ಪ್ರಭಾವಿಗಳ ಪಟ್ಟಿಯಲ್ಲಿ Yash ಗಿಂತ ಮುಂದಿದ್ದಾರೆ Rashmika Mandanna!

South Film Forbes List: ಅಲ್ಲು ಅರ್ಜುನ್ ಅವರ ಮುಂಬರುವ ಆಕ್ಷನ್ ಚಿತ್ರದಲ್ಲಿ ಪುಷ್ಪ- ಭಾಗ I ರಲ್ಲಿ ರಶ್ಮಿಕಾ ಮಂದಣ್ಣ ಗ್ರಾಮೀಣ ಪ್ರದೇಶದ ಹುಡುಗಿಯಾಗಿ ನಟಿಸುತ್ತಿದ್ದಾರೆ.  ಈ ಚಿತ್ರ ಕ್ರಿಸ್‌ಮಸ್ ಸಂದರ್ಭದಲ್ಲಿ ಬಿಡುಗಡೆಯಾಗಲಿದ್ದು, ಇದರ ಎರಡು ಭಾಗಗಳು ಇರುತ್ತದೆ ಎಂದು ಚಿತ್ರತಂಡ ತಿಳಿಸಿದೆ.

ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ

  • Share this:
ಸ್ಯಾಂಡಲ್ ವುಡ್ (Sandalwood)ಸುಂದರಿ ಹಾಗೂ ಬಹುಭಾಷ ನಟಿ ರಶ್ಮಿಕಾ ಮಂದಣ್ಣ(Rashmika Mandanna), ಹಲವು ಭಾಷೆಗಳಲ್ಲಿ ಬ್ಯಾಕ್-ಟು-ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ದಕ್ಷಿಣ ಭಾರತದ(South Film Industry) ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆಯಿರುವ ನಾಯಕಿಯರಲ್ಲಿ ಒಬ್ಬರು. ಅಲ್ಲದೇ ಅವರು ಬಾಲಿವುಡ್ (Bollywood)ಪ್ರವೇಶ ಮಾಡುವ ಮೂಲಕ, ರಶ್ಮಿಕಾ ಬಾಲಿವುಡ್​ನಲ್ಲಿ ಸಹ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಇದೀಗ ಅವರು ಫೋರ್ಬ್ಸ್ ಇಂಡಿಯಾದ(Forbes India) ಅತ್ಯಂತ ಪ್ರಭಾವಶಾಲಿ ನಟರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಶ್ಮಿಕಾ, ಟಾಲಿವುಡ್ ಸುಂದರಿ ಸಮಂತಾ ಹಾಗೂ ವಿಜಯ್ ದೇವರಕೊಂಡ ಮತ್ತು ಯಶ್ ಅವರನ್ನು ಹಿಂದಿಕ್ಕಿದ್ದಾರೆ.

ಯಶ್ , ವಿಜಯ್ ದೇವಕೊಂಡ ಹಿಂದಿಕ್ಕಿದ ರಶ್ಮಿಕಾ

ತನ್ನ ಸಾಮಾಜಿಕ  ಜಾಲಾತಾಣದ ಖಾತೆಗಳಲ್ಲಿ ದಿನದಿಂದ ದಿನಕ್ಕೆ ಅಭಿಮಾನಿಗಳನ್ನು ಮತ್ತು ಫಾಲೋವರ್ಸ್​ಗಳನ್ನು ಹೆಚ್ಚು  ಮಾಡಿಕೊಳ್ಳುತ್ತಿರುವ ರಶ್ಮಿಕಾ, ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲಿ ನಟಿಸಿ ಪ್ರಸಿದ್ದರಾದವರು. ಪ್ರಭಾವಶಾಲಿ ನಟರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿದ್ದು, ಅವರು ಪ್ರಸ್ತುತ ಇನ್‌ಸ್ಟಾಗ್ರಾಮ್‌ನಲ್ಲಿ 22 ಮಿಲಿಯನ್‌ಗಿಂತಲೂ ಹೆಚ್ಚಿನ  ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಕೆಲಸದ  ವಿಚಾರಕ್ಕೆ ಬಂದಲ್ಲಿ ಅವರು ಬಾಲಿವುಡ್ ಚಲನಚಿತ್ರ ಮಿಷನ್ ಮಜ್ನುನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಎದುರು ಕಾಣಿಸಿಕೊಳ್ಳಲಿದ್ದಾರೆ.

ಪೆಲ್ಲಿ ಚೂಪುಲು ಮತ್ತು ಅರ್ಜುನ್ ರೆಡ್ಡಿ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ನಟ ವಿಜಯ್ ದೇವರಕೊಂಡ, ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ, ಕನ್ನಡದ ಅತ್ಯಂತ ಸುಂದರ ಹಾಗೂ ಫೆಮಸ್ ನಟ ಯಶ್ ನಂತರದ ಸ್ಥಾನದಲ್ಲಿದ್ದಾರೆ. ವಿಜಯ್ ಮುಂದಿನ ಬಹು ನಿರೀಕ್ಷಿತ ಚಿತ್ರ ಲಿಗರ್ ನಲ್ಲಿ ಕಾಣಿಸಿಕೊಂಡಿದ್ದು, ಯಶ್ ಅಭಿಮಾನಿಗಳು ಕೆಜಿಎಫ್ 2 ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಸಮಂತಾ ರುತ್ ಪ್ರಭು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರೆ, ನಂತರದ ಸ್ಥಾನದಲ್ಲಿ ಅಲ್ಲು ಅರ್ಜುನ್ ಇದ್ದಾರೆ.

ಇದನ್ನೂ ಓದಿ: ಪತಿ ಜೊತೆ ಮಾಲ್ಡೀವ್ಸ್​ ಟ್ರಿಪ್ ಫೋಟೋ ಹಂಚಿಕೊಂಡ Tahira Kashyap-ಫೋಟೋ ಕ್ಯಾಪ್ಷನ್​ನಲ್ಲಿ ಹೇಳಿದ್ದೇನು ಗೊತ್ತಾ?

ಸರಾಸರಿ ಲೈಕ್​ಗಳು, ಸರಾಸರಿ ಕಾಮೆಂಟ್‌ಗಳು, ನಿಶ್ಚಿತಾರ್ಥದ ದರ, ಸರಾಸರಿ ವೀಡಿಯೋ ವೀಕ್ಷಣೆ ಮತ್ತು ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳ ಫಾಲೋವರ್​ಗಳನ್ನು ಪರಿಗಣಿಸಿ ಅದನ್ನು ಕೋರುಜ್ ಸ್ಕೋರ್ ಮೂಲಕ ಲೆಕ್ಕಹಾಕಲಾಗುತ್ತದೆ. ಇದರಲ್ಲಿ 10. ರಶ್ಮಿಕಾ 9.88 ಅಂಕಗಳನ್ನು ಪಡೆದರೆ, ವಿಜಯ್ ದೇವರಕೊಂಡ 9.67 ಗಳಿಸಿದ್ದಾರೆ. ಯಶ್ 9.54  ಪಡೆದರೆ ಸಮಂತಾ 9.49  ಹಾಗೂ ಅಲ್ಲು ಅರ್ಜುನ್ 9.46 ಸ್ಕೋರ್ ಪಡೆದಿದ್ದಾರೆ.

ಫೋರ್ಬ್ಸ್ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದ ಜನಪ್ರಿಯ ಸೆಲೆಬ್ರಿಟಿಗಳ ಇನ್‌ಸ್ಟಾಗ್ರಾಮ್ ಚಟುವಟಿಕೆಯನ್ನು ಅವರ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಸೆಪ್ಟೆಂಬರ್ 30 ರವರೆಗೆ ಪರಿಗಣಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

ರಿಲೀಸ್​ಗೆ ಸಿದ್ದವಾಗಿದೆ ಪುಷ್ಪ

ಅಲ್ಲು ಅರ್ಜುನ್ ಅವರ ಮುಂಬರುವ ಆಕ್ಷನ್ ಚಿತ್ರದಲ್ಲಿ ಪುಷ್ಪ- ಭಾಗ I ರಲ್ಲಿ ರಶ್ಮಿಕಾ ಮಂದಣ್ಣ ಗ್ರಾಮೀಣ ಪ್ರದೇಶದ ಹುಡುಗಿಯಾಗಿ ನಟಿಸುತ್ತಿದ್ದಾರೆ.  ಈ ಚಿತ್ರ ಕ್ರಿಸ್‌ಮಸ್ ಸಂದರ್ಭದಲ್ಲಿ ಬಿಡುಗಡೆಯಾಗಲಿದ್ದು, ಇದರ ಎರಡು ಭಾಗಗಳು ಇರುತ್ತದೆ ಎಂದು ಚಿತ್ರತಂಡ ತಿಳಿಸಿದೆ. ರಶ್ಮಿಕಾ ಶೀಘ್ರದಲ್ಲೇ ಶರ್ವಾನಂದ್ ಅವರ ಆಡವಳ್ಳಿ ಮೀಕು ಜೋಹಾರುಲು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅತ್ತ ಬಾಲಿವುಡ್​ನಲ್ಲಿ ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ಬೈ’ ಚಿತ್ರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಮುಂದುವರಿದ ನಿರ್ಮಾಪಕ-ವಿತರಕರ ನಡುವಿನ ಜಟಾಪಟಿ, ಅಗ್ರಿಮೆಂಟ್ ಪೇಪರ್ ರಿಲೀಸ್ ಮಾಡಿದ ಸೂರಪ್ಪ ಬಾಬು

ದಸರಾ ಹಬ್ಬದ ಪ್ರಯುಕ್ತ ರಶ್ಮಿಕಾ ಮಂದಣ್ಣ ಅವರ ಹೊಸ ಚಿತ್ರದ ಪೋಸ್ಟರ್​ ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ವ್ಯಕ್ತಿಯೊಬ್ಬ ವ್ಯಂಗ್ಯವಾಗಿ ಕಮೆಂಟ್​ ಮಾಡಿದ್ದ. ಪದೇ ಪದೇ ರಶ್ಮಿಕಾ ಅವರನ್ನೇ ಟಾಲಿವುಡ್​ನವರು ಆಯ್ಕೆ ಮಾಡಿಕೊಳ್ಳುತ್ತಿರುವುದು ಯಾಕೆ’ ಎಂಬುದು ಆತನ ಪ್ರಶ್ನೆಯಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ, ನನ್ನ ನಟನೆಗೋಸ್ಕರ ಎಂದು ಕಮೆಂಟ್​ ಮಾಡಿದ್ದು, ಅವರ ಈ ಕಮೆಂಟ್​ ಸಖತ್​ ವೈರಲ್​ ಆಗಿದ್ದು ಅಭಿಮಾನಿಗಳು ಸಾಥ್ ನೀಡಿದ್ದಾರೆ.
Published by:Sandhya M
First published: