ಅವಕಾಶ  (Chance) ಪಡೆಯಲು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದ ಬಗ್ಗೆ ನಟ ನಟಿಯರು ಆಗಾಗ ತಮ್ಮ ಅನುಭವವನ್ನು (Experience) ಹೇಳುತ್ತಾರೆ. ಇಂಥ ಕಾಸ್ಟಿಂಗ್‌ ಕೌಚ್‌ (Casting Couch) ಅನುಭವ ಬರೀ ನಟಿಯರಿಗೆ ಮಾತ್ರವಲ್ಲ. ಬದಲಾಗಿ ಸಾಕಷ್ಟು ನಟರಿಗೆ ಕೂಡ ಆಗಿರುತ್ತದೆ. ಇತ್ತೀಚೆಗೆ ನಟ ರವಿ ಕಿಶನ್‌ (Ravi Kishan) ತಮಗಾದ ಕಾಸ್ಟಿಂಗ್‌ ಕೌಚ್‌ ಅನುಭವವನ್ನು ಹೇಳಿಕೊಂಡಿದ್ದಾರೆ.


ಭೋಜ್‌ಪುರಿ, ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಪ್ರಸಿದ್ಧ ನಟರಾಗಿರುವ ಜೊತೆಗೆ ಗೊರಖ್‌ಪುರ ಸಂಸದರೂ ಆಗಿರುವ ರವಿ ಕಿಶನ್ ಇತ್ತೀಚೆಗೆ ತಮ್ಮ ನಟನಾ ಪ್ರಯಾಣದ ಬಗ್ಗೆ ಹೇಳಿಕೊಂಡಿದ್ದಾರೆ.


ಚಿತ್ರರಂಗದ ಹೋರಾಟದ ಆರಂಭಿಕ ದಿನಗಳಲ್ಲಿ ಎದುರಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ತೆರೆದಿಟ್ಟಿದ್ದಾರೆ. ರಜತ್ ಶರ್ಮಾ ಅವರ ಆಪ್ ಕಿ ಅದಾಲತ್‌ನಲ್ಲಿ ಮಾತನಾಡುತ್ತಾ ಅವರು ತಮ್ಮ ಅನುಭವದ ಬಗ್ಗೆ ಹೇಳಿದ್ದಾರೆ.


ರವಿ ಕಿಶನ್ ಮೊದಲು 1992ರ ಹಿಂದಿಯಲ್ಲಿ ಬಿಡುಗಡೆಯಾದ ಪೀತಾಂಬರದಲ್ಲಿ ಕಾಣಿಸಿಕೊಂಡರು. ನಂತರದಲ್ಲಿ ರವಿ ಕಿಶನ್‌ರದ್ದು ಬಾಲಿವುಡ್‌ನಲ್ಲಿ ಚಿರಪರಿಚಿತ ಹೆಸರು. ಅಲ್ಲದೇ ಪ್ರಸಿದ್ಧ ಟಿವಿ ರಿಯಾಲಿಟಿ ಶೋಗಳಾದ ಬಿಗ್ ಬಾಸ್ ಮತ್ತು ಝಲಕ್ ದಿಖ್ಲಾ ಜಾ ಶೋಗಳಲ್ಲಿಯೂ ರವಿ ಕಿಶನ್‌ ಕಾಣಿಸಿಕೊಂಡಿದ್ದಾರೆ.


ಪ್ರತಿಭೆಯನ್ನು ನಂಬಿದ್ದೆ, ಶಾರ್ಟ್‌ಕಟ್‌ ಇಷ್ಟಪಡಲಿಲ್ಲ!


ಚಿತ್ರರಂಗದಲ್ಲಿ ಇಂಥದ್ದು ನಡೆಯುತ್ತಲೇ ಇರುತ್ತವೆ ಎಂದು ಹೇಳುವ ರವಿ ಕಿಶನ್‌, ಅವರು ಅಂಥದ್ದೊಂದು ವಿಚಿತ್ರ ಪರಿಸ್ಥಿತಿ ತಮಗೂ ಎದುರಾಗಿತ್ತು. ಆದರೆ ಅದರಿಂದ 'ತಪ್ಪಿಸಿಕೊಳ್ಳುವಲ್ಲಿ' ತಾವು ಯಶಸ್ವಿಯಾಗಿದ್ದಾಗಿ ತಿಳಿಸಿದ್ದಾರೆ. ತಮ್ಮ ಪ್ರತಿಭೆಯ ಬಗ್ಗೆ ನಂಬಿಕೆ ಹೊಂದಿದ್ದ ರವಿ ತಾವು ಯಾವುದೇ 'ಶಾರ್ಟ್‌ಕಟ್' ಅನ್ನು ಬಳಸಲು ಇಷ್ಟಪಡಲಿಲ್ಲ ಎಂಬುದಾಗಿ ಹೇಳಿದರು.


Ravi Kishan says he faced casting couch in early days of showbiz struggle


“ಹೌದು, ಇದು ಉದ್ಯಮದಲ್ಲಿ ಯಾವಾಗಲೂ ನಡೆಯುವ ಸಂಗತಿಯಾಗಿದೆ. ಆದರೆ ನಾನು ಹೇಗೋ ತಪ್ಪಿಸಿಕೊಂಡು ಬಂದೆ.


ಇದನ್ನೂ ಓದಿ: Tejasswi Prakash: ಯೆಲ್ಲೋ ಡ್ರೆಸ್‍ನಲ್ಲಿ ಬೋಲ್ಡ್ ಆಗಿ ಪೋಸ್ ನೀಡಿದ ನಟಿ ತೇಜಸ್ವಿ ಪ್ರಕಾಶ್!


ನನ್ನ ಕೆಲಸವನ್ನು ನಾನು ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ನನ್ನ ತಂದೆ ನನಗೆ ಕಲಿಸಿದ್ದರು. ನಾನು ಎಂದಿಗೂ ಶಾರ್ಟ್‌ಕಟ್ ತೆಗೆದುಕೊಳ್ಳಲು ಬಯಸಲಿಲ್ಲ. ಏಕೆಂದರೆ ನಾನು ಪ್ರತಿಭಾವಂತ ಎಂದು ನನಗೆ ತಿಳಿದಿತ್ತು” ಎಂಬುದಾಗಿ ರವಿ ಕಿಶನ್‌ ಹೇಳಿದ್ದಾರೆ.


ಅಷ್ಟಕ್ಕೂ ನಡೆದಿದ್ದೇನು ?


ನಾನು ಆಕೆಯನ್ನು ಹೆಸರಿಸಲು ಸಾಧ್ಯವಿಲ್ಲ, ಏಕೆಂದರೆ ಆಕೆ ಈಗ ದೊಡ್ಡ ಹೆಸರು ಮಾಡಿದ್ದಾರೆ. ಆಕೆ ಇಂದು ರಾತ್ರಿ ಒಂದು ಕಪ್ ಕಾಫಿಗಾಗಿ ಬನ್ನಿ ಎಂದು ನನಗೆ ಹೇಳಿದ್ದರು.


ಆದರೆ ಕಾಫಿ ಕುಡಿಯುವುದೆಂದರೆ ಅದು ಹಗಲಿನಲ್ಲಿ ಮಾಡುವಂಥದ್ದು ಹೊರತು ರಾತ್ರಿಯಲ್ಲ. ಆದ್ದರಿಂದ ನನಗೆ ಹಾಗೆ ಕರೆದದ್ದರ ಉದ್ದೇಶ ಸ್ಪಷ್ಟವಾಯ್ತು.


ಆದ್ದರಿಂದ ನಾನು ಇದರ ಹಿಂದಿನ ಉದ್ದೇಶ ಅರಿತುಕೊಂಡು ಅದನ್ನು ನಿರಾಕರಿಸಿದೆ ಎಂಬುದಾಗಿ ಆಪ್‌ ಕಿ ಅದಾಲತ್‌ನಲ್ಲಿ ರವಿ ಕಿಶನ್‌ ಹೇಳಿಕೊಂಡಿದ್ದಾರೆ.


ಅಂದಹಾಗೆ ರವಿ ಕಿಶನ್ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು 1992 ರಲ್ಲಿ ಬಿಡುಗಡೆಯಾದ ಹಿಂದಿಯ ಪೀತಾಂಬರದಲ್ಲಿ. ನಂತರ ಬಾಲಿವುಡ್‌ನಲ್ಲಿ ಅವರದ್ದು ಚಿರಪರಿಚಿತ ಹೆಸರು. ಅಲ್ಲದೇ ಭೋಜ್‌ಪುರಿ ನಟರೂ ಆಗಿರುವ ರವಿಕಿಶನ್‌ ಅವರನ್ನು ಭೋಜ್‌ಪುರಿ ಚಿತ್ರರಂಗದ ಸೂಪರ್‌ಸ್ಟಾರ್ ಎಂದು ಪರಿಗಣಿಸಲಾಗಿದೆ.


ಅಲ್ಲದೇ ಆರ್ಮಿ, ಹೇರಾ ಫೇರಿ, ತೇರೆ ನಾಮ್, ಲಕ್, ಏಜೆಂಟ್ ವಿನೋದ್, ಮುಕ್ಕಾಬಾಜ್ ಮುಂತಾದವುಗಳು ಅವರ ಕೆಲವು ಪ್ರಸಿದ್ಧ ಚಿತ್ರಗಳು.

top videos


  ಕಳೆದ ವರ್ಷ ಬಿಡುಗಡೆಯಾದ ಲವ್ ಯು ಲೋಕತಂತ್ರ ಮತ್ತು ನೆಟ್‌ಫ್ಲಿಕ್ಸ್ ವೆಬ್ ಸರಣಿ, ಖಾಕೀ: ದಿ ಬಿಹಾರ್ ಚಾಪ್ಟರ್‌ನಲ್ಲಿ ರವಿ ಕಿಶನ್‌ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ.

  First published: