• Home
  • »
  • News
  • »
  • entertainment
  • »
  • Rashmika - Vijay Deverakonda: ವಿಜಯ್‌ ದೇವರಕೊಂಡ ಮತ್ತು ನಾನು ಜಸ್ಟ್‌ ಫ್ರೆಂಡ್ಸ್‌ ಎಂದ ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ

Rashmika - Vijay Deverakonda: ವಿಜಯ್‌ ದೇವರಕೊಂಡ ಮತ್ತು ನಾನು ಜಸ್ಟ್‌ ಫ್ರೆಂಡ್ಸ್‌ ಎಂದ ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ

ರಶ್ಮಿಕಾ

ರಶ್ಮಿಕಾ

Rashmika - Vijay Deverakonda: ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರೊಂದಿಗೆ ಇರುವ ತಮ್ಮ ಡೇಟಿಂಗ್ ವದಂತಿಗಳ ಬಗ್ಗೆ ಎಲ್ಲರ ಮುಂದೆ ತೆರೆದಿಟ್ಟಿದ್ದಾರೆ.

  • Share this:

ನ್ಯಾಶನಲ್‌ ಕ್ರಶ್‌ ಎಂದು ಬಿರುದು ಪಡೆದಿರುವ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗಷ್ಟೇ ಬಿಡುಗಡೆಯಾದ ಗುಡ್‌ಬೈ ಚಿತ್ರದಲ್ಲಿನ ಅಭಿನಯಕ್ಕಾಗಿ ಎಲ್ಲೆಡೆ ಪ್ರಶಂಸೆಯನ್ನು ಗಳಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಿಂದ (Kannada cinema Industry) ಸಿನಿಮಾ ಜೀವನ ಆರಂಭ ಮಾಡಿದ್ದ ರಶ್ಮಿಕಾ ಮಂದಣ್ಣ ಅವರು ಈಗ ಪ್ಯಾನ್ ಇಂಡಿಯಾ ಹೀರೋಯಿನ್ (Heroin) ಆಗಿ ದೇಶದೆಲ್ಲೆಡೆ ಮಿಂಚುತ್ತಿದ್ದಾರೆ. ಸ್ಯಾಂಡಲ್‍ವುಡ್‌ನ ಕಿರಿಕ್‌ ಪಾರ್ಟಿಯ ಸಾನ್ವಿ, ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‍ನಲ್ಲಿ ಅಪಾರ ಸಿನಿ ಅವಕಾಶಗಳನ್ನು ಪಡೆದು ತಮ್ಮನ್ನ ತಾವು ಉತ್ತಮ ನಟಿ (Best Actress) ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ಹಿಂದಿ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ (Big star) ಕಲಾವಿದರ ಜೊತೆ ಸಿನಿಮಾ ಮಾಡುತ್ತಿದ್ದಾರೆ.


ಕಿರಿಕ್‌ ಪಾರ್ಟಿಯ ಸಾನ್ವಿ ನಟಿಸಿರುವ ಗುಡ್‌ ಬೈ ಚಿತ್ರ


ಗುಡ್ ಬೈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜೊತೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಸಿನಿಮಾ ಅಕ್ಟೋಬರ್ 7ರಂದು ತೆರೆ ಕಂಡಿದೆ.


ನಾನು ಮತ್ತು ವಿಜಯ್‌ ದೇವರಕೊಂಡ ಕೇವಲ ಸ್ನೇಹಿತರು ಎನ್ನುತ್ತಿರುವ ನ್ಯಾಶನಲ್‌ ಕ್ರಶ್‌


ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರೊಂದಿಗೆ ಇರುವ ತಮ್ಮ ಡೇಟಿಂಗ್ ವದಂತಿಗಳ ಬಗ್ಗೆ ಎಲ್ಲರ ಮುಂದೆ ತೆರೆದಿಟ್ಟಿದ್ದಾರೆ. ಈ ಇಬ್ಬರು ತೆಲುಗು ಸ್ಟಾರ್‌ಗಳೆಂದೆ ಪ್ರಸಿದ್ದಿ ಪಡೆದಿದ್ದಾರೆ. ಇವರಿಬ್ಬರೂ ಇತ್ತಿಚೀಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಇಬ್ಬರೂ ಒಟ್ಟಿಗೆ ರಜೆಯನ್ನು ಕಳೆಯಲು ಎಲ್ಲಿಗೋ ಹೊರಟಿದ್ದಾರೆ ಎಂಬ ಊಹಾಪೋಹಗಳಿಗೆ ಇದು ಕಾರಣವಾಯಿತು.


ರಶ್ಮಿಕಾ ಮಂದಣ್ಣ ಅವರು ಸಂದರ್ಶನವೊಂದರಲ್ಲಿ, “ನಮ್ಮಿಬ್ಬರ ಸಂಬಂಧದ ಬಗ್ಗೆ ಎಲ್ಲರಿಗೂ ಕುತೂಹಲವಿದೆ ಎಂದು ನನಗೆ ತಿಳಿದಿದೆ. ನಾವಿಬ್ಬರೂ ಕೇವಲ ಉತ್ತಮ ಸ್ನೇಹಿತರು ಎಂಬುದು ಕೂಡ ಅಷ್ಟೆ ಸತ್ಯ” ಎಂದು ಹೇಳಿಕೊಂಡಿದ್ದಾರೆ.


“ನಾವು ಸಿನಿಮಾದಲ್ಲಿ ನಟಿಸುವ ಕಲಾವಿದರು ಆಗಿದ್ದೇವೆ. ಇದರಿಂದ ಮಾಧ್ಯಮಗಳ ಕ್ಯಾಮೆರಾಗಳ ಕಣ್ಣು ಸದಾ ನಮ್ಮ ಮೇಲೆಯೇ ಇರುತ್ತದೆ ಎಂದು ನಾನು ಈಗ ಅರ್ಥಮಾಡಿಕೊಂಡಿದ್ದೇನೆ. ನಮ್ಮ ಬಗ್ಗೆ ತಿಳಿಯಲು ಜನರು ಯಾವಾಗಲೂ ಕಾತರರಾಗಿರುತ್ತಾರೆ. ನಾನು ಸಾಮಾಜಿಕ ಮಾಧ್ಯಮದಲ್ಲಿ ಏನಾಗುತ್ತಿದೆ ಎಂದು ಆಗಾಗ ನೋಡುತ್ತಲೆ ಇರುತ್ತೇನೆ. ಕೆಲವು ವೀಡಿಯೊಗಳನ್ನು ನೋಡಿ, ಎಷ್ಟು ಮುದ್ದಾಗಿವೆ ಎಂದು ಕೊಳ್ಳುತ್ತೇನೆ” ಎಂದು ರಶ್ಮಿಕಾ ಅವರು ನ್ಯೂಸ್‌ 18 ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.


ಜೀವನದ ಒತ್ತಡಕ್ಕೆ ಉತ್ತಮ ಸ್ನೇಹ ಸಹಾಯಕಾರಿ ಎಂದ ʼಕಿರಿಕ್‌ʼ ಬೆಡಗಿ


ನಮ್ಮಿಬ್ಬರ ನಡುವಿನ ಗಾಸಿಪ್‌ ಬಗ್ಗೆ ನಾನು ಮತ್ತು ವಿಜಯ್ ಎಂದಿಗೂ ಚರ್ಚಿಸುವುದಿಲ್ಲ. ನಾವು ಒಟ್ಟು 15 ಜನರ ಗ್ಯಾಂಗ್ ಅನ್ನು ಹೊಂದಿದ್ದೇವೆ. ಟೈಮ್‌ ಸಿಕ್ಕಗಲೆಲ್ಲಾ ಕಾಲ ಕಳೆಯುತ್ತೇವೆ. ನಾವು ಕಲಾವಿದರು ಆಗಿರಬಹುದು ಆದರೆ ನಮಗೂ ನಮ್ಮ ಸ್ನೇಹಿತರು ಅಷ್ಟೇ ಮುಖ್ಯ. ಏಕೆಂದರೆ ಸ್ನೇಹ ನಮ್ಮನ್ನು ಯಾವಾಗಲೂ ಉತ್ತಮ ರೀತಿಯಲ್ಲಿ ಇರಲು ಸಹಾಯ ಮಾಡುತ್ತದೆ. ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ” ಎಂದು ಅವರು ಹೇಳಿದರು.


“ ಈ 15 ಜನ ಸ್ನೇಹಿತರು ವಿಜಯ್‌ ಅವರಿಗೆ ತುಂಬಾ ದಿನದಿಂದ ಗೊತ್ತಿರುವ ಸ್ನೇಹಿತರು ಮತ್ತು ಅವರಿಗೆ ಅತಿ ಹತ್ತಿರವಾದ ಕ್ಲೋಸ್‌ ಫ್ರೆಂಡ್ಸ್‌ ಸಹ ಹೌದು” ಎಂದು ರಶ್ಮಿಕಾ ಅವರು ಹಂಚಿಕೊಂಡಿದ್ದಾರೆ.


ವಿಜಯ್‌ ದೇವರಕೊಂಡ ಅವರ ಸಲಹೆ


ಇಂಡಸ್ಟ್ರಿಯಲ್ಲಿನ ಸಿನಿ ವಿಷಯಗಳ ಬಗ್ಗೆ ನನಗೆ ಸ್ಪಷ್ಟತೆ ಬೇಕೆನಿಸಿದಾಗಲೆಲ್ಲಾ ನಾನು ವಿಜಯ್‌ ದೇವರಕೊಂಡ ಅವರ ಸಲಹೆ ಕೇಳುತ್ತೇನೆ ಎಂದಿದ್ದಾರೆ ಪುಷ್ಪಾ ಖ್ಯಾತಿಯ ರಶ್ಮಿಕಾ. ವಿಜಯ್‌ ಅವರು ನನ್ನ ಜೊತೆ ಯಾವಾಗಲೂ ಇರುತ್ತಾರೆ. ನನ್ನ ನಿರ್ಧಾರಗಳ ಜೊತೆ ಯಾವಾಗಲೂ ನಿಲ್ಲುತ್ತಾರೆ. ನನಗೆ ಸಲಹೆ ಸೂಚನೆಗಳನ್ನು ಸಹ ನೀಡುತ್ತಾರೆ. ನಾವು ನಿಜವಾಗಿಯೂ ಆತ್ಮೀಯ ಸ್ನೇಹಿತರು ಮತ್ತು ನಾವು ಎಲ್ಲ ವಿಷಯಗಳನ್ನು ಹಂಚಿಕೊಳ್ಳುತ್ತೇವೆ ಮತ್ತು ಚರ್ಚಿಸುತ್ತೇವೆ ಎಂದು ರಶ್ಮಿಕಾ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಅಪ್ಪ ನಾನೇನೂ ಸಾಧನೆ ಮಾಡಲೇ ಇಲ್ಲ! ಹೊರಗೆ ಬಂದ ನವಾಜ್ ಹೀಗೆ ಹೇಳಿದ್ಯಾಕೆ?


ತೆಲುಗು ಇಂಡಸ್ಟ್ರಿಯಲ್ಲಿ ಇವರಿಬ್ಬರು ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ಈ ಎರಡು ಚಿತ್ರಗಳು ಆದ ನಂತರ ಈ ಇಬ್ಬರೂ ಪ್ರೀತಿ ಮಾಡುತ್ತಿದ್ದಾರೆ ಎಂಬ ಗಾಸಿಪ್‌ಗಳು ಎಲ್ಲೆಡೆ ಹರಡಿದ್ದವು. ಇದನ್ನೆ ಮಾಧ್ಯಮದವರು ರಶ್ಮಿಕಾಗೆ ಪ್ರಶ್ನೆ ಮಾಡಿದಾಗ, "ನಮ್ಮ ವೃತ್ತಿಜೀವನದ ಆರಂಭದಲ್ಲಿ, ನಾವು ಕೆಲವು ದೊಡ್ಡ ಚಲನಚಿತ್ರಗಳನ್ನು ಒಟ್ಟಿಗೆ ಮಾಡಿದ್ದೇವೆ. ಅದೇ ಸಮಯದಲ್ಲಿ ವಿಜಯ್‌ ಅವರು ಲಿಗರ್ ಎಂಬ ಪ್ಯಾನ್ ಇಂಡಿಯಾ ಚಲನಚಿತ್ರವನ್ನು ಮಾಡಿದರು. ನಾನು ಕೂಡ ಗುಡ್‌ಬೈ ಚಿತ್ರಿಕರಣದಲ್ಲಿ ಪಾಲ್ಗೊಂಡಿದ್ದೆ. ಆದ್ದರಿಂದ ನಮಗೆ ಮಾತನಾಡಲು ಕೂಡ ಈಗ ಸಮಯವಿಲ್ಲ” ಎಂದು ಉತ್ತರಿಸಿದ್ದಾರೆ.


ಇದನ್ನೂ ಓದಿ: ಹ್ಯಾಪಿ ಬರ್ತ್ ಡೇ ಅಮಿತಾಬ್ ಬಚ್ಚನ್, ಬಿಗ್ ಬಿಗೆ ಶುಭಾಶಯಗಳ ಮಹಾಪೂರ


"ಸಂಬಂಧಗಳು ಸಾಕಷ್ಟು ಸಮಯ ಮತ್ತು ಶ್ರಮವನ್ನು ನೀಡಬೇಕಾದ ವಿಷಯ ಎಂದು ನಾನು ಭಾವಿಸುತ್ತೇನೆ. ಇದೀಗ, ನಾನು ನನ್ನ ಕೆಲಸದಲ್ಲಿ ನನ್ನನ್ನು ತುಂಬಾ ಬ್ಯುಸಿ ಇದ್ದೇನೆ. ನನಗೆ ಈಗ ಸಮಯವೇ ಸಿಗುತ್ತಿಲ್ಲ. ಆದರೆ ಪ್ರೀತಿ ಎಂಬುದು ನೈಜವಾಗಿ ಮೂಡಬೇಕಾದ ಭಾವನೆ ಆಗಿದೆ. ಆ ರೀತಿಯ ಪ್ರೀತಿ ನನ್ನಲ್ಲಿ ಇದ್ದರೆ ಅದು ಸ್ವಾಭಾವಿಕವಾಗಿಯೇ ಅರಳುತ್ತದೆ” ಎಂದು ತಮ್ಮ ಮತ್ತು ವಿಜಯ್‌ ನಡುವೆ ಯಾವುದೇ ಪ್ರೀತಿ-ಪ್ರೇಮ ಇಲ್ಲ ಎಂಬ ಗಾಸಿಪ್‌ಗಳನ್ನು ಮತ್ತೊಮ್ಮೆ ತಳ್ಳಿ ಹಾಕಿದ್ದಾರೆ.ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ಪುಷ್ಪ 2: ದಿ ರೂಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

First published: