ಆರ್ಆರ್ಆರ್(RRR) ಸಿನಿಮಾ ಟ್ರೈಲರ್(Trailer) ರಿಲೀಸ್ ಆಗಿ ಯೂಟ್ಯೂಬ್(You tube)ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಮತ್ತೊಂದು ದಾಖಲೆ ಸೃಷ್ಟಿಸುವಲ್ಲಿ ಯಾವುದೇ ಅನುಮಾನವಿಲ್ಲ. ಸಿನಿಮಾ ಲೋಕದ ಮಾಂತ್ರಿಕ ನಿರ್ದೇಶಕ ರಾಜಮೌಳಿ(Rajamouli) ಮತ್ತೆ ತಾವೆಂತ ಡೈರೆಕ್ಟರ್(Director) ಎಂಬುದನ್ನು ಆರ್ಆರ್ಆರ್ ಸಿನಿಮಾದ ಟ್ರೈಲರ್ನಲ್ಲೇ ತೋರಿಸಿದ್ದಾರೆ. ಇನ್ನೂ ಸಿನಿಮಾ ಜನವರಿ 7ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದ್ದು, ಅಭಿಮಾನಿಗಳು ಆರ್ಆರ್ಆರ್ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಜೂನಿಯರ್ ಎನ್ಟಿಆರ್(Junior NTR) ಮತ್ತು ರಾಮಚರಣ್(Ramcharan) ನಟಿಸಿರುವ ಈ ಸಿನಿಮಾದ ಟ್ರೇಲರ್ ಸಖತ್ ಥ್ರಿಲ್ ಕೊಟ್ಟಿದೆ. ಒರಿಜಿನಲ್ ತೆಲುಗಿನ ಟ್ರೇಲರ್ ಯೂಟ್ಯೂಬ್ನಲ್ಲಿ ಒಂದೇ ದಿನದಲ್ಲಿ ಎರಡು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ. ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಸಿನಿಮಾ ಡಬ್ ಆಗುತ್ತಿದೆ. ಈ ಭಾಷೆಗಳಲ್ಲೂ ಟ್ರೇಲರ್ ಲಾಂಚ್ ಆಗಿದೆ. ಕನ್ನಡದ ಆರ್ಆರ್ಆರ್ ಟ್ರೇಲರ್ನಲ್ಲಿ ಜೂನಿಯರ್ ಎನ್ಟಿಆರ್ ಮತ್ತು ರಾಮಚರಣ್ ತೇಜಾ ಅವರು ತಮ್ಮ ಪಾತ್ರಗಳಿಗೆ ತಾವೇ ಧ್ವನಿ ಕೊಟ್ಟಿದ್ಧಾರೆ. ಕನ್ನಡಿಗರೂ ಥ್ರಿಲ್ ಆಗಿದ್ಧಾರೆ. ಬೇರೆ ಭಾಷೆಯವರಿಗೆ ಇರುವ ಕನ್ನಡ ಪ್ರೇಮ ನಮ್ಮ ನಟಿಯರುಗೆ ಇಲ್ಲ ಅಂತ ರಶ್ಮಿಕಾ ಮಂದಣ್ಣ(Rashmika Mandanna) ವಿರುದ್ಧ ಟ್ರೋಲಿಗರು, ನೆಟ್ಟಿಗರು ಗರಂ ಆಗಿದ್ದಾರೆ. ಆರ್ಆರ್ಆರ್ ಸಿನಿಮಾಗೂ, ರಶ್ಮಿಕಾ ಮಂದಣ್ಣಗೂ ಏನು ಸಂಬಂಧ ಅಂತ ಕೇಳುತ್ತೀರ? ಇಲ್ಲಿದೆ ನೋಡಿ.
ಕನ್ನಡದಲ್ಲೇ ಡಬ್ ಮಾಡಿದ ಜೂ.ಎನ್ಟಿಆರ್!
ನಿನ್ನೆ ಒರಾಯನ್ ಮಾಲ್ ಪಿವಿಆರ್ನಲ್ಲಿ ಆರ್ಆರ್ಆರ್ ಟ್ರೇಲರ್ ಬಿಡುಗಡೆ ನಿಮಿತ್ತ ನಡೆದ ಸಂವಾದ ಕಾರ್ಯಕ್ರಮ ನಡೀತು. ಜೂನಿಯರ್ ಎನ್ಟಿಆರ್ ಅವರು ತಮ್ಮ ಕನ್ನಡ ಡಬಿಂಗ್ ಬಗ್ಗೆ ಮಾತನಾಡಿದರು. “ಅಮ್ಮ ಕನ್ನಡದವರು ನಿಜ. RRR ನಲ್ಲಿ ನಾನೇ ಡಬ್ ಮಾಡಿದೀನಿ. ನಮ್ಮೂರಿನವರ ಮುಂದೆ ತಲೆ ತಗ್ಗಿಸುವಂತೆ ಕನ್ನಡ ಮಾತಾಡಬೇಡ ಅಂತ ಅಮ್ಮ ಹೇಳಿದ್ರು. ಆದರೆ, ನನ್ನ ಕನ್ನಡ ಡಬಿಂಗ್ ನೋಡಿ ತುಂಬಾ ಖುಷಿ ಪಟ್ಟಿದ್ದಾರೆ” ಎಂದು ಜೂನಿಯರ್ ಎನ್ಟಿಆರ್ ಹೇಳಿದರು. ಈ ಮಾತನ್ನು ಕೇಳಿ ಕನ್ನಡಿಗರು ದಿಲ್ಖುಷ್ ಆಗಿದ್ದಾರೆ. ರಶ್ಮಿಕಾ ಮಂದಣ್ಣಇದನ್ನು ನೋಡಿ ಕಲಿಯಬೇಕು ಅಂತ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನು ಓದಿ : ಜೂ. ಎನ್ಟಿಆರ್ ಕನ್ನಡದ ಡಬಿಂಗ್ ನೋಡಿ ಖುಷಿಪಟ್ರಂತೆ ಅವರ ಕನ್ನಡಿಗ ತಾಯಿ
ಪುಷ್ಪ ಚಿತ್ರಕ್ಕೆ ಕನ್ನಡದಲ್ಲೇ ಡಬ್ ಮಾಡ್ತಾರಾ ರಶ್ಮಿಕಾ!
ಇತ್ತೀಚೆಗೆ ‘ಪುಷ್ಪ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರಕ್ಕೆ ರಶ್ಮಿಕಾ ನಾಯಕಿ. ‘ಪುಷ್ಪ’ದಲ್ಲಿ ಅವರು ಭಿನ್ನ ಗೆಟಪ್ ತಾಳಿದ್ದಾರೆ. ಹೀಗಾಗಿ, ಅವರ ಅಭಿಮಾನಿಗಳು ಈ ಸಿನಿಮಾ ನೋಡೋಕೆ ಕಾದು ಕೂತಿದ್ದಾರೆ. ಈ ಚಿತ್ರ ತೆಲುಗು ಮಾತ್ರವಲ್ಲದೆ, ಕನ್ನಡದಲ್ಲೂ ತೆರೆಗೆ ಬರುತ್ತಿದೆ. ಹೀಗಾಗಿ ಟ್ರೇಲರ್ಅನ್ನು ಕನ್ನಡದಲ್ಲೂ ರಿಲೀಸ್ ಮಾಡಲಾಗಿದೆ. ಆದರೆ, ರಶ್ಮಿಕಾ ಕನ್ನಡ ಅವತರಣಿಕೆಗೆ ಡಬ್ ಮಾಡಿಲ್ಲ. ಹೀಗಾಗಿ ಸಿನಿಮಾದಲ್ಲಿ ರಶ್ಮಿಕಾ ಡಬ್ ಮಾಡಿರುವ ಲಕ್ಷಣಗಳು ಕಾಣಿಸುತ್ತಿಲ್ಲ ಅಂತ ನೆಟ್ಟಿಗರು ಗರಂ ಆಗಿದ್ದಾರೆ. ಸದಾ ಒಂದೊಲ್ಲ ಒಂದು ವಿಚಾರಕ್ಕೆ ರಶ್ಮಿಕಾ ಟ್ರೋಲ್ ಆಗುತ್ತಲೇ ಇರುತ್ತಾರೆ. ಇದೀಗ ಪುಷ್ಪ ಚಿತ್ರಕ್ಕೆ ಕನ್ನಡದಲ್ಲೇ ರಶ್ಮಿಕಾ ಮಂದಣ್ಣ ಡಬ್ ಮಾಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಇದನ್ನು ಓದಿ : RRR ಟ್ರೈಲರ್ ರಿಲೀಸ್, ರಾಮ್-ಭೀಮ್ ಅಬ್ಬರ: ಮತ್ತೊಂದು ದಾಖಲೆ ಸೃಷ್ಟಿಸೋದು ಫಿಕ್ಸ್!
ಕನ್ನಡ ನಟರ ಹೆಸರೇಳದ ಕಿರಿಕ್ ಬೆಡಗಿ!
ಇತ್ತೀಚೆಗೆ ಖ್ಯಾತ ನಿರೂಪಕ ಫೇರಿಡೂನ್ ಶಹ್ರ್ಯಾರ್ ಅವರ ಖಾಸಗೀ ಸಂದರ್ಶನದಲ್ಲಿ ರಶ್ಮಿಕಾ ಪಾಲ್ಗೊಂಡಿದ್ದಾರೆ. ಈ ಸಂದರ್ಶನದಲ್ಲಿ ರಶ್ಮಿಕಾ ಅವರಿಗೆ ಒಂದಷ್ಟು ಸಿನಿಮಾಗೆ ಸಂಬಂಧ ಪಟ್ಟ ಪ್ರಶ್ನೆಗಳನ್ನು ಕೇಳಲಾಗಿದೆ. ಜೊತೆಗೆ ನಿಮ್ಮ ಫೇವರಿಟ್ ಸಹ ಕಲಾವಿದ ಯಾರು ಎಂದು ಕೇಳಲಾಗಿದೆ. ಇದಕ್ಕೆ ರಶ್ಮಿಕಾ ಅಮಿತಾಬ್ ಬಚ್ಚನ್ ಎಂದು ಉತ್ತರ ನೀಡಿದ್ದಾರೆ. ನಂತರ ಇಂಡಿಯನ್ ಸಿನಿಮಾಗಳಲ್ಲಿ ನಿಮ್ಮ ಫೇವರಿಟ್ ನಟರು ಯಾರು ಎಂದು ಪ್ರಶ್ನೆ ಕೇಳಿದ್ದಾರೆ ಫೇರಿಡೂನ್ ಶಹ್ರ್ಯಾರ್. ಇದಕ್ಕೆ ಉತ್ತರಿಸಿರುವ ರಶ್ಮಿಕಾ ಬಾಲಿವುಡ್ನ ರಣ್ಬೀರ್ ಕಪೂರ್, ತೆಲುಗಿನಲ್ಲಿ ಅಲ್ಲು ಅರ್ಜುನ್, ಮಲಯಾಳಂನಲ್ಲಿ ಫಹಾದ್ ಮತ್ತು ತಮಿಳಿನಲ್ಲಿ ವಿಜಯ್ ಸೇತುಪತಿ ಎಂದು ಉತ್ತರಿಸಿ ಸುಮ್ಮನಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ