ಕೆ.ಜಿ.ಎಫ್ ಸಿನಿಮಾದ ಸಂಗೀತ ನಿರ್ದೇಶಕ ರವಿ ಬಸ್ರೂರು ಕಣ್ಣೀರಿಡುತ್ತಾ ತಮ್ಮ ನೋವನ್ನು ಹಂಚಿಕೊಂಡಿದ್ದ ವಿಡಿಯೋ ಕಳೆದ ವರ್ಷ ಎಲ್ಲಡೆ ಹರಿದಾಡಿತ್ತು. ಯಶಸ್ವೀ ಸಂಗೀತ ನಿರ್ದೇಶಕ ಹೀಗೆ ಕಣ್ಣೀರಿಡುತ್ತಾ ವಿಡಿಯೋ ಮಾಡಿದನ್ನು ನೋಡಿದವರು ಅದನ್ನು ವೈರಲ್ ಮಾಡಿದ್ದರು. ರವಿ ಬಸ್ರೂರು ಸಂಗೀತ ನಿರ್ದೇಶನದ ಜತೆಗೆ ಸಿನಿಮಾಗಳನ್ನೂ ನಿರ್ದೇಶಿಸುತ್ತಾರೆ. ಅವರೇ ಆ್ಯಕ್ಷನ್ ಕಟ್ ಹೇಳಿರುವ 'ಗಿರ್ಮಿಟ್' ಸಿನಿಮಾ ಇತ್ತೀಚೆಗಷ್ಟೆ ತೆರೆ ಕಂಡಿದೆ. ಆರಂಭದಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತಾದರೂ, ಜನ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಹೋಗಲಿಲ್ಲ. ಇದರಿಂದಾಗಿಯೇ ಕಷ್ಟಪಟ್ಟು ಮಾಡಿದ ಸಿನಿಮಾ ನೋಡಲು ಜನರು ಬರುತ್ತಿಲ್ಲ ಎಂದು ರವಿ ಬಸ್ರೂರು ಕಣ್ಣೀರಿಟ್ಟಿದ್ದರು. ಈಗ ಇದೇ ಸಂಗೀತ ನಿರ್ದೇಶಕ ಒಂದು ಸಿಹಿ ಸುದ್ದಿಯೊಂದಿಗೆ ಮರಳಿದ್ದಾರೆ. ಹಳ್ಳಿ ಬಿಡುವಾಗ ಕಂಡಿದ್ದ ಕನಸನ್ನು ರವಿ ಬಸ್ರೂರು ಈಗ ನನಸು ಮಾಡಿಕೊಂಡಿದ್ದಾರೆ.
ಹೌದು ತಮ್ಮ ಹುಟ್ಟೂರಿನಲ್ಲಿ ರವಿ ಬಸ್ರೂರು ಒಂದು ಸುಸಜ್ಜಿತ ಮ್ಯೂಸಿಕ್ ಸ್ಟುಡಿಯೋ ಮಾಡಬೇಕೆಂದು ಕನಸು ಕಂಡಿದ್ದರಂತೆ. ಈಗ ಅದು ನನಸಾಗಿದೆ. ಸ್ಟುಡಿಯೋ ಕೆಲಸ ಮುಗಿದಿದೆ. ಅಲ್ಲಿ ಈಗಾಗಲೇ ಅಲ್ಲಿ ಕೆಜಿಎಫ್ ಚಾಪ್ಟರ್ 2 ಹಾಗೂ ಕಬ್ಜ ಸಿನಿಮಾದ ಕೆಲಸಗಳು ನಡೆಯುತ್ತಿವೆ.
View this post on Instagram
View this post on Instagram
ಇದನ್ನೂ ಓದಿ: ಮತ್ತೆ ಕೃಷಿ ಮಾಡುತ್ತಾ ಕಾಣಿಸಿಕೊಂಡ ಸಲ್ಮಾನ್ ಖಾನ್..!
ಈ ಸ್ಟುಡಿಯೋದ ಕೆಲಸ ಕಳೆದ ಒಂದುವರೆ ವರ್ಷದಿಂದ ನಡೆಯುತ್ತಿದ್ದು, ಈಗ ಪೂರ್ಣಗೊಂಡಿದೆ. 3 ಕೋಟಿಗೂ ಅಧಿಕವೆಚ್ಚದಲ್ಲಿ ಸ್ಟುಡಿಯೋಗೆ ನಿರ್ಮಾಣ ಮಾಡಲಾಗಿದೆಯಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ