ಎಲ್ಲಾ ಚಿತ್ರರಂಗದಲ್ಲೂ ಮೊದಲ ಸಿನಿಮಾದಲ್ಲೇ ಸಕ್ಸಸ್ ಕಂಡ ರಶ್ಮಿಕಾ ಮಂದಣ್ಣಗೆ (Rashmika Mandanna) ಆದ್ಯಾಕೋ ಬಾಲಿವುಡ್ (Bollywood) ಹೇಳಿಕೊಳ್ಳುವಂತ ಸಕ್ಸಸ್ ನೀಡುತ್ತಿಲ್ಲ. ಮೊದಲ ಚಿತ್ರ ಗುಡ್ಬೈ (Good Bye) ಮೂರೇ ದಿನಗಳಲ್ಲಿ ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮೂಲಕ ಸಿನಿಮಾ (Cinema) ಸೋಲು ಕಂಡಿತ್ತು. ಈಗ ಎರಡನೇ ಸಿನಿಮಾದ ಮೂಲಕ ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ರಶ್ಮಿಕಾಗೆ ಮತ್ತೊಂದು ಹಿನ್ನಡೆಯಾಗಿದೆ. ರಶ್ಮಿಕಾ ಮಂದರ್ಣ, ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಮಿಷನ್ ಮಜ್ನುಗೆ (Mission Majnu) ಥಿಯೇಟರ್ ಕೂಡ ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಇನ್ನೂ ಕೆಲ ಬಲ್ಲ ಮೂಲಗಳ ವರದ ಪ್ರಕಾರ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡದೇ ನೇರವಾಗಿ ಒಟಿಟಿಯಲ್ಲಿ ಮೂಡಿ ಬರಲಿದೆ ಎನ್ನಲಾಗುತ್ತಿದೆ.
ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ
ವರದಿಗಳ ಪ್ರಕಾರ ಮಿಷನ್ ಮಜ್ನು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಿಲ್ಲ. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಸ್ಪೈ ಥ್ರಿಲ್ಲರ್, ಜನವರಿ 2023ರಲ್ಲಿ ನೇರವಾಗಿ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಇಬ್ಬರ ಸಿನಿಮಾದ ಸೋಲೇ ಇದಕ್ಕೆ ಕಾರಣ
ಇತ್ತ ರಶ್ಮಿಕಾ ನಟನೆಯ ‘ಗುಡ್ಬೈ’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಲಿಲ್ಲ. ಹಾಗೆಯೇ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ‘ಥ್ಯಾಂಕ್ ಗಾಡ್’ ಸಿನಿಮಾ ಕೂಡ ಥಿಯೇಟರ್ನಲ್ಲಿ ಸದ್ದು ಮಾಡಲಿಲ್ಲ. ಹೀಗಾಗಿ ಇದನ್ನೆಲ್ಲ ಗಮನಿಸಿದ ‘ಮಿಷನ್ ಮಜ್ನು’ ನಿರ್ಮಾಪಕರು ನೇರವಾಗಿ ಒಟಿಟಿಯಲ್ಲಿ ಚಿತ್ರವನ್ನು ರಿಲೀಸ್ ಮಾಡುವ ನಿರ್ಧಾರಕ್ಕೆ ಬಂದಿರಬಹುದು ಎನ್ನಲಾಗುತ್ತಿದೆ.
ಶೇರ್ಷಾ ನಂತರ ನೇರವಾಗಿ ಒಟಿಟಿಗೆ ಮಿಷನ್ ಮಜ್ನು
ಮಿಷನ್ ಮಜ್ನು ನೀರೀಕ್ಷೆಯಂತೆ ಒಟಿಟಿಯಲ್ಲಿ ಬಂದರೆ, 2021 ರಲ್ಲಿ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಪ್ರಥಮ ಪ್ರದರ್ಶನಗೊಂಡ ಶೇರ್ಷಾ ನಂತರ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಕಾಣುತ್ತಿರುವ ಸಿದ್ಧಾರ್ಥ್ ಅವರ ಎರಡನೇ ಚಿತ್ರವಾಗಲಿದೆ.
ರಶ್ಮಿಕಾ ಮಂದಣ್ಣಗೆ ವರವಾಗದ ಗುಡ್ಬೈ
ರಶ್ಮಿಕಾ ಮಂದಣ್ಣ ನಟನೆಯ ಬಾಲಿವುಡ್ ಚಿತ್ರ, 'ಗುಡ್ಬೈ,' ಕಳೆದ ತಿಂಗಳು ಬಿಡುಗಡೆಯಾಗಿತು. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಅಮಿತಾಭ್ ಬಚ್ಚನ್, ನೀನಾ ಗುಪ್ತಾ, ಪವೇಲ್ ಗುಲಾಟಿ ಮುಂತಾದವರು ನಟಿಸಿದ್ದರು. ಗುಡ್ಬೈ ಸಿನಿಮಾ ಬಾಲಿವುಡ್ನಲ್ಲಿ ರಶ್ಮಿಕಾ ಅವರ ಮೊದಲ ಚಿತ್ರವಾಗಿದ್ದರಿಂದ ಮತ್ತು ಅಮಿತಾಭ್ ಬಚ್ಚನ್ ಇರುವುದರಿಂದ ಚಿತ್ರದ ಮೇಲೆ ಸಹಜವಾಗಿ ನಿರೀಕ್ಷೆ ಹೆಚ್ಚಾಗಿಯೇ ಇತ್ತು. ಟ್ರೇಲರ್ ಅನ್ನು ಮೆಚ್ಚಿಕೊಂಡಿದ್ದ ಸಿನಿರಸಿಕರು ಸಿನಿಮಾವನ್ನು ಸಹಾ ಕೈ ಹಿಡಿಯುತ್ತಾರೆ ಎನ್ನಲಾಗಿತ್ತು. ಆದರೆ ಸಿನಿಮಾ ಬಿಡುಗಡೆಯ ನಂತರ ಲೆಕ್ಕಾಚಾರ ಉಲ್ಟಾಪಲ್ಟವಾಗಿ ಚಿತ್ರ ಮೂರೇ ದಿನಗಳಲ್ಲಿ ಚಿತ್ರಮಂದಿರದಿಂದ ಎತ್ತಂಗಡಿಯಾಯಿತು.
ಸಿದ್ಧಾರ್ಥ್ ಕೈಹಿಡಿಯದ ಥ್ಯಾಂಕ್ ಗಾಡ್
ಇನ್ನೂ ಸಿದ್ಧಾರ್ಥ್ ಮಲ್ಹೋತ್ರಾ, ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ನಟಿ ರಾಕುಲ್ ಪ್ರೀತ್ ಸಿಂಗ್ ಅಭಿನಯಿಸಿದ್ದ ಥ್ಯಾಂಕ್ ಗಾಡ್ ಚಿತ್ರ ಕೂಡ ಅಷ್ಟೇನು ಗೆಲುವು ಸಾಧಿಸಿಲ್ಲ. ಹೀಗಾಗಿ ಚಿತ್ರ ನಿರ್ಮಾಪಕರು 2023ರ ಜನವರಿ 18ರಂದು ‘ಮಿಷನ್ ಮಜ್ನು’ ಸಿನಿಮಾವನ್ನು ನೇರವಾಗಿ ನೆಟ್ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಮಾಡಲು ಯೋಜಿಸಿದ್ದಾರೆ. ರಶ್ಮಿಕಾ, ಸಿದ್ಧಾರ್ಥ್ ಅಭಿನಯದ ಈ ಸಿನಿಮಾ ನಿಜ ಘಟನೆ ಆಧರಿತವಾಗಿದೆ.
ಇಬ್ಬರೂ ಚಿತ್ರಗಳಲ್ಲಿ ಬ್ಯುಸಿ
ಈ ಸಿನಿಮಾ ಹೊರತಾಗಿ ನಟ ಸಿದ್ಧಾರ್ಥ್ ರೋಹಿತ್ ಶೆಟ್ಟಿ ಅವರ ವೆಬ್ ಶೋ, ಚಲನಚಿತ್ರ ನಿರ್ಮಾಪಕರ ಕಾಪ್ ಬ್ರಹ್ಮಾಂಡದ ಭಾಗವಾಗಿರುವ 'ಇಂಡಿಯನ್ ಪೊಲೀಸ್ ಫೋರ್ಸ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ರಶ್ಮಿಕಾ ಮಂದಣ್ಣ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಹಲವು ಆಫರ್ಗಳನ್ನು ಹೊಂದಿದ್ದಾರೆ. ವಾರಿಸು ಸಿನಿಮಾದಲ್ಲಿ ವಿಜಯ್ ಜೊತೆ ನಟಿಸುತ್ತಿದ್ದಾರೆ. ಜೊತೆಗೆ ಜನಪ್ರಿಯ ಬಹುನೀರೀಕ್ಷಿತ ಚಿತ್ರ ಪುಷ್ಪದ ಎರಡನೇ ಸೀಕ್ವೆಲ್ನಲ್ಲಿ ಅಲ್ಲು ಅರ್ಜುನ್ ಜೊತೆ ಈ ಹಾಟ್ ಬೆಡಗಿ ನಟಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ