Rashmika Mandanna: ಅದಕ್ಕೆ ನೀನಿನ್ನೂ ಸಿಂಗಲ್...​ ಹೀಗೆ ರಶ್ಮಿಕಾ ಹೇಳಿದ್ದು ಯಾರಿಗೆ..!

Bheeshma Movie: ಸದಾ ಒಂದಿಲ್ಲೊಂದು ವಿಷಯಕ್ಕೆ ಟ್ರಾಲ್​ಗೆ ಬಲಿಯಾಗುವ ರಶ್ಮಿಕಾ ಈಗ ಯಾರಿಗೋ ಟ್ವೀಟ್​ ಮೂಲಕ ಸರಿಯಾಗಿಯೇ ಕಾಲು ಎಳೆದಿದ್ದಾರೆ. ಅದಕ್ಕೆ ನೀನಿನ್ನೂ ಸಿಂಗಲ್​ ಅಂತ ಒಬ್ಬರಿಗೆ ಟ್ವೀಟ್​ ಮಾಡಿದ್ದಾರೆ. 

Anitha E | news18-kannada
Updated:November 7, 2019, 12:34 PM IST
Rashmika Mandanna: ಅದಕ್ಕೆ ನೀನಿನ್ನೂ ಸಿಂಗಲ್...​ ಹೀಗೆ ರಶ್ಮಿಕಾ ಹೇಳಿದ್ದು ಯಾರಿಗೆ..!
ಭೀಷ್ ಸಿನಿಮಾದ ಪೋಸ್ಟರ್​ನಲ್ಲಿ ರಶ್ಮಿಕಾ ಹಾಗೂ ನಿತಿನ್​
  • Share this:
ರಶ್ಮಿಕಾ ಮಂದಣ್ಣ... ಕೊಡಗಿನ ಕುವರಿ ರಶ್ಮಿಕಾ ಹೆಸರು ಸ್ಯಾಂಡಲ್​ವುಡ್​ಗಿಂತ ಹೆಚ್ಚಾಗಿ ಟಾಲಿವುಡ್​ ಹಾಗೂ ಕಾಲಿವುಡ್​ನಲ್ಲೇ ಕೇಳಿ ಬರುತ್ತದೆ. ಕನ್ನಡದಲ್ಲಿ ಮಾಡಿದ್ದು ಬೆರಳೆಣಿಕೆ ಸಿನಿಮಾಗಳಾದರೂ ಅವಕಾಶಗಳು ಹೆಚ್ಚಾಗಿ ಅರಸಿ ಬರುತ್ತಿರುವುದು ಮಾತ್ರ ನೆರೆ ರಾಜ್ಯಗಳ ಸಿನಿ ರಂಗದಿಂದ.

ಸದಾ ಒಂದಿಲ್ಲೊಂದು ವಿಷಯಕ್ಕೆ ಟ್ರಾಲ್​ಗೆ ಬಲಿಯಾಗುವ ರಶ್ಮಿಕಾ ಈಗ ಯಾರಿಗೋ ಟ್ವೀಟ್​ ಮೂಲಕ ಸರಿಯಾಗಿಯೇ ಕಾಲು ಎಳೆದಿದ್ದಾರೆ. 'ಅದಕ್ಕೆ ನೀನಿನ್ನೂ ಸಿಂಗಲ್​' ಅಂತ ಒಬ್ಬರಿಗೆ ಟ್ವೀಟ್​ ಮಾಡಿದ್ದಾರೆ.

Allu Arjun and Rashmika Mandanna new movie starts with Pooja ceremony but Rashmika was missing
ರಶ್ಮಿಕಾ ಮಂದಣ್ಣಅವರ ಸಿನಿ ಜೀವನದಲ್ಲಿ ಮತ್ತೊಂದು ದೊಡ್ಡ ಸಿನಿಮಾ ಸೆಟ್ಟೇರಿದೆ. ಆದರೆ ಆ ಸಿನಿಮಾದ ಕಾರ್ಯಕ್ರಮದಲ್ಲಿ ರಶ್ಮಿಕಾ ಮಿಸ್ಸಿಂಗ್​ ಆಗಿದ್ದಾರೆ.


ಟಾಲಿವುಡ್​ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಸದ್ಯ 'ಭೀಷ್ಮ', 'ಸರಿಲೇರು ನೀಕೆವ್ವರು'  ಹಾಗೂ ಕಾಲಿವುಡ್​ನ 'ಸುಲ್ತಾನ್​' ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲೂ ಕೊಂಚ ಸಮಯ ಸಕ್ರಿಯವಾಗಿರುತ್ತಾರೆ.

ಇದನ್ನೂ ಓದಿ: Happy Birthday Anushka Shetty: ಕನ್ನಡತಿ ಅನುಷ್ಕಾ ಶೆಟ್ಟಿ ಹುಟ್ಟುಹಬ್ಬಕ್ಕೆ ಸಿಕ್ತು ಭರ್ಜರಿ ಗಿಫ್ಟ್​..!

ಕೆಲವೇ ಗಂಡೆಗಳ ಹಿಂದೆಯಷ್ಟೆ ರಶ್ಮಿಕಾ ತಮ್ಮ ಸಹ ನಟನಿಗೆ 'ಅದಕ್ಕೆ ನೀನಿನ್ನೂ ಸಿಂಗಲ್​' ಎಂದು ಕೀಟಲೆ ಮಾಡುತ್ತಾ ಟ್ವೀಟ್​ ಮಾಡಿದ್ದಾರೆ. ಅದಕ್ಕೂ ಕಾರಣ ಇದೆ. ಈಗಷ್ಟೆ 'ಭೀಷ್ಮ' ಚಿತ್ರದ ಮೊದಲ ತುಣುಕು ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದ್ದು, ಅದರ ಲಿಂಕ್​ ಹಂಚಿಕೊಳ್ಳುವುದರೊಂದಿಗೆ ಶೀರ್ಷಿಕೆಯಾಗಿ ಹೀಗೆ ಬರೆದುಕೊಂಡಿದ್ದಾರೆ.

ಸಿತಾರಾ ಎಂಟರ್​ಟೈನ್​ಮೆಂಟ್​ ಬ್ಯಾನರ್​ ಅಡಿ ನಿರ್ಮಾಣಗೊಳ್ಳುತ್ತಿರುವ 'ಭೀಷ್ಮ- ಸಿಂಗಲ್​ ಫಾರ್​ ಎವರ್​'  ಎಂಬ ಟ್ಯಾಗ್​ ಲೈನ್​ ಇರುವ ಈ ಸಿನಿಮಾಗೆ ವೆಂಕಿ ಕುಡುಮುಲ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಸೀರೆಯುಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೊದಲ ತುಣುಕು ನೋಡಿದರೆ, ಇದೊಂದು ರೊಮ್ಯಾಂಟಿಕ್​ ಲವ್​ ಷ್ಟೋರಿ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಮುಂದಿನ ವರ್ಷ ಅಂದರೆ 2020ರ ಫೆ.21ಕ್ಕೆ ಚಿತ್ರಮಂದಿರಕ್ಕೆ ಅಪ್ಪಳಿಸಲಿದ್ದಾನೆ 'ಭೀಷ್ಮ'.

 

ಅವಕಾಶಗಳ ಕೊರತೆಯಿಂದಾಗಿ ಬೋಲ್ಡ್​ ಫೋಟೋಶೂಟ್​ ಮೊರೆ ಹೋದ ಖ್ಯಾತ ಸ್ಯಾಂಡಲ್​ವುಡ್​ ನಟಿಯ ಮಗಳು..!


First published:November 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading