ತಮ್ಮ ಬರವಣಿಗೆ ಮೂಲಕ ಅಸಂಖ್ಯಾತ ಮಂದಿಗೆ ಓದುವ ಹುಚ್ಚು ಹಿಡಿಸಿದ ರವಿ ಬೆಳಗೆರೆ ಇನ್ನಿಲ್ಲ. 1995ರಲ್ಲಿ ಹಾಯ್ ಬೆಂಗಳೂರು ಆರಂಭಿಸಿ, ನಂತರದಲ್ಲಿ ಕಾದಂಬರಿ, ಅನುವಾದ, ಕಥಾ ಸಂಕಲನ, ಜೀವನ ಕಥನ, ಅಂಕಣ ಬರಹಗಳು, ಕಿರುತೆರೆಯಲ್ಲಿ ಕ್ರೈಂ ಕುರಿತಾದ ಕಾರ್ಯಕ್ರಮಗಳನ್ನು ಮಾಡುತ್ತಾ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಕಿರುತೆರೆಯಲ್ಲಿ ಕಾರ್ಯಕ್ರಮದ ನಿರೂಪಕರಾಗಿದ್ದ ರವಿ ಬೆಳಗೆರೆ ನಂತರದಲ್ಲಿ ಧಾರಾವಾಹಿಯಲ್ಲೂ ಒಂದು ಪುಟ್ಟ ಪಾತ್ರದಲ್ಲಿ ಕಾಣಸಿಕೊಂಡಿದ್ದರು. ಮುಕ್ತ ಮುಕ್ತ ಮುಕ್ತ ಧಾರಾವಾಹಿಯಲ್ಲಿ ರವಿ ಬೆಳಗೆರೆ ಜಡ್ಜ್ ಪಾತ್ರದಲ್ಲಿ ನಟಿಸಿದ್ದಾರೆ. ರವಿ ಬೆಳಗೆರೆ ಅವರು ಸಿನಿಮಾ ರಂಗದ ಜೊತೆ ಆತ್ಮೀಯವಾದ ನಂಟು ಹೊಂದಿದ್ದರು. ಅಕ್ಷರಗಳ ಸಾಂಗತ್ಯದಲ್ಲಿದ್ದವರಿಗೆ ಬಣ್ಣದ ಲೋಕದಿಂದ ದೂರ ಉಳಿಯಲು ಆಗಲಿಲ್ಲ. ಕೆಲವು ಸಿನಿಮಾಗಳಲ್ಲಿ ನಟಿಸಿರುವ ರವಿ ಬೆಳಗೆರೆ ಅವರಿಗೆ ನಟರಾಗಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಅದಕ್ಕೆ ಒಂದು ಪ್ರಮುಖ ಕಾರಣವೂ ಇದೆ.
ರವಿ ಶ್ರೀವತ್ಸ ನಿರ್ದೇಶನದ ಗಂಡ ಹೆಂಡತಿ ಸಿನಿಮಾದಲ್ಲಿ ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡರು. ನಂತರ ಮಾದೇಶ, ವಾರಸ್ದಾರ ಸಿನಿಮಾಗಳಲ್ಲಿ ಅಭಿನಯಿಸಿದರು. ಡೆಡ್ಲಿಸೋಮ ಸಿನಿಮಾಗೆ ಕಂಠದಾನ ಮಾಡಿದ್ದಾರೆ.
ರವಿ ಬೆಳಗೆರೆ ಅವರಿಗೆ ನಂತರದಲ್ಲಿ ಸಾಕಷ್ಟು ಸಿನಿಮಾಗಳಿಂದ ಅವಕಾಶಗಳು ಅರಸಿ ಬಂದಿದ್ದವು. ಆದರೆ ಅವುಗಳನ್ನು ಮಾಡಲು ಅವರೇ ಆಸಕ್ತಿ ತೋರಲಿಲ್ಲವಂತೆ. ಕಾರಣ ಒಂದೇ ರೀತಿಯ ಪಾತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕ ಕಾರಣಕ್ಕೆ ಅವರು ಅಭಿನಯದಿಂದ ದೂರ ಉಳಿದಿದ್ದರಂತೆ. ಹಾಗೆಂದು ಅವರು ಸಿನಿಮಾ ರಂಗದ ಜೊತೆ ಇದ್ದ ನಂಟನ್ನು ಮಾತ್ರ ಕಳೆದುಕೊಳ್ಳಲಿಲ್ಲ.
ಕಿಚ್ಚ ಸುದೀಪ್ ಸಹ ರವಿ ಬೆಳಗೆರೆ ಕುಟುಂಬದೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತೆಗೆದಿದ್ದ ಫೋಟೋವನ್ನು ಹಂಚಿಕೊಳ್ಳುವುದರೊಂದಿಗೆ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ ಸುದೀಪ್.
This pic on stage where i saw him last wil b treasured.
The other,I'm sure is a moment, that the rest of the contestants will cherish.
You wil be missed sir.
Deepest Condolences to his family.
Prayers for his soul to rest in peace.
🙏🏼🪔 pic.twitter.com/cGIZYipAX8
— Kichcha Sudeepa (@KicchaSudeep) November 13, 2020
ಸಿನಿಮಾ ರಂಗ-ವಿವಾದ
ರವಿ ಬೆಳಗೆರೆ ಅವರಿಗೆ ಸಿನಿಮಾ ರಂಗದ ಜೊತೆ ಎಷ್ಟು ಸ್ನೇಹವಿತ್ತೋ ಅಷ್ಟೇ ಮಂದಿಯೊಂದಿಗೆ ಜಗಳವೂ ಆಗಿತ್ತು. ದುನಿಯಾ ವಿಜಯ್ ಅವರೊಂದಿಗೆ 'ಭೀಮಾ ತೀರದಲ್ಲಿ' ಸಿನಿಮಾ ವಿಷಯದಲ್ಲಿ ಗಲಾಟೆ ಆಗಿತ್ತು. ಇದರಿಂದಾಗಿಯೇ ದುನಿಯಾ ವಿಜಯ್ ಅವರ ಕೌಟುಂಬಿಕ ಕಲಹ ನಡೆದಾಗಲೂ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಅದರ ಬಗ್ಗೆ ಬರೆದಿದ್ದರು. ಇನ್ನು ದರ್ಶನ್ ಅವರ ವೈವಾಹಿಕ ಜೀವನದ ಬಗ್ಗೆಯೂ ಹಾಯ್ ಬೆಂಗಳೂರಿನಲ್ಲಿ ಪ್ರಕಟವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ