Rashmika Mandanna: ಬಾಲಿವುಡ್ ಅಂಗಳಕ್ಕೆ ಕಾಲಿಡಲಿದ್ದಾರೆ ಲಿಲ್ಲಿ ರಶ್ಮಿಕಾ ಮಂದಣ್ಣ..!
Rashmika Mandanna: ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ರಶ್ಮಿಕಾ ಬಾಲಿವುಡ್ಗೆ ಹಾರೋ ಬಗ್ಗೆ ಹಲವು ಬಾರಿ ಗಾಳಿ ಸುದ್ದಿ ಹಬ್ಬಿದ್ದವು. ಆದರೆ ಈಗ ಅವರ ಬಾಲಿವುಡ್ ಡೆಬ್ಯೂ ಹೆಚ್ಚುಕಮ್ಮಿ ಫಿಕ್ಸ್ ಅನ್ನೋ ಸುದ್ದಿಗಳು ದಕ್ಷಿಣ ಸಿನಿರಂಗದಲ್ಲಿ ಸದ್ದು ಮಾಡುತ್ತಿವೆ.

ಹೊಸ ಫೋಟೋಶೂಟ್ನಲ್ಲಿ ರಶ್ಮಿಕಾ
- News18 Kannada
- Last Updated: September 5, 2019, 12:36 PM IST
ಕ್ಯೂಟಾಗಿ ಸ್ಮೈಲ್ ಮಾಡುತ್ತಾ ಕಿರಿಕ್ ಮಾಡಿಕೊಂಡೇ ದಕ್ಷಿಣದ ಟಾಪ್ ನಟಿಯರ ಪಟ್ಟಿ ಸೇರಿದ ಬ್ಯೂಟಿ ರಶ್ಮಿಕಾ ಮಂದಣ್ಣ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರಶ್ಮಿಕಾ ಬಾಲಿವುಡ್ನಲ್ಲಿ ಖಾತೆ ತೆರೆಯುವ ಕುರಿತು ಆಗಾಗ ಸುದ್ದಿಗಳು ಸದ್ದು ಮಾಡುತ್ತಲೇ ಇವೆ. ಆದರೆ ಈಗ ಹೆಚ್ಚುಕಡಿಮೆ ಕಿರಿಕ್ ಸಾನ್ವಿ ಬಿಟೌನ್ಗೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ.
ಬೆಳಗೆದ್ದು ದೇವರ ಮುಖ ನೋಡ್ತಿದ್ದ ಪಡ್ಡೆಗಳೆಲ್ಲ, ಪರ್ಸ್ನಲ್ಲಿ , ಮೊಬೈಲ್ ಸ್ಕ್ರೀನ್ ಸೇವರ್ನಲ್ಲಿ ರಶ್ಮಿಕಾ ಮಂದಣ್ಣರ ಫೋಟೋ ಇಟ್ಟುಕೊಂಡು ನೋಡೋಕೆ ಶುರು ಮಾಡಿದ್ರು. ಅಷ್ಟರ ಮಟ್ಟಿಗೆ 'ಕಿರಿಕ್ ಪಾರ್ಟಿ' ಚಿತ್ರ ಹಾಗೂ ಅದರಲ್ಲಿನ ಸಾನ್ವಿ ಜೋಸೆಫ್ ಪಾತ್ರ ರಾಜ್ಯದಲ್ಲಿ ಕ್ರೇಜ್ ಸೃಷ್ಟಿಸಿತ್ತು. 
ಈ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಸಿಂಪಲ್ ಕಾಲೇಜ್ ಹುಡುಗಿಯೊಬ್ಬಳು, ಕರ್ನಾಟಕ ಕ್ರಶ್ ಆಗಿದ್ದು ಈಗ ಇತಿಹಾಸ. ಏಕಂದರೆ, ಈ ಕರ್ನಾಟಕದ ಕ್ರಶ್ ಈಗ ಕನ್ನಡಕ್ಕಿಂತ ಹೆಚ್ಚಾಗಿ ಶೈನ್ ಆಗ್ತಿರೋದು ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ.
ಇದನ್ನೂ ಓದಿ: Rashmika mandanna: ವೈರಲ್ ಆಗುತ್ತಿದೆ ರಶ್ಮಿಕಾರ ಬೀಚ್ ಸೈಡ್ ಫೋಟೋ..!
ಇಂತಹ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. 'ಗೀತ ಗೋವಿಂದಂ' ಬಳಿಕ ಈ ಕಿರಿಕ್ ಚೆಲುವೆ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ಮತ್ತೆ ವಿಜಯ್ ದೇವರಕೊಂಡ ಜತೆ ಒಂದಾಗಿದ್ದರು. ಟೀಸರ್, ಟ್ರೈಲರ್ ಹಾಡುಗಳ ಮೂಲಕ ಸದ್ದು ಮಾಡಿದ ಸಿನಿಮಾ, ಚಿತ್ರಮಂದಿರಗಳಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಹಾಗೆಂದು ಇದರಿಂದ ರಶ್ಮಿಕಾ ಅವರಿಗೆ ಅವಕಾಶಗಳ ಕೊರತೆಯಾಗಲಿಲ್ಲ.
ಸದ್ಯ ರಶ್ಮಿಕಾ ಕೈಯಲ್ಲಿ ಐದು ಸಿನಿಮಾಗಳಿವೆ. ಕನ್ನಡದ 'ಪೊಗರು' ಚಿತ್ರದಲ್ಲಿ ಈ ಕಿರಿಕ್ ಸುಂದರಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಜೋಡಿಯಾಗಿದ್ದಾರೆ. ಟಾಲಿವುಡ್ನಲ್ಲಿ ಪ್ರಿನ್ಸ್ ಮಹೇಶ್ ಬಾಬು ಜತೆ 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೇ 'ಭೀಷ್ಮ' ಸಿನಿಮಾದಲ್ಲಿ ನಿತಿನ್ಗೆ ಜತೆಯಾಗಿದ್ದಾರೆ. ಇನ್ನು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿರುವ ಇಪ್ಪತ್ತನೇ ಚಿತ್ರಕ್ಕೆ ರಶ್ಮಿಕಾನೇ ನಾಯಕಿ ಅನ್ನೋದು ಬಹುತೇಕ ಖಚಿತವಾಗಿದೆ. ಇವುಗಳ ನಡುವೆ ಕಾಲಿವುಡ್ನಲ್ಲಿ ಡೆಬ್ಯೂ ಮಾಡಿರುವ ರಶ್ಮಿಕಾ, ಕಾರ್ತಿ ಜತೆ 'ಸುಲ್ತಾನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಕೂಡ.
ಇಷ್ಟೆಲ್ಲ ಬ್ಯುಸಿಯಿದ್ದರೂ ರಶ್ಮಿಕಾ ಬಾಲಿವುಡ್ಗೆ ಹಾರೋ ಬಗ್ಗೆ ಹಲವು ಬಾರಿ ಗಾಳಿ ಸುದ್ದಿ ಹಬ್ಬಿದ್ದವು. ಆದರೆ ಈಗ ಅವರ ಬಾಲಿವುಡ್ ಡೆಬ್ಯೂ ಹೆಚ್ಚುಕಮ್ಮಿ ಫಿಕ್ಸ್ ಅನ್ನೋ ಸುದ್ದಿಗಳು ದಕ್ಷಿಣ ಸಿನಿರಂಗದಲ್ಲಿ ಸದ್ದು ಮಾಡುತ್ತಿವೆ. ತೆಲುಗಿನ 'ಜೆರ್ಸಿ' ಚಿತ್ರದ ಹಿಂದಿ ರಿಮೇಕ್ನಲ್ಲಿ ಕಿರಿಕ್ ಬ್ಯೂಟಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Roberrt: ದರ್ಶನ್ ಸಿನಿಮಾಗೆ ಕನ್ನಡತಿ ಎಂಟ್ರಿ: ರಾಬರ್ಟ್ ಚಿತ್ರದ ನಾಯಕಿ ಹೆಸರು ಬಹಿರಂಗ..!
ಇದೇ ವರ್ಷ ತೆಲುಗಿನಲ್ಲಿ ತೆರೆಕಂಡ 'ಜೆರ್ಸಿ' ಚಿತ್ರವನ್ನು ಬಾಲಿವುಡ್ನಲ್ಲಿ ರಿಮೇಕ್ ಮಾಡೋ ಪ್ಲ್ಯಾನ್ ಇದೆಯಂತೆ. ಗೌತಮ್ ನಿರ್ದೇಶನದ ಈ ಸಿನಿಮಾದಲ್ಲಿ ನಾನಿ ಹಾಗೂ ಕನ್ನಡತಿ ಶ್ರದ್ಧಾ ಶ್ರೀನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈಗ ಇದೇ ಚಿತ್ರ ಹಿಂದಿಯಲ್ಲಿ ರಿಮೇಕ್ ಆಗಲಿದೆಯಂತೆ.
ತೆಲುಗಿನ 'ಅರ್ಜುನ್ ರೆಡ್ಡಿ' ಹಿಂದಿಯಲ್ಲಿ 'ಕಬೀರ್ ಸಿಂಗ್' ಆಗಿ ರಿಮೇಕ್ ಆಗಿ, ಈ ವರ್ಷದ ಸೂಪರ್ ಹಿಟ್ ಸಿನಿಮಾಗಳ ಸಾಲು ಸೇರಿದ್ದು ಗೊತ್ತೇಯಿದೆ. ಈ ರಿಮೇಕ್ ಯಶಸ್ಸಿನಿಂದ ಫುಲ್ ಥ್ರಿಲ್ಆಗಿರುವ ಬಾಲಿವುಡ್ ನಿರ್ಮಾಪಕರು ದಕ್ಷಿಣ ಭಾರತದ ಸಿನಿಮಾಗಳನ್ನು ರಿಮೇಕ್ ಮಾಡಲು ಉತ್ಸುಕರಾಗಿದ್ದಾರೆ. ಅದೂ ಅಲ್ಲದೇ ಈ 'ಜೆರ್ಸಿ' ಚಿತ್ರದ ಹಿಂದಿ ರಿಮೇಕ್ನಲ್ಲಿ ನಟಿಸಲು 'ಕಬೀರ್ ಸಿಂಗ್' ನಾಯಕ ಶಾಹಿದ್ ಕಪೂರ್ಗೆ ಆಫರ್ ನೀಡಲಾಗಿದೆ ಅನ್ನೋ ಸುದ್ದಿಯೂ ಬಾಲಿವುಡ್ನಲ್ಲಿ ಓಡಾಡ್ತಿದೆ.
ಅದೇನೇ ಇರಲಿ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿದ ಬಳಿಕ ರಶ್ಮಿಕಾ ಏನೋ ಬಾಲಿವುಡ್ಗೆ ಹಾರಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಕಾಲ ಕೂಡಿಬರುತ್ತಿಲ್ಲವಷ್ಟೇ. ಆದರೆ ಈಗ ಹಬ್ಬಿರುವ ಸುದ್ದಿ ನಿಜವಾದಲ್ಲಿ ರಶ್ಮಿಕಾ 2020ಕ್ಕೆ ಬಾಲಿವುಡ್ ಡೆಬ್ಯೂ ಫಿಕ್ಸ್.
Rashmi Gautham: ಕಣ್ಣೋಟದಿಂದಲೇ ಪಡ್ಡೆಗಳ ನಿದ್ದೆ ಕದ್ದಿರುವ ರಶ್ಮಿ ಗೌತಮ್..!
ಬೆಳಗೆದ್ದು ದೇವರ ಮುಖ ನೋಡ್ತಿದ್ದ ಪಡ್ಡೆಗಳೆಲ್ಲ, ಪರ್ಸ್ನಲ್ಲಿ , ಮೊಬೈಲ್ ಸ್ಕ್ರೀನ್ ಸೇವರ್ನಲ್ಲಿ ರಶ್ಮಿಕಾ ಮಂದಣ್ಣರ ಫೋಟೋ ಇಟ್ಟುಕೊಂಡು ನೋಡೋಕೆ ಶುರು ಮಾಡಿದ್ರು. ಅಷ್ಟರ ಮಟ್ಟಿಗೆ 'ಕಿರಿಕ್ ಪಾರ್ಟಿ' ಚಿತ್ರ ಹಾಗೂ ಅದರಲ್ಲಿನ ಸಾನ್ವಿ ಜೋಸೆಫ್ ಪಾತ್ರ ರಾಜ್ಯದಲ್ಲಿ ಕ್ರೇಜ್ ಸೃಷ್ಟಿಸಿತ್ತು.

ವಿಜಯ್ ದೇವರಕೊಂಡ-ರಶ್ಮಿಕಾ
ಈ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಸಿಂಪಲ್ ಕಾಲೇಜ್ ಹುಡುಗಿಯೊಬ್ಬಳು, ಕರ್ನಾಟಕ ಕ್ರಶ್ ಆಗಿದ್ದು ಈಗ ಇತಿಹಾಸ. ಏಕಂದರೆ, ಈ ಕರ್ನಾಟಕದ ಕ್ರಶ್ ಈಗ ಕನ್ನಡಕ್ಕಿಂತ ಹೆಚ್ಚಾಗಿ ಶೈನ್ ಆಗ್ತಿರೋದು ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ.
ಇದನ್ನೂ ಓದಿ: Rashmika mandanna: ವೈರಲ್ ಆಗುತ್ತಿದೆ ರಶ್ಮಿಕಾರ ಬೀಚ್ ಸೈಡ್ ಫೋಟೋ..!
ಇಂತಹ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. 'ಗೀತ ಗೋವಿಂದಂ' ಬಳಿಕ ಈ ಕಿರಿಕ್ ಚೆಲುವೆ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ಮತ್ತೆ ವಿಜಯ್ ದೇವರಕೊಂಡ ಜತೆ ಒಂದಾಗಿದ್ದರು. ಟೀಸರ್, ಟ್ರೈಲರ್ ಹಾಡುಗಳ ಮೂಲಕ ಸದ್ದು ಮಾಡಿದ ಸಿನಿಮಾ, ಚಿತ್ರಮಂದಿರಗಳಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಹಾಗೆಂದು ಇದರಿಂದ ರಶ್ಮಿಕಾ ಅವರಿಗೆ ಅವಕಾಶಗಳ ಕೊರತೆಯಾಗಲಿಲ್ಲ.

ರಶ್ಮಿಕಾ-ಕರಣ್