KGF Chapter 2: ನಮ್ಮಿಬ್ಬರನ್ನೂ ಒಂದು sceneನಲ್ಲಾದರೂ ಸೇರಿಸಿ.. ಪ್ರಶಾಂತ್ ನೀಲ್‌ಗೆ ರವೀನಾ ಬೇಡಿಕೆ

ಕೆಜಿಎಫ್ ಭಾಗ 2 ರಲ್ಲಿ ಸಂಜಯ್ ಖಳನಾಯಕ ಅಧೀರ ಪಾತ್ರವನ್ನು ನಿರ್ವಹಿಸಿದರೆ, ರವೀನಾ ಚಿತ್ರದಲ್ಲಿ ಪ್ರಧಾನ ಮಂತ್ರಿ ಪಾತ್ರವನ್ನು ರಾಮಿಕಾ ಸೇನ್ ಆಗಿ ನಿರ್ವಹಿಸಿದ್ದಾರೆ.

KGF 2 ಚಿತ್ರದ ಪೋಸ್ಟರ್

KGF 2 ಚಿತ್ರದ ಪೋಸ್ಟರ್

  • Share this:
ಬಹುನೀರಿಕ್ಷಿತ, ಫ್ಯಾನ್ ಇಂಡಿಯಾ ಯಶ್ ಆಭಿನಯದ (Yash Feature) ಚಿತ್ರ ಕೆಜಿಎಫ್-2ನಲ್ಲಿ ಬಾಲಿವುಡ್ (Bollywood) ನ ಬಿಗ್ ಸ್ಟಾರ್ಸ್ ಇಬ್ಬರು ನಟಿಸುತ್ತಿರುವುದು ನಮಗೆ ನಿಮಗೆ ಎಲ್ಲಾ ಗೊತ್ತಿರುವ ವಿಚಾರ. ಆದರೆ ಇವರಿಬ್ಬರು ಸ್ಟಾರ್‌ಗಳು ಒಂದೇ ಒಂದು ದೃಶ್ಯದಲ್ಲೂ ಕೂಡ ಜೊತೆಯಾಗಿ ಕಾಣಿಸಿಕೊಂಡಿಲ್ಲವಂತೆ. ತೊಂಬತ್ತರ ದಶಕದ ಬ್ಯೂಟಿ ನಟಿ ರವೀನಾ ಟಂಡನ್ (Raveena Tandon) ಮತ್ತು ಹಿಟ್ ಮೇಲೆ ಹಿಟ್ ನೀಡುತ್ತಿದ್ದ ಸಂಜಯ್​ ದತ್​(Sanjay Dutt) ಇವರಿಬ್ಬರು ನಟಿಸಿರುವ ‘ಕೆಜಿಎಫ್​: ಚಾಪ್ಟರ್​ 2’ (KGF: Chapter 2) ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಫುಲ್ ಹೈಪ್​ ಸೃಷ್ಟಿ
ಈ ಬಾಲಿವುಡ್​ ಕಲಾವಿದರ ಎಂಟ್ರಿಯಿಂದಾಗಿ ‘ಕೆಜಿಎಫ್​ 2’ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿದೆ. ರವೀನಾ ಟಂಡನ್​ ನಿಭಾಯಿಸಿರುವ ರಮಿಕಾ ಸೇನ್​ ಪಾತ್ರ ಹಾಗೂ ಸಂಜಯ್​ ದತ್​ ಅಭಿನಯಿಸಿರುವ ಅಧೀರ ಪಾತ್ರವು ಸಿನಿ ರಸಿಕರಲ್ಲಿ ಫುಲ್ ಹೈಪ್​ ಸೃಷ್ಟಿ ಮಾಡಿದೆ. ಇಬ್ಬರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡರೂ ಸಹ ಇಬ್ಬರು ಜೊತೆಯಾಗಿರುವ ಸೀನ್ ಸಿನಿಮಾದಲ್ಲಿ ಒಂದೂ ಇಲ್ಲವಂತೆ. ಹೀಗಾಗಿ ರವೀನಾ ಟಂಡನ್ ಮತ್ತು ಸಂಜಯ್​ ದತ್ ನಿರ್ದೇಶಕ ಪ್ರಶಾಂತ್ ನೀಲ್ ಮುಂದೆ ಡಿಮ್ಯಾಂಡ್ ಒಂದನ್ನು ಇಟ್ಟಿದ್ದರಂತೆ.. ಏನದು ಬೇಡಿಕೆ ಇದರ ಬಗ್ಗೆ ಇಲ್ಲಿದೆ ಮಾಹಿತಿ.

ಕೆಜಿಎಫ್​ 2 ಸಿನಿಮಾದಲ್ಲಿ ಸಂಜಯ್ ಜೊತೆ ಕೆಲಸ ಮಾಡಲು ನಾನು ತುಂಬಾ ಉತ್ಸುಕಳಾಗಿದ್ದೆ, ಆದರೆ ಚಿತ್ರಕಥೆಯಲ್ಲಿ ನಾವಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವ ಯಾವ ದೃಶ್ಯವು ಇರಲಿಲ್ಲ ಅಂತಾ ರವೀನಾ ವೆಬ್ ಪೋರ್ಟಲ್ ಗೆ ಹೇಳಿಕೊಂಡಿದ್ದಾರೆ. ಅದಾಗ್ಯೂ ನಾನು, ಸಂಜಯ್ ನಮ್ಮಿಬ್ಬರನ್ನು ಒಂದು ಸೀನ್ ನ್ನಲ್ಲಾದರೂ ಒಟ್ಟಿಗೆ ತೋರಿಸಿ ಅಂತಾ ನಿರ್ದೇಶಕ ಪ್ರಶಾಂತ್ ನೀಲ್ಗೆ ಕೇಳಿದ್ದೆ, ಆದರೆ ಚಿತ್ರಕಥೆ ಅದಕ್ಕೆ ಅನುಗುಣವಾಗಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಇದನ್ನೂ ಓದಿ: Yash ಮುಂದಿನ ಚಿತ್ರಕ್ಕೆ 'ಮಫ್ತಿ' ನಿರ್ದೇಶಕ ಆಕ್ಷನ್ ಕಟ್? ಯಾರೋ ಕಿಡಿಗೇಡಿಗಳು ಹಬ್ಬಿಸಿದ ಸುದ್ದಿಯಿಂದ ಫುಲ್ ಕನ್ಫ್ಯೂಶನ್!

ಚಿನ್ನದ ಗಣಿ ರಾಜ
ಈ ಹಿಂದೆ ಹಲವು ಸಿನಿಮಾಗಳಲ್ಲಿ ರವೀನಾ ಟಂಡನ್​ ಮತ್ತು ಸಂಜಯ್​ ದತ್​ ಜತೆಯಾಗಿ ನಟಿಸಿದ್ದರು. ಜೀನಾ ಮರ್ನಾ ತೇರೆ ಸಾಂಗ್ (1992), ಕ್ಷತ್ರಿಯ (1993), ಜಮಾನೆ ಸೆ ಕ್ಯಾ ದರ್ನಾ (1994), ವಿಜೇತಾ (1996) ಮತ್ತು ಜಂಗ್ (2000) ನಂತಹ ಹಲವಾರು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ಜೋಡಿ ತೆರೆಹಂಚಿಕೊಂಡಿದ್ದ ‘ಕ್ಷತ್ರಿಯಾ’ (1993), ‘ಆತಿಶ್​’ (1994) ಸಿನಿಮಾಗಳು ಹಿಟ್​ ಆಗಿದ್ದವು. 1996ರಲ್ಲಿ ತೆರೆಕಂಡ ‘ವಿಜೇತ’ ಚಿತ್ರ ಸೋಲುಂಡಿತು.

ಕೆಜಿಎಫ್ ಭಾಗ 2 ರಲ್ಲಿ ಸಂಜಯ್ ಖಳನಾಯಕ ಅಧೀರ ಪಾತ್ರವನ್ನು ನಿರ್ವಹಿಸಿದರೆ, ರವೀನಾ ಚಿತ್ರದಲ್ಲಿ ಪ್ರಧಾನ ಮಂತ್ರಿ ಪಾತ್ರವನ್ನು ರಾಮಿಕಾ ಸೇನ್ ಆಗಿ ನಿರ್ವಹಿಸಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಂದ ಸ್ಫೂರ್ತಿ ಪಡೆದ ಪಾತ್ರ ಎಂಬ ವದಂತಿಗಳನ್ನು ರವೀನಾ ಅವರು ನಿರಾಕರಿಸಿದ್ದಾರೆ. ಕೆಜಿಎಫ್-2 ಚಿತ್ರಗಳು ಬಡತನದಿಂದ ಮೇಲೆದ್ದು ಚಿನ್ನದ ಗಣಿ ರಾಜನಾಗುವ ರಾಕಿ ಕಥೆಯನ್ನು ಆಧರಿಸಿದೆ ಅಷ್ಟೇ ಎಂದಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಎಂಟ್ರಿ
ರವೀನಾ ಈ ಹಿಂದೆ ನೀಡಿದ ಸಂದರ್ಶನದಲ್ಲಿ ಕೆಜಿಎಫ್ 1 ನಲ್ಲಿಯೂ ಕಾಣಿಸಿಕೊಳ್ಳಬೇಕಿತ್ತು ಆದರೆ ಆ ಸಮಯದಲ್ಲಿ, ಕೆಜಿಎಫ್ 2 ರ ಕಥೆ, ವಿಶೇಷವಾಗಿ ನನ್ನ ಪಾತ್ರವು ಸಂಪೂರ್ಣವಾಗಿ ರೆಡಿ ಆಗಿರಲಿಲ್ಲ ಎಂದಿದ್ದರು. ನಾನು ಕೆಜಿಎಫ್ 1ನೋಡಿ ನಿಜಕ್ಕೂ ಆಶ್ಚರ್ಯ ಆಯಿತು. ಇದು ಹೊಸ ಯುಗದ ಸಿನಿಮಾ, ಇತಿಹಾಸ ಸೃಷ್ಠಿ ಮಾಡುತ್ತೆ ಅಂದುಕೊಂಡಿದ್ದೆ ಎಂದು ಚಿತ್ರವನ್ನು ಮೆಚ್ಚಿಕೊಂಡಿದ್ದರು.

ರವೀನಾ ಟಂಡನಾ ಕನ್ನಡ ಸಿನಿಮಾಕ್ಕೆ ಹೊಸಬರೇನಲ್ಲಾ, 1999ರಲ್ಲಿ ಬಿಡುಗಡೆಯಾದ ‘ಉಪೇಂದ್ರ’ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದರು. ಬಹುವರ್ಷಗಳ ಬಳಿಕ ಅವರು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ. ಸಂಜಯ್​ ದತ್​ ಅವರು ‘ಕೆಜಿಎಫ್​ 2’ ಮೂಲಕ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.

ಇದನ್ನೂ ಓದಿ: 2022 Most Expected Movies: ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕೆಜಿಎಫ್​-2: ಕಂಪ್ಲೀಟ್​ ಡೀಟೆಲ್ಸ್​ ಇಲ್ಲಿದೆ..

ರಾಕಿಂಗ್ ಸ್ಟಾರ್ ಯಶ್ ಆಭಿನಯದ ಕೆಜಿಎಫ್​ ಸಿನಿಮಾ ಬಾಲಿವುಡ್​ ಹಾಗೂ ಟಾಲಿವುಡ್​ ಸೇರಿ ವಿಶ್ವಾದಾದ್ಯಂತ ದೊಡ್ಡ ಮಟ್ಟದ ಹವಾ ಮಾಡಿತ್ತು. ಈ ಕಾರಣಕ್ಕೆ ‘ಕೆಜಿಎಫ್​ 2’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದ್ದು, ‘ಕೆಜಿಎಫ್​ 2’ ಚಿತ್ರ ಬಿಡುಗಡೆಗೆ ಸಿನಿ ರಸಿಕರು ಕಾಯುತ್ತಿದ್ದಾರೆ.
Published by:vanithasanjevani vanithasanjevani
First published: