ಬಾಲಿವುಡ್ ನಟಿ ರವೀನಾ ಟಂಡನ್ (Raveena Tondon) ಬಾಲಿವುಡ್ ನಟ (Bollywood Actor), ಸೂಪರ್ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಜೊತೆಗಿನ ಲವ್ಸ್ಟೋರಿ (Love Story) ನೆನಪಿಸಿಕೊಂಡು ಭಾವುಕರಾದ ಘಟನೆ ನಡೆದಿದೆ. ಕೆಜಿಎಫ್ (KGF) ಚೆಲುವೆ ರವೀನಾ ಅವರು ಸಂದರ್ಶನವೊಂದರಲ್ಲಿ (Interview) ಹಳೆ ಲವ್ಸ್ಟೋರಿ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಸಕ್ಸಸ್ಫುಲ್ ನಟಿ ರವೀನಾ ಟಂಡನ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ಗೆ ನಿಶ್ಚಿತಾರ್ಥ (Engagement) ಆಗಿತ್ತು. ಈ ಜೋಡಿ ಜೊತೆಯಾಗಿ ನಟಿಸಿ ಬಾಲಿವುಡ್ನಲ್ಲಿ ಹಲವಾರು ಸೂಪರ್ಹಿಟ್ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು.
ಮೇ ಕಿಲಾಡಿ ತೂ ಅನಾರಿ (1994), ಮೊಹ್ರಾ (1994) ಸಿನಿಮಾದಲ್ಲಿ ಇವರಿಬ್ಬರ ಜೋಡಿ ಸೂಪರ್ ಹಿಟ್ ಆಗಿದ್ದರು. ಇವರು ಕೆಲವು ವರ್ಷಗಳ ಕಾಲ ಜೊತೆಯಾಗಿದ್ದರು ಎಂದು ಹೇಳಲಾಗಿದೆ. ಆದರೆ ನಂತರದಲ್ಲಿ ಈ ನಿಶ್ಚಿತಾರ್ಥ ಮುರಿದುಬಿತ್ತು. ಈ ಸಂಬಂಧ ಮದುವೆಯ ತನಕ ತಲುಪಲಿಲ್ಲ. ನಟಿ ಅಕ್ಷಯ್ ಕುಮಾರ್ ಜೊತೆಗಿನ ಎಂಗೇಜ್ಮೆಂಟ್ ಮುರಿದುಬಿದ್ದ ಬಗ್ಗೆ ಮಾತನಾಡಿ ಕಣ್ಣೀರಿಟ್ಟಿದ್ದಾರೆ.
What a humble take amongst stars who rant about how tough it is for them
by u/okay177 in BollyBlindsNGossip
ಒಂದು ದಿನ ರಾತ್ರಿ ಡ್ರೈವ್ ಮಾಡುತ್ತಿದ್ದಾಗ ಸ್ಲಮ್ಗಳಿಂದ ತುಂಬಿದ್ದ ಮುಂಬೈನ ಇನ್ನೊಂದು ಮುಖವನ್ನು ನೋಡಿದೆ. ಇದುವೇ ಜೀವನ ಎಂದು ದೇವರೇ ನನ್ನ ಕಣ್ಣು ತೆರೆಸಿದಂತೆ ಎನಿಸಿತು ಎಂದಿದ್ದಾರೆ. ಇದನ್ನು ಜೀವನ ಎನ್ನುತ್ತಾರೆ. ನಾನು ಮರ್ಸಿಡಿಸ್ ಓಡಿಸುತ್ತಿದ್ದೇನೆ. ನನ್ನ ಎರಡು ಕೈ ಕಾಲುಗಳೂ ಇವೆ. ನನ್ನನ್ನು ಜನರು ಸುಂದರಿ ಎಂದು ಕರೆಯುತ್ತಾರೆ. ನನ್ನ ಟೇಬಲ್ ಮೇಲೆ ಊಟ ರೆಡಿ ಇರುತ್ತದೆ. ಮನೆಗೆ ಹೋಗಿ ಎಸಿ ಆನ್ ಮಾಡಿ ಮಲಗಿದರೆ ಆಯಿತು. ಆದರೆ ಸ್ಲಮ್ನಲ್ಲಿ ವ್ಯಕ್ತಿಯೊಬ್ಬ ಕುಡಿದು ಮಹಿಳೆಗೆ ಹೊಡಿಯುತ್ತಿದ್ದ. ಮಗು ಮಳೆಯಲ್ಲಿ ಅಳುತ್ತಾ ನಿಂತಿತ್ತು. ವಿಪರೀತ ಮಳೆಯಿಂದ ರಕ್ಷಣೆ ಪಡೆಯಲು ಮಹಿಳೆಯೊಬ್ಬರು ಪ್ಲಾಸ್ಟಿಕ್ ಮುಚ್ಚುತ್ತಿದ್ದರು. ನನ್ನ ಜೀವನದಲ್ಲಿ ಏನಿಲ್ಲ? ನಾನೇಕೆ ಅಳುತ್ತಿದ್ದೇನೆ ಎಂದು ಆ ಕ್ಷಣಕ್ಕೆ ಅರಿವಾಯಿತು ಎಂದಿದ್ದಾರೆ.
ಇದನ್ನೂ ಓದಿ: Drishyam: 4 ಭಾಷೆಗಳ ನಂತರ ಈಗ ಕೊರಿಯನ್ನಲ್ಲಿ ಸಿದ್ಧವಾಗಲಿದೆ ದೃಶ್ಯಂ ಸಿನಿಮಾ!
ಕೆಲವು ವರ್ಷಗಳ ನಂತರ ಅಕ್ಷಯ್ ಹಾಗೂ ರವೀನಾ ಇಬ್ಬರು ತಮ್ಮ ತಮ್ಮ ಬದುಕಿನಲ್ಲಿ ಮೂವ್ ಆನ್ ಆದರು. ರವೀನಾ ಟಂಡನ್ ನಿರ್ಮಾಪಕ ಅನಿಲ್ ತದ್ಲಾನಿ ಅವರನ್ನು 2004ರಲ್ಲಿ ಮದುವೆಯಾದರು. ಅಕ್ಷಯ್ ಕುಮಾರ್ 2001ರಲ್ಲಿ ಟ್ವಿಂಕಲ್ ಖನ್ನಾ ಅವರನ್ನು ಮದುವೆಯಾದರು.
ಇತ್ತೀಚೆಗೆ ಅಕ್ಷಯ್ ಕುಮಾರ್ ಹಾಗೂ ರವೀನಾ ಟಂಡನ್ ಒಟ್ಟಿಗೆ ಕಾಣಿಸಿಕೊಂಡಾಗ ಎಲ್ಲರೂ ಅಚ್ಚರಿಗೊಂಡರು. ಮುಂಬೈನ ಫ್ಯಾಷನ್ ಇವೆಂಟ್ನಲ್ಲಿ ಈ ಮಾಜಿ ಪ್ರೇಮಿಗಳನ್ನು ಒಟ್ಟಿಗೆ ನೋಡಿ ನೆಟ್ಟಿಗರು ಕೂಡಾ ಶಾಕ್ ಆದರು.ಅವರು ಜೊತೆಯಾಗಿ ಕುಳಿತುಕೊಂಡಿದ್ದ, ಪರಸ್ಪರ ಹಗ್ ಮಾಡಿದ ವಿಡಿಯೋಗಳು ವೈರಲ್ ಆಗಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ