Rashmika Mandanna: 'ಗೀತಾ ಗೋವಿಂದಂ' ನಿರ್ದೇಶಕನ ಮುಂದಿನ ಸಿನಿಮಾದಲ್ಲಿ ನಾಗಚೈತನ್ಯಗೆ ರಶ್ಮಿಕಾ ಜೋಡಿ? ಸಿನೆಮಾ ಯಾವುದು?

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೋಡಿ ನಟನೆಯ ಗೀತಾ ಗೋವಿಂದಂ ಎಂಬ ಸೂಪರ್ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ಪರಶುರಾಮ್ ಮತ್ತೊಂದು ಲವ್ ಸ್ಟೋರಿ ಚಿತ್ರ ನಿರ್ಮಾಣಕ್ಕೆ ಕೈಹಾಕಿರುವ ಬಗ್ಗೆ ಈಗಾಗಲೇ ಸುದ್ದಿಯಾಗಿದೆ. ಅವರ ಹೊಸ ಸಿನಿಮಾದಲ್ಲಿ ನಾಯಕನಾಗಿ ನಾಗಚೈತನ್ಯ ಇರಲಿದ್ದಾರೆ ಎಂಬ ಗುಸು ಗುಸು ವರ್ಷಗಳಿಂದ ಹರಿದಾಡುತ್ತಿದ್ದವು. ಚಿತ್ರಕ್ಕೆ ಮತ್ತಷ್ಟು ಬೂಸ್ಟ್ ನೀಡುವಂತೆ ಹೊಸ ಸುದ್ದಿಯೊಂದು ಹೊರಬಿದ್ದಿದೆ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

  • Share this:
ವಿಜಯ್ ದೇವರಕೊಂಡ (Vijay Deverakonda) ಹಾಗೂ ರಶ್ಮಿಕಾ (Rashmika) ಜೋಡಿ ನಟನೆಯ ಗೀತಾ ಗೋವಿಂದಂ ಎಂಬ ಸೂಪರ್ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ಪರಶುರಾಮ್ ಮತ್ತೊಂದು ಲವ್ ಸ್ಟೋರಿ (Love Story) ಚಿತ್ರ ನಿರ್ಮಾಣಕ್ಕೆ ಕೈಹಾಕಿರುವ ಬಗ್ಗೆ ಈಗಾಗಲೇ ಸುದ್ದಿಯಾಗಿದೆ. ಅವರ ಹೊಸ ಸಿನಿಮಾದಲ್ಲಿ ನಾಯಕನಾಗಿ ನಾಗಚೈತನ್ಯ ಇರಲಿದ್ದಾರೆ ಎಂಬ ಗುಸು ಗುಸು ವರ್ಷಗಳಿಂದ ಹರಿದಾಡುತ್ತಿದ್ದವು. ಚಿತ್ರಕ್ಕೆ ಮತ್ತಷ್ಟು ಬೂಸ್ಟ್ ನೀಡುವಂತೆ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ನಾಯಕಿ ಬಗ್ಗೆ ಹೊಸ ವರದಿಗಳು ಕೇಳಿ ಬರುತ್ತಿವೆ. ಹೌದು, ಗೀತಾ ಗೋವಿಂದಂ (Gita Govindam) ಮೂಲಕ ರಶ್ಮಿಕಾಗೆ ಬಿಗ್ ಹಿಟ್ ನೀಡಿರುವ ನಿರ್ದೇಶಕ ಪರಶುರಾಮ್ ತಮ್ಮ ಮುಂದಿನ ಚಿತ್ರದಲ್ಲಿಯೂ ರಶ್ಮಿಕಾ ಮಂದಣ್ಣಳಿಗೆ ನಾಯಕಿಯ ಆಫರ್ ನೀಡಲು ಯೋಜಿಸಿದ್ದಾರಂತೆ. 

ನಾಗ ಚೈತನ್ಯಗೆ ರಶ್ಮಿಕಾ ಮಂದಣ್ಣ ಜೋಡಿ!?
ಪರಶುರಾಮ್ ನಿರ್ದೇಶಿಸಿದ 'ಸರ್ಕಾರು ವಾರಿ ಪಾಟ' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನೂ ಮೋಡಿ ಮಾಡಲಿಲ್ಲ. ಹೀಗಾಗಿ ಮತ್ತೆ ಲವ್ ಸ್ಟೋರಿ ಕಡೆ ಮುಖ ಮಾಡಿದ್ದು, ಸೂಪರ್ ಜೋಡಿ ಜೊತೆ ಸಿನಿಮಾ ಮಾಡಲು ಪ್ಲಾನ್ ಮಾಡುತ್ತಿದ್ದಾರೆ. ನಾಗಚೈತನ್ಯ ಜೊತೆ ಪರುಶುರಾಮ್ ಸಿನಿಮಾ ಮಾಡುತ್ತಿದ್ದ ಬಗ್ಗೆ ವರ್ಷಗಳ ಹಿಂದೆಯೇ ಗುಲ್ಲಾಗಿತ್ತು.

ರಶ್ಮಿಕಾ ಮಂದಣ್ಣ ಬಗ್ಗೆ ನಿರ್ದೇಶಕರ ಒಲವು
ವರದಿಗಳ ಪ್ರಕಾರ, ನಿರ್ದೇಶಕ ಪರಶುರಾಮ್ ಅವರು ಗೀತಾ ಗೋವಿಂದಂ ನಟಿ ರಶ್ಮಿಕಾ ಮಂದಣ್ಣ ಅವರನ್ನು ಚೈತನ್ಯ ಅವರ ಚಿತ್ರದಲ್ಲಿ ನಾಯಕಿಯಾಗಿ ಕರೆತರಲು ಉತ್ಸುಕರಾಗಿದ್ದಾರೆ. ಪರಶುರಾಮ್ ಈಗಾಗಲೇ ನಾಗಚೈತನ್ಯಗೆ ಕಥೆ ಹೇಳಿದ್ದಾಗಿದೆ. ಹೀರೊಯಿನ್ ಪಾತ್ರಕ್ಕೆ ಹುಡುಕಾಟ ನಡೆಸಿದ್ದು, ರಶ್ಮಿಕಾ ಮಂದಣ್ಣ ಮೇಲೆ ನಿರ್ದೇಶಕರು ಹೆಚ್ಚು ಒಲವು ತೋರಿಸಿದ್ದಾರೆ. ಇದೂವರೆಗೂ ರಶ್ಮಿಕಾ ಹಾಗೂ ನಾಗ ಚೈತನ್ಯ ಒಟ್ಟಿಗೆ ನಟಿಸಿಲ್ಲ. ಹೀಗಾಗಿ ಈ ಜೋಡಿಯನ್ನು ನೋಡಲು ತೆಲುಗು ಪ್ರೇಕ್ಷಕರು ಸಹ ಎದುರು ನೊಡುತ್ತಿದ್ದಾರೆ. ಅಲ್ಲದೇ ರಶ್ಮಿಕಾ ಮಂದಣ್ಣ ಎಂಟ್ರಿ ಚಿತ್ರಕ್ಕೆ ಮತ್ತಷ್ಟು ಫ್ಲಸ್ ಪಾಯಿಂಟ್ ಆಗಲಿದೆ ಎಂಬುವುದು ಎಲ್ಲರ ಲೆಕ್ಕಾಚಾರ.

ಇದನ್ನೂ ಓದಿ: Rashmika Mandanna: ರಶ್ಮಿಕಾ, ವಿಜಯ್ ದೇವರಕೊಂಡ ಡೇಟಿಂಗ್; ಕೊನೆಗೂ ಕ್ಲಾರಿಟಿ ಕೊಟ್ಟ ‘ಶ್ರೀವಲ್ಲಿ’

ಇನ್ನೂ ಘೋಷಣೆಯಾಗದ ಈ ಚಿತ್ರವು ನಾಗ ಚೈತನ್ಯ ಅವರ ತಾತ ಮತ್ತು ಹಿರಿಯ ನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರೊಂದಿಗೆ ವಿಶೇಷ ಸಂಪರ್ಕವನ್ನು ಹೊಂದಿದೆ ಎಂಬ ವದಂತಿಗಳು ಕಳೆದ ತಿಂಗಳು ಇದ್ದವು. ಚಿತ್ರಕ್ಕೆ ನಟನ ಅಜ್ಜನ ಹೆಸರನ್ನು ಇಡಲಾಗುವುದು ಎಂದು ಕೆಲ ವರದಿಗಳು ಹೇಳಿದ್ದವು.

ಲಾಲ್ ಸಿಂಗ್ ಚಡ್ಡಾ ಸೇನಾಧಿಕಾರಿಯ ಪಾತ್ರದಲ್ಲಿ ನಾಗ ಚೈತನ್ಯ 
ಏತನ್ಮಧ್ಯೆ, ನಾಗ ಚೈತನ್ಯ ಪ್ರಸ್ತುತ ಅಮೀರ್ ಖಾನ್ ಜೊತೆಗಿನ ತಮ್ಮ ಬಾಲಿವುಡ್ ಚೊಚ್ಚಲ ಚಿತ್ರ ಲಾಲ್ ಸಿಂಗ್ ಚಡ್ಡಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಚಿತ್ರದಲ್ಲಿ ನಾಗ ಚೈತನ್ಯ ಸೇನಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ನಾಯಕಿಯಾಗಿ ನಟಿಸಿದ್ದಾರೆ. ಅಲ್ಲದೇ ಧೂತ ಎಂಬ ವೆಬ್ ಸರಣಿಯಲ್ಲಿ ಸಹ ಇವರು ಕೆಲಸ ಮಾಡುತ್ತಿದ್ದಾರೆ. ಹಾರರ್ ಥ್ರಿಲ್ಲರ್ ಎಂದು ಹೇಳಲಾದ ಈ ಸರಣಿ ಮೂಲಕ ನಾಗ ಚೈತನ್ಯ ಅವರು ಮೊಟ್ಟ ಮೊದಲ ಬಾರಿಗೆ ಓಟಿಟಿ ಪ್ರವೇಶಿಸಲಿದ್ದಾರೆ. ಇದರಲ್ಲಿ ಪಾರ್ವತಿ ತಿರುವೋತ್ತು, ಪ್ರಿಯಾ ಭವಾನಿ ಶಂಕರ್, ಪ್ರಾಚಿ ದೇಸಾಯಿ ಮತ್ತು ತರುಣ್ ಭಾಸ್ಕರ್ ಧಾಸ್ಯಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:  Rashmika Mandanna: ರಶ್ಮಿಕಾ ಮಂದಣ್ಣ ಕೈಯಲ್ಲಿದ್ದ ಚಿತ್ರ ಕೃತಿ ಶೆಟ್ಟಿ ಪಾಲಿಗೆ; ನ್ಯಾಷನಲ್ ಕ್ರಶ್​ಗೆ ಚಾನ್ಸ್ ಮಿಸ್ ಆಗಿದ್ಯಾಕೆ?

ಇತ್ತ, ರಶ್ಮಿಕಾ ಮಂದಣ್ಣ ಸಹ ಸಿನಿಮಾ, ಜಾಹಿರಾತು ಅಂತಾ ಫುಲ್ ಬ್ಯುಸಿ ಇದ್ದಾರೆ. ಬಾಲಿವುಡ್ಡಿನಲ್ಲಿ ರಶ್ಮಿಕಾ ಮಂದಣ್ಣ ಮಿಷನ್ ಮಜ್ನು, ಅನಿಮಲ್ , ಗುಡ್ ಬೈ ಸಿನಿಮಾಗಳನ್ನು ಮುಗಿಸಿದ್ದಾರೆ. ಇತ್ತೀಚೆಗೆ ಟೈಗರ್ ಶ್ರಾಫ್ ಜೊತೆ ಜಾಹಿರಾತಿನಲ್ಲಿ ಕೂಡಾ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಟಾಲಿವುಡ್ಡಿಗಿಂತ ಬಾಲಿವುಡ್ ಸಿನಿಮಾಗಳಲ್ಲೇ ಹೆಚ್ಚು ಬ್ಯುಸಿ ಇರುವ ರಶ್ಮಿಕಾ ಮಂದಣ್ಣ, ನಾಗ ಚೈತನ್ಯ ಜೊತೆಗಿನ ಸಿನಿಮಾ ಒಪ್ಪಿಕೊಳ್ಳುತ್ತಾರಾ ಅಂತ ಕಾದು ನೋಡಬೇಕಾಗಿದೆ.
Published by:Ashwini Prabhu
First published: