- ಅನಿತಾ ಈ,
ದಾಸ ನಿಂಗೆ ಖಾಸ ಖಾಸ ಎಂದು ಕೃಷ್ಣನ ಕಾವೇರಿಯಾಗಿ 'ಯಜಮಾನ' ಸಿನಿಮಾದಲ್ಲಿ ಮಿಂಚಿದ ಮೇಲೆ ರಶ್ಮಿಕಾ ಸದ್ಯ ಯಶಸ್ಸಿನ ಅಲೆಯಲ್ಲಿದ್ದಾರೆ. ಇದರ ನಡುವೆಯೇ ಖ್ಯಾತ ನಿಯತಕಾಲಿಕೆ 'ಪ್ರೊವೋಕ್' ಫೋಟೋಶೂಟ್ಗೆ ಪೋಸ್ ನೀಡಿದ್ದಾರೆ.
ಇದನ್ನೂ ಓದಿ: ಅತಿರೇಕದ ಅಭಿಮಾನ: ಏರ್ಪೋರ್ಟ್ನಲ್ಲಿ ಪ್ರಭಾಸ್ ಕೆನ್ನೆಗೆ ಬಾರಿಸಿದ ಅಭಿಮಾನಿ
ಟ್ರೆಂಡಿ ಹಾಗೂ ಕಲರ್ಫುಲ್ ಡ್ರೆಸ್ನಲ್ಲಿ ರಶ್ಮಿಕಾ ಫುಲ್ ಮಿಂಚುತ್ತಿದ್ದಾರೆ. ಕಿರಿಕ್ ಬೆಡಗಿ ಕೆಂಪು ಬಣ್ಣದ ಕಾಸ್ಟ್ಯೂಮ್ನಲ್ಲಿ ಹಾಟ್ ಲುಕ್ನಲ್ಲಿ ಕ್ಯಾಮೆರಾ ಎದುರು ಪೋಸ್ ನೀಡಿದ್ದಾರೆ. ವಸಂತ್ ಪೌಲ್ ಅವರ ಕ್ಯಾಮೆರಾ ಕಣ್ಣಲ್ಲಿ ಈ ಕಲರ್ ಫುಲ್ ಫೋಟೋಶೂಟ್ ಸೆರೆಯಾಗಿದೆ.
ರೋನನ್ ಮಿಲಿ ಅವರ ಮೇಕಪ್ ಹಾಗೂ ಶ್ರಾವ್ಯಾ ವರ್ಮಾ ಅವರ ಸ್ಟೈಲಿಂಗ್ನಲ್ಲಿ ರಶ್ಮಿಕಾ ಮತ್ತಷ್ಟು ಮುದ್ದಾಗಿ ಹಾಗೂ ಹಾಟ್ ಆಗಿ ಕಾಣಿಸಿದ್ದಾರೆ. ಈ ಹಾಟ್ ಲುಕ್ನಲ್ಲಿ ರಶ್ಮಿಕಾ ನೋಟ ಪಡ್ಡೆಗಳ ಹೃದಯಕ್ಕೆ ಬಾಣ ಬಿಟ್ಟಂತಿದೆ.
ಮಾರ್ಚ್ ತಿಂಗಳ ಸಂಚಿಕೆಯ ಮುಖ ಪುಟಕ್ಕೆ ಈ ಬಾರಿ ರಶ್ಮಿಕಾರ ಪೋಟೋಶೂಟ್ ನಡೆಸಲಾಗಿದೆ. ಹೈದರಬಾದಿನ ಹೋಟೆಲ್ವೊಂದರಲ್ಲಿ ಈ ಫೋಟೋಶೂಟ್ ಮಾಡಲಾಗಿದೆ.
Thank you #Provoke for having me 😁❤️
PHOTOGRAPHY: Vasanth Paul ,
WARDROBE: Behind The Seams,
STYLING: Shravya Varma,
HAIR: Akshay Sannayila ,
Toni&Guy
MAKE-UP: Ronan Mili ,
LOCATION: The Park Hyatt, Hyderabad #ProvokeLifestyle #StayProvoked #ProvokeTV #CelebratingWomynhood pic.twitter.com/Ha0xqYYSWZ
— Rashmika Mandanna (@iamRashmika) March 5, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ