Rashmika Mandanna: ವೈರಲ್​ ಆಗುತ್ತಿದೆ ರಶ್ಮಿಕಾ ಮಂದಣ್ಣರ ಈ ವರ್ಕೌಟ್​ ವಿಡಿಯೋ..!

ಒಂದಲ್ಲಾ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿರುವ ಕಿರಿಕ್​ ಬೆಡಗಿ ರಶ್ಮಿಕಾ ಮತ್ತೆ ಸದ್ದು ಮಾಡುತ್ತಿದ್ದಾರೆ. ಅವರ ಹೊಸ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

Anitha E | news18
Updated:June 11, 2019, 6:13 PM IST
Rashmika Mandanna: ವೈರಲ್​ ಆಗುತ್ತಿದೆ ರಶ್ಮಿಕಾ ಮಂದಣ್ಣರ ಈ ವರ್ಕೌಟ್​ ವಿಡಿಯೋ..!
ರಶ್ಮಿಕಾ ಮಂದಣ್ಣ
  • News18
  • Last Updated: June 11, 2019, 6:13 PM IST
  • Share this:
- ಅನಿತಾ ಈ, 

ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಆಕ್ಟೀವ್​  ವ್ಯಕ್ತಿತ್ವ. ಈಗಷ್ಟೆ 'ಡಿಯರ್​ ಕಾಮ್ರೆಡ್​' ಸಿನಿಮಾದ ಚಿತ್ರೀಕರಣ ಮುಗಿಸಿರುವ ಕೊಡಗಿನ ಕುವರಿ ಸದ್ಯ ಕಾರ್ತಿ ಜತೆ ತಮಿಳು ಸಿನಿಮಾಗಾಗಿ ಸಿದ್ಧರಾಗುತ್ತಿದ್ದಾರೆ.

ಕನ್ನಡಕ್ಕಿಂತ ಹೆಚ್ಚಾಗಿ ಟಾಲಿವುಡ್​ ಹಾಗೂ ಕಾಲಿವುಡ್​ನಲ್ಲೇ ಹೆಚ್ಚು ವ್ಯಸ್ತವಾಗಿರುವ ರಶ್ಮಿಕಾಗೆ ಫಿಟ್​ನೆಸ್​ ಹುಚ್ಚು ಸಹ ಕೊಂಚ ಹೆಚ್ಚಾಗಿಯೇ ಇದೆ ಎನ್ನಬಹುದು. ಹೌದು, ಈ ಹಿಂದೆ 'ಡಿಯರ್​ ಕಾಮ್ರೆಡ್​' ಸಿನಿಮಾದ ಚಿತ್ರೀಕರಣ ಆರಂಭವಾಗುವ ಮುನ್ನ ಜಿಮ್​ನಲ್ಲಿ ಸಾಕಷ್ಟು ಬೆವರಿಳಿಸಿದ್ದರು.ಆಗ ದೊಡ್ಡ ಟಯರ್​ ಎತ್ತುವುದರೊಂದಿಗೆ, ಹಗ್ಗ ಹಿಡಿದು ಸಿಕ್ಕಾ ಪಟ್ಟೆ ವರ್ಕೌಟ್​ ಮಾಡಿದ್ದರು. ಆಗಲೇ ಅವರು ಯಾವುದೋ ಸಾಹಸ ಪ್ರಧಾನ ಸಿನಿಮಾಗಾಗಿ ಸಿಕ್ಕಾಪಟ್ಟೆ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆಗ ರಶ್ಮಿಕಾ ಸಿದ್ಧವಾಗುತ್ತಿದ್ದದ್ದು 'ಡಿಯರ್​ ಕಾಮ್ರೆಡ್​' ಸಿನಿಮಾದಲ್ಲಿನ ಕ್ರಿಕೆಟರ್​ ಪಾತ್ರಕ್ಕೆ.

@iamRashmikaಇನ್ನೂ ರಶ್ಮಿಕಾಗೆ ಫಿಟ್​ನೆಸ್​ ಹುಚ್ಚು ಎಷ್ಟಿದೆ ಎನ್ನುವುದಕ್ಕೆ ಈ ವಿಡಿಯೋ ನೋಡಿ ನಿಮಗೆ ತಿಳಿಯುತ್ತೆ.


ಆದರೆ ಈಗ ರಶ್ಮಿಕಾರ ಮತ್ತೊಂದು ವರ್ಕೌಟ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇದರಲ್ಲಿ ರಶ್ಮಿಕಾ ಬ್ಯಾಕ್​ ಡೈವ್ ಹೊಡೆದಿದ್ದಾರೆ.

🙊🙊 This fitness babY is dOing eXtreme wOrk ouT - hOw much Stamina shE haS 🙄🙄😱😱 

 ರಶ್ಮಿಕಾ ಹೈದರಾಬಾದಿನಲ್ಲಿ ಈ ತರಬೇತಿ ಪಡೆಯುತ್ತಿದ್ದು, ಇದು ಹೊಸ ಸಿನಿಮಾಗಾಗಿ ಪಡೆಯುತ್ತಿರುವ ತರಬೇತಿನಾ ಅಥವಾ ಹಳೆಯ ವಿಡಿಯೋ ನಾ ಅಂತ ಇನ್ನೂ ಸ್ಪಷವಾಗಿಲ್ಲ. ಆದರೆ ರಶ್ಮಿಕಾ ಮಂದಣ್ಣ ಅವರ ಅಭಿಮಾನಿ ಪುಟಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ.

ಇದನ್ನೂ ಓದಿ: Roberrt Fever: ಡಿಬಾಸ್​ ಅಭಿಮಾನಿಗಳಲ್ಲಿ ಆರಂಭವಾಗಿದೆ 'ರಾಬರ್ಟ್​' ಫೀವರ್​..!

ಇನ್ನು ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ದೇವರಕೊಂಡ ಅಭಿನಯದ 'ಡಿಯರ್​ ಕಾಮ್ರೆಡ್​' ಸಿನಿಮಾ ಜುಲೈ 26ಕ್ಕೆ ತೆರೆಗಪ್ಪಳಿಸಲಿದೆ. ಉಳಿದಂತೆ ಕನ್ನಡದಲ್ಲಿ 'ಪೊಗರು' ಹಾಗೂ ತೆಲುಗಿನಲ್ಲಿ ಮಹೇಶ್​ ಬಾಬು, ಅಲ್ಲು ಅರ್ಜುನ್​  ಮತ್ತು ನಿತಿನ್​ ಜತೆ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

Photos: ಸೀರೆಯಲ್ಲಿ ಮಿಂಚಿದ ಬಿಗ್​ಬಾಸ್​ ಬೆಡಗಿ ಅನುಪಮಾ ಗೌಡ..!

First published: June 11, 2019, 2:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading