Rashmika Mandanna: ಪೆಟ್ರೋಲ್​ ಹಾಕಿದ್ದ ರಶ್ಮಿಕಾ ಈಗ ಕುರಿ ಮೇಯಿಸುತ್ತಿದ್ದಾರೆ..!

Sultan Tamil Movie: ಕನ್ನಡದ ಕಿರಿಕ್​ ಹುಡುಗಿ ಯಾವಾಗ ಏನು ಮಾಡ್ತಾರೆ ಅಂತ ಗೊತ್ತಿಲ್ಲ. ಇತ್ತೀಚೆಗಷ್ಟೆ ತಮ್ಮ ಕುಟುಂಬದೊಂದಿಗೆ ಒಂದು ದಿನ ಕಳೆದಿದ್ದರು ರಶ್ಮಿಕಾ. ತಂಗಿಯೊಂದಿಗೆ ಕಳೆದ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹೀಗಿರುವಾಗಲೇ ಈಗ ರಶ್ಮಿಕಾ ಹಳ್ಳಿಯೊಂದರಲ್ಲಿ ಲಂಗ ದಾವಣಿ ತೊಟ್ಟು ಕುರಿ ಮೇಯಿಸುತ್ತಿದ್ದಾರೆ. 

Anitha E | news18-kannada
Updated:October 19, 2019, 12:55 PM IST
Rashmika Mandanna: ಪೆಟ್ರೋಲ್​ ಹಾಕಿದ್ದ ರಶ್ಮಿಕಾ ಈಗ ಕುರಿ ಮೇಯಿಸುತ್ತಿದ್ದಾರೆ..!
ಹಳ್ಳಿಯಲ್ಲಿ ಕುರಿ ಮೇಯಿಸುತ್ತಿರುವ ರಶ್ಮಿಕಾ ಮಂದಣ್ಣ
  • Share this:
ಈ ಹಿಂದೆ ರಾಜಾಜಿನಗರದ ಪೆಟ್ರೋಲ್​ ಬಂಕ್​ವೊಂದರಲ್ಲಿ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಪ್ರತ್ಯಕ್ಷವಾಗಿ, ವಾಹನಗಳಿಗೆ ಪೆಟ್ರೋಲ್​ ಹಾಕುವ ಕೆಲಸ ಮಾಡಿದ್ದರು. ಆದರೆ ಈಗ ಹಳ್ಳಿಯೊಂದರಲ್ಲಿ ದಿಢೀರ್ ಅಂತ ಕುರಿ ಮೇಯಿಸುತ್ತಿದ್ದಾರೆ.

ಹೌದು, ಕನ್ನಡದ ಕಿರಿಕ್​ ಹುಡುಗಿ ಯಾವಾಗ ಏನು ಮಾಡ್ತಾರೆ ಅಂತ ಗೊತ್ತಿಲ್ಲ. ಇತ್ತೀಚೆಗಷ್ಟೆ ತಮ್ಮ ಕುಟುಂಬದೊಂದಿಗೆ ಒಂದು ದಿನ ಕಳೆದಿದ್ದರು ರಶ್ಮಿಕಾ. ತಂಗಿಯೊಂದಿಗೆ ಕಳೆದ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹೀಗಿರುವಾಗಲೇ ಈಗ ರಶ್ಮಿಕಾ ಹಳ್ಳಿಯೊಂದರಲ್ಲಿ ಲಂಗ ದಾವಣಿ ತೊಟ್ಟು ಕುರಿ ಮೇಯಿಸುತ್ತಿದ್ದಾರೆ.

Rashmika Mandanna's sheep Grazing photos gone Viral on social media
ಹಳ್ಳಿಯಲ್ಲಿ ಕುರಿ ಮೇಯಿಸುತ್ತಿರುವ ರಶ್ಮಿಕಾ ಮಂದಣ್ಣ


Rashmika Mandanna's sheep Grazing photos gone Viral on social media
ಹಳ್ಳಿಯಲ್ಲಿ ಕುರಿ ಮೇಯಿಸುತ್ತಿರುವ ರಶ್ಮಿಕಾ ಮಂದಣ್ಣ


ಅಯ್ಯೋ ಇದೇನಾಯಿತು ರಶ್ಮಿಕಾಗೆ, ಸಿನಿಮಾ ಬಿಟ್ಟು ರೈತ ಮಹಿಳೆಯಾಗೋದ್ರ ಅಂತ ಆತಂಕ ಪಡುವ ಅಗತ್ಯವಿಲ್ಲ. ಅವರು ತಮಿಳಿನಲ್ಲಿ ಕಾರ್ತಿ ಜತೆ ಅಭಿನಯಿಸುತ್ತಿರುವ 'ಸುಲ್ತಾನ್​' ಸಿನಿಮಾದ ಸೆಟ್​ನ ಚಿತ್ರಣವಿದು.

ಆ ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದು, ಚಿತ್ರೀಕರಣದ ಸೆಟ್​ನಲ್ಲಿ ರಶ್ಮಿಕಾ ಕುರಿ ಕಾಯುವಾಗ ಈ ಚಿತ್ರಗಳನ್ನು ತೆಗೆಯಲಾಗಿದೆ. ಈ ಚಿತ್ರಗಳು ರಶ್ಮಿಕಾರ ಅಭಿಮಾನಿಗಳ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ.

Rashmika Mandanna's sheep Grazing photos gone Viral on social media
ತರಕಾರಿ ಮಾರುಕಟ್ಟೆಯಲ್ಲಿ ರಶ್ಮಿಕಾ ಮಂದಣ್ಣ
ಭಾಗ್ಯರಾಜ್ಯ ನಿರ್ದೇಶನದ ಈ ಸಿನಿಮಾದ ಹೆಸರನ್ನು ಈ ಹಿಂದೆ ರಶ್ಮಿಕಾ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಗೊಳಿಸಿದ್ದರು. ಆದರೆ ಈ ಕುರಿತಾಗಿ ಚಿತ್ರತಂಡ ಮಾತ್ರ ಇನ್ನೂ ಸಿನಿಮಾದ ಟೈಟಲ್​ ರಿವೀಲ್​ ಮಾಡಿಲ್ಲ.

ಖಾಸಗಿ ವಾಹಿನಿಯೊಂದರಲ್ಲಿ ನಟ ಸೃಜನ್​ ಲೋಕೇಶ್​ ಅವರು ಆರಂಭಿಸಿದ್ದ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಮೂಲಕ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡುವ ಸಾಮಾಜಿಕ ಕಳಕಳಿ ಹೊಂದಿರುವ ಕೆಲಸ ಮಾಡಲಾಗುತ್ತಿತ್ತು. ಈ ಕಾರ್ಯಕ್ರಮದ ಸಂಚಿಕೆಯೊಂದಕ್ಕೆ ರಶ್ಮಿಕಾ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡಿದ್ದರು.

ಇದನ್ನೂ ಓದಿ: Sahoo: ಪ್ರಭಾಸ್​ಗೆ ಬೆನ್ನು ಬಿಡದ ಸಾಹೋ ಸಂಕಷ್ಟ: ಮಾದಾಪುರ ಠಾಣೆಯಲ್ಲಿ ದೂರು ದಾಖಲು..!

ಪಲ್ಲವಿ ಎಂಬುವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಸಹಾಯ ಮಾಡುವ ಕಾರಣಕ್ಕೆ ರಶ್ಮಿಕಾ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡಿದ್ದರು. ಆದರೆ ಈ ಸಲ ಇದು ಯಾವ ಕಾರ್ಯಕ್ರಮವೂ ಅಲ್ಲ. ಇದು ಅವರ ಮೊದಲ ತಮಿಳು ಸಿನಿಮಾದಲ್ಲಿನ ಲುಕ್​. ಅಭಿಮಾನಿಗಳಿಗೆ ರಶ್ಮಿಕಾರ ಈ ಹಳ್ಳಿ ಲುಕ್​ ತುಂಬಾ ಇಷ್ಟವಾಗಿದೆ.

Pooja Hegde: ಸಿಕ್ಕಾಪಟ್ಟೆ ಹಾಟ್​ ಆಗಿ ಕಾಣುತ್ತಿದ್ದಾರೆ ಪೂಜಾ ಹೆಗ್ಡೆ..!


 
First published:October 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading