Rashmika Mandanna: ರಶ್ಮಿಕಾ ಮಂದಣ್ಣಗಾಗಿ ಟ್ವಿಟರ್​ನಲ್ಲಿ ಅಭಿಯಾನ ಆರಂಭಿಸಿದ ಅಭಿಮಾನಿಗಳು..!

Rashmika Twitter: ಟಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ರಶ್ಮಿಕಾ ಕೈತುಂಬಾ ಅವಕಾಶಗಳಿವೆ. ಅದರಲ್ಲೂ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶಗಳು ಒಂದರ ಹಿಂದೆ ಒಂದರಂತೆ ಅರಸಿ ಬರುತ್ತಿವೆ. ರಶ್ಮಿಕಾ ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿಯಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಟ್ವಿಟರ್​ನಿಂದ ದೂರ ಉಳಿದಂತಿದೆ.

ಸ್ಯಾಂಡಲ್​ವುಡ್​ನ ಕಿರಿಕ್​ ಬೆಡಗಿ ರಶ್ಮಿಕಾ ಟಾಲಿವುಡ್​ನಲ್ಲಿ ಟಾಪ್​ ನಟಿಯರಲ್ಲಿ ಒಬ್ಬರು. ಇಂತಹ ನಟಿ ಈಗ ಅಭಿಮಾನಿಗಳಿಗೆ ಬೇಸರ ಮಾಡಿದ್ದಾರೆ.

ಸ್ಯಾಂಡಲ್​ವುಡ್​ನ ಕಿರಿಕ್​ ಬೆಡಗಿ ರಶ್ಮಿಕಾ ಟಾಲಿವುಡ್​ನಲ್ಲಿ ಟಾಪ್​ ನಟಿಯರಲ್ಲಿ ಒಬ್ಬರು. ಇಂತಹ ನಟಿ ಈಗ ಅಭಿಮಾನಿಗಳಿಗೆ ಬೇಸರ ಮಾಡಿದ್ದಾರೆ.

  • Share this:
ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸಕ್ರಿಯವಾಗಿರುವ ನಟಿ ರಶ್ಮಿಕಾ ಮಂದಣ್ಣ ಕಳೆದ ಕೆಲವು ದಿನಗಳಿಂದ ಟ್ವಿಟರ್​ನಿಂದ ದೂರ ಉಳಿದಿದ್ದಾರೆ. ಅಭಿಮಾನಿಗಳ ಪ್ರತಿ ಟ್ವೀಟ್​ಗೂ ಉತ್ತರ ನೀಡುತ್ತಿದ್ದ ರಶ್ಮಿಕಾ ಈಗ ಮೌನ ತಾಳಿದ್ದಾರೆ.

ಟಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ರಶ್ಮಿಕಾ ಕೈತುಂಬಾ ಅವಕಾಶಗಳಿವೆ. ಅದರಲ್ಲೂ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶಗಳು ಒಂದರ ಹಿಂದೆ ಒಂದರಂತೆ ಅರಸಿ ಬರುತ್ತಿವೆ. ರಶ್ಮಿಕಾ ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿಯಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಟ್ವಿಟರ್​ನಿಂದ ದೂರ ಉಳಿದಂತಿದೆ.

Rashmika Mandanna looks gorgeous in saree pics
ರಶ್ಮಿಕಾ ಮಂದಣ್ಣ


ಇದೇ ಕಾರಣಕ್ಕೆ ಅಭಿಮಾನಿಗಳು ರಶ್ಮಿಕಾರನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ, #ComeBackRashmika ಅಂತ ಟ್ವಿಟರ್​ನಲ್ಲಿ ಅಭಿಯಾನ ಆರಂಭಿಸಿದ್ದಾರೆ.



ಕಳೆದ ಕೆಲವು ದಿನಗಳಿಂದ ರಶ್ಮಿಕಾ ಟ್ವಿಟರ್​ನಲ್ಲಿ ಒಂದೂ ಪೋಸ್ಟ್​ ಮಾಡಿಲ್ಲ. ಸಾಲದಕ್ಕೆ ಅಭಿಮಾನಿಗಳು ಮಾಡುತ್ತಿರುವ ಟ್ವೀಟ್​ಗಳಿಗೆ ಉತ್ತರವನ್ನೂ ನೀಡುತ್ತಿಲ್ಲ. ಇದರಿಂದಲೇ  ಅಭಿಮಾನಿಗಳು ಟ್ವಿಟರ್​ನಲ್ಲಿ ಅಭಿಯಾನ ಆರಂಭಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ನಾಲ್ಕು ದಿನಗಳ ಹಿಂದೆಯಷ್ಟೆ ಪೋಸ್ಟ್​ ಮಾಡಿದ್ದಾರೆ. ಆದರೆ ಟ್ವಿಟರ್​ನಲ್ಲಿ ಮಾತ್ರ ಮಾರ್ಚ್​ 7ಕ್ಕೆ ಕೊನೆಯ ಟ್ವೀಟ್​ ಮಾಡಿದ್ದಾರೆ.

Tamannaah Bhatia: ತೂಕ ಇಳಿಸಿಕೊಂಡ ಟಾಲಿವುಡ್​ನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾಗೆ ಹೆಚ್ಚಿದೆ ಬೇಡಿಕೆ​..!


 

First published: