HOME » NEWS » Entertainment » RAVI BELAGERE DEATH SANDALWOOD CELEBRITIES EXPRESS THEIR CONDOLENCE ON RAVI BELAGRES DEATH AE

Ravi Belagere: ರವಿ ಬೆಳಗೆರೆ ನಿಧನಕ್ಕೆ ಕಂಬನಿ ಮಿಡಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು..!

ಯಾರಿಗೂ ಅರ್ಥವಾಗದ ಮನುಷ್ಯ. ಒಮ್ಮೆ ಈತನ ಮಾತು ಸರಿ ಅನ್ನಿಸುತ್ತದೆ. ಕೆಲವೊಮ್ಮೆ ಬೇಕಿತ್ತ ಈ ಮಾತು ಅನ್ನಿಸುತ್ತದೆ. 30 ವರ್ಷದಿಂದ ಬಲ್ಲೆ. ಆದರೂ ನನಗೆ ಅರ್ಥವಾಗದ ಮನುಷ್ಯ. ಸಾಮಾನ್ಯ ಅಸಮಾನ್ಯ ಆದದ್ದು ಮಾತ್ರ ಅನುಸರಣೀಯ. ರವಿ ಅವರ ಖಾಸಾಬಾತ್ ಬರವಣಿಗೆ ನನ್ನ ಅಚ್ಚುಮೆಚ್ಚು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನವರಸ ನಾಯಕ ಟ್ವೀಟ್​ ಮಾಡಿದ್ದಾರೆ.

Anitha E | news18-kannada
Updated:November 13, 2020, 12:27 PM IST
Ravi Belagere: ರವಿ ಬೆಳಗೆರೆ ನಿಧನಕ್ಕೆ ಕಂಬನಿ ಮಿಡಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು..!
ರವಿ ಬೆಳಗೆರೆ
  • Share this:
ಹಿರಿಯ ಪತ್ರಕರ್ತ ಹಾಗೂ ಸಾಹಿತಿ ರವಿ ಬೆಳಗೆರೆ ವಿಧಿವಶರಾಗಿದ್ದಾರೆ. ನಿನ್ನೆ ಮಧ್ಯರಾತ್ರಿ 1 ಗಂಟೆಗೆ ರವಿ ಬೆಳಗೆರೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ಹಾಯ್​ ಬೆಂಗಳೂರು ಕಚೇರಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಿನ್ನೆ ರಾತ್ರಿ ಊಟ ಮುಗಿಸಿ, ನಿದ್ರೆ ಮಾಡುತ್ತಿದ್ದಾಗ ಅಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪತ್ರಕರ್ತರಾಗಿದ್ದ ರವಿ ಬೆಳಗೆರೆ ಅವರಿಗೆ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದೊಂದಿಗೆ ಸಂಪರ್ಕವಿತ್ತು. ಅವರ ಅಗಲಿಕೆಗೆ ಸಿನಿ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ನಿರ್ದೇಶಕ ಯೋಗರಾಜ್​ ಭಟ್​, ಕಿಚ್ಚ ಸುದೀಪ್​, ಟಿ.ಎನ್​. ಸೀತಾರಾಮ್​ ಸೇರಿದಂತೆ ಹಲವಾರು ಮಂದಿ ಸಂತಾಪ ಸೂಚಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಯೋಗರಾಜ್​ ಭಟ್​ ಅವರು ರವಿ ಬೆಳಗೆರೆ ಅವರ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಬಿಗ್ ಬಾಸ್​ ಮನೆಯಲ್ಲಿ ರವಿ ಬೆಳಗೆರೆ ಅವರೊಂದಿಗೆ ಒಂದು ವಾರ ಕಳೆದಿದ್ದ ದೀಪಿಕಾ ದಾಸ್​ ಸಹ ಅಂತಿಮ ದರ್ಶನ ಪಡೆದಿದ್ದಾರೆ. 

ಯೋಗರಾಜ್​ ಭಟ್​ ಅವರು ರವಿ ಬೆಳಗೆರೆ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅವರಿಗೆ ಅನಾರೋಗ್ಯ ಕಾಡ್ತಾನೆ ಇತ್ತು. ಸಾವು ಬಂದು ಕರೆದಾಗ ಹೋಗಿ ಬಿಟ್ಟಿದ್ದಾರೆ. ಕಾವ್ಯಾತ್ಮಕ ಆತ್ಮ ಅವರದ್ದು‌. ನಮ್ಮ ಸಿನಿಮಾ ಹಾಗೂ ಹಾಡಿನ ಬಗ್ಗೆ ಮಾತನಾಡಿದ್ದರು, ತುಂಬಾ ವೇದಾಂತಗಳನ್ನೂ ಹೇಳಿದ್ದರು. ಮಾದರಿ ಪತ್ರಕರ್ತರು, ಹೋಗಿಬನ್ನಿ ಅನ್ನೋದು ಬಿಟ್ರೆ, ಇನ್ನೇನು ಹೇಳಲು ಇಲ್ಲ. ಬಯಲು ಸೀಮೆ ಮಾತು ಅವರೊಂದಿಗೆ ಮಾತ್ನಾಡ್ತಿದ್ದೆ, ಹಿಂದಿ ಉರ್ದು ಇಬ್ಬರಿಗೂ ಬರ್ತಿತ್ತು. ಸಾಕಷ್ಟು ವಿಚಾರ ಮಾತನಾಡಿಕೊಳ್ಳುತ್ತಿದ್ವಿ.ಕಳೆದ ವರ್ಷ ಕರಾವಳಿಯಲ್ಲಿ ನನಗೆ ಅವಾರ್ಡ್ ಕೊಟ್ಟಿದ್ರು. ನಾಲ್ಕಾರು ತಿಂಗಳ ಹಿಂದೆ ಕೊನೆ ಸಲ  ಭೇಟಿಯಾಗಿದ್ದೆ.

ನಿರ್ದೇಶಕ ಟಿ.ಎನ್​. ಸೀತಾರಾಮ್​ ಅವರೂ ರವಿ ಬೆಳಗೆರೆ ಅವರೊಂದಿಗಿದ್ದ ಒಡನಾಟ ಬಗ್ಗೆ ತಮ್ಮ ಫೇಸ್​ಬುಕ್​ನಲ್ಲಿ ಬಹಳ ನೋವಿನಿಂದ ಬರೆದುಕೊಂಡಿದ್ದಾರೆ. ಯಾರೂ ತೋರಿಸದಷ್ಟು ಅಕ್ಕರೆಯನ್ನು ತೋರಿದ್ದೀರಿ. ಕಷ್ಟ ಬಂದಾಗಲೆಲ್ಲ ಓಡಿ ಬಂದು ಧೈರ್ಯ ತುಂಬಿದ್ದೀರಿ. ದಶದಿಕ್ಕುಗಳಲ್ಲಿಯಲ್ಲಿಯೂ ಏಕ ಕಾಲದಲ್ಲಿ ಹೋರಾಟ ಮಾಡುತ್ತಾ, ಹರಟೆ ಹೊಡೆಯುತ್ತಾ, ಸುಂದರ ಮತ್ತು ವಿಶಿಷ್ಟ ನೆನಪುಗಳನ್ನು ಹಂಚುತ್ತಾ, ಸಾಂತ್ವನ ಹೇಳುತ್ತಾ, ಧೈರ್ಯ ತುಬುತ್ತಾ, ವಿಕಿಪೀಡಿಯಾದಂತೆ ಜಗತ್ತಿನ ಎಲ್ಲ ವಿಚಾರಗಳನ್ನೂ ತಿಳಿದುಕೊಂಡು ಹಂಚುತ್ತಾ, ಜಗಳವಾಡುತ್ತಾ, ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾ, ಕಷ್ಟ ಬಂದರೆ ರವಿ ಇದ್ದಾನೆ ಎಂಬ ಭಾವನೆ ಮನಸ್ಸಿಗೆ ತರುತ್ತಾ ಎಂದು ನೊಂದುಕೊಂಡಿದ್ದಾರೆ.ಇನ್ನು ಕಿಚ್ಚ ಸುದೀಪ್​ ಅವರು ಸಹ ರವಿ ಬೆಳಗೆರೆ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಬಂದಾಗ ತೆಗೆದಿದ್ದ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.ನಟ ಜಗ್ಗೇಶ್​ ಸಹ ರವಿ ಬೆಳಗೆರೆ ಅಗಲಿಕಗೆ ಸಂತಾಪ ಸೂಚಿಸಿದ್ದಾರೆ. ಯಾರಿಗೂ ಅರ್ಥವಾಗದ ಮನುಷ್ಯ. ಒಮ್ಮೆ ಈತನ ಮಾತು ಸರಿ ಅನ್ನಿಸುತ್ತದೆ. ಕೆಲವೊಮ್ಮೆ ಬೇಕಿತ್ತ ಈ ಮಾತು ಅನ್ನಿಸುತ್ತದೆ. 30 ವರ್ಷದಿಂದ ಬಲ್ಲೆ. ಆದರೂ ನನಗೆ ಅರ್ಥವಾಗದ ಮನುಷ್ಯ. ಸಾಮಾನ್ಯ ಅಸಮಾನ್ಯ ಆದದ್ದು ಮಾತ್ರ ಅನುಸರಣೀಯ. ರವಿ ಅವರ ಖಾಸಾಬಾತ್ ಬರವಣಿಗೆ ನನ್ನ ಅಚ್ಚುಮೆಚ್ಚು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನವರಸ ನಾಯಕ ಟ್ವೀಟ್​ ಮಾಡಿದ್ದಾರೆ.ರವಿ ಬೆಳಗೆರೆ ಅವರ ಮಗ ನನಗೆ ಒಳ್ಳೆಯ ಸ್ನೇಹಿತ. ಹಾಗಾಗಿ ಇಡೀ ಕುಟುಂಬದ ಜೊತೆಗೆ ನನಗೆ ಒಳ್ಳೆ ಒಡನಾಟವಿತ್ತು. ಅವರಿಗೆ ಎಲ್ಲ ವಿಚಾರದಲ್ಲೂ ಕ್ಲಾರಿಟಿ ಇರ್ತಿತ್ತು. ಬಹಳ ಧೈರ್ಯವಂತ ವ್ಯಕ್ತಿ ಎಂದಿದ್ದಾರೆ ನಟ ರಾಕೇಶ್​ ಅಡಿಗ.

ಇದನ್ನೂ ಓದಿ: ಒಳ್ಳೆಯ ನಟನಾದರೂ ರವಿ ಬೆಳಗೆರೆ ಹೆಚ್ಚು ಸಿನಿಮಾಗಳಲ್ಲಿ ಯಾಕೆ ನಟಿಸಲಿಲ್ಲ?

ಬಿಗ್ ಬಾಸ್ ನಲ್ಲಿ ಒಂದೇ ಮನೆಯಲ್ಲಿದ್ದೆವು. ಅಲ್ಲೇ ಕೊನೆಯ ಬಾರಿ ಮಾತನಾಡಿದ್ದು.  ಒಂದು ವಾರ ಅಷ್ಟೇ ನಾನು ಅವರ ಜೊತೆ ಸಮಯ ಕಳೆದಿದ್ದು. ಆದರೆ ಎಷ್ಟೊಂದು ವರ್ಷಗಳಿಂದ‌ ಪರಿಚಯ ಇದ್ದವರ ರೀತಿ ಇತ್ತು. ಹೊರಗಡೆ ಪ್ರಪಂಚ ನೋಡಿದ ಬೆಳಗೆರೆ ಬೇರೆ, ನಾವು ನೋಡಿದ ರವಿ ಬೆಳೆಗರೆ ಬೇರೆ. ದಿನ ಕಳೆದಂತೆ ಅವರು ನಮ್ಮೊಟ್ಟಿಗೆ ಚೆನ್ನಾಗಿರಲಾರಂಭಿಸಿದ್ದರು. ತುಂಬಾ ಫ್ರೆಂಡ್ಲಿಯಾಗಿ ಇರ್ತಿದ್ರು. ಸಿಗರೇಟ್ ವಿಚಾರವಾಗಿ ನಾನು ಬೈದಿದ್ದೆ. ಆನಂತರ ನನ್ನ ನೋಡ್ತಿದ್ರೆ ,ಭಯ ಪಡುವ ರೀತಿಯಲ್ಲಿ ಇರ್ತಿದ್ರು. ನನಗೆ ದಾಸಾನು ದಾಸ ಎಂದು ಲೈನ್ ಬರೆದುಕೊಟ್ಟಿದ್ರು. ಈಗ ಅವರ ಸಾವಿನ ಸುದ್ದಿ ತುಂಬಾ ನೋವು ನೀಡಿದೆ. ಬಿಗ್ ಬಾಸ್​ನಲ್ಲೇ ನಾವು ನೋಡಿದ್ದು, ಮಾತಾಡಿದ್ದು. ಆ ಬಳಿಕ ಸಿಕ್ಕಿರಲಿಲ್ಲ ಎಂದು ಹಳೇ ನೆನಪುಗಳನ್ನು ಮೆಲುಕು ಹಾಕಿದ್ದಾರೆ ದೀಪಿಕಾ ದಾಸ್​.ನಮ್ಮ ಆತ್ಮೀಯ ಗೆಳೆಯ. ರವಿ ಬೆಳಗೆರೆ ಅವರು ಬಹುಮುಖ ಪ್ರತಿಭೆ. 30 ವರ್ಷಗಳ ಸ್ನೇಹ ಸಂಬಂಧ. ಅವರ ಅಗಲಿಕೆ ತುಂಬಾ ನೋವು ತಂದಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ ನಿರ್ಮಾಪಕ ಕರಿಬಸವಯ್ಯ.
Published by: Anitha E
First published: November 13, 2020, 11:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories