Rashmika Mandanna: ದೇವರಕೊಂಡ ಜತೆ ನಟಿಸಬೇಡ ಎಂದಿದ್ದ ರಶ್ಮಿಕಾರ ಅಮ್ಮ ಡಿಯರ್ ಕಾಮ್ರೆಡ್​ ನೋಡಿ ಏನಂದ್ರು ಗೊತ್ತಾ..?

Dear Comrade: ಡಿಯರ್​ ಕಾಮ್ರೆಡ್​ ಸಿನಿಮಾ ಬಿಡುಗಡೆಯಾಗಿ ಇವತ್ತಿಗೆ ಐದು ದಿನಗಳಾಗಿದ್ದು, ಬಾಕ್ಸಾಫಿಸ್​ನಲ್ಲಿ ನಿರೀಕ್ಷೆ ಮಾಡಿದಷ್ಟು ಯಶಸ್ಸು ಕಾಣದಿದ್ದರೂ, ಇದಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ಹೀಗಿರುವಾಗಲೇ ಮಗಳು ರಶ್ಮಿಕಾ ಅಭಿನಯದ ಡಿಯರ್​ ಕಾಮ್ರೆಡ್​ ಚಿತ್ರದ ಬಗ್ಗೆ ಅವರ ತಾಯಿ ಸುಮನ್​ ಮಂದಣ್ಣ ತಮ್ಮದೇ ಆದ ವಿಮರ್ಶೆ ಬರೆದಿದ್ದಾರೆ.

Anitha E | news18
Updated:July 30, 2019, 6:09 PM IST
Rashmika Mandanna: ದೇವರಕೊಂಡ ಜತೆ ನಟಿಸಬೇಡ ಎಂದಿದ್ದ ರಶ್ಮಿಕಾರ ಅಮ್ಮ ಡಿಯರ್ ಕಾಮ್ರೆಡ್​ ನೋಡಿ ಏನಂದ್ರು ಗೊತ್ತಾ..?
Dear Comrade: ಡಿಯರ್​ ಕಾಮ್ರೆಡ್​ ಸಿನಿಮಾ ಬಿಡುಗಡೆಯಾಗಿ ಇವತ್ತಿಗೆ ಐದು ದಿನಗಳಾಗಿದ್ದು, ಬಾಕ್ಸಾಫಿಸ್​ನಲ್ಲಿ ನಿರೀಕ್ಷೆ ಮಾಡಿದಷ್ಟು ಯಶಸ್ಸು ಕಾಣದಿದ್ದರೂ, ಇದಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ಹೀಗಿರುವಾಗಲೇ ಮಗಳು ರಶ್ಮಿಕಾ ಅಭಿನಯದ ಡಿಯರ್​ ಕಾಮ್ರೆಡ್​ ಚಿತ್ರದ ಬಗ್ಗೆ ಅವರ ತಾಯಿ ಸುಮನ್​ ಮಂದಣ್ಣ ತಮ್ಮದೇ ಆದ ವಿಮರ್ಶೆ ಬರೆದಿದ್ದಾರೆ.
  • News18
  • Last Updated: July 30, 2019, 6:09 PM IST
  • Share this:
ರಶ್ಮಿಕಾ ಮನೆಯವರ ವಿರೋಧದ ನಡುವೆ ವಿಜಯ್​ ದೇವರಕೊಂಡ ಜತೆ ಎರಡನೇ ಸಿನಿಮಾ ಮಾಡಿದ್ದು ಗೊತ್ತೇ ಇದೆ. ಅವರ ಪೋಷಕರು ವಿಜಯ್​ ಜತೆ ಅಭಿನಯಿಸುವುದು ಬೇಡ ಎಂದರೂ ಲಿಲ್ಲಿ ತಮ್ಮ ಸಿನಿ ಭವಿಷ್ಯಕ್ಕಾಗಿ ತಾವೇ ಒಂದು ಗಟ್ಟಿ ನಿರ್ಧಾರ ಮಾಡಿ 'ಡಿಯರ್​ ಕಾಮ್ರೆಡ್​'ನಲ್ಲಿ ನಟಿಸಿದ್ದಾರೆ.

ಈ ಸಿನಿಮಾ ಬಿಡುಗಡೆಯಾಗಿ ಇವತ್ತಿಗೆ ಐದು ದಿನಗಳಾಗಿದ್ದು, ಬಾಕ್ಸಾಫಿಸ್​ನಲ್ಲಿ ನಿರೀಕ್ಷೆ ಮಾಡಿದಷ್ಟು ಯಶಸ್ಸು ಕಾಣದಿದ್ದರೂ, ಇದಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ಹೀಗಿರುವಾಗಲೇ ಮಗಳು ರಶ್ಮಿಕಾ ಅಭಿನಯದ 'ಡಿಯರ್​ ಕಾಮ್ರೆಡ್​' ಚಿತ್ರದ ಬಗ್ಗೆ ಅವರ ತಾಯಿ ಸುಮನ್​ ಮಂದಣ್ಣ ತಮ್ಮದೇ ಆದ ವಿಮರ್ಶೆ ಬರೆದಿದ್ದಾರೆ.'ಡಿಯರ್​ ಲಿಲ್ಲಿ, ನೀನು ನಿನ್ನ ಪೋಷಕರು ಹೆಮ್ಮೆ ಪಡುವಂತೆ ಮಾಡಿದ್ದೀಯಾ...! ನೀನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ನೀನು ಮಿನುಗುತ್ತಿದ್ದೀಯಾ. ಐ  ಲವ್ ಯು ಬೇಬಿ' ಎಂದು ಮಗಳ ಬಗ್ಗೆ ಹೆಮ್ಮೆಯಿಂದ ಹಾಗೂ ಖುಷಿಯಿಂದ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: Saaho: ಪ್ರಭಾಸ್​ನ ಬಿಗಿಯಪ್ಪುಗೆಯಲ್ಲಿ ಶ್ರದ್ಧಾ ಕಪೂರ್​: ಸಾಹೋ ಚಿತ್ರದಿಂದ ಮತ್ತೊಂದು ಹೊಸ ಪೋಸ್ಟರ್..!​

ಅಷ್ಟೇ ಅಲ್ಲ ವಿಜಯ್​ ದೇವರಕೊಂಡ ಅವರ ಅಭಿನಯದ ಬಗ್ಗೆಯೂ ಸುಮನ್​ ಬರೆದಿದ್ದಾರೆ. ಜತೆಗೆ ಅವರ ಮುಂದಿನ ಸಿನಿಮಾಗಳಿಗೆ ಶುಭ ಕೋರಿದ್ದಾರೆ.

ಇದನ್ನೂ ಓದಿ: Mahesh Babu: ಮತ್ತೊಂದು ವ್ಯವಹಾರ ಆರಂಭಿಸಿದ ಮಹೇಶ್ ಬಾಬು: ದೇವರಕೊಂಡ, ಪೂರಿ ಜಗನ್ನಾಥ್​ ದಾರಿಯಲ್ಲಿ ಪ್ರಿನ್ಸ್..!​

ಲಿಲ್ಲಿ ಪಾತ್ರದಲ್ಲಿ ರಶ್ಮಿಕಾ ಅಭಿನಯ ನೋಡಿ ಅವರ ಅಮ್ಮ ಫುಲ್​ ಫಿದಾ ಆಗಿದ್ದಾರೆ. ಇನ್ನು ಸುಮನ್​ ಅವರ ಟ್ವೀಟ್​ ನೋಡಿದ ಮೇಲೆ ಭವಿಷ್ಯದಲ್ಲಿ ವಿಜಯ್​ ದೇವರಕೊಂಡ ಹಾಗೂ ರಶ್ಮಿಕಾ ತೆರೆ ಹಂಚಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ ಎನಿಸುತ್ತದೆ.

ಪಂಜಾಬಿ ಗಾಯಕ ಪ್ರೀತ್ ಹರ್ಪಾಲ್​ ಅವರೇ ಗುರು ರಂಧಾವಾ ಅವರು ಗಾಯಗೊಂಡಿರುವ ಫೋಟೋವನ್ನು

Ileana Hot Photos: ಬಿಕಿನಿಯಲ್ಲಿ ಫೋಟೋಗೆ ಪೋಸ್​ ಕೊಟ್ಟ ಇಲಿಯಾನಾರ ಚಿತ್ರ ವೈರಲ್​..!

First published:July 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading