Rashmika Mandanna: ಮದುವೆಯ ಬಗ್ಗೆ ನಟಿ ರಶ್ಮಿಕಾ ಹೇಳಿದ್ದೇನು ಗೊತ್ತೇ..? ವಿಜಯ್‌ ಜತೆ ಮದುವೆಯ ಬಗ್ಗೆ ಖಡಕ್ ಉತ್ತರ..!

ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ

  • Share this:
ಕಳೆದ ವಾರ ತೆಲುಗಿನ ನಟ ವಿಜಯ್ ದೇವರಕೊಂಡ (Vijay Devarakonda) ಮತ್ತು ಕನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಮದುವೆಯ ವದಂತಿಗಳು ಸುದ್ದಿ ಮಾಧ್ಯಮದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾಗಿಯೇ ಸದ್ದು ಮಾಡುತ್ತಿರುವಾಗ ಅರ್ಜುನ್ ರೆಡ್ಡಿ (Arjun Reddy) ಚಿತ್ರದ ನಟ ವಿಜಯ್ ಟ್ವೀಟ್ (Tweet) ಮಾಡುವ ಮೂಲಕ ಈ ಮದುವೆಯ ವದಂತಿಗಳನ್ನು ತಳ್ಳಿ ಹಾಕಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.ಈ ಇಬ್ಬರು ಸ್ಟಾರ್ ನಟರು ತೆಲುಗಿನಲ್ಲಿ ‘ಗೀತಾ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ನಂತಹ ಹಿಟ್ ಚಿತ್ರಗಳನ್ನು ನೀಡುವ ಮೂಲಕ ನಿಕಟವಾದ ಬಂಧವನ್ನು ಬೆಳೆಸಿಕೊಂಡವರು ಎಂದು ಹೇಳಬಹುದು. ನಂತರ ಇವರಿಬ್ಬರು ಉತ್ತಮ ಸ್ನೇಹಿತರಾದರು. ತಮ್ಮ ಬಿಡುವಿಲ್ಲದ ವೇಳಾಪಟ್ಟಿಗಳು ಮತ್ತು ಅಸಂಖ್ಯಾತ ವದಂತಿಗಳ ಹೊರತಾಗಿಯೂ, ಇಬ್ಬರೂ ಪರಸ್ಪರ ಭೇಟಿಯಾಗುವುದನ್ನು ಮತ್ತು ಒಟ್ಟಿಗೆ ಸೇರಿ ಸಮಯವನ್ನು ಕಳೆಯುವ ಯಾವುದೇ ಅವಕಾಶವನ್ನು ಇವರು ಮಿಸ್ ಮಾಡಿಕೊಂಡಂತೆ ಕಾಣುತ್ತಿಲ್ಲ.

ಆಗಾಗ್ಗೆ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್‌ಗೆ ಹೋಗುತ್ತಿರುವುದು ಅವರ ಸಂಬಂಧದ ಬಗ್ಗೆ ಹುಟ್ಟಿಕೊಂಡಿರುವ ವದಂತಿಗಳಿಗೆ ತುಪ್ಪ ಸುರಿದಂತಾಗಿದೆ ಎಂದು ಹೇಳಬಹುದು.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರ ಮದುವೆಯ ಬಗ್ಗೆ ಊಹಾಪೋಹಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಒಂದು ವಾರದ ನಂತರ, ಪುಷ್ಪಾ ಚಿತ್ರದ ನಟಿ ರಶ್ಮಿಕಾ ಅವರು ತೆಲುಗು ಮನರಂಜನಾ ಸುದ್ದಿ ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ, ತನ್ನ ಮದುವೆಯ ಬಗ್ಗೆ ಅನೇಕ ವಿಷಯಗಳನ್ನು ಮನ ಬಿಚ್ಚಿ ಮಾತಾಡಿದ್ದಾರೆ ನೋಡಿ. ಈ ಸಂದರ್ಶನದಲ್ಲಿ ರಶ್ಮಿಕಾ ತಾವು ಯಾವಾಗ ಮದುವೆಯಾಗಲಿದ್ದಾರೆ ಮತ್ತು ಹೇಗೆ ಮದುವೆಯಾಗಲಿದ್ದಾರೆ ಎನ್ನುವ ಅನೇಕ ವಿಚಾರಗಳ ಬಗ್ಗೆ ಮಾತಾಡಿದ್ದಾರೆ.

ಮದುವೆ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು ನೋಡಿ..

ಕಳೆದ ವಾರ, ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಈ ವರ್ಷದ ಕೊನೆಯಲ್ಲಿ ಮದುವೆಯಾಗಬಹುದು ಎಂಬ ವದಂತಿಗಳು ಚಲನಚಿತ್ರೋದ್ಯಮದಲ್ಲಿ ಮತ್ತು ಅಭಿಮಾನಿಗಳ ಬಳಗದಲ್ಲಿ ಬಲವಾಗಿಯೇ ಹರಿದಾಡುತ್ತಿದ್ದವು.

ಇದೊಂದು ಟೈಂ ಪಾಸ್ ವದಂತಿ

ಈಗ, ರಶ್ಮಿಕಾ ನೀಡಿದ ಸಂದರ್ಶನದಲ್ಲಿ ತಮ್ಮ ಮದುವೆಯ ಬಗ್ಗೆ ಹುಟ್ಟಿಕೊಂಡಿರುವ ವದಂತಿಗಳಿಗೆ ಪೂರ್ಣವಿರಾಮ ಹಾಕಿದ್ದಾರೆ. ತನ್ನ ಭವಿಷ್ಯದ ಯೋಜನೆಗಳ ಬಗ್ಗೆ ಕೇಳಿದಾಗ, "ಇದು ಕೇವಲ ಟೈಮ್ ಪಾಸ್ ವದಂತಿಯಾಗಿದ್ದು, ಮದುವೆಯಾಗಲು ನನಗೆ ಇನ್ನೂ ಸಾಕಷ್ಟು ಸಮಯವಿದೆ. ಸಮಯ ಬಂದಾಗ ನಾನು ಖಂಡಿತವಾಗಿಯೂ ಮದುವೆಯಾಗುತ್ತೇನೆ ಮತ್ತು ಆ ಎಲ್ಲಾ ವದಂತಿಗಳು ಹಾಗೆ ಇರಲಿ. ಪರವಾಗಿಲ್ಲ ನಾನು ಹೀಗೆಯೇ ಇರುತ್ತೇನೆ" ಎಂದು ಹೇಳಿದ್ದಾರೆ.

ಗೀತ ಗೋವಿಂದಂನಲ್ಲಿ ಒಂದಾದ ಜೋಡಿ

ನಿರ್ದೇಶಕ ಪರಶುರಾಮ್ ಅವರ ‘ಗೀತಾ ಗೋವಿಂದಂ’ ಚಿತ್ರದಲ್ಲಿ ಮೊದಲ ಬಾರಿಗೆ ನಟ ವಿಜಯ್ ದೇವರಕೊಂಡ ಅವರು ನಟಿ ರಶ್ಮಿಕಾ ಮಂದಣ್ಣ ಅವರೊಂದಿಗೆ ನಟಿಸಿದರು. ಈ ಚಿತ್ರವು ಬೇರೆಯದ್ದೇ ಖ್ಯಾತಿ ತಂದು ಕೊಟ್ಟಿತು ಮತ್ತು ತೆಲುಗು ಚಲನಚಿತ್ರೋದ್ಯಮದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ನಟ ಮತ್ತು ನಟಿಗೆ ಸಹಾಯ ಮಾಡಿತು. ಇವರಿಬ್ಬರ ಸ್ಟಾರ್ ನಟರ ಪರದೆಯ ಮೇಲಿನ ಇಬ್ಬರ ಕೆಮಿಸ್ಟ್ರಿಯನ್ನು ನೋಡಿ ತುಂಬಾನೇ ಮೆಚ್ಚಿಕೊಂಡರು.

ಇದನ್ನೂ ಓದಿ: Rashmika Mandanna: ಕೋಟಿ ಕೋಟಿ ಒಡತಿ ಕೊಡಗಿನ ಬೆಡಗಿ: ಅಬ್ಬಾ..! ರಶ್ಮಿಕಾ ಮಂದಣ್ಣ ಬಳಿ ಇದೆ ಕಾಸ್ಟ್ಲಿ ಕಾರು, ಅರ'ಮನೆ’!

ಆಗಾಗ್ಗೆ ಇವರಿಬ್ಬರು ಒಂದೇ ಸ್ಥಳದಲ್ಲಿ ಕಾಣಿಸಿಕೊಳ್ಳುವುದರಿಂದ ಮತ್ತು ಅವರಿಬ್ಬರ ನಡುವಿನ ನಿಕಟವಾದ ಬಂಧವು ಅವರ ಸಂಬಂಧ ಮತ್ತು ಮದುವೆಯ ಬಗ್ಗೆ ವದಂತಿಗಳನ್ನು ಹುಟ್ಟಿ ಹಾಕಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮುರಿದುಕೊಂಡ ನಟಿ

ಹಲವು ವರ್ಷಗಳ ಹಿಂದೆ ರಶ್ಮಿಕಾ ಮಂದಣ್ಣ ಅವರು ಕನ್ನಡದ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥವನ್ನು ರದ್ದುಗೊಳಿಸಿದಾಗ, 2019ರಲ್ಲಿ ಡಿಯರ್ ಕಾಮ್ರೇಡ್ ಚಿತ್ರದ ಪ್ರಮೋಷನ್ ವೇಳೆ ವರದಿಗಾರರೊಬ್ಬರು ರಕ್ಷಿತ್ ಜೊತೆಗಿನ ಹಿಂದಿನ ಸಂಬಂಧದ ಬಗ್ಗೆ ರಶ್ಮಿಕಾ ಅವರನ್ನು ಕೇಳಿದ್ದರು. ಆಗ ವಿಜಯ್ ಅವರು ರಶ್ಮಿಕಾ ಅವರ ಪರವಾಗಿ ನಿಂತು ಮಾತಾಡಿದ್ದರು. ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ನಂತರ ರಶ್ಮಿಕಾ ಅವರು ವಿಜಯ್ ಅವರಲ್ಲಿ ಒಳ್ಳೆಯ ಸ್ನೇಹಿತನನ್ನು ಕಂಡುಕೊಂಡಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಕೈಯಲ್ಲಿದೆ ಮೂರನೇ ಬಾಲಿವುಡ್​ ಸಿನಿಮಾ
Published by:Divya D
First published: