• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ರಿಮೇಕ್​ ಆಗ್ತಿದೆ 'ಮೊಹ್ರಾ'ದ ಟಿಪ್​ ಟಿಪ್ ಬರ್ಸಾ ಪಾನಿ ಹಾಡು: ರವೀನಾ ಟಂಡನ್​ ಜಾಗಕ್ಕೆ ಕತ್ರಿನಾ..!

ರಿಮೇಕ್​ ಆಗ್ತಿದೆ 'ಮೊಹ್ರಾ'ದ ಟಿಪ್​ ಟಿಪ್ ಬರ್ಸಾ ಪಾನಿ ಹಾಡು: ರವೀನಾ ಟಂಡನ್​ ಜಾಗಕ್ಕೆ ಕತ್ರಿನಾ..!

ನಟಿ ರವೀನಾ ಟಂಡನ್​, ನಟ ಅಕ್ಷಯ್​ ಕುಮಾರ್​ ಹಾಗೂ ಕತ್ರಿನಾ ಕೈಫ್​

ನಟಿ ರವೀನಾ ಟಂಡನ್​, ನಟ ಅಕ್ಷಯ್​ ಕುಮಾರ್​ ಹಾಗೂ ಕತ್ರಿನಾ ಕೈಫ್​

ಹಳೆಯ ಹಿಟ್​ ಹಾಡುಗಳನ್ನ ರೀಮಿಕ್ಸ್ ಮಾಡಿ ಮತ್ತೆ ಹೊಸ ಸಿನಿಮಾಗಳಲ್ಲಿ ಬಳಸಿಕೊಳ್ಳುವುದು ಈಗ ಸಾಮಾನ್ಯ. ಈ ಸಾಲಿಗೆ ಬಾಲಿವುಡ್‍ನ ಹಿಟ್​ ನಂಬರ್​ ಮಳೆ ಹಾಡು ಸಹ ಸೇರ್ಪಡೆಯಾಗಿದೆ. ವಿಶೇಷ ಅದಂರೆ ಆ ಹಾಡಿನಲ್ಲಿದ್ದ ನಾಯಕನೇ ಈಗಲೂ ಮಳೆ ಹಾಡಿಗೆಹೆಜ್ಜೆ ಹಾಕಿದ್ದಾರೆ. ಆದರೆ ಅವರೊಂದಿಗೆ ಸೊಂಡ ಬಳುಕಿಸಿದ ನಟಿ ಮಾತ್ರ ಬೇರೆ. 

ಮುಂದೆ ಓದಿ ...
  • News18
  • 4-MIN READ
  • Last Updated :
  • Share this:

ಬಾಲಿವುಡ್​ನಲ್ಲಿ ರವೀನಾ ಹಾಗೂ ಅಕ್ಷಯ್​ ಕುಮಾರ್​ ಜೋಡಿಯನ್ನು ಇಷ್ಟಪಡುವವರ ಹಾಟ್​ ಫೆವರೀಟ್​ ಹಾಡು ಯಾವುದು ಎಂದು ಕೇಳುವ ಅಗತ್ಯವೇ ಇಲ್ಲ. ಕಾರಣ ಈ ಜೋಡಿಯನ್ನು ಇಷ್ಟಪಡುವವರು ಅವರಿಬ್ಬರ ಮಳೆ ಹಾಡನ್ನು ಹೇಗೆ ಮರೆಯಲು ಸಾಧ್ಯ.

ಇಂದಿಗೂ ಮಳೆಯ ಹಾಡು ಎಂದ ಕೂಡಲೇ ನೆನಪಾಗೋದು 'ಮೊಹ್ರಾ' ಸಿನಿಮಾದ ಟಿಪ್​ ಟಿಪ್​ ಬರ್ಸಾ ಪಾನಿ... ಹಾಡು. ಈ ಹಾಡಲ್ಲಿ ನಟ ಅಕ್ಷಯ್​ ಕುಮಾರ್ ಜತೆ ಸೊಂಟ ಬಳುಕಿಸಿರುವ ರವೀನಾ ಟಂಡನ್​ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದ್ದರು.

Mohra Movie Poster
'ಮೊಹ್ರಾ' ಸಿನಿಮಾದಲ್ಲಿ ರವೀನಾ ಹಾಗೂ ಅಕ್ಷಯ್​


1994ರ ಜುಲೈನಲ್ಲಿ ತೆರೆ ಕಂಡಿದ್ದ 'ಮೊಹ್ರಾ' ಚಿತ್ರಕ್ಕೆ ವಿಜು ಶಾ ಸಂಗೀತ ನೀಡಿದ್ದರು. ಈ ಸಿನಿಮಾದ ಹಾಡುಗಳೆಲ್ಲವೂ ಹಿಟ್ ಆಗಿತ್ತಾದರೂ, ರೊಮ್ಯಾಂಟಿಕ್ ಮಳೆ ಹಾಡು ಮಾತ್ರ ಎಲ್ಲರ ನಿದ್ದೆಗೆಡಿಸಿತ್ತು.

ಇದನ್ನೂ ಓದಿ: Rashmika Mandanna: ಸಿನಿಮಾ ಆರಂಭಕ್ಕೂ ಮೊದಲೇ ಕೋಟಿಗೆ ಮಾರಾಟವಾಯ್ತು ರಶ್ಮಿಕಾರ ಚಿತ್ರದ ಪ್ರಸಾರ ಹಕ್ಕು​

ಹೌದು, ತಿಳಿ ಹಳದಿ ಬಣ್ಣದ ಸೀರೆಯಲ್ಲಿ ರವೀನಾ ಟಂಡನ್ ಕುಣಿದು ಕುಪ್ಪಳಿಸುವಾಗ ಅವರ ಪಕ್ಕದಲ್ಲೇ ಹೆಜ್ಜೆ ಹಾಕುತ್ತಿದ್ದ ಅಕ್ಷಯ್​ ಕೆಮಿಸ್ಟ್ರಿ, ನೋಡುಗರಲ್ಲಿ ಬೆಂಕಿ ಹೊತ್ತಿಸಿತ್ತು. 25 ವರ್ಷಗಳು ಕಳೆದರೂ ಈ ಹಾಡು ಇಂದಿಗೂ ಲಕ್ಷಾಂತರ ಮಂದಿಯ ನೆಚ್ಚಿನ ಸಾಂಗ್​.

ಅದಕ್ಕೆ ಈಗಲೂ ರವೀನಾರನ್ನು ಯಾವುದೇ ಕಾರ್ಯಕ್ರಮಗಳಲ್ಲಿ ನೋಡಿದರೂ, ಅವರನ್ನು ಈ ಹಾಡಿಗೆ ಕುಣಿಯುಂತೆ ಅಭಿಮಾನಿಗಳು ಒತ್ತಾಯಿಸುತ್ತಾರೆ.

 


 

ಈಗ ಇದೇ ಟಿಪ್ ಟಿಪ್ ಹಾಡು ಹೊಸ ರೂಪ ಪಡೆಯುತ್ತಿದ್ದು, ಸದ್ಯದಲ್ಲೇ ಬೆಳ್ಳಿ ತೆರೆ ಮೇಲೆ ಅಪ್ಪಳಿಸಲಿದೆ. ನೂರು ಕೋಟಿ ಗಳಿಸುವ ಸಿನಿಮಾಗಳ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶಿಸುತ್ತಿರುವ ಹೊಸ ಸಿನಿಮಾ 'ಸೂರ್ಯವಂಶಿ'. ಈ ಚಿತ್ರದಲ್ಲಿ ಮತ್ತೆ ಈ ಹಾಡನ್ನು ರಿಮೇಕ್ ಮಾಡಲಾಗುತ್ತಿದೆ.

ಆದರೆ ಈ ರೀಮಿಕ್ಸ್​ ಹಾಡಿಗೆ 'ಮೊಹ್ರಾ'ದಲ್ಲಿ ರವೀನಾ ಜತೆ ಹೆಜ್ಜೆ ಹಾಕಿದ್ದ ಖಿಲಾಡಿ ಅಕ್ಷಯ್​ ಕುಮಾರ್​ ಈ ಸಲ ಕತ್ರಿನಾ ಜತೆ ರೊಮ್ಯಾನ್ಸ್​ ಮಾಡಲಿದ್ದಾರೆ. ಈ ಹಾಡಿನ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಚಿತ್ರೀಕರಣದ ವೇಳೆ ತೆಗೆದ ಕೆಲ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

 



 




View this post on Instagram




 

Singing in the rain ☔️ #sooryavanshi @akshaykumar @itsrohitshetty @farahkhankunder


A post shared by Katrina Kaif (@katrinakaif) on








 




View this post on Instagram




 

Me and mummmmyyyyy together after soooooooo long 🌟love u the bestest best ❤️ #sooryavanshi #towelseries


A post shared by Katrina Kaif (@katrinakaif) on










 




View this post on Instagram




 

The man , the magic, the MOVIES 🎥 @itsrohitshetty.. #sooryavanshi #nightshoots #towelseries


A post shared by Katrina Kaif (@katrinakaif) on





ಈ ಹಾಡಿಗೆ ನಿರ್ಮಾಪಕಿ ಹಾಗೂ ನಿರ್ದೇಶಕಿ ಫರಾ ಖಾನ್​ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಹಾಡಿನ ಚಿತ್ರೀಕರಣದ ವೇಳೆ ಕತ್ರಿನಾ ಜತೆ ಟವಲ್​ನಲ್ಲಿರುವ ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಲಾಗಿದೆ. ಇವು ವೈರಲ್​ ಆಗುತ್ತಿವೆ.

ಇನ್ನು ರೀಮಿಕ್ಸ್​ ಆಗಿರುವ ಟಿಪ್​ ಟಿಪ್​ ಹಾಡನ್ನು ರವೀನಾ ಕೇಳಿದ್ದು, ಅವರಿಗೂ ತುಂಬಾ ಇಷ್ಟ ಆಗಿದೆಯಂತೆ. ಅದನ್ನು ತೆರೆ ಮೇಲೆ ನೋಡಲು ಅವರೂ ಕಾತರರಾಗಿದ್ದಾರೆ.

DBoss Darshan: ರಾಬರ್ಟ್​ ಚಿತ್ರೀಕರಣದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ದರ್ಶನ್​


First published: