HOME » NEWS » Entertainment » RASKSHIT SHETTY SHARED AN FIRST AUDITION VIDEO OF RASHMIKA MANDANNA FROM KIRIK PARTY ON HER BIRTHDAY AE

Rakshit Shetty-Rashmika: ರಶ್ಮಿಕಾ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಕೋರಿದ ರಕ್ಷಿತ್​ ಶೆಟ್ಟಿ: ಸಾನ್ವಿಯ ಮೊದಲ ಆಡಿಷನ್​ ವಿಡಿಯೋ ಇಲ್ಲಿದೆ..!

ಟಾಲಿವುಡ್​​ನಲ್ಲಿ ಬೆಳೆಯುತ್ತಾ ಯಶಸ್ಸು ಸಾಧಿಸುತ್ತಾ ಮುನ್ನುಗ್ಗುತ್ತಿದ್ದ ರಶ್ಮಿಕಾ ಟ್ರೋಲಿಗರಿಗೆ ಮುಟ್ಟಿ ನೋಡಿಕೊಳ್ಳುವಂತೆ ಪ್ರತಿಕ್ರಿಯೆ ಕೊಡಲಾರಂಭಿಸಿದ್ದರು. ಅಂತೆಯೇ ರಕ್ಷಿತ್​ ಹಾಗೂ ರಶ್ಮಿಕಾ ನಡುವಿನ ದೂರ ಮೆಲ್ಲನೆ ಕಡಿಮೆಯಾಗಲಾರಂಭಿಸಿತು.

Anitha E | news18-kannada
Updated:April 6, 2021, 9:10 AM IST
Rakshit Shetty-Rashmika: ರಶ್ಮಿಕಾ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಕೋರಿದ ರಕ್ಷಿತ್​ ಶೆಟ್ಟಿ: ಸಾನ್ವಿಯ ಮೊದಲ ಆಡಿಷನ್​ ವಿಡಿಯೋ ಇಲ್ಲಿದೆ..!
ರಶ್ಮಿಕಾ ಮಂದಣ್ಣ-ರಕ್ಷಿತ್ ಶೆಟ್ಟಿ
  • Share this:
ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್​ ಶೆಟ್ಟಿ ಅವರ ಲವ್​ ಸ್ಟೋರಿ, ನಿಶ್ಚಿತಾರ್ಥ ಹಾಗೂ ಬ್ರೇಕಪ್​ ಬಗ್ಗೆ ಸಾಕಷ್ಟು ಸಲ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆದಿವೆ. ಈಗಲೂ ಸಹ ಕನ್ನಡ ಸಿನಿಪ್ರಿಯರು ರಶ್ಮಿಕಾ ಎಂದ ಕೂಡಲೇ ರಕ್ಷಿತ್​ ಶೆಟ್ಟಿ ಅವರ ಹೆಸರು ತರುತ್ತಾರೆ. ಈ ಜೋಡಿಯ ನಿಶ್ಚಿತಾರ್ಥ ಮುರಿದು ಬಿದ್ದ ನಂತರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್​ ಆಗಿದ್ದರು.ಸಾಲದಕ್ಕೆ ಅದೇ ಸಮಯಕ್ಕೆ ರಿಲೀಸ್​ ಆಗಿದ್ದ ಗೀತ ಗೋವಿಂದ ತೆಲುಗು ಸಿನಿಮಾದಲ್ಲಿ ರಶ್ಮಿಕಾ ವಿಜಯ್​ ದೇವರಕೊಂಡ ಜತೆ ಚುಂಬನದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ರಿಲೀಸ್​ ಆಗುವ ಮೊದಲೇ ರಕ್ಷಿತ್​ ಹಾಗೂ ರಶ್ಮಿಕಾರ ನಡುವೆ ಬಿರುಕುಂಟಾಗಿತ್ತು. ಇನ್ನು ಈ ಸಿನಿಮಾದಿಂದ ಕಿಸ್ಸಿಂಗ್​ ಸೀನ್​ ಲೀಕ್​ ಆಗುತ್ತಿದ್ದಂತೆಯೇ ಸೋಶಿಯಲ್​ ಮೀಡಿಯಾದಲ್ಲಿ ರಶ್ಮಿಕಾ ಮೇಲೆ ನೂರಾರು ಟ್ರೋಲ್​ಗಳು ಹರಿದಾಡಲಾರಂಭಿಸಿದ್ದವು. ಆಗ ಮಧ್ಯಪ್ರವೇಶಿಸಿದ ರಕ್ಷಿತ್ ಶೆಟ್ಟಿ ಇದು ನಮ್ಮಿಬ್ಬರ ನಿರ್ಧಾರ ಅದಕ್ಕಾಗಿ ರಶ್ಮಿಕಾರನ್ನು ದೂಷಿಸುವುದು ಸರಿಯಲ್ಲ ಎಂದಿದ್ದರು. 

ಇಷ್ಟೆಲ್ಲ ಆದ ನಂತರವೂ ರಕ್ಷಿತ್​ ಹಾಗೂ ರಶ್ಮಿಕಾ ಮಂದಣ್ಣ ಒಬ್ಬರ ಕುರಿತಾಗಿ ಮತ್ತೊಬ್ಬರೂ ಯಾವ ವಿಷಯಕ್ಕೂ ಎಲ್ಲೂ ಮಾತನಾಡುತ್ತಿರಲಿಲ್ಲ. ಟಾಲಿವುಡ್​​ನಲ್ಲಿ ಬೆಳೆಯುತ್ತಾ ಯಶಸ್ಸು ಸಾಧಿಸುತ್ತಾ ಮುನ್ನುಗ್ಗುತ್ತಿದ್ದ ರಶ್ಮಿಕಾ ಟ್ರೋಲಿಗರಿಗೆ ಮುಟ್ಟಿ ನೋಡಿಕೊಳ್ಳುವಂತೆ ಪ್ರತಿಕ್ರಿಯೆ ಕೊಡಲಾರಂಭಿಸಿದ್ದರು. ಅಂತೆಯೇ ರಕ್ಷಿತ್​ ಹಾಗೂ ರಶ್ಮಿಕಾ ನಡುವಿನ ದೂರ ಮೆಲ್ಲನೆ ಕಡಿಮೆಯಾಗಲಾರಂಭಿಸಿತ್ತು.

Kirik Party, Rakshit Shetty, Rashmika Mandanna, Belageddu Song, 100 million Views, Rambo 2 Kannada Movie, Chutu Chutu Song, Sandalwood, Kirik Party, Rajakumara, Ayogya, Views In Youtube, ಅತಿ ಹೆಚ್ಚು ವೀಕ್ಷಣೆ ಪಡೆದ ಚುಟು ಚುಟು ಕನ್ನಡದ ಹಾಡು, ಸ್ಯಾಂಡಲ್​ವುಡ್​, ಕಿರಿಕ್​ ಪಾರ್ಟಿ
ಕಿರಿಕ್​ ಪಾರ್ಟಿ ಸಿನಿಮಾ


ಕಿರಿಕ್​ ಪಾರ್ಟಿ ಸಿನಿಮಾದ ಹೊಸ ದಾಖಲೆ, ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ ಹೀಗೆ ನಾನಾ ರೀತಿಯ ಖುಷಿಯ ಸಂದರ್ಭಗಳಲ್ಲಿ ರಶ್ಮಿಕಾ ಟ್ವೀಟ್​ ಮಾಡಲಾರಂಭಿಸಿದರು. ಅಂತೆಯೇ ರಕ್ಷಿತ್​ ಶೆಟ್ಟಿ ಸಹ ಎಲ್ಲವನ್ನೂ ಮರೆತು ರಶ್ಮಿಕಾ ಬೆಳವಣಿಗೆ ಕಂಡು ಸಂತಸದಿಂದ ಮೆಚ್ಚುಗೆ ಸೂಚಿಸುತ್ತಿದ್ದರು. ಸದ್ಯ ಈ ಜೋಡಿಯ ನಡುವೆ ಒಂದು ಒಳ್ಳೆಯ ಬಾಂಧವ್ಯವಿದೆ. ಅದಕ್ಕೆ ಈಗಲೂ ಸಹ ರಕ್ಷಿತ್​ ಶೆಟ್ಟಿ ರಶ್ಮಿಕಾ ಹುಟ್ಟುಹಬ್ಬಕ್ಕೆ ಬಹಳ ವಿಶೇಷವಾಗಿ ವಿಶ್​ ಮಾಡಿದ್ದಾರೆ.
ಹೌದು, ಕಿರಿಕ್​ ಪಾರ್ಟಿ ಸಿನಿಮಾದ ಮೂಲಕನಾಯಕಿಯಾಗಿ ಪರಿಚಯವಾದ ರಶ್ಮಿಕಾ ಅವರ ಮೊದಲ ಆಡಿಷನ್​ ಹೇಗಿತ್ತು ಗೊತ್ತಾ..? ಸಾನ್ವಿ ಪಾತ್ರಕ್ಕಾಗಿ ರಶ್ಮಿಕಾ ನೀಡಿದ ಆಡಿಷನ್​ನ ಮೊದಲ ವಿಡಿಯೋವನ್ನು ರಕ್ಷಿತ್​ ಶೆಟ್ಟಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅಮಿತಾಭ್​ ಬಚ್ಚನ್​ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ರಶ್ಮಿಕಾ ಮಂದಣ್ಣ..!

ಪರಂವಃ ಸ್ಟುಡಿಯೋಸ್ ಸಹ ರಶ್ಮಿಕಾ ಹುಟ್ಟುಹಬ್ಬದಂದು ಕಿರಿಕ್​ ಪಾರ್ಟಿ ಸಿನಿಮಾದ ಮತ್ತೊಂದು ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ರಶ್ಮಿಕಾಗೆ ಶುಭ ಕೋರಿದ್ದಾರೆ.ಸದ್ಯ ರಶ್ಮಿಕಾ ಮುಂಬೈನಲ್ಲಿದ್ದು, ಅಮಿತಾಭ್​ ಜತೆ ಗುಡ್​ಬೈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ ಅಲ್ಲೇ ಶೂಟಿಂಗ್​ ಸೆಟ್​ನಲ್ಲಿ ಬಿಗ್​ ಬಿ ಜತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
Published by: Anitha E
First published: April 6, 2021, 9:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories