Rashmika Mandanna: ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ಪಾತ್ರಕ್ಕೆ ಕತ್ತರಿ, ಶ್ರೀವಲ್ಲಿ ಅಭಿಮಾನಿಗಳಿಗೆ ಬೇಸರ

Pushpa 2: ಸದ್ಯದ ಮಾಹಿತಿ ಪ್ರಕಾರ ಪುಷ್ಪ 2 ಸಿನಿಮಾದಲ್ಲಿ ಹೆಚ್ಚು ಪುಷ್ಪರಾಜ್​ ಮೇಲೆ ಮಾತ್ರ ಫೋಕಸ್​ ಮಾಡಲಾಗಿದೆಯಂತೆ. ಪುಷ್ಪ ಮೊದಲ ಭಾಗದ ಶೂಟಿಂಗ್​ ಮಾಡುವಾಗ ಪುಷ್ಪ 2 ಸಿನಿಮಾದ ಕೆಲ ಭಾಗಗಳನ್ನೂ ಸಹ ಶೂಟಿಂಗ್ ಮಾಡಲಾಗಿತ್ತು.

ನಟಿ ರಶ್ಮಿಕಾ ಮಂದಣ್ಣ - ಅಲ್ಲು ಅರ್ಜುನ್

ನಟಿ ರಶ್ಮಿಕಾ ಮಂದಣ್ಣ - ಅಲ್ಲು ಅರ್ಜುನ್

  • Share this:
ಸ್ಯಾಂಡಲ್‌ವುಡ್‌ (Sandalwood), ಟಾಲಿವುಡ್​ (Tollywood) ಹಾಗೂ ಬಾಲಿವುಡ್ (Bollywood) ​ ಎಲ್ಲಿ ನೋಡಿದ್ರೂ ರಶ್ಮಿಕಾ (Rashmika) ಸುದ್ದಿನೇ. ದಕ್ಷಿಣ ಸಿನಿರಂಗ ಮಾತ್ರವಲ್ಲದೇ, ಎಲ್ಲೆಡೆ ಅವರ ಹವಾ ಇದೆ ಎನ್ನಬಹುದು. ಕನ್ನಡದಿಂದ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾ ಈಗ ಎಲ್ಲಾ ಭಾಷೆಯಲ್ಲಿ ಸಿನಿಮಾ ಮಾಡ್ತಿದ್ದಾರೆ. ಆದರೆ ಸದ್ಯ ಪುಷ್ಪ 2 ಸಿನಿಮಾದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಅದು ಈ ಸಿನಿಮಾದಲ್ಲಿ ರಶ್ಮಿಕಾ ಪಾತ್ರಕ್ಕೆ ಕತ್ತರಿ ಹಾಕಲಾಗಿದೆ ಎಂಬುದು.  ಕೆಲ ಟಾಲಿವುಡ್​ ವರದಿ ಪ್ರಕಾರ ಈ ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಹೆಚ್ಚಿಲ್ಲವಂತೆ. ಅವರು ತೆರೆ ಮೇಲೆ ಹೆಚ್ಚು ಹೊತ್ತು ಕಾಣಿಸಿಕೊಳ್ಳಲ್ಲ ಎನ್ನಲಾಗುತ್ತಿದೆ.

ರಶ್ಮಿಕಾ ಪಾತ್ರಕ್ಕೆ ಕತ್ತರಿ

ಹೌದು, ರಶ್ಮಿಕಾ ಕೆರಿಯರ್‌ಗೆ ಬಿಗ್ ಬ್ರೇಕ್ ಕೊಟ್ಟ ಸಿನಿಮಾ ಎಂದರೆ ಪುಷ್ಪ. ಇದೀಗ ಅದರ ಸೀಕ್ವೆಲ್​ ಕೂಡ ಅಂದರೆ ಪುಷ್ಪ 2 ರೆಡಿಯಾಗುತ್ತಿದೆ. ಶೂಟಿಂಗ್ ನಡೆಯುತ್ತಿದೆ. ಆದರೆ ಇದರಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ಸ್ವಲ್ಪ ಬದಲಾವಣೆ ಆಗಲಿದೆಯಂತೆ.  ಸದ್ಯದ ಮಾಹಿತಿ ಪ್ರಕಾರ ಪುಷ್ಪ 2 ಸಿನಿಮಾದಲ್ಲಿ ಹೆಚ್ಚು ಪುಷ್ಪರಾಜ್​ ಮೇಲೆ ಮಾತ್ರ ಫೋಕಸ್​ ಮಾಡಲಾಗಿದೆಯಂತೆ. ಪುಷ್ಪ ಮೊದಲ ಭಾಗದ ಶೂಟಿಂಗ್​ ಮಾಡುವಾಗ ಪುಷ್ಪ 2 ಸಿನಿಮಾದ ಕೆಲ ಭಾಗಗಳನ್ನೂ ಸಹ ಶೂಟಿಂಗ್ ಮಾಡಲಾಗಿತ್ತು. ಆದರೆ ಈ ಸಿನಿಮಾ ನಿರೀಕ್ಷೆಗೂ ಮೀರಿದ ಸಕ್ಸಸ್​ ಕಂಡ ಹಿನ್ನೆಲೆ ಸ್ವಲ್ಪ ಬದಲಾವಣೆ ಮಾಡಿ, ಮತ್ತೆ ಶೂಟಿಂಗ್ ಮಾಡಲು ನಿರ್ಧರಿಸಲಾಗಿದೆಯಂತೆ.

ಪುಷ್ಪ 2 ಸಿನಿಮಾದಲ್ಲಿ ಈ ಬಾರಿ ಅಲ್ಲು ಅರ್ಜುನ್​ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆಯಂತೆ. ಪುಷ್ಪರಾಜ್​ ಹೇಗೆ ಬೆಳೆಯುತ್ತಾ ಹೋಗುತ್ತಾನೆ ಹಾಗೂ ಹೇಗೆ ಯಶಸ್ಸು ಪಡೆಯುತ್ತಾ ಎಂಬುದನ್ನ ತೋರಿಸಲಾಗುತ್ತದೆ.  ಅಲ್ಲದೇ, ಇಡೀ ಪುಷ್ಪ 2  ಚಿತ್ರದಲ್ಲಿ ಪುಷ್ಪರಾಜ್ ಆರ್ಭಟ ಹೆಚ್ಚಿರಲಿದೆ, ಹಾಗಾಗಿ ರಶ್ಮಿಕಾ ಮಂದಣ್ಣ ಪಾತ್ರದಲ್ಲಿ ಬದಲಾವಣೆಯಾಗುತ್ತದೆ. ಹೆಚ್ಚಾಗಿ ಅವರನ್ನು ತೋರಿಸುವುದಿಲ್ಲವಂತೆ. ಅವಶ್ಯಕ ಇರುವ ಜಾಗಗಳಲ್ಲಿ ಮಾತ್ರ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಡ್ಯೂರೇಷನ್​ ಕಡಿಮೆ ಮಾಡಲಾಗಿದೆ.

ಇದನ್ನೂ ಓದಿ: ಕೇದಾರನಾಥನ ಸನ್ನಿಧಿಯಲ್ಲಿ ಅಪ್ಪು ಕಂಪು, ದೇವಸ್ಥಾನದಲ್ಲಿ ಪುನೀತ್ ಭಾವಚಿತ್ರಕ್ಕೆ ಪೂಜೆ

ಅಭಿಮಾನಿಗಳಿಗೆ ಬೇಸರ

ಇನ್ನೊಂದು ಮುಖ್ಯ ವಿಚಾರ ಎಂದರೆ ಇದರಲ್ಲಿ ರಶ್ಮಿಕಾ ಪಾತ್ರ ಎಂಡ್​ ಆಗಲಿದೆಯಂತೆ. ಶ್ರೀವಲ್ಲಿ ಸಾಯಲಿದ್ದು, ಅದರ ನಂತರ ಪುಷ್ಪರಾಜ್​ ಹಾಗೂ ವಿಲನ್ ಮಧ್ಯೆ ಮಸ್ತ್ ಫೈಟ್​ ಆಗಲಿದೆ ಎಂದು ಸಹ ಹೇಳಲಾಗುತ್ತಿದೆ. ಸದ್ಯದ ಈ ಅಪ್​ಡೇಟ್​ ರಶ್ಮಿಕಾ ಫ್ಯಾನ್ಸ್ ಗಳಿಗೆ ಬೇಸರ ಮೂಡಿಸಿದೆ. ಶ್ರೀವಲ್ಲಿಯಾಗಿ ರಶ್ಮಿಕಾ ಅದ್ಭುತವಾಗಿ ನಟಿಸಿದ್ದರು, ಅವರ ಪಾತ್ರಕ್ಕೆ ಕತ್ತರಿ ಹಾಕುವುದು ಬೇಡ ಎಂದು ಸಲಹೆ ನೀಡುತ್ತಿದ್ದಾರೆ.

ಪುಷ್ಪ ಸಿನಿಮಾ ಎಷ್ಟು ದೊಡ್ಡ ಯಶಸ್ಸು ಕಂಡಿದೆ ಎಂದು ಎಲ್ಲರಿಗೂ ಗೊತ್ತಿದೆ. ಪುಷ್ಪ ಚಿತ್ರದ ನಂತರ ಅಲ್ಲು ಅರ್ಜುನ್ ಕ್ರೇಜ್ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಈ ಚಿತ್ರವು ಅರ್ಜುನ್ ಅವರನ್ನು ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಮಾಡಿದ್ದು, ಅವರಿಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ.

ಇದನ್ನೂ ಓದಿ: ಸ್ತ್ರೀ ರಕ್ಷಣೆ ಕಾನೂನು ಪುರುಷರಿಗೆ ಮಾರಕವೇ? ವೆಡ್ಡಿಂಗ್ ಗಿಫ್ಟ್ ಸಿನಿಮಾ ಟ್ರೇಲರ್‌ನಲ್ಲಿ ಏನ್ ಹೇಳ್ತಿದ್ದಾರೆ ನೋಡಿ

ಪುಷ್ಪ ಚಿತ್ರದ ಹಾಡುಗಳು ಮತ್ತು ಸಂಭಾಷಣೆಗಳಿಗೆ ಪ್ರೇಕ್ಷಕರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪುಷ್ಪ.. ಪುಷ್ಪರಾಜ್.. ತಗ್ಗದಲ್ಲೆ ಡೈಲಾಗ್‌ನಿಂದ ಹಿಡಿದು ಸಾಮಿ ಸಾಮಿ ಹಾಡಿನವರೆಗೆ ಪ್ರತಿ ಹಾಡು ಮತ್ತು ಪ್ರತಿಯೊಂದು ಡೈಲಾಗ್‌ಗಳು ಭಾರೀ ಜನಪ್ರಿಯತೆಯನ್ನು ಗಳಿಸಿವೆ. ಹಾಗಾಗಿ ಅಭಿಮಾನಿಗಳು ಸಹ ಪುಷ್ಪ 2 ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಸುಕುಮಾರ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಫುಲ್ ಹೈಪ್ ಕ್ರಿಯೇಟ್​ ಮಾಡಿದ್ದು, ಹೇಗಿರಲಿದೆ ಪುಷ್ಪ 2 ಎಂದು ಕಾದು ನೋಡಬೇಕಿದೆ.
Published by:Sandhya M
First published: