HOME » NEWS » Entertainment » RASHMIKA MANDANNA TRYING TO BUILD HER EMPIRE BEING GIRL BOSS AE

Rashmika Mandanna: ಗರ್ಲ್ ​ಬಾಸ್​ ಆಗಿ ಸಾಮ್ರಾಜ್ಯ ಕಟ್ಟುವ ಪ್ರಯತ್ನದಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ

Girl Boss Rashmika Mandanna: ರಶ್ಮಿಕಾ ತಮ್ಮ ಸಿನಿ ಭವಿಷ್ಯದ ಬಗ್ಗೆ ತುಂಬಾನೇ ಗಂಭೀರವಾಗಿದ್ದಾರೆ. ಜೊತೆಗೆ ಮಹತ್ವಾಕಾಂಕ್ಷಿಯಾಗಿದ್ದಾರೆ. ಎಷ್ಟೇ ವಿವಾದಕ್ಕೀಡಾಗಿ ಟ್ರೋಲ್​ ಆದರೂ ಆತ್ಮವಿಶ್ವಾಸ ಕಳೆದು ಕೊಳ್ಳದೆ ಮುನ್ನುಗ್ಗುತ್ತಿದ್ದಾರೆ. ಇಂತಹ ನಟಿ ಈಗ ತಮ್ಮದೇ ಆದ ಸಾಮ್ರಾಜ್ಯ ಕಟ್ಟುವತ್ತ ಗಮನ ಹರಿಸುತ್ತಿದ್ದಾರೆ.

Anitha E | news18-kannada
Updated:June 22, 2020, 12:50 PM IST
Rashmika Mandanna: ಗರ್ಲ್ ​ಬಾಸ್​ ಆಗಿ ಸಾಮ್ರಾಜ್ಯ ಕಟ್ಟುವ ಪ್ರಯತ್ನದಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ
  • Share this:
- ಅನಿತಾ ಈ, 

ರಶ್ಮಿಕಾ ಮಂದಣ್ಣ ಸ್ಯಾಂಡಲ್​ವುಡ್​ನಿಂದ ಬಣ್ಣದ ಲೋಕಕ್ಕೆ ಕಾಲಿಟ್ಟರೂ ಮಿಂಚುತ್ತಿರುವುದು ಮಾತ್ರ ನೆರೆ ರಾಜ್ಯ ತೆಲುಗು ರಾಷ್ಟ್ರದಲ್ಲಿ. ಟಾಲಿವುಡ್​ನಲ್ಲಿ ತುಂಬಾ ಕಡಿಮೆ ಸಮಯದಲ್ಲಿ ಸ್ಟಾರ್ ಪಟ್ಟದ ಜೊತೆಗೆ ದೊಡ್ಡ ಅಭಿಮಾನಿಗಳನ್ನು ಸಂಪಾದಿಸಿಕೊಂಡ ನಟಿ  ರಶ್ಮಿಕಾ ಮಂದಣ್ಣ. 

ರಶ್ಮಿಕಾ ತಮ್ಮ ಸಿನಿ ಭವಿಷ್ಯದ ಬಗ್ಗೆ ತುಂಬಾನೇ ಗಂಭೀರವಾಗಿದ್ದಾರೆ. ಜೊತೆಗೆ ಮಹತ್ವಾಕಾಂಕ್ಷಿಯಾಗಿದ್ದಾರೆ. ಎಷ್ಟೇ ವಿವಾದಕ್ಕೀಡಾಗಿ ಟ್ರೋಲ್​ ಆದರೂ ಆತ್ಮವಿಶ್ವಾಸ ಕಳೆದು ಕೊಳ್ಳದೆ ಮುನ್ನುಗ್ಗುತ್ತಿದ್ದಾರೆ. ಇಂತಹ ನಟಿ ಈಗ ತಮ್ಮದೇ ಆದ ಸಾಮ್ರಾಜ್ಯ ಕಟ್ಟುವತ್ತ ಗಮನ ಹರಿಸುತ್ತಿದ್ದಾರೆ.

Rashmika Mandanna - Instagram
ರಶ್ಮಿಕಾ ಮಂದಣ್ಣ


ಹೌದು, ಗರ್ಲ್​ ಬಾಸ್​ ಆಗಿ ತಮ್ಮ ಸಾಮ್ರಾಜ್ಯ ಕಟ್ಟಲು ಪ್ರಯತ್ನಿಸುತ್ತಿದ್ದಾರಂತೆ. ಹೀಗೆಂದು ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ರಶ್ಮಿಕಾ ಸಿನಿ ರಂಗದಲ್ಲಿ ಬೆಳೆಯುತ್ತಿರುವ ಯಶಸ್ವೀ ನಟಿ. ಬಣ್ಣದ ಲೋಕದಲ್ಲಿ ತಮ್ಮದೇ ಸಾಮ್ರಾಜ್ಯ ಕಟ್ಟುವ ಕನಸು ಕಂಡಿದ್ದಾರೆ. ಅದನ್ನು ನನಸಾಗಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತಿದ್ದಾರೆ.

Rashmika Mandanna Trying to build her empire being Girl Boss
ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಂ ಪೋಸ್ಟ್​


ಸಿನಿಮಾಗಳಲ್ಲಿ ಅಭಿನಯಿಸುವುದರ ಜೊತೆಗೆ ತಮ್ಮದೇ ಆದ ತಂಡ ಕಟ್ಟಿಕೊಂಡು ಚಿತ್ರ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಈಗಾಗಲೇ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ರಶ್ಮಿಕಾ ಈ ಹಿಂದೆಯೇ ಯುವ ಪ್ರತಿಭೆಗಳಿಗೆ ತಾವು ಬರೆದ ಕತೆಗಳೊಂದಿಗೆ ಸಂಪರ್ಕಿಸುವಂತೆ ತಮ್ಮ ಇ-ಮೇಲ್​ ವಿಳಾಸ ನೀಡಿದ್ದರು.ಇದನ್ನೂ ಓದಿ: ರಾಜರಥವೇರಿದ್ದ ನಿರೂಪ್​ ಭಂಡಾರಿ ಈಗ ವಿಂಡೋಸೀಟ್​ ಬೇಕೆನ್ನುತ್ತಿದ್ದಾರೆ..!

ಸಿನಿ ರಂಗದಲ್ಲಿ ಹಂತ ಹಂತವಾಗಿ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವ ರಶ್ಮಿಕಾ ತಮ್ಮ ಸಾಮ್ರಾಜ್ಯವನ್ನು ಕಟ್ಟುವುದರಲ್ಲಿ ಅನುಮಾನವಿಲ್ಲ. ಲಿಲ್ಲಿಯ ಸಿನಿಮಾ ವಿಷಯಕ್ಕೆ ಬಂದರೆ ಸದ್ಯ ಸಲ್ಲು ಅರ್ಜುನ್​ ಜೊತೆ ಪುಷ್ಪ ಚಿತ್ರದಲ್ಲಿ, ತಮಿಳಿನಲ್ಲಿ ಕಾರ್ತಿ ಜೊತೆ ಸುಲ್ತಾನ್​ನಲ್ಲಿ ಅಭಿನಯಿಸುತ್ತಿದ್ದಾರೆ.

Sushant Singh Rajput: ಸೆಲೆಬ್ರಿಟಿ ಫೋಟೋಗ್ರಾಫರ್​ ಡಬೂ ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ ಸುಶಾಂತ್: ಇಲ್ಲಿವೆ​ ಫೋಟೋಗಳು..!



 

ಇದನ್ನೂಓದಿ: Sonam Kapoor: ಸ್ಟಾರ್ ಕಿಡ್​ ಎನಿಸಿಕೊಳ್ಳುವುದು ಅವಮಾನ ಅಲ್ಲ ಎಂದ ಸೋನಮ್ ಕಪೂರ್​: ಮತ್ತೆ ಟ್ರೋಲ್​ ಮಾಡಿದ ನೆಟ್ಟಿಗರು..!
First published: June 22, 2020, 12:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories