Ravi Belagere: ಬಿಗ್‌ ಬಾಸ್‌ನಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ರವಿ ಬೆಳಗೆರೆ; ಹೇಗಿತ್ತು ಗೊತ್ತಾ ಅವರ ಬಿಗ್ ಬಾಸ್ ದಿನಗಳು

ರವಿ ಬೆಳಗೆರೆ ಬಿಗ್​ ಬಾಸ್​​​-7ರಲ್ಲಿ ಸ್ಪರ್ಧಿಯಾಗಿ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಭಾರೀ ವೈರಲ್​ ಆಗಿತ್ತು. ಕೆಲವರು ಇದನ್ನು ನಂಬಿದ್ದರೆ ಇನ್ನೂ ಕೆಲವರು ಇದು ವದಂತಿ ಎಂದಿದ್ದರು. ಆದರೆ, ಈ ವಿಚಾರ ನಿಜವಾಗಿತ್ತು.

ರವಿ ಬೆಳಗೆರೆ

ರವಿ ಬೆಳಗೆರೆ

 • Share this:
  ಕನ್ನಡದ ಖ್ಯಾತ ಪತ್ರಕರ್ತ ಹಾಗೂ ಸಾಹಿತಿ ರವಿ ಬೆಳಗೆರೆ ಮಧ್ಯರಾತ್ರಿ 1 ಗಂಟೆಗೆ ವಿಧಿವಶರಾಗಿದ್ದಾರೆ. 62 ವರ್ಷದ ರವಿ ಬೆಳಗೆರೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ಹಾಯ್​ ಬೆಂಗಳೂರು ಕಚೇರಿಯಲ್ಲಿ ರಾತ್ರಿ ಊಟ ಮುಗಿಸಿ, ನಿದ್ರೆ ಮಾಡುತ್ತಿದ್ದಾಗ ಅಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕಳೆದ ವರ್ಷ ನಡೆದ ಕನ್ನಡ ಬಿಗ್​ ಬಾಸ್​ 7ನೇ ಸೀಸನ್​ನಲ್ಲಿ ರವಿ ಬೆಳಗೆರೆ ಸ್ಪರ್ಧಿಯಾಗಿ ತೆರಳಿದ್ದರು. ಅನಾರೋಗ್ಯದ ಮಧ್ಯೆಯೂ ರವಿ ಬೆಳಗೆರೆ ಬಿಗ್​ ಬಾಸ್​ ಮನೆಗೆ ಬಂದು ಎಲ್ಲರನ್ನೂ ರಂಜಿಸಿ ಹೋಗಿದ್ದರು.

  ರವಿ ಬೆಳಗೆರೆ ಬಿಗ್​ ಬಾಸ್​​​-7ರಲ್ಲಿ ಸ್ಪರ್ಧಿಯಾಗಿ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಭಾರೀ ವೈರಲ್​ ಆಗಿತ್ತು. ಕೆಲವರು ಇದನ್ನು ನಂಬಿದ್ದರೆ ಇನ್ನೂ ಕೆಲವರು ಇದು ವದಂತಿ ಎಂದಿದ್ದರು. ಆದರೆ, ಈ ವಿಚಾರ ನಿಜವಾಗಿತ್ತು. ರವಿ ಬೆಳಗೆರೆ ಬಿಗ್​ ಬಾಸ್​ ರಿಯಾಲಿಟಿ ಶೋಗೆ ಬಂದಿದ್ದರು.

  ಅವರು ಎಲ್ಲ ಸ್ಪರ್ಧಿಗಳಂತೆ ಬಿಗ್​ ಬಾಸ್​ ಮನೆಯಲ್ಲಿದ್ದರು. ಈ ಮಧ್ಯೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಹೀಗಾಗಿ, ಅವರು ಮನೆಯಲ್ಲೇ ಕುಸಿದು ಬಿದ್ದಿದ್ದಾರೆ ಎನ್ನುವ ಮಾತು ಹರಿದಾಡಿತ್ತು. ಆದರೆ, ಅಚ್ಚರಿ ಎಂಬಂತೆ ಅವರು ಆಸ್ಪತ್ರೆಗೆ ತೆರಳಿ ಮತ್ತೆ ಬಿಗ್​ ಬಾಸ್​ ಮನೆಗೆ ಆಗಮಿಸಿದ್ದರು. ನಂತರ ಒಂದು ವಾರಗಳ ಕಾಲ ಅತಿಥಿಯಾಗಿ ಬಿಗ್ ಬಾಸ್​ ಮನೆಯಲ್ಲಿದ್ದರು ರವಿ ಬೆಳಗೆರೆ.

  ಇನ್ನು, ಬಿಗ್​ ಬಾಸ್​ ಮನೆ ಸೇರಲು ರವಿ ಬೆಳಗೆರೆ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಒಂದು ಮೂಲದ ಪ್ರಕಾರ, ಈ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲು ಬಿಗ್ ಬಾಸ್ ಆಯೋಜಕರು ರವಿ ಬೆಳಗೆರೆ ಅವರಿಗೆ ನೀಡದ ಆಫರ್ 7 ಲಕ್ಷ ರೂಪಾಯಿ ಅಂತೆ. ಆದರೆ, ಮನೆಯಿಂದ ಹೊರ ಬಂದಿರುವ ರವಿ ಬೆಳಗೆರೆ ಅವರು ಸಂಭಾವನೆ ಬೇಡ ಎಂದಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿತ್ತು.
  Published by:Rajesh Duggumane
  First published: